twitter
    For Quick Alerts
    ALLOW NOTIFICATIONS  
    For Daily Alerts

    ಬಸವನಿಗೆ ಅನಾರೋಗ್ಯ: ಮತ್ತೆ ದರ್ಶನ್ ಸ್ಪರ್ಶಕ್ಕೆ ಕಾದಿದೆಯಾ ಗೂಳಿ?

    |

    ಕಳೆದ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಮಂಡ್ಯದ ಕೆ.ಆರ್. ನಗರ ತಾಲ್ಲೂಕಿನ ಕಾಳಮ್ಮನಕೊಪ್ಪಲು ಗ್ರಾಮದಲ್ಲಿ ಸುಮಲತಾ ಅಂಬರೀಷ್ ಪರ ಪ್ರಚಾರ ಮಾಡುತ್ತಿದ್ದ ದರ್ಶನ್ ಅವರ ಜೀಪಿಗೆ ಅಡ್ಡಲಾಗಿ ನಿಂತಿದ್ದ ಬಸವ ಮತ್ತೆ ಸುದ್ದಿಯಲ್ಲಿದೆ.

    Recommended Video

    ಕನ್ನಡ ಚಿತ್ರರಂಗದ ಕಾರ್ಮಿಕರಿಗೆ ದಿನಸಿ ಕೊಟ್ಟ ಕೋವಿಡ್ ವಾರಿಯರ್ಸ್ ತಂಡ | Sandalwood

    ಅಪಾರ ಜನಜಂಗುಳಿಯ ನಡುವೆ ರಸ್ತೆ ಮಧ್ಯೆ ನಿಂತಿದ್ದ ಬಸವ, ವಾಹನ ಮುಂದೆ ಸಾಗಲು ಅಡ್ಡಿಪಡಿಸಿತ್ತು. ಜನರು ಗದ್ದಲ ಮಾಡುತ್ತಿದ್ದಾಗ ಜೀಪಿನಿಂದ ಇಳಿದಿದ್ದ ದರ್ಶನ್, ಬಸವನ ಮೈದಡವಿದ್ದರು. ರಸ್ತೆಯಿಂದ ಕಿಂಚಿತ್ತೂ ಕದಲದೆ ನಿಂತಿದ್ದ ಬಸವ, ದರ್ಶನ್ ಮೈದಡವಿ ಮುದ್ದಿಸಿದ ನಂತರ ವಾಹನ ತೆರಳಲು ಸಾಧ್ಯವಾಗುವಂತೆ ರಸ್ತೆಯಿಂದ ಪಕ್ಕಕ್ಕೆ ತೆರಳಿತ್ತು. ಇದು ಅನೇಕರಲ್ಲಿ ಅಚ್ಚರಿ ಮೂಡಿಸಿತ್ತು. ಆದರೆ ಆ ಬಸವ ಈಗ ಅನಾರೋಗ್ಯದಿಂದ ಬಳಲುತ್ತಿದ್ದು, ಅದರ ಸ್ಥಿತಿ ಚಿಂತಾಜನಕವಾಗಿದೆ. ಮುಂದೆ ಓದಿ...

    ಟಿವಿಯಲ್ಲೂ ದರ್ಶನ್ ಕಿಂಗ್: ಹೆಚ್ಚು ಮಂದಿ ನೋಡಿದ್ದು ಈ ಸಿನಿಮಾವನ್ನುಟಿವಿಯಲ್ಲೂ ದರ್ಶನ್ ಕಿಂಗ್: ಹೆಚ್ಚು ಮಂದಿ ನೋಡಿದ್ದು ಈ ಸಿನಿಮಾವನ್ನು

    ಗ್ರಾಮಸ್ಥರ ಪಾಲಿಗೆ ದೇವರು

    ಗ್ರಾಮಸ್ಥರ ಪಾಲಿಗೆ ದೇವರು

    ಹಲವು ವರ್ಷಗಳಿಂದ ಕಾಳಮ್ಮನ ಕೊಪ್ಪಲು ಗ್ರಾಮದಲ್ಲಿಯೇ ಬೀಡುಬಿಟ್ಟಿರುವ ಬಸವ, ಊರಿನ ಜನರಿಗೂ ಅಚ್ಚುಮೆಚ್ಚು. ಉದ್ದನೆಯ ಕೊಂಬು, ದೃಢವಾದ ಮೈಕಟ್ಟು ಎಂಥವರಲ್ಲಿಯೂ ಭಯ ಹುಟ್ಟಿಸುವಂತಿದೆ. ಆದರೆ ಗ್ರಾಮಸ್ಥರು ಅದನ್ನು ದೇವರು ಎಂದೇ ಪರಿಗಣಿಸಿದ್ದಾರೆ.

    ಅಣ್ಣಾವ್ರು ಕನ್ನಡಿಗರ ಮನದಲ್ಲಿ ಎಂದಿಗೂ ಅಜರಾಮರ ಎಂದು ಸ್ಮರಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ಅಣ್ಣಾವ್ರು ಕನ್ನಡಿಗರ ಮನದಲ್ಲಿ ಎಂದಿಗೂ ಅಜರಾಮರ ಎಂದು ಸ್ಮರಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

    ವೈರಲ್ ಆಗಿದ್ದ ವಿಡಿಯೋ

    ವೈರಲ್ ಆಗಿದ್ದ ವಿಡಿಯೋ

    ಲೋಕಸಭೆ ಚುನಾವಣೆಯ ಪ್ರಚಾರದ ವೇಳೆ ಗ್ರಾಮದಲ್ಲಿ ಮೆರವಣಿಗೆ ತೆರಳುತ್ತಿದ್ದ ವೇಳೆ ಆ ಬಸವ ರಸ್ತೆಗೆ ಅಡ್ಡಲಾಗಿ ನಿಂತಿತ್ತು. ಜನರನ್ನು ಅದನ್ನು ಪಕ್ಕಕ್ಕೆ ಕಳುಹಿಸಲು ನೋಡಿದಾಗ ಸಿಟ್ಟು ಪ್ರದರ್ಶಿಸಿತ್ತು. ಜೀಪಿನಲ್ಲಿದ್ದ ದರ್ಶನ್ ಇಳಿದು ಬಸವನನ್ನು ಸ್ಪರ್ಶಿಸಿದ್ದರು. ಕೂಡಲೇ ಅದು ಪಕ್ಕಕ್ಕೆ ಸರಿದು ದಾರಿ ಬಿಟ್ಟಿತ್ತು. ಈ ವಿಡಿಯೋ ವೈರಲ್ ಆಗಿತ್ತು.

    ನಿತ್ರಾಣವಾಗಿ ಮಲಗಿರುವ ಬಸವ

    ನಿತ್ರಾಣವಾಗಿ ಮಲಗಿರುವ ಬಸವ

    ಈ ಘಟನೆಯಿಂದ ಬಸವನ ಮೇಲಿನ ಜನರ ಪ್ರೀತಿ ಹೆಚ್ಚಾಗಿತ್ತು. ನಾಲ್ಕೈದು ದಿನಗಳ ಕೆಳಗೆ ಬಸವ ಆಕಸ್ಮಿಕವಾಗಿ ಬಿದ್ದು ಕಾಲು ಮುರಿದುಕೊಂಡಿದೆ. ದೃಢ ಮೈಕಟ್ಟಿನ ಬಸವ ಮೇವು, ನೀರು ಬಿಟ್ಟು ನಿತ್ರಾಣವಾಗಿ ಮಲಗಿರುವುದು ಎಂಥವರಲ್ಲಿಯೂ ಕರುಳು ಹಿಂಡುವಂತಿದೆ.

    ಸ್ಪಂದಿಸದ ಬಸವ

    ಸ್ಪಂದಿಸದ ಬಸವ

    ಗ್ರಾಮಸ್ಥರು ಬಸವನ ಆರೈಕೆ ಮಾಡುತ್ತಿದ್ದಾರೆ. ಪಶು ವೈದ್ಯರಿಂದ ಚಿಕಿತ್ಸೆ ಕೊಡಿಸಿದರೂ ಅದಕ್ಕೆ ಬಸವ ಸ್ಪಂದಿಸುತ್ತಿಲ್ಲ. ಇದು ಅವರ ದುಃಖವನ್ನು ಹೆಚ್ಚಿಸಿದೆ. ದರ್ಶನ್ ಅವರ ಸ್ಪರ್ಶಕ್ಕೆ ದಾರಿ ಬಿಟ್ಟುಕೊಟಿದ್ದ ಬಸವ, ಈಗಲೂ ದರ್ಶನ್ ಬಂದು ಸ್ಪರ್ಶಿಸಿದರೆ ಸ್ಪಂದಿಸುತ್ತದೆ. ಮೇವು ತಿಂದು ಚೇತರಿಸಿಕೊಳ್ಳುತ್ತದೆ ಎಂಬ ನಂಬಿಕೆ ಗ್ರಾಮಸ್ಥರದ್ದು.

    ಡಿ ಬಾಸ್ ಎಂದರೆ ಹೇಗೆ? 'ರಾಬರ್ಟ್' ನಾಯಕಿ ಆಶಾ ಭಟ್ ಹೇಳಿದ ಮಾತುಗಳಿವು...ಡಿ ಬಾಸ್ ಎಂದರೆ ಹೇಗೆ? 'ರಾಬರ್ಟ್' ನಾಯಕಿ ಆಶಾ ಭಟ್ ಹೇಳಿದ ಮಾತುಗಳಿವು...

    ಲಾಕ್ ಡೌನ್ ಮಧ್ಯೆ ಹೋಗುವುದು ಹೇಗೆ?

    ಲಾಕ್ ಡೌನ್ ಮಧ್ಯೆ ಹೋಗುವುದು ಹೇಗೆ?

    ಪ್ರಾಣಿಗಳ ಬಗ್ಗೆ ಅಪಾರ ಕಾಳಜಿ ತೋರುವ ದರ್ಶನ್, ಅವುಗಳ ಆರೈಕೆಯಲ್ಲಿ ಪಳಗಿದವರು. ಹೀಗಾಗಿ ಗ್ರಾಮಸ್ಥರ ಅಭಿಲಾಷೆಯಂತೆ ದರ್ಶನ್ ಅಲ್ಲಿಗೆ ತೆರಳಿದರೆ ಊರಿನ ಜನರಿಗೂ ಖುಷಿಯಾಗುವುದು ಖಚಿತ. ಜನರ ನಂಬಿಕೆಯಂತೆ ಪವಾಡ ಸಂಭವಿಸಿ ಬಸವ ಮೊದಲಿನಂತಾದರೆ ಅವರ ಸಂಭ್ರಮ ದುಪ್ಪಟ್ಟಾಗುತ್ತದೆ. ಆದರೆ ಲಾಕ್ ಡೌನ್ ನಡುವೆ ದರ್ಶನ್ ಅಲ್ಲಿಗೆ ತೆರಳುವ ಅವಕಾಶ ಪಡೆಯುವುದು ಕಷ್ಟ.

    English summary
    A bull in Kalammana Koppalu village of KR Nagar, Mandya once calmed by Darshan during Lok Sabha election campaign is suffering from unhealth.
    Saturday, May 2, 2020, 12:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X