Don't Miss!
- News
ವಿಜಯಪುರದ ಆಲಮೇಲದಲ್ಲಿ ನೂರಾರು ಮಕ್ಕಳಿಗೆ ದಡಾರ: ಎಚ್ಚರಿಕೆ ವಹಿಸಲು ಜಿಲ್ಲಾಡಳಿತ ಮನವಿ
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಭಿಮಾನಿಗಳು ಕೊನೆಗೂ ನಿರಾಳ: 'ವಿಕ್ರಾಂತ್ ರೋಣ' ಅಡ್ವಾನ್ಸ್ ಬುಕಿಂಗ್ ಆರಂಭ!
ವಿಕ್ರಾಂತ್ ರೋಣ.. ವಿಕ್ರಾಂತ್ ರೋಣ.. ವಿಕ್ರಾಂತ್ ರೋಣ.. ಕಳೆದೊಂದು ವಾರದಿಂದ ಬರೀ ಈ ಸಿನಿಮಾ ಬಗ್ಗೆನೇ ಜಪ ಶುರುವಾಗಿದೆ. ಇದು ಕಿಚ್ಚ ಸುದೀಪ್ ಕರಿಯರ್‌ನ ಮೋಸ್ಟ್ ಎಕ್ಸ್‌ಪೆನ್ಸಿವ್ ಸಿನಿಮಾ. ಅದರಲ್ಲೂ 3ಡಿಯಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾ ಬೇರೆ. ಈ ಕಾರಣಕ್ಕೆ ಸಿನಿಮಾ ನೋಡಲು ಸಿನಿಪ್ರಿಯರು ತುದಿಗಾಲಲ್ಲಿ ನಿಂತಿದ್ದರು.
'ವಿಕ್ರಾಂತ್ ರೋಣ' ರಿಲೀಸ್ ಹಲವು ಬಾರಿ ಪೋಸ್ಟ್‌ಪೋನ್ ಆಗಿತ್ತು. ಸಿನಿಮಾ ನೋಡಬೇಕು ಅಂತ ಕಾದು ಕೂತಿದ್ದವರಿಗೆ ಆಗ ನಿರಾಶೆ ಆಗಿತ್ತು. ಕೊನೆಗೂ ಈ ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಅದಕ್ಕೆ ಕಳೆದ ಹಲವು ದಿನಗಳಿಂದ ಕಿಚ್ಚ ಸುದೀಪ್ ನಿರಂತರವಾಗಿ ಓಡಾಡುತ್ತಿದ್ದಾರೆ.
'ಪ್ಯಾನ್
ಇಂಡಿಯಾ'
ಮುಂದೆ
'ರಿಮೇಕ್
ಸಿನಿಮಾ'ಗಳಿಗೀಗ
ಬೆಲೆ
ಇಲ್ಲ-
ಕಿಚ್ಚ
ಸುದೀಪ್!
ಯಾವಾಗ ಸಿನಿಮಾ ನೋಡುತ್ತೇವೋ ಅಂತ ಕಾದು ಕೂತಿದ್ದವರಿಗೆ ಕೊನೆಗೂ ಖುಷಿಯಾಗಿದೆ. ಸದ್ಯಕ್ಕೀಗ 'ವಿಕ್ರಾಂತ್ ರೋಣ' ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಸಿನಿಮಾ ಬಿಡುಗಡೆಗೆ ಇನ್ನೂ ನಾಲ್ಕು ದಿನವಿರುವಾಗಲೇ ಕಿಚ್ಚನ ಸಿನಿಮಾಗೆ ಬುಕಿಂಗ್ ಆರಂಭ ಆಗಿದೆ.
'ವಿಕ್ರಾಂತ್
ರೋಣ'
ತಂಡದ
NFT
ಮೆಂಬರ್ಶಿಪ್:
ವಿಶ್ವದಲ್ಲಿ
ಇದೇ
ಮೊದಲು!

'ವಿಕ್ರಾಂತ್ ರೋಣ' ಬುಕಿಂಗ್ ಆರಂಭ
'ವಿಕ್ರಾಂತ್ ರೋಣ' ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಜುಲೈ 28ರಂದು 'ವಿಕ್ರಾಂತ್ ರೋಣ' ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ. ಹೀಗಾಗಿ ಬಿಡುಗಡೆಗೆ ನಾಲ್ಕು ದಿನ ಮುನ್ನವೇ ಸಿನಿಮಾದ ಟಿಕೆಟ್ ನೀಡಲು ಮುಂದಾಗಿದೆ ಚಿತ್ರತಂಡ. ಇದು ಕಿಚ್ಚ ಅಭಿಮಾನಿಗಳ ಬಹುದಿನಗಳ ಬೇಡಿಕೆಯಾಗಿತ್ತು. ಕೊನೆಗೂ 'ವಿಕ್ರಾಂತ್ ರೋಣ' ಅಡ್ವಾನ್ಸ್ ಟಿಕೆಟ್ ಬುಕಿಂಗ್ ಆರಂಭ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಎಷ್ಟು ಥಿಯೇಟರ್‌ಗಳಲ್ಲಿ ಬುಕಿಂಗ್
ಬುಕ್ ಮೈ ಶೋ 'ವಿಕ್ರಾಂತ್ ರೋಣ' ಸಿನಿಮಾದ ಅಡ್ವಾನ್ಸ್ ಬುಕಿಂಗ್ ಆರಂಭ ಮಾಡಿದೆ. ಬೆಂಗಳೂರು, ಮೈಸೂರು ಸೇರಿದಂತೆ ಹಲವೆಡೆ ಇಂದು (ಜುಲೈ 24)ರಿಂದ ಬುಕಿಂಗ್ ಓಪನ್ ಆಗಿದೆ. ಇನ್ನು ಹೈದರಾಬಾದ್‌ನಲ್ಲೂ ಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದು, ಕೆಲವೇ ಕ್ಷಣಗಳಲ್ಲಿ ಮತ್ತಷ್ಟು ಥಿಯೇಟರ್‌ಗಳು ಬುಕಿಂಗ್ ಆಗುವ ಸಾಧ್ಯತೆಯಿದೆ. ಇನ್ನು ಮಹಾರಾಷ್ಟ್ರ, ತಮಿಳುನಾಡು, ಕೇರಳದಲ್ಲಿ ಸಿನಿಮಾದ ಬುಕಿಂಗ್ ಇನ್ನೂ ಓಪನ್ ಆಗಬೇಕಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಥಿಯೇಟರ್?
ಕಿಚ್ಚ ಸುದೀಪ್ ಸಿನಿಮಾ 'ವಿಕ್ರಾಂತ್ ರೋಣ' ಅಬ್ಬರ ಶುರುವಾಗಿದೆ. ಕರ್ನಾಟಕದಲ್ಲಿ ಸುಮಾರು 450ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇನ್ನು ಭಾರತದಾದ್ಯಂತ ಸುಮಾರು 3 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ ಎಂದು ನಿರ್ಮಾಪಕರೇ ತಿಳಿಸಿದ್ದಾರೆ. ಇನ್ನು ವಿದೇಶದ ಚಿತ್ರಮಂದಿರಗಳಲ್ಲಿ 'ವಿಕ್ರಾಂತ್ ರೋಣ' ಸಿನಿಮಾ ಎಷ್ಟು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತೆ ಅನ್ನೋದು ಇನ್ನೇನು ಗೊತ್ತಾಗಬೇಕಿದೆ.

ಕಿಚ್ಚ ಸುದೀಪ್ ಫುಲ್ ಬ್ಯುಸಿ
ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನಗಳ ಬಾಕಿ ಇರುವಾಗಲೇ ಕಿಚ್ಚ ಸುದೀಪ್ ಕೊನೆಯ ಹಂತದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇಂದು (ಜುಲೈ 24) ಕಿಚ್ಚ ಸುದೀಪ್ ಚೆನ್ನೈನಲ್ಲಿ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಭಾಗಿಯಾಗಲಿದ್ದಾರೆ. ಉಳಿದಂತೆ ಕೇರಳ ಹಾಗೂ ಕರ್ನಾಟಕದಲ್ಲಿಯೂ ಪ್ರೀ-ರಿಲೀಸ್ ಈವೆಂಟ್ ನಡೆಯುವ ಸಾಧ್ಯತೆ ಇದೆ. ಸದ್ಯ ಅಡ್ವಾನ್ ಬುಕಿಂಗ್ ಆರಂಭ ಆಗಿರುವುದರಿಂದ ಸಿನಿಮಾ ಕ್ರೇಜ್ ಹೇಗಿದೆ ಅನ್ನೋದು ಗೊತ್ತಾಗಲಿದೆ.