»   » ಮತ್ತೆ ಒಂದಾದ ಕಿಚ್ಚ ಸುದೀಪ್, ವರ್ಮಾ ಜೋಡಿ

ಮತ್ತೆ ಒಂದಾದ ಕಿಚ್ಚ ಸುದೀಪ್, ವರ್ಮಾ ಜೋಡಿ

Posted By:
Subscribe to Filmibeat Kannada

ಬಾಲಿವುಡ್ ಜಗತ್ತಿಗೆ ಕಿಚ್ಚ ಸುದೀಪ್ ಅವರನ್ನು ಪರಿಚಯಿಸಿದ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ರಾಮ್ ಗೋಪಾಲ್ ವರ್ಮಾ, ಸುದೀಪ್ ಜೊತೆ ಮತ್ತೊಂದು ಚಿತ್ರಕ್ಕೆ ತಯಾರಾಗಿದ್ದಾರೆ.

ದಿನಪತ್ರಿಕೆಯೊಂದಕ್ಕೆ ಸುದೀಪ್ ಈ ವಿಷಯವನ್ನು ಸ್ಪಷ್ಟ ಪಡಿಸಿದ್ದಾರೆ. ರಾಮ್ ಗೋಪಾಲ್ ವರ್ಮಾ ಹೋಮ್ ಬ್ಯಾನರಿನಡಿಯಲಿ ಈ ಚಿತ್ರ ನಿರ್ಮಾಣವಾಗಲಿದ್ದು ಹಿಂದಿಯ ಅನುರಾಗ್ ಕಶ್ಯಪ್ ಕೂಡ ಈ ಚಿತ್ರದಲ್ಲಿ ನಟಿಸುವ ಸಾಧ್ಯತೆಯಿದೆ ಎಂದು ಸುದೀಪ್ ಹೇಳಿದ್ದಾರೆ.

ಮಳೆಗಾಲ ಕಳೆದ ನಂತರ ಅಂದರೆ ಇದೇ ಸೆಪ್ಟಂಬರ್ ನಂತರ ಚಿತ್ರ ಸೆಟ್ಟೇರಲಿದೆ. ಈ ವಿಷಯವನ್ನು ಖುದ್ದು ವರ್ಮಾ ನನಗೆ ತಿಳಿಸಿದ್ದಾರೆಂದು ಸುದೀಪ್ ಹೇಳಿದ್ದಾರೆ. ಈ ಹಿಂದೆ ಸುದೀಪ್, ರಾಮ್ ಗೋಪಾಲ್ ವರ್ಮಾ ಬ್ಯಾನರಿನ ಫೂಂಖ್, ರಣ್ ಚಿತ್ರದಲ್ಲಿ ನಟಿಸಿದ್ದರು.

ಅಲ್ಲದೇ, ರಕ್ತ ಚರಿತ್ರ 2ರಲ್ಲಿ ವಿವೇಕ್ ಒಬೆರಾಯ್ ಮತ್ತು ತಮಿಳು ನಟ ಸೂರ್ಯ ಜೊತೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಸುದೀಪ್ - ವರ್ಮಾ ಜೋಡಿ

At a time, ಒಂದೇ ಚಿತ್ರದಲ್ಲಿ ನಟಿಸುವ ಸುದೀಪ್ ಇದುವರೆಗೆ ಆರು ಚಿತ್ರಕ್ಕೆ ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿಯಿದೆ. ಕನ್ವರ್ ಲಾಲ್, ಕೋಟಿಗೊಬ್ಬ 2 ಹೀಗೆ ದಕ್ಷಿಣಭಾರತದ ಆರು ಚಿತ್ರಗಳಲ್ಲಿ ನಟಿಸಲಿದ್ದಾರೆ.

ಸುದೀಪ್ - ವರ್ಮಾ ಜೋಡಿ ಕಮಾಲ್

ಇದಲ್ಲದೇ ಚಿತ್ರ ನಿರ್ದೇಶನಕ್ಕೂ ಸುದೀಪ್ ಮುಂದಾಗಿದ್ದಾರೆ. ಚಿತ್ರವೊಂದಕ್ಕೆ ಗೋಲ್ಡನ್ ಗರ್ಲ್ ರಮ್ಯಾ ಮಾತುಕತೆ ನಡೆಯುತ್ತಿದೆ. ಸುದೀಪ್ - ರಮ್ಯಾ ಜೋಡಿಯ ನಾಲ್ಕು ಚಿತ್ರಗಳು ಈಗಾಗಲೇ ತೆರೆಕಂಡಿದೆ.

ಮತ್ತೆ ಸುದೀಪ್ - ವರ್ಮಾ ಜೋಡಿ

ಸದ್ಯ ಯಶಸ್ವಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಬ್ಯೂಸಿಯಾಗಿರುವ ಸುದೀಪ್ ವಾರದ ಎರಡು ದಿನ ಪುಣೆಯಲ್ಲಿರುತ್ತಾರೆ. ಹಾಗಾಗಿ ಸದ್ಯ ಯಾವುದೇ ಪ್ರಾಜೆಕ್ಟ್ ಅನ್ನು ಶುರುಮಾಡಿಲ್ಲ.

ಸುದೀಪ್ - ಭಟ್ ಜೋಡಿ

ಕೆಲವು ತಿಂಗಳ ಹಿಂದೆ ಯೋಗರಾಜ್ ಭಟ್ ಮತ್ತು ಸುದೀಪ್ ಮತ್ತೆ ಒಂದಾಗಲಿದ್ದಾರೆ ಎನ್ನುವುದು ಸುದ್ದಿಯಾಗಿತ್ತು. ಆದರೆ ಈ ಪ್ರಾಜೆಕ್ಟ್ ಸದ್ಯ ಚಾಲೆನೆಗೆ ಬರುವ ಲಕ್ಷಣಗಳಿಲ್ಲ.

ಬಚ್ಚನ್ ಯಶಸ್ವಿ

ಶಶಾಂಕ್ ನಿರ್ದೇಶನದ, ಸುದೀಪ್ ಅಭಿನಯದ ಬಚ್ಚನ್ ಚಿತ್ರ ಈ ವರ್ಷದ ಅತ್ಯಂತ ಹೆಚ್ಚಿನ ಗಳಿಕೆ ಕಂಡ ಚಿತ್ರಗಳಲ್ಲೊಂದು.

English summary
Ram Gopal Varma, who launched Sudeep in Bollywood, will be teaming up with the Kannada superstar again. The news has been announced by the Eega star himself.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada