Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಕಾಂತಾರ 2' ಸೆಟ್ಟೇರುವ ಮುನ್ನ ರಿಷಬ್ ಶೆಟ್ಟಿಯ 'ಕಾಂತಾರ' 10 ದಾಖಲೆಗಳನ್ನ ಒಮ್ಮೆ ನೋಡಿಬಿಡಿ!
ರಿಷಬ್ ಶೆಟ್ಟಿ ಸಿನಿಮಾ 'ಕಾಂತಾರ' ಬಿಡುಗಡೆಯಾದಲ್ಲಿಂದ ಅದ್ಯಾವ ಮಟ್ಟಿಗೆ ಸದ್ದು ಮಾಡುತ್ತಿದೆ ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸಿನಿಮಾ ಥಿಯೇಟರ್‌ಗೆ ಬಂದು ಈಗ ಓಟಿಟಿಗೆ ಲಗ್ಗೆ ಇಟ್ಟಿದ್ದರೂ 'ಕಾಂತಾರ' ಹವಾ ಮಾತ್ರ ಕಡಿಮೆಯಾಗುತ್ತಿಲ್ಲ.
ವಿಶ್ವದಾದ್ಯಂತ 'ಕಾಂತಾರ' 400 ಕೋಟಿ ರೂ. ಕಲೆಕ್ಷನ್ ಮಾಡುತ್ತಿದ್ದಂತೆ ರಿಷಬ್ ಶೆಟ್ಟಿ 'ಕಾಂತಾರ 2'ಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ರಿಷಬ್ ಶೆಟ್ಟಿ ನಂಬುವ ದೈವಗಳ ಬಳಿ ಹೋಗಿ 'ಕಾಂತಾರ 2' ಮಾಡಲು ಅನುಮತಿಯನ್ನೂ ಕೇಳಿ ಬಂದಿರುವ ಬಗ್ಗೆ ವರದಿಯಾಗಿವೆ.
ಕಾಂತಾರ
'ತುಳು'
ಆವೃತ್ತಿ
ಎಡವಿತೇ,
ಆದ
ತಪ್ಪುಗಳಾದರೂ
ಏನು?
ಈ ಮಧ್ಯೆ 'ಕಾಂತಾರ' ಬಾಕ್ಸಾಫೀಸ್‌ನಲ್ಲಿ ಬರೆದ ದಾಖಲೆಗಳ ಬಗ್ಗೆ ಚರ್ಚೆಯಾಗುತ್ತಿದೆ. ಈ ಮಟ್ಟಿಗೆ ಬಾಕ್ಸಾಫೀಸ್‌ನಲ್ಲಿ ಸೌಂಡ್ ಮಾಡಿದ 'ಕಾಂತಾರ' ಬರೆದ 10 ದುಬಾರಿ ದಾಖಲೆಗಳನ್ನು ಪಟ್ಟಿ ಮಾಡಲಾಗಿದೆ. ಹಾಗಿದ್ದರೆ, ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕಾಂತಾರ' ಬರೆದ ದಾಖಲೆಗಳೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಕೆಜಿಎಫ್ 2' ಹಿಂದಿಕ್ಕಿದ 'ಕಾಂತಾರ'
ರಿಷಬ್ ಶೆಟ್ಟಿಯ 'ಕಾಂತಾರ' ಕರ್ನಾಟಕದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಕನ್ನಡದ ಸಿನಿಮಾ ಅಂತ ಸಾಬೀತಾಗಿದೆ. 'ಕಾಂತಾರ' ಬಿಡುಗಡೆಗೂ ಮುನ್ನ 'ಕೆಜಿಎಫ್ ಚಾಪ್ಟರ್ 2' ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾದ ಲಿಸ್ಟ್‌ನಲ್ಲಿತ್ತು. 'ಕೆಜಿಎಫ್ 2'168 ಕೋಟಿ ರೂ. ಕಲೆ ಹಾಕಿದ್ದರೆ, ಇತ್ತ 'ಕಾಂತಾರ' ಕಲೆಕ್ಷನ್ 180 ಕೋಟಿ ರೂ. ದಾಟಿತ್ತು.
Exclusive:
'ಕಾಂತಾರ'
ಆದ್ಮೇಲೆ
ರಿಷಬ್
ಶೆಟ್ಟಿ
ಕಾಣಿಸಿಕೊಳ್ಳುವ
ಮುಂದಿನ
ಸಿನಿಮಾ
ರಿಲೀಸ್‌ಗೆ
ರೆಡಿ!

5ನೇ ವಾರ 'ಬಾಹುಬಲಿ 2'ಗೆ ಸೈಡು ಹೊಡೆದ 'ಕಾಂತಾರ'
ವಿಶ್ವದಾದ್ಯಂತ 'ಬಾಹುಬಲಿ 2' ಗಳಿಸಿದ ದಾಖಲೆಯನ್ನು ಮುರಿಯದೆ ಹೋದರೂ, 'ಕಾಂತಾರ' 5ನೇ ವಾರದಲ್ಲಿ ಚಮತ್ಕಾರ ಮಾಡಿತ್ತು. ಈ ವಾರ 'ಬಾಹುಬಲಿ 2' ಗಳಿಸಿದ ದಾಖಲೆಯನ್ನು ಸೈಡಿಗಿಟ್ಟು ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎನಿಸಿಕೊಂಡಿತ್ತು.

6ನೇ ವಾರದಲ್ಲೂ ಹೆಚ್ಚು ಕಲೆಕ್ಷನ್
5ನೇ ವಾರವಷ್ಟೇ ಅಲ್ಲ. 6ನೇ ವಾರದಲ್ಲೂ 'ಕಾಂತಾರ' ಮೋಡಿ ಮಾಡಿತ್ತು. ಅತೀ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ 'ಕಾಂತಾರ' ಡಿಸ್ಟ್ರಿಬ್ಯೂಟರ್‌ಗಳ ಗಮನ ಸೆಳೆದಿತ್ತು. ಕನ್ನಡ ಸಿನಿಮಾವೊಂದು ಇಂತಹ ದಾಖಲೆಗಳನ್ನು ಹಿಂದೆಂದೂ ಮಾಡಿರಲಿಲ್ಲ.
ಭಾರೀ
ಮೆಚ್ಚುಗೆಗೆ
ಪಾತ್ರವಾದ
ರಿಷಬ್
ಶೆಟ್ಟಿಯ
'ಕರ್ಮಭೂಮಿ'
ಮಾತು

ಸನ್ನಿ ಡಿಯೋಲ್ ಸಿನಿಮಾ ದಾಖಲೆ ಉಡೀಸ್
'ಕಾಂತಾರ' ಕೇವಲ ಇತ್ತೀಚೆಗಿನ ದಾಖಲೆಗಳನ್ನಷ್ಟೇ ಉಡೀಸ್ ಮಾಡಿಲ್ಲ. ಬದಲಾಗಿದೆ ಕಳೆಯ ದಾಖಲೆಗಳನ್ನೂ ಹೊಂದಿಕ್ಕಿತ್ತು. ಸನ್ನಿ ಡಿಯೋಲ್ ನಟಿಸಿದ್ದ 'ಗದರ್: ಏಕ್ ಪ್ರೇಮ್ ಕಥಾ' ಸಿನಿಮಾ 8ನೇ ವಾರದ ಗಳಿಸಿದ ದಾಖಲೆಗಳನ್ನು ಮುರಿದು ಹಾಕಿತ್ತು. ಇಷ್ಟೇ ಅಲ್ಲದೆ ಶೇ.50ರಷ್ಟು ಹೆಚ್ಚು ಗಳಿಕೆ ಕಂಡಿತ್ತು.

10 ವಾರದೊಳಗೆ ಹೆಚ್ಚು ದಾಖಲೆ ಸೃಷ್ಟಿಸಿದ ಸಿನಿಮಾ
ಮೊದಲು 10 ವಾರದಲ್ಲಿ ಅತೀ ಹೆಚ್ಚು ದಾಖಲೆಗಳನ್ನು ಬರೆದ ಸಿನಿಮಾಗಳ ಪಟ್ಟಿಯಲ್ಲಿ 'ಬಾಹುಬಲಿ 2' ಮೊದಲ ಸ್ಥಾನದಲ್ಲಿ ಇತ್ತು. ಈಗ ರಿಷಬ್ ಶೆಟ್ಟಿಯ ಕಾಂತಾರ ಆ ದಾಖಲೆಯನ್ನೂ ಮುರಿದು ಹಾಕಿದೆ.

8ನೇ ವಾರ ಹೆಚ್ಚು ಥಿಯೇಟರ್‌ಗಳಲ್ಲಿ ಪ್ರದರ್ಶನ
'ಕಾಂತಾರ' ಸಿನಿಮಾ ಕರ್ನಾಟಕದಲ್ಲಿಯೇ ಹೆಚ್ಚು ದಾಖಲೆಗಳನ್ನು ಬರೆದಿದೆ. ಇತ್ತೀಚೆಗೆ 100 ದಿನಗಳ ಕಾನ್ಸೆಪ್ಟ್ ಇಲ್ಲದೆ ಇರೋದ್ರಿಂದ ಹೆಚ್ಚು ಥಿಯೇಟರ್‌ಗಳಲ್ಲಿ ಸಿನಿಮಾ ರಿಲೀಸ್ ಆಗುತ್ತೆ. ಆದರೆ, ಮೊದಲೆರಡು ವಾರಗಳಲ್ಲಿ ಥಿಯೇಟರ್‌ಗಳ ಸಂಖ್ಯೆ ಕಡಿಮೆಯಾಗುತ್ತೆ. ಈ 'ಕಾಂತಾರ' ಕರ್ನಾಟಕದಲ್ಲಿಯೇ 8ನೇ ವಾರ ಸುಮಾರು 300 ಥಿಯೇಟರ್‌ಗಳಲ್ಲಿ ಪ್ರದರ್ಶನ ಕಂಡಿತ್ತು.

ವಿದೇಶದಲ್ಲೂ 'ಕಾಂತಾರ' ಕಲೆಕ್ಷನ್ ದಾಖಲೆ
ಇದೂವರೆಗೂ ರಾಕಿಂಗ್ ಸ್ಟಾರ್ ಯಶ್ ಸಿನಿಮಾ 'ಕೆಜಿಎಫ್ 2' ವಿದೇಶದಲ್ಲಿ ಅತೀ ಹೆಚ್ಚು ಗಳಿಸಿದ ಕನ್ನಡ ಸಿನಿಮಾ ಎಂದಾಗಿತ್ತು. ಆದ್ರೀಗ 'ಕೆಜಿಎಫ್ 2' ದಾಖಲೆಯನ್ನೂ ಉಡೀಸ್ ಮಾಡಿದ್ದು, ಆ ಸ್ಥಾನದಲ್ಲಿ 'ಕಾಂತಾರ'ವಿದೆ.

'ಕಾಂತಾರ'ದಿಂದ ಹೆಚ್ಚು ಪ್ರಾಫಿಟ್
'ಕಾಂತಾರ' ಭಾರತದಲ್ಲಿ ಅತೀ ಹೆಚ್ಚು ಪ್ರಾಫಿಟ್ ಮಾಡಿದ ಸಿನಿಮಾ ಎನಿಸಿಕೊಂಡಿದೆ. ಕಡಿಮೆ ಬಜೆಟ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ 'ಕಾಂತಾರ' ಎಂದು ಸಾಬೀತಾಗಿದೆ. 16 ಕೋಟಿ ರೂ. ವೆಚ್ಚದಲ್ಲಿ ಸುಮಾರು 400 ಕೋಟಿ ರೂ. ಕಲೆಕ್ಷನ್ ಮಾಡಿದೆ. ಅಲ್ಲದೆ 'ದ ಕಾಶ್ಮೀರ್ ಫೈಲ್ಸ್' ಸಿನಿಮಾ ಕೂಡ ಹೆಚ್ಚು ಪ್ರಾಫಿಟ್ ಮಾಡಿದ ಸಿನಿಮಾಗಳ ಪಟ್ಟಿ ಸೇರಿದೆ.

ಬಾಲಿವುಡ್ ಬಾಕ್ಸಾಫೀಸ್‌ನಲ್ಲೂ ದಾಖಲೆ
'ಕಾಂತಾರ' ಎರಡು ವಾರಗಳ ಬಳಿಕ ಹಿಂದಿಗೆ ಡಬ್ ಮಾಡಲಾಗಿತ್ತು. ಮೊದಲ ದಿನ ಸುಮಾರು 1 ಕೋಟಿ ರೂ. (nett)ಕಲೆ ಹಾಕಿತ್ತು. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, 'ಕಾಂತಾರ' ಹಿಂದಿ ವರ್ಷನ್ ಮೊದಲ ದಿನ 80ರಷ್ಟು ಹೆಚ್ಚು ಪಟ್ಟು ಜನರನ್ನು ಚಿತ್ರಮಂದಿರಕ್ಕೆ ಸೆಳೆದಿತ್ತು.

'ಕಾಂತಾರ' ಗ್ರಾಮೀಣ ಸಿನಿಮಾ
'ಕಾಂತಾರ' ವಿಶ್ವದ ಗಮನ ಸೆಳೆದ ಕನ್ನಡದ ಗ್ರಾಮೀಣ ಸಿನಿಮಾ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಕೇವಲ ಕರ್ನಾಟಕ ಅಷ್ಟೇ ಅಲ್ಲ. ವಿಶ್ವದಲ್ಲಿ ಗ್ರಾಮೀಣ ಸೊಡಗನ್ನು ಬೀರಿ ಗಮನ ಸೆಳೆದ ಭಾರತದ ಸಿನಿಮಾ ಎನಿಸಿಕೊಂಡಿದೆ.