twitter
    For Quick Alerts
    ALLOW NOTIFICATIONS  
    For Daily Alerts

    'ಯಕ್ಷ ಸಿನಿಮಾ ಬಳಿಕ ಸೋತರೆ ಜೀವನ ಹಿಂಗಿರುತ್ತೆ ಅನ್ನೋದು ಗೊತ್ತಾಯ್ತು'- ನಟ ಯೋಗಿ

    |

    'ದುನಿಯಾ' ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಿದ ಸಿನಿಮಾ. ದುನಿಯಾ ಗೆದ್ದಾಗ ಕನ್ನಡ ಚಿತ್ರರಂಗಕ್ಕೆ ಇಬ್ಬರು ಹೀರೊ ಸಿಕ್ಕಿದ್ದರು. ಒಬ್ಬರು ದುನಿಯಾ ವಿಜಯ್. ಇನ್ನೊಬ್ಬರು ಲೂಸ್ ಮಾದ ಯೋಗಿ. ಲೂಸ್ ಮಾದ ಅನ್ನೋದು ಇದೇ ಸಿನಿಮಾದಿಂದಲೇ ಯೋಗಿಗೆ ಅಂಟಿಕೊಂಡ ಹೆಸರು.

    ಈ ಸಿನಿಮಾ ಸಕ್ಸಸ್ ಆಗುತ್ತಿದ್ದಂತೆ ಯೋಗಿ ಸ್ಯಾಂಡಲ್‌ವುಡ್‌ನ ಬೇಡಿಕೆಯ ನಟನಾಗಿದ್ದರು. ನಿರ್ಮಾಪಕರು ಯೋಗಿಯನ್ನು ಹುಡುಕಿಕೊಂಡು ಮನೆವರೆಗೂ ಬರುತ್ತಿದ್ದರು. ಒಂದೇ ವರ್ಷ ಯೋಗಿ 11ಕ್ಕೂ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಂಡ ಉದಾಹರಣೆಗಳೂ ಇವೆ. ಯಶಸ್ಸು ಜೊತೆಯಲ್ಲಿ ಇದ್ದಾಗ, ಯೋಗಿ ಹಿಂದೆ-ಮುಂದೆ ಇರೋರಿಗೇನು ಕಮ್ಮಿಯಿರಲಿಲ್ಲ. ಅಲ್ಲಿವರೆಗೂ ಸೋಲೇ ನೋಡದ ನಟನಿಗೆ ವೃತ್ತಿ ಬದುಕಿಗೆ ದೊಡ್ಡ ಪೆಟ್ಟು ಕೊಟ್ಟಿದ್ದು 'ಯಕ್ಷ'.

    'ನಾನು ನಿನ್ನ ಸಹವಾಸ ಮಾಡಿದ್ದಕ್ಕೆ ನನ್ನ ಹೆಂಡ್ತಿ ಮನೆ ಬಿಟ್ಟು ಹೋಗಿದ್ಲು': ಡಾಲಿಗೆ ಯೋಗಿ ಅವಾಜ್!'ನಾನು ನಿನ್ನ ಸಹವಾಸ ಮಾಡಿದ್ದಕ್ಕೆ ನನ್ನ ಹೆಂಡ್ತಿ ಮನೆ ಬಿಟ್ಟು ಹೋಗಿದ್ಲು': ಡಾಲಿಗೆ ಯೋಗಿ ಅವಾಜ್!

    'ಯಕ್ಷ' ಸಿನಿಮಾದ ಸೋಲು ಯೋಗಿ ವೃತ್ತಿ ಬದುಕಿನ ಲೆಕ್ಕಾಚಾರವನ್ನೇ ತಲೆಕೆಳಗೆ ಮಾಡಿತ್ತು. ಜೊತೆಯಲ್ಲಿ ಓಡಾಡಿಕೊಂಡಿದ್ದರು ಯೋಗಿ ಗೆಳೆತನಕ್ಕೆ ಗುಡ್ ಬೈ ಹೇಳಿದ್ದರು. ಸಿನಿಮಾದ ಸೋಲಿನ ಬಳಿಕ ಸಾಲ ತೀರಿಸಲು ವೃತ್ತಿ ಬದುಕನ್ನೇ ಅಡ ಇಟ್ಟಿದ್ದರು. ಈ ಎಲ್ಲಾ ಸಂಗತಿಗಳನ್ನು ಧನಂಜಯ್ ಜೊತೆ ಹಂಚಿಕೊಂಡಿದ್ದಾರೆ. ಡಾಲಿ ಪಿಕ್ಚರ್ಸ್ ಯೂಟ್ಯೂನ್ ಚಾನೆಲ್‌ನಲ್ಲಿ ಲೂಸ್ ಮಾದ ಯೋಗಿ ಮನಬಿಚ್ಚಿ ಮಾತಾಡಿದ್ದಾರೆ. ಅದರ ತುಣುಕು ಇಲ್ಲಿದೆ. ಮುಂದೆ ಓದಿ.

    16 ವರ್ಷಕ್ಕೆ ಸಕ್ಸಸ್ ನೋಡಿದ್ದೆ

    16 ವರ್ಷಕ್ಕೆ ಸಕ್ಸಸ್ ನೋಡಿದ್ದೆ

    "ನಾನು 16 ವರ್ಷ ಇದ್ದಾಗ ಇಂಡಸ್ಟ್ರಿಗೆ ಬಂದಿದ್ದು. ಬಂದ ತಕ್ಷಣ ಸಕ್ಸಸ್ ನೋಡಿದ್ದು. ಜೀವನದಲ್ಲೂ ಅಷ್ಟೇ ಸೋಲು ಅನ್ನೋದು ಗೊತ್ತಿರಲಿಲ್ಲ. ಸಕ್ಸಸ್ ಅನ್ನೋದು ಗೊತ್ತಿರಲಿಲ್ಲ. 16,17,18,19,20 ವರ್ಷದವರೆಗೂ ಬರೀ ಸಕ್ಸಸ್ ನೋಡಿಕೊಂಡೇ ಬಂದಿದ್ದೆ." ಎಂದು ಯಶಸ್ಸಿನ ಬಗ್ಗೆ ಹೇಳಿದ್ದಾರೆ.

    ಜೇಬಿನಲ್ಲಿ ಕಾಸು ಇದ್ದರೆ ಸಾಕಿತ್ತು

    ಜೇಬಿನಲ್ಲಿ ಕಾಸು ಇದ್ದರೆ ಸಾಕಿತ್ತು

    "ನನ್ನ ಹಿಂದೆ ಹೆಂಗೆ ಜನ ನಿಂತಿರೋರು ಅಂದ್ರೆ, ಯೋಗಿ ಬರ್ತಾನೆ ಅಂದ್ರೆ ಒಂದಿಷ್ಟು ಜನ ಬರೋರು. ಈಗಲೂ ಇದ್ದಾರೆ. ಆವಾಗ ಹಾಗೆ ಬರೋರು. ನನಗೆ ಯಾವುದೂ ತಲೆಗೆ ಹತ್ತಲಿಲ್ಲ. ಅದನ್ನು ಹೇಗೆ ಹ್ಯಾಂಡಲ್ ಮಾಡಬೇಕು ಅನ್ನೋ ಪರಿಜ್ಞಾನನೂ ಇರಲಿಲ್ಲ. ಏನು ನಡೀತಾ ಇದೆ. ನಡೀತಾ ಇರಲಿ ಬಿಡು ಅಂತಾನೇ ಇತ್ತು. ಆಚೆ ಹೋಗ್ತಾ ಇದ್ದೀನಾ? ಜೇಬಿನಲ್ಲಿ ಕಾಸು ಇದೆಯಾ? ಅಷ್ಟಿದ್ರೆ ಸಾಕು ಅನ್ನೋದ್ರಲ್ಲೇ ಓಡಾಡಿಕೊಂಡಿದ್ದೆ." ಎಂದಿದ್ದಾರೆ ಯೋಗಿ

    ಸೋತರೆ ಜೀವನ ಹಿಂಗಿರುತ್ತೆ ಅನ್ನೋದು ಗೊತ್ತಾಯ್ತು

    ಸೋತರೆ ಜೀವನ ಹಿಂಗಿರುತ್ತೆ ಅನ್ನೋದು ಗೊತ್ತಾಯ್ತು

    "ಜೇಬಿನಲ್ಲಿ ಕಾಸು ಕಡಿಮೆ ಆಯ್ತು ಅಂದ್ರೆ, ಹಂಗೇ ಜನ ಖಾಲಿ ಆಗೋರು. ಇದ್ಯಾಕೆ ಹಿಂಗೆ ಆಗ್ತಿದೆಯಲ್ಲಾ? ಯಾಕೆ.. ಯಾಕೆ ಅಂತ ಯೋಚನೆ ಮಾಡ್ಕೊಂಡು ಕೂತಾಗ, ನನಗೆ ರಿಯಲ್ ಆಗಿ 2013,2014, 2015 ಈ ಮೂರು ವರ್ಷ ಅರ್ಥ ಆಗಿ ಹೋಯ್ತು. ಯಾವ ರೇಂಜಿಗೆ ಅಂದ್ರೆ, ಇರೋರೆಲ್ಲಾ ಹೋಗ್ಬಿಟ್ರು ಅಂತ. ಕೊನೆಗೆ ನಿಂತೋರು ನಮ್ಮ ಅಪ್ಪ, ಅಮ್ಮ, ಅಣ್ಣ ಇಷ್ಟೇ ಜನ ನಿಂತುಕೊಂಡಿದ್ರು. ಜೀವನದಲ್ಲಿ ಸೋತರೆ ಹಿಂಗಿರುತ್ತೆ ಅನ್ನೋದು ಆವಾಗ ಗೊತ್ತಾಯ್ತು." ಅಂತಾರೆ ಯೋಗಿ.

    'ಯಕ್ಷ' ಸಿನಿಮಾದಿಂದ ಆದ ನಷ್ಟವೆಷ್ಟು?

    'ಯಕ್ಷ' ಸಿನಿಮಾದಿಂದ ಆದ ನಷ್ಟವೆಷ್ಟು?

    "ಯಕ್ಷ ಅನ್ನೋ ಸಿನಿಮಾ ಮಾಡಿದ್ವಿ. ನಾನು ಹೇಳಿದೆ. ಯಕ್ಷ ಸಿನಿಮಾ ಮಾಡ್ಬೇಡಿ. ಇದು ವರ್ಕೌಟ್ ಆಗಲ್ಲ ಅಂತ ಹೇಳಿದ್ದೆ, ಮಾಡಿದ್ರು ಏನು ಮಾಡಕ್ಕೆ ಆಗಲ್ಲ. 2009ರಲ್ಲಿ 8 ರಿಂದ 9 ಕೋಟಿ ರೂ. ಖರ್ಚು ಮಾಡಿ ಸಿನಿಮಾ ಮಾಡಿದ್ದು. ಆ ಸಿನಿಮಾ ಬಂದಿದ್ದು ಬರೀ ಒಂದು ಕೋಟಿ. ಸುಮಾರು 7 ರಿಂದ 8 ಕೋಟಿ ರೂ. ಬರ್ನ್ ಆಯ್ತು. ಅಲ್ಲಿಂದ ನಮ್ಮ ಅಪ್ಪನಿಗೋಸ್ಕರ ದುಡಿಬೇಕು ಅಂತ ಶುರುವಾಯ್ತುಲ್ಲ. ಬರೋದನ್ನೆಲ್ಲಾ ಒಪ್ಪಿಕೊಳ್ತಿದ್ದೆ. ಸಾಲ ತೀರಿಸಬೇಕು. ನಮ್ಮ ಅಪ್ಪನಿಗೋಸ್ಕರ. ಮನೆಗೋಸ್ಕರ ದುಡಿದುಕೊಂಡು ಬಂದಿದ್ದು , ನನಗೋಸ್ಕರ ಅಲ್ಲ. ಅಲ್ಲಿಂದ ಯಾವುದಾವುದೋ ಸಿನಿಮಾ ಬರೋದು. ಕಥೆನೂ ಕೇಳುತ್ತಿರಲಿಲ್ಲ. ಖಾಸು ಕೊಡ್ತೀರಾ ಆಯ್ತು ಮಾಡುತ್ತೀನಿ ಅಂತ ಮಾಡ್ತಿದ್ದೆ. ಅಲ್ಲಿಂದ ಹೊಡೆತ ಶುರುವಾಯ್ತು ಅಷ್ಟೇ."

    English summary
    Loose Maada Yogi About Yaksha Loss And His Failures Infront Of Daali Dhananjay, Know More.
    Friday, September 30, 2022, 18:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X