For Quick Alerts
  ALLOW NOTIFICATIONS  
  For Daily Alerts

  ಲೂಸ್ ಮಾದ 'ಲಂಕೆ'ಗೆ ಒಂದು ವರ್ಷ: ಚಿತ್ರತಂಡದಿಂದ ಸಂಭ್ರಮಾಚರಣೆ!

  |

  ಕೆಲವೊಮ್ಮ ಸಿನಿಮಾದ ಟೈಟಲ್‌ನಿಂದ ಗಮನ ಸೆಳೆಯುತ್ತೆ. ಮತ್ತೆ ಕೆಲವೊಮ್ಮೆ ಹಾಡುಗಳು, ಟ್ರೈಲರ್, ಟೀಸರ್‌ ಹೀಗೆ ಸಿನಿಪ್ರಿಯರು ಮೆಚ್ಚಲು ನೂರೆಂಟು ಕಾರಣಗಳು ಇರುತ್ತವೆ. ಕಳೆದ ವರ್ಷ ಬಿಡುಗಡೆಯಾಗಿದ್ದ 'ಲಂಕೆ' ಕೂಡ ಟೈಟಲ್‌ನಿಂದ ಕ್ಯೂರಿಯಾಸಿಟಿ ಹೆಚ್ಚಿಸಿತ್ತು.

  ಇನ್ನು ಸಿನಿಮಾದಲ್ಲಿ ಹೀರೊ ಪಾತ್ರದ ವಿಭಿನ್ನವಾಗಿದ್ದರೆ, ಅವರ ಅಭಿಮಾನಿಗಳು ಥ್ರಿಲ್ ಆಗುತ್ತಾರೆ. ಇಲ್ಲಿ ಲೂಸ್ ಮಾದ ರಾಮನೂ ಹೌದು. ರಾವಣನೂ ಹೌದು. ಹೀಗಾಗಿ ಸ್ವಲ್ಪ ಕುತೂಹಲ ಕೆರಳಿಸಿತ್ತು. ಅಂದ್ಹಾಗೆ ಚಿತ್ರತಂಡ ಈ ಸಿನಿಮಾ ನೈಜ ಘಟನೆಯಾಧರಿಸಿದ್ದು ಎಂದು ಹೇಳಿತ್ತು. ಈಗ್ಯಾಕೆ ಈ ಮಾತು ಅಂದ್ರೆ, 'ಲಂಕೆ' ಚಿತ್ರತಂಡ ಒಂದು ವರ್ಷದ ಸಂಭ್ರಮಾಚರಣೆಯಲ್ಲಿ ಮಿಂದೆದ್ದಿದೆ.

  ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದ ವೇಳೆನೇ ಲೂಸ್ ಮಾದ ಯೋಗಿ ನಟಿಸಿದ ಈ ಸಿನಿಮಾ ಬಿಡುಗಡೆಯಾಗಿತ್ತು. ಈಗ ಜಮಾನದಲ್ಲಿ 100 ದಿನದ ಕಾಂಸೆಪ್ಟ್ ಕಣ್ಮರೆಯಾಗಿರುವಾಗ ಇದೇ ಸಿನಿಮಾ 'ಲಂಕೆ' ಒಂದು ಪ್ರದರ್ಶನ ಕಂಡಿದ್ಯಂತೆ. ಈ ಖುಷಿಯನ್ನೇ ಸಿನಿಮಾದ ನಿರ್ದೇಶಕ ರಾಮ್‌ ಪ್ರಸಾದ್ ಸೇರಿದಂತೆ ಇಡೀ ತಂಡ ಹಂಚಿಕೊಂಡಿದೆ.

  ಲಂಕೆ ಸಿನಿಮಾ 365 ದಿನ ಪ್ರದರ್ಶನ ಕಂಡಿದ್ದಕ್ಕೆ ಯೋಗಿ ಕೂಡ ಖುಷಿಯಾಗಿದ್ದಾರೆ. "ನನ್ನ ಮನೆಯಲ್ಲಿ ಐವತ್ತು, ನೂರು, ನೂರೈವತ್ತು ದಿನಗಳ ಫಲಕಗಳಿತ್ತು. 365 ದಿನಗಳ ಫಲಕ ಇದೇ ಮೊದಲು. ಈ ಯಶಸ್ಸಿನ ಬಹುಪಾಲು ನಿರ್ದೇಶಕ ರಾಮ್ ಪ್ರಸಾದ್‌ಗೆ ಸಲ್ಲಬೇಕು. ಒಳ್ಳೆಯ ಸಿನಿಮಾದಲ್ಲಿ ಭಾಗಿಯಾಗಿರುವುದಕ್ಕೆ ಸಂತೋಷ ಆಗಿದೆ." ಎಂದಿದ್ದಾರೆ.

  Loose Mada Starrer Lanke Movie Completed 365 days In Theater

  'ಲಂಕೆ' ಸಿನಿಮಾ ಒಂದು ಪ್ರದರ್ಶನ ಕಂಡಿದೆ ಅನ್ನೋದೇನೋ ನಿಜ. ಆದರೆ, ಎಲ್ಲಿ? ಹೇಗೆ? ಅನ್ನೋ ಬಗ್ಗೆ ಚಿತ್ರತಂಡ ಸ್ಪಷ್ಟ ಮಾಹಿತಿಯನ್ನು ನೀಡಬೇಕಿದೆ. ಅಂದ್ಹಾಗೆ ಈ ಸಿನಿಮಾ ಒಂದು ವರ್ಷ ಪ್ರದರ್ಶನ ಕಾಣಲು ವಿತರಕ ಮಾರ್ಸ್ ಸುರೇಶ್ ಅವರೆ ಪ್ರಮುಖ ಕಾರಣ ಅಂತ ಹೇಳಿದೆ. ಇತ್ತ ವಿತರಕ ಮಾಸ್ ಸುರೇಶ್ ಕೂಡ 'ಲಂಕೆ' ಒಂದು ಚಿತ್ರಮಂದಿರ ಅಲ್ಲ. ಹಲವು ಚಿತ್ರಮಂದಿರಗಳಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿದೆ ಎಂದು ಹೇಳಿದ್ದಾರೆ. ಇದೇ ವೇಳೆ ನಿರ್ದೇಶಕ ರಾಮ್ ಪ್ರಸಾದ್ 'ಲಂಕೆ' ಗೆಲುವನ್ನು ಸಂಚಾರಿ ವಿಜಯ್ ಅವರಿಗೆ ಅರ್ಪಿಸುವುದಾಗಿ ಹೇಳಿದ್ದಾರೆ.

  ಯೋಗಿ ಜೊತೆ ನಾಯಕಿ ಕೃಷಿ ತಾಪಂಡ ನಟಿಸಿದ್ದಾರೆ. ಅಲ್ಲದೆ ಎಸ್ತರ್ ನರೋನಾ, ಸುಚೇಂದ್ರ ಪ್ರಸಾದ್, ಡ್ಯಾನಿಯಲ್ ಕುಟ್ಟಪ್ಪ, ಸಂಗಮೇಶ್ ಉಪಾಸೆ, ಮಹಂತೇಶ್ ಮುಂತಾದ ಕಲಾವಿದರು ಹಾಗೂ ತಂತ್ರಜ್ಞರು 'ಲಂಕೆ'ಯಲ್ಲಿ ನಟಿಸಿದ್ದಾರೆ. ನಿರ್ದೇಶಕ ರಾಮ್‌ ಪ್ರಸಾದ್ ಸದ್ಯದಲ್ಲೇ ಹೊಸ ಚಿತ್ರ ಆರಂಭಿಸುತ್ತಿದ್ದು ಡಬಲ್ ಖುಷಿಯಲ್ಲಿದ್ದಾರೆ.

  English summary
  Loose Mada Starrer Lanke Movie Completed 365 days In Theater, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X