»   » ಕಲಾವಿದರ ಸಂಘದಿಂದ ಪೂಜಾ ಗಾಂಧಿ ಉಚ್ಚಾಟಿಸಿ

ಕಲಾವಿದರ ಸಂಘದಿಂದ ಪೂಜಾ ಗಾಂಧಿ ಉಚ್ಚಾಟಿಸಿ

Posted By:
Subscribe to Filmibeat Kannada
Dr. Kiran advocate demanded Pooja Gandhi from Artist association
ನಟಿ ಪೂಜಾ ಗಾಂಧಿಯನ್ನು ಕಲಾವಿದರ ಸಂಘದಿಂದ ಉಚ್ಚಾಟಿಸಬೇಕೆಂದು ಡಾ. ಕಿರಣ್ ಪರ ವಕೀಲರು ಆಗ್ರಹಿಸಿದ್ದಾರೆ.

ಈ ಸಂಬಂಧ ಕಲಾವಿದರ ಸಂಘಕ್ಕೆ ಮನವಿ ಸಲ್ಲಿಸಿದ್ದು ನಟ ಅಂಬರೀಶ್ ಅವರಿಗೂ ಮನವಿ ಸಲ್ಲಿಸಲು ವಕೀಲರು ನಿರ್ಧರಿಸಿದ್ದಾರೆ.

ಪೂಜಾ ಗಾಂಧಿ ವಿರುದ್ದ ದಾಖಲಾಗಿರುವ ಪ್ರಕರಣಗಳು ಇತ್ಯರ್ಥವಾಗುವ ತನಕ ಅವರನ್ನು ಕಲಾವಿದರ ಸಂಘದಿಂದ ಉಚ್ಚಾಟಿಸಬೇಕೆಂದು ಕಿರಣ್ ಪರ ವಕೀಲರು ಕಲಾವಿದರ ಸಂಘದಲ್ಲಿ ಮನವಿ ಮಾಡಿದ್ದಾರೆ.

ನಟಿ ಪೂಜಾಗಾಂಧಿ ಹಾಗೂ ಅವರ ತಂದೆ ಪವನ್ ಕುಮಾರ್ ಗಾಂಧಿ ವಿರುದ್ಧ ಜೀವ ಬೆದರಿಕೆ ದೂರನ್ನು ಡಾ.ಕಿರಣ್ ಎಂಬುವವರು ಬೆಂಗಳೂರು ಸುಬ್ರಹ್ಮಣ್ಯಪುರಂ ಪೊಲೀಸ್ ಠಾಣೆಯಲ್ಲಿ ಶುಕ್ರವಾರ (ಡಿಸೆಂಬರ್ 21) ದೂರು ಸಲ್ಲಿಸಿದ್ದರು.

ಇದಕ್ಕೆ ಪೂಜಾ ಗಾಂಧಿ ಸಹ ಡಾ. ಕಿರಣ್ ಒಬ್ಬ 'ಸೈಕೋ' ಎಂದು ಬೆಂಗಳೂರು ಚನ್ನಮ್ಮಕೆರೆ ಅಚ್ಚುಕಟ್ಟು ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

English summary
Dr. Kiran advocate demanded to suspend Pooja Gandhi from Artist association. 
Please Wait while comments are loading...