For Quick Alerts
  ALLOW NOTIFICATIONS  
  For Daily Alerts

  ಶೂಟಿಂಗ್‌ಗೆ ಹೋದ ಸುದೀಪ್‌ಗೆ ಎದುರಾಗಿ ಬಂದ ಗುಮ್ಮ ಗುಮ್ಮ...!

  |

  ಕೊರೊನಾ ವೈರಸ್ ಭೀತಿಯ ನಡುವೆಯೂ ಅಲ್ಲಲ್ಲಿ ಚಿತ್ರೀಕರಣಗಳು ಶುರುವಾಗಿವೆ. ನಟ ಸುದೀಪ್ ಕೂಡ 'ಫ್ಯಾಂಟಮ್' ಚಿತ್ರೀಕರಣದಲ್ಲಿ ಭಾಗವಹಿಸುವ ಧೈರ್ಯ ಮಾಡಿದ್ದಾರೆ. ಸರ್ಕಾರ ನೀಡಿರುವ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ಚಿತ್ರೀಕರಣದಲ್ಲಿ ವ್ಯವಸ್ಥೆ ಮಾಡುವುದರತ್ತ ಗಮನ ಕೊಟ್ಟಿರುವ ಅವರು, ಈ ಸಂಕಷ್ಟದ ನಡುವೆಯೂ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ಕಾರಣವಿದೆ.

  Hulivana Gangadhar ,ಹಿರಿಯ ನಟ ಕೊರೊನದಿಂದ ಸಾವು | Filmibeat Kannada

  ಹೈದರಾಬಾದ್‌ನಲ್ಲಿ ಕೋಟಿಗಟ್ಟಲೆ ವೆಚ್ಚದಲ್ಲಿ ಅದ್ಧೂರಿ ಕಾಡಿನ ಸೆಟ್ ಹಾಕಿಸಲಾಗಿದೆ. ಮಳೆಗಾಲ ಬೇರೆ ಶುರುವಾಗಿರುವುದರಿಂದ ಹಾಗೆಯೇ ಬಿಟ್ಟರೆ ಸೆಟ್ ಹಾಳಾಗುತ್ತದೆ. ಅಲ್ಲದೆ, ನಿರ್ಮಾಪಕರು ವಿಪರೀತ ನಷ್ಟ ಅನುಭವಿಸಬೇಕಾಗುತ್ತದೆ ಎನ್ನುವುದು ಸುದೀಪ್ ಕಾಳಜಿ. ಅಷ್ಟೇ ಅಲ್ಲ, ಅವರು ರಿಸ್ಕ್ ತೆಗೆದುಕೊಂಡಿರುವುದರ ಹಿಂದೆ ಚಿತ್ರೀಕರಣ ನಡೆಸುವುದರಿಂದ ಕೆಲಸ ಮತ್ತು ದುಡಿಮೆ ಇಲ್ಲದೆ ಕಷ್ಟದಲ್ಲಿರುವ ಚಿತ್ರರಂಗದ ಅನೇಕ ಕಾರ್ಮಿಕರಿಗೆ ಸಹಾಯವಾಗಲಿದೆ ಎಂಬ ಮಾನವೀಯ ಉದ್ದೇಶವೂ ಇದೆ. ಆದರೆ ಚಿತ್ರೀಕರಣಕ್ಕೆ ಹೋಗಿರುವ ಅವರಿಗೆ 'ಗುಮ್ಮ'ನ ಕಾಟ ಎದುರಾಗಿದೆ. ಮುಂದೆ ಓದಿ...

  ರೋಮಾಂಚನಕಾರಿ ವಿಡಿಯೋ

  ರೋಮಾಂಚನಕಾರಿ ವಿಡಿಯೋ

  ಕೆಲವು ದಿನಗಳ ಹಿಂದೆ 'ಫ್ಯಾಂಟಮ್' ಚಿತ್ರೀಕರಣ ಆರಂಭಿಸುತ್ತಿರುವ ಫೋಟೊಗಳನ್ನು ಹಂಚಿಕೊಂಡಿದ್ದ ಕಿಚ್ಚ ಸುದೀಪ್, ಭಾನುವಾರ ವಿಶೇಷ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋ ನೋಡಿದವರಿಗೆ 'ಫ್ಯಾಂಟಮ್' ಒಂದು ರೋಮಾಂಚನಕಾರಿ ಸಿನಿಮಾ ಆಗಲಿದೆ ಎಂಬ ಅನುಭವ ದೊರಕಿದೆ.

  ಕೊರೊನಾ ಹಾವಳಿಯ ನಡುವೆಯೂ 'ಫ್ಯಾಂಟಮ್' ಚಿತ್ರೀಕರಣ ಪ್ರಾರಂಭ: ಫೋಟೋ ಹಂಚಿಕೊಂಡ ಸುದೀಪ್ಕೊರೊನಾ ಹಾವಳಿಯ ನಡುವೆಯೂ 'ಫ್ಯಾಂಟಮ್' ಚಿತ್ರೀಕರಣ ಪ್ರಾರಂಭ: ಫೋಟೋ ಹಂಚಿಕೊಂಡ ಸುದೀಪ್

  ಗುಮ್ಮ ಬಂದ ಗುಮ್ಮ ಬಂದ

  ಕಗ್ಗತ್ತಲಿನಲ್ಲಿ ದಟ್ಟಡವಿಯ ನಡುವೆ ನೀರಿನ ನಡುವೆ ಸುದೀಪ್ ಪುಟಾಣಿ ಮಗವನ್ನು ಹಿಡಿದುಕೊಂಡು ದೋಣಿಯಲ್ಲಿ ನಿಂತಿದ್ದಾರೆ. ಉರಿಯುತ್ತಿರುವ ದೊಂದಿಯೊಂದು ಬೆಳಕು ನೀಡುತ್ತಿದೆ. ದೋಣಿಯ ಮುಂದೆ ಹುಟ್ಟು ಹಾಕುತ್ತಾ ನಡೆಸುತ್ತಿರುವ ಅಂಬಿಗ ಒಂದು ಧ್ವನಿಯಿಂದ ಬೆದರಿ ನೋಡುತ್ತಾನೆ. ಹಿನ್ನೆಲೆಯಲ್ಲಿ ನಟ ರವಿಶಂಕರ್ ಕಂಚಿನ ಧ್ವನಿಯಲ್ಲಿ ಕೇಳುವ 'ಗುಮ್ಮ ಬಂದ ಗುಮ್ಮ ಬಂದ...' ಎಂಬ ಸಾಲು ಎದೆಯಲ್ಲಿ ಡವಡವ ಹೆಚ್ಚಿಸುತ್ತದೆ. ಸುದೀಪ್ ಕೂಡ ಆ ಸದ್ದು ಬರುವೆಡೆಗೆ ಬೆರಗಿನಿಂದ ನೋಡುತ್ತಾರೆ.

  ಶೂಟಿಂಗ್ ಇಲ್ಲಿಂದ ಶುರು

  ಶೂಟಿಂಗ್ ಇಲ್ಲಿಂದ ಶುರು

  ಅಂದಹಾಗೆ, ಈ ವಿಡಿಯೋ ಟೀಸರ್ ಅಲ್ಲ. ಚಿತ್ರೀಕರಣ ಆರಂಭಿಸುತ್ತಿರುವ ಎಕ್ಸೈಟ್‌ಮೆಂಟ್ ಅಷ್ಟೇ. ಅದನ್ನೇ ನಿಮ್ಮೆಲ್ಲರ ಜತೆ ಹಂಚಿಕೊಳ್ಳುತ್ತಿದ್ದೇವೆ ಎಂದು ಸುದೀಪ್ ಹಾಗೂ ನಿರ್ದೇಶಕ ಅನೂಪ್ ಭಂಡಾರಿ ತಿಳಿಸಿದ್ದಾರೆ. ಕೊರೊನಾ ವೈರಸ್‌ ಕಾಟ ಆರಂಭಕ್ಕೂ ಮುನ್ನ ಪ್ರಾರಂಭಿಸಿದ್ದ ಚಿತ್ರೀಕರಣ ಅಲ್ಲಿಗೆ ಮುಕ್ತಾಯಗೊಂಡಿತ್ತು. ಈಗ ಚಿತ್ರೀಕರಣವನ್ನು ಈ ಮೈನವಿರೇಳಿಸುವ ದೃಶ್ಯದೊಂದಿಗೆ ಪುನರಾರಂಭಿಸಲಾಗಿದೆ.

  ನಿರ್ದೇಶಕ ರಘುರಾಮ್ ಗೆ ಜಮಾನದಲ್ಲಿ ಸುದೀಪ್ ಕೊಟ್ಟ ದುಬಾರಿ ಗಿಫ್ಟ್ ಇದುನಿರ್ದೇಶಕ ರಘುರಾಮ್ ಗೆ ಜಮಾನದಲ್ಲಿ ಸುದೀಪ್ ಕೊಟ್ಟ ದುಬಾರಿ ಗಿಫ್ಟ್ ಇದು

  ಸಿನಿಮಾ ಎಂಬ ಪ್ಯಾಷನ್‌ಗೆ ವಾಪಸ್

  ಸಿನಿಮಾ ಎಂಬ ಪ್ಯಾಷನ್‌ಗೆ ವಾಪಸ್

  'ಇಂದು ಮೇಕಪ್ ಮಾಡಿಸಿಕೊಳ್ಳುವುದು ಅದ್ಭುತ ಅನುಭವ ನೀಡಿತು. ನನ್ನ ಪ್ಯಾಷನ್‌ನಿಂದ ಸುದೀರ್ಘವಾದ ರಜೆಯಲ್ಲಿದ್ದೆ ಎನಿಸಿತು. ಪ್ಯಾಷನ್ ಎಂದರೆ ಸಿನಿಮಾ. ಇಲ್ಲಿ ನಾನು ವಿಕ್ರಾಂತ್ ರೋಣನಾಗಿ ಮತ್ತೆ ಬಂದಿದ್ದೇನೆ' ಎಂದು ಸುದೀಪ್ ಹೇಳಿದ್ದಾರೆ. ಫ್ಯಾಟಮ್ ಚಿತ್ರೀಕರಣ ಶುರುವಾಗಿರುವುದು ಸುದೀಪ್ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದೆ. ಫ್ಯಾಂಟಮ್ ಬಿಗಿನ್ಸ್ ಎಂಬ ಹ್ಯಾಷ್ ಟ್ಯಾಗ್ ದೊಡ್ಡಮಟ್ಟದಲ್ಲಿ ಟ್ರೆಂಡ್ ಆಗುತ್ತಿದೆ.

  ಕೆಲಸ ಒದಗಿಸುವ ಉದ್ದೇಶ

  ಕೆಲಸ ಒದಗಿಸುವ ಉದ್ದೇಶ

  "ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಕಡಿಮೆ ಜನರನ್ನು ಬಳಸಿಕೊಂಡು ಚಿತ್ರೀಕರಣ ಮಾಡುತ್ತಿದ್ದೇವೆ. ಸೆಟ್ ನಲ್ಲಿ ಪ್ರತಿಯೊಬ್ಬ ಸದಸ್ಯರು, ತಾಂತ್ರಿಕ ವರ್ಗ, ಉತ್ಪಾದನೆ, ಕಲಾವಿದರು ಸೇರಿದಂತೆ ನಮಗೆ ಕನ್ನಡ ಚಿತ್ರರಂಗದ ಸಾಧ್ಯವಾದಷ್ಟು ಸದಸ್ಯರಿಗೆ ಕೆಲಸವನ್ನು ಒದಗಿಸುವುದು ಇದರ ಉದ್ದೇಶವಾಗಿತ್ತು" ಎಂದು ಹೇಳಿದ್ದರು.

  ಸುಶಾಂತ್ ಸಿಂಗ್ ಸಾವಿಗೆ ಸೋಲು ಕಾರಣವಲ್ಲ, ಬೇರೇನೋ ಇದೆ: ಕಿಚ್ಚ ಸುದೀಪ್ಸುಶಾಂತ್ ಸಿಂಗ್ ಸಾವಿಗೆ ಸೋಲು ಕಾರಣವಲ್ಲ, ಬೇರೇನೋ ಇದೆ: ಕಿಚ್ಚ ಸುದೀಪ್

  ರಂಗಿತರಂಗ ತಂಡ

  ರಂಗಿತರಂಗ ತಂಡ

  'ಫ್ಯಾಂಟಮ್' ಸಿನಿಮಾದಲ್ಲಿ ರಂಗಿತರಂಗ ಸಿನಿಮಾದಲ್ಲಿ ಕೆಲಸ ಮಾಡಿದ ಅನೇಕರು ಇದ್ದಾರೆ. ನಿರ್ದೇಶಕ ಅನೂಪ್ ಭಂಡಾರಿ ಜೊತೆಗೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಹ ಫ್ಯಾಂಟಮ್ ತಂಡ ಸೇರಿಕೊಂಡಿದ್ದಾರೆ. ರಂಗಿತರಂಗ ಸಿನಿಮಾದಲ್ಲಿ ಕೆಲಸ ಮಾಡಿದ್ದ ಛಾಯಾಗ್ರಾಹಕ ವಿಲಿಯಮ್ ಡೇವಿಡ್ ಕೂಡ ಛಾಯಾಗ್ರಾಹಕರಾಗಿ ಜತೆಯಾಗಿದ್ದಾರೆ. ನಿರೂಪ್ ಭಂಡಾರಿ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುದೀಪ್ ಗೆ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ನಟಿಸುತ್ತಿದ್ದಾರೆ.

  English summary
  Kichcha Sudeep shares first shot video of Pantom movie shooting after coronavirus lockdown.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X