Don't Miss!
- News
ಬೆಂಗಳೂರು: ಬಸವೇಶ್ವರನಗರ ಜಂಕ್ಷನ್ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ:CM
- Sports
Ind vs NZ 3rd T20: ಸರಣಿ ಗೆಲ್ಲುವ ಉತ್ಸಾಹದಲ್ಲಿ ಟೀಂ ಇಂಡಿಯಾ: ಪಿಚ್ ವರದಿ ನೋಡಿ ತಂಡದಲ್ಲಿ ಬದಲಾವಣೆ
- Technology
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
- Lifestyle
ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾಪ್ಟನ್ ಪ್ರೀತ್ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕ್ರೇಜಿ, ದಚ್ಚು ಜೊತೆ ಕಿಚ್ಚನ ಸೆಲ್ಫಿ: ಜೂಮ್ ಮಾಡಿ.. ಜೂಮ್ ಮಾಡಿ ನೋಡ್ತಿದ್ದಾರೆ ಫ್ಯಾನ್ಸ್!
ಸ್ಯಾಂಡಲ್‌ವುಡ್‌ನ ಕುಚಿಕುಗಳು ಮತ್ತೆ ಒಂದಾಗೋದನ್ನು ನೋಡುವುದಕ್ಕೆ ಅದೆಷ್ಟೋ ಅಭಿಮಾನಿಗಳು ಕಾದು ಕೂತಿದ್ದಾರೆ. ದರ್ಶನ್ ಹಾಗೂ ಕಿಚ್ಚ ಸುದೀಪ್ ಇಬ್ಬರೂ ಮುನಿಸು ಮರೆತು ಒಂದಾಗಲಿ ಎಂದು ಅಭಿಮಾನಿಗಳು ಬಯಸಿದ್ದರು.
ಸುಮಾರು ಐದು ವರ್ಷಗಳ ಬಳಿಕ ಇಂತಹದ್ದೊಂದು ಆಶಾ ಭಾವನೆ ಕಾಣಿಸುತ್ತಿದೆ. ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣದ ಬಳಿಕ ಸುದೀಪ್ ಬರೆದ ಪತ್ರ ಎಲ್ಲರ ಮನಕಲುಕಿತ್ತು. ಇನ್ನೊಂದು ಕಡೆ ದರ್ಶನ್ ಅದಕ್ಕೆ ಪ್ರತಿಕ್ರಿಯೆ ನೀಡಿದ್ದು ಹೊಸ ಹುರುಪು ನೀಡಿತ್ತು.
ದರ್ಶನ್ ಮರು ಟ್ವೀಟ್ ಮಾಡಿದ ದಿನದಿಂದ ಇಬ್ಬರ ಅಭಿಮಾನಿಗಳೂ ಇಬ್ಬರನ್ನು ಒಂದೇ ವೇದಿಕೆ ಮೇಲೆ ನೋಡುವುದಕ್ಕೆ ಎದುರು ನೋಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚನ ಅಭಿಮಾನಿಗಳು ಹಾಗೂ ದರ್ಶನ್ ಫ್ಯಾನ್ಸ್ ಕಿತ್ತಾಡುತ್ತಿದ್ದರು. ಆದ್ರೀಗ ಒಬ್ಬರಿಗೊಬ್ಬರು ದೋಸ್ತಿಗಳಾಗಿದ್ದಾರೆ. ಇದೇ ವೇಳೆ ಕಿಚ್ಚ, ರವಿಚಂದ್ರನ್, ದರ್ಶನ್ ಮೂವರ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಹಾಗಿದ್ದರೆ ಅದರ ಅಸಲಿಯತ್ತೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಕಿಚ್ಚ,ದಚ್ಚು, ಕ್ರೇಜಿ ಫೋಟೊ ವೈರಲ್
'ಕ್ರಾಂತಿ' ಸಿನಿಮಾ ಟ್ರೈಲರ್ ಬಿಡುಗಡೆಯಾಗುತ್ತಿರುವ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಸೆಲ್ಫಿ ಫೋಟೊವೊಂದು ಹರಿದಾಡುತ್ತಿದೆ. ಈ ಫೋಟೊದಲ್ಲಿ ಕಿಚ್ಚ ಸುದೀಪ್, ಕೇಜಿಸ್ಟಾರ್ ರವಿಚಂದ್ರನ್ ಹಾಗೂ ದರ್ಶನ್ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಇದೇ ಫೋಟೊ ನೋಡಿ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳೇ ಕಂಗಾಲಾಗಿದ್ದಾರೆ. ಇಬ್ಬರೂ ಮತ್ತೆ ಒಂದಾಗೇ ಬಿಟ್ಟರು ಎಂದು ನಂಬಿದ್ದಾರೆ. ಅಷ್ಟಕ್ಕೂ ಈ ಫೋಟೊದ ಹಿಂದೊಂದು ಗುಟ್ಟಿದೆ.

ಕಿಚ್ಚನ ಸೆಲ್ಫಿ ಫೋಟೊದ ಗುಟ್ಟೇನು?
ಕಿಚ್ಚ, ದಚ್ಚು, ಕ್ರೇಜಿ ಮೂವರ ಫೋಟೊ ನೋಡಿ ನೆಟ್ಟಿಗರು ಕಂಗಾಲಾಗಿದ್ದು ಇದೆ. ಕೆಲವು ನೆಟ್ಟಿಗರು ಇಬ್ಬರನ್ನೂ ಒಟ್ಟಿಗೆ ನೋಡಿ ಖುಷಿ ಪಟ್ಟಿದ್ದರು. ಇನ್ನೊಂದು ಕಡೆ ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಕುಚಿಕುಗಳು ಒಂದಾದ್ರು ಅಂತಾನೂ ನಂಬಿದ್ದರು. ಅದಕ್ಕೆ ಇದು ರೀಲ್ ಅಥವಾ ರಿಯಲ್ ಫೋಟೊನಾ? ಅಂತಾನೂ ಪ್ರಶ್ನೆ ಮಾಡುತ್ತಿದ್ದಾರೆ. ಅಸಲಿಗೆ ಇದು ರಿಯಲ್ ಫೋಟೊ ಅಲ್ಲ. ಅಭಿಮಾನಿಗಳು ಎಡಿಟ್ ಮಾಡಿದ ಫೋಟೊ. ಆದರೂ, ಇಬ್ಬರ ಅಭಿಮಾನಿಗಳ ಆಸೆ ಇದೇನೆ ಆಗಿದೆ.

'ಕ್ರಾಂತಿ' ಟ್ರೈಲರ್ ರಿಲೀಸ್‌ಗೆ ಕಿಚ್ಚ ಬರ್ತಾರಾ?
'ಕ್ರಾಂತಿ' ಟ್ರೈಲರ್ ಲಾಂಚ್‌ಗೆ ಕಿಚ್ಚ ಸುದೀಪ್ ಬರಬೇಕು ಅನ್ನೋದು ದರ್ಶನ್ ಅಭಿಮಾನಿಗಳ ಆಸೆಯಾಗಿತ್ತು. ಕಳೆದ ಕೆಲವು ದಿನಗಳಿಂದ ಡಿ ಬಾಸ್ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೊಂದು ಆಸೆಯನ್ನು ವ್ಯಕ್ತಪಡಿಸಿದ್ದರು. ಆದರೆ, ಕಿಚ್ಚ ಸುದೀಪ್ ಆಗಲಿ, ದರ್ಶನ್ ಆಗಲಿ ಈ ಬಗ್ಗೆ ಆಸಕ್ತಿ ತೋರಿದಂತೆ ಇಲ್ಲ. ಈ ಕಾರಣಕ್ಕೆ ನಾಳೆ (ಜನವರಿ 07) ನಡೆಯಲಿರೋ 'ಕ್ರಾಂತಿ' ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ದರ್ಶನ್ ಜೊತೆ ವೇದಿಕೆ ಮೇಲೆ ಯಾರೆಲ್ಲಾ ಇರುತ್ತಾರೆ? ಅನ್ನೋ ಕುತೂಹಲವಿದೆ.

ಕಿಚ್ಚ ದಚ್ಚು ಒಂದಾದ್ರಾ ಇಲ್ವಾ?
ಐದು ವರ್ಷಗಳ ಹಿಂದೆ ದರ್ಶನ್ " ಇನ್ಮುಂದೆ ನಾನು ಸುದೀಪ್ ಇಬ್ಬರೂ ಸ್ನೇಹಿತರಲ್ಲ. ಒಂದೇ ಚಿತ್ರರಂಗದಲ್ಲಿ ಕೆಲಸ ಮಾಡುವ ಕಲಾವಿದರು ಅಷ್ಟೇ" ಎಂದು ಟ್ವೀಟ್ ಮಾಡಿದ್ದರು. ಅಂದಿನಿಂದ ಮುರಿದು ಬಿದ್ದ ಸ್ನೇಹ ಈಗ ಮತ್ತೆ ಕೂಡಿ ಕೊಳ್ಳುವ ಲಕ್ಷಣಗಳು ಕಾಣುತ್ತಿವೆ. ಆದರೆ, ಒಂದು ಟ್ವೀಟ್ ಹೊರತಾಗಿ ಮುಂದಕ್ಕೆ ಹೋಗಿಲ್ಲ ಅಂತ ಸ್ಯಾಂಡಲ್‌ವುಡ್ ಮಂದಿ ಹೇಳುತ್ತಿದ್ದಾರೆ.