»   » ಸರಳವಾಗಿ ನಡೆಯಿತು ಲೂಸ್ ಮಾದ ಯೋಗೀಶ್ - ಸಾಹಿತ್ಯ ನಿಶ್ಚಿತಾರ್ಥ

ಸರಳವಾಗಿ ನಡೆಯಿತು ಲೂಸ್ ಮಾದ ಯೋಗೀಶ್ - ಸಾಹಿತ್ಯ ನಿಶ್ಚಿತಾರ್ಥ

Posted By:
Subscribe to Filmibeat Kannada

ನಟ ಲೂಸ್ ಮಾದ ಯೋಗೀಶ್ ಮತ್ತು ಸಾಹಿತ್ಯ ನಿಶ್ಚಿತಾರ್ಥ ಇಂದು ಸರಳವಾಗಿ ನಡೆಯಿತು. ಬೆಂಗಳೂರಿನ ಯಡಿಯೂರಿನಲ್ಲಿರುವ ಸಾಹಿತ್ಯ ನಿವಾಸದಲ್ಲಿ ಎಂಗೇಜ್ಮೆಂಟ್ ನಡೆದಿದ್ದು, ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದರು.

ಇಂದು ಮಧ್ಯಾಹ್ನ 12.30 ಗಂಟೆ ಸುಮಾರಿಗೆ ಯೋಗಿ ಸಾಹಿತ್ಯ ರಿಂಗ್ ಬದಲಾಯಿಸುವ ಮೂಲಕ ನಿಶ್ಚಿತಾರ್ಥ ಕಾರ್ಯ ನೆರವೇರಿಸಿದರು. ಯೋಗಿ ತಾಯಿ ಅಂಬುಜ ಸಾಹಿತ್ಯ ಗಾಗಿ ಸ್ಪೆಷಲ್ ರಿಂಗ್ ರೆಡಿ ಮಾಡಿಸಿದ್ದರು. ಇಂದು ಬೆಳಗ್ಗೆಯಿಂದಲೇ ಪೂಜಾ ಕಾರ್ಯಗಳು ಶುರುವಾಗಿದ್ದವು.

[ಇದೀಗ ಬಂದ ಸುದ್ದಿ: ಲೂಸ್ ಮಾದ ಯೋಗಿ ಮದುವೆ ದಿನಾಂಕ ಫಿಕ್ಸ್]

Lose mada yogesh and sahithya got engaged today

ಸ್ಕೂಲ್ ನಲ್ಲಿ ಒಟ್ಟಿಗೆ ವ್ಯಾಸಂಗ ಮಾಡುತ್ತಿದ್ದ ಯೋಗಿ - ಸಾಹಿತ್ಯ ಎರಡ್ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಈಗ ಗುರು ಹಿರಿಯರ ಸಮ್ಮತಿ ಪಡೆದು ವಿವಾಹವಾಗಲು ಸಜ್ಜಾಗಿದ್ದಾರೆ.

[ಲೂಸ್ ಮಾದ ಯೋಗಿ 'ರಿಯಲ್' ಲವ್ ಸ್ಟೋರಿ ಬಹಿರಂಗ.!]

Lose mada yogesh and sahithya got engaged today

ಸಾಹಿತ್ಯ ಮೂಲತಃ ಸಾಫ್ಟ್ ವೇರ್ ಎಂಜಿನಿಯರ್. ಸಿನಿಮಾರಂಗಕ್ಕೂ ಅವರಿಗೂ ನಂಟು ಇಲ್ಲವೇ ಇಲ್ಲ. ಯೋಗಿಯ ಜೀವದ ಗೆಳತಿಯಾಗಿದ್ದ ಈಕೆ ಈಗ ಜೀವನದ ಸಂಗಾತಿ ಆಗಲಿದ್ದಾರೆ. ಇಂದು ಯೋಗೀಶ್ - ಸಾಹಿತ್ಯ ನಿಶ್ಚಿತಾರ್ಥ ನಡೆದಿದ್ದು, ನವೆಂಬರ್ 2 ರಂದು ವಿವಾಹಕ್ಕೆ ದಿನಾಂಕ ನಿಗದಿಯಾಗಿದೆ.

English summary
Kannada actor Loose Mada Yogesh is got engaged to Sahithya Urs today (June 11th).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada