»   » ಪ್ರಣಯದ ಹುಚ್ಚು ಹಿಡಿಸಿದ ಸೂಪರ್ ಹಿಟ್ ಚಿತ್ರಗಳು

ಪ್ರಣಯದ ಹುಚ್ಚು ಹಿಡಿಸಿದ ಸೂಪರ್ ಹಿಟ್ ಚಿತ್ರಗಳು

Posted By:
Subscribe to Filmibeat Kannada

ಪ್ರೀತಿ, ಪ್ರೇಮ, ಪ್ರಣಯ ಜಾತಿ ಮತ್ತು ವಯಸ್ಸಿನ ಲೆಕ್ಕಾಚಾರವನ್ನು ಮೀರಿ ನಿಲ್ಲುವಂತಹ ಸಂಬಂಧ. ಪೋಷಕರು ತಮ್ಮ ಮಕ್ಕಳ ಮೇಲೆ ತೋರಿಸುವುದೂ ಪ್ರೀತಿಯ ಇನ್ನೊಂದು ಮುಖ. ಆದರೆ ಫೆಬ್ರವರಿ ಹದಿನಾಲ್ಕರಂದು ಯುನಿವರ್ಸಲ್ ಆಗಿ ಆಚರಿಸಲ್ಪಡುವ 'ಪ್ರೇಮಿಗಳ ದಿನ' ಇತ್ತೀಚಿನ ದಿನಗಳಲ್ಲಿ ಬರೀ ಹುಡುಗ/ಹುಡುಗಿಯರಿಗೆ ಮೀಸಲಾದಂತಿದೆ.

ಪಿಂಕ್ ಚಡ್ಡಿ, ಶ್ರೀರಾಮಸೇನೆಯ ಎಚ್ಚರಿಕೆಯ ನಡುವೆ ಮತ್ತೆ ಬಂದಿದೆ ವ್ಯಾಲೆಂಟೆನ್ಸ್ ಡೇ, ಹದಿಹರೆಯದ ಯುವಕ/ಯುವತಿಯರ ಮನಸ್ಸಿನಲ್ಲಿ ಸಂಚಲನ ಮೂಡಿಸುವ ದಿನ.

ಪ್ರೀತಿ, ಪ್ರೇಮ ಪುಸ್ತಕದ ಬದನೇಕಾಯಿ ಎಂದರೂ, ಕನ್ನಡದಲ್ಲಿ ಲೆಕ್ಕವಿಲ್ಲದಷ್ಟು ಪ್ರೀತಿ ಕಥೆ ಆಧಾರಿತ ಚಿತ್ರಗಳು ಬಂದಿವೆ. ಇಂತಹ ಚಿತ್ರಗಳು ಕೆಲವೊಂದು ನಿರ್ಮಾಪಕರಿಗೆ ಸಾಕು ಸಾಕು ಎನಿಸುವಷ್ಟು ಹಣದ ಹೊಳೆ ಹರಿಸಿದ್ದರೆ, ಕೆಲವೊಂದು ನಿರ್ಮಾಪಕರಿಗೆ ಸಾಕೆನಿಸಿಬಿಟ್ಟಿರುವ ಉದಾಹರಣೆಗಳೂ ಇವೆ.

ಡಾ.ರಾಜ್ ಚಿತ್ರದಿಂದ ಹಿಡಿದು, ಲವ್ ಸ್ಟೋರಿ ಚಿತ್ರಗಳಿಗೆ ಕನಸಿನ ಟಚ್ ನೀಡಿದ ರವಿಚಂದ್ರನ್ ಚಿತ್ರಗಳ ಜೊತೆಗೆ ಇಂದಿನ ಯುವ ನಟರು ಇಂತಹ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.

ಪ್ರೇಮಿಗಳ ದಿನದ ಸ್ಪೆಷಲ್ ಆಗಿ ಸ್ಯಾಂಡಲ್ ವುಡ್ ನಲ್ಲಿ ಬಂದ ಕೆಲವು ಪ್ರೇಮ ಕಥಾದಾರಿತ ಸೂಪರ್ ಹಿಟ್ ಚಿತ್ರಗಳನ್ನು ಸ್ಲೈಡಿನಲ್ಲಿ ತೋರಿಸಲಾಗಿದೆ.

ನಾ ನಿನ್ನ ಮರೆಯಲಾರೆ

ಡಾ.ರಾಜ್ ಕುಮಾರ್ ಅಭಿನಯದ 161ನೇ ಚಿತ್ರ. 1976ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ರಾಜ್, ಲಕ್ಷ್ಮಿ, ಬಾಲಕೃಷ್ಣ, ಲೀಲಾವತಿ ಪ್ರಮುಖ ಭೂಮಿಕೆಯಲ್ಲಿದ್ದರು.

ಬಂಧನ

ವಿಷ್ಣುವರ್ಧನ್, ಸುಹಾಸಿನಿ ಅಭಿನಯದ ಈ ಚಿತ್ರವನ್ನು ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ್ದರು.

ಒಲವಿನ ಉಡುಗೊರೆ

1987ರಲ್ಲಿ ಬಿಡುಗಡೆಯಾದ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಅಂಬರೀಶ್, ಮಂಜುಳಾ ಶರ್ಮಾ ಪ್ರಮುಖ ಭೂಮಿಕೆಯಲ್ಲಿದ್ದರು.

ಬೆಂಕಿಯಬಲೆ

ದೊರೈ - ಭಗವಾನ್ ನಿರ್ದೇಶನದ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಅನಂತ್ ನಾಗ್, ಲಕ್ಷ್ಮಿ ಇದ್ದರು. ಈ ಚಿತ್ರ 1982ರಲ್ಲಿ ಬಿಡುಗಡೆಯಾಗಿತ್ತು.

ಪ್ರೇಮಲೋಕ

ರವಿಚಂದ್ರನ್, ಜೂಹಿ ಚಾವ್ಲಾ, ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರ 1987ರಲ್ಲಿ ಬಿಡುಗಡೆಯಾಗಿತ್ತು. ಚಿತ್ರವನ್ನು ರವಿಚಂದ್ರನ್ ನಿರ್ದೇಶಿಸಿದ್ದರು.

ಭಂಡ ನನ್ನ ಗಂಡ

ಜಗ್ಗೇಶ್, ಪ್ರಿಯಾಂಕ, ಅಂಬರೀಶ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರವನ್ನು ರಾಜ್ ಕಿಶೋರ್ ನಿರ್ದೇಶಿಸಿದ್ದರು. ಈ ಚಿತ್ರ 1992ರಲ್ಲಿ ಬಿಡುಗಡೆಯಾಗಿತ್ತು.

ಗೀತಾ

ಶಂಕರ್ ನಾಗ್, ಅಕ್ಷತಾ ರಾವ್, ಕೆ ಎಸ್ ಅಶ್ವಥ್, ಸಾಹುಕಾರ್ ಜಾನಕಿ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರ 1981ರಲ್ಲಿ ಬಿಡುಗಡೆಯಾಗಿತ್ತು. ಚಿತ್ರವನ್ನು ಶಂಕರ್ ನಾಗ್ ನಿರ್ದೇಶಿಸಿದ್ದರು.

ಜನುಮದ ಜೋಡಿ

ಟಿ ಎಸ್ ನಾಗಾಭರಣ ನಿರ್ದೇಶನದ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಶಿವರಾಜ್ ಕುಮಾರ್, ಶಿಲ್ಪಾ ಇದ್ದರು. ಈ ಚಿತ್ರ 1996ರಲ್ಲಿ ಬಿಡುಗಡೆಗೊಂಡಿತ್ತು.

ಅಪ್ಪು

ಪುನೀತ್ ರಾಜಕುಮಾರ್, ರಕ್ಷಿತಾ, ಅವಿನಾಶ್, ಶ್ರೀನಿವಾಸಮೂರ್ತಿ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರವನ್ನು ಪುರಿ ಜಗನ್ನಾಥ್ ನಿರ್ದೇಶಿಸಿದ್ದರು. ಈ ಚಿತ್ರ 2002ರಲ್ಲಿ ಬಿಡುಗಡೆಯಾಗಿತ್ತು.

ಹುಚ್ಚ

ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಸುದೀಪ್, ರೇಖಾ, ಅವಿನಾಶ್ ಇದ್ದರು. ಈ ಚಿತ್ರ 2001ರಲ್ಲಿ ಬಿಡುಗಡೆಯಾಗಿತ್ತು.

ಗಜ

ಕೆ ಮಾದೇಶ ನಿರ್ದೇಶನದ ಈ ಚಿತ್ರ 2008ರಲ್ಲಿ ಬಿಡುಗಡೆಯಾಗಿತ್ತು. ದರ್ಶನ್, ನವ್ಯಾ ನಾಯರ್, ದೇವರಾಜ್, ಶೋಭರಾಜ್, ಪ್ರದೀಪ್ ರಾವತ್ ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದರು.

ಮುಂಗಾರುಮಳೆ

ಗಣೇಶ್, ಪೂಜಾಗಾಂಧಿ, ಅನಂತ್ ನಾಗ್, ಸುಧಾ ಬೆಳ್ವಾಡಿ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರವನ್ನು ಯೋಗರಾಜ್ ಭಟ್ ನಿರ್ದೇಶಿಸಿದ್ದರು. ಈ ಚಿತ್ರ 2008ರಲ್ಲಿ ಬಿಡುಗಡೆಯಾಗಿತ್ತು.

ದುನಿಯಾ

ದುನಿಯಾ ವಿಜಯ್, ರಷ್ಮಿ, ರಂಗಾಯಣ ರಘು, ಕಿಶೋರ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರವನ್ನು ಸೂರಿ ನಿರ್ದೇಶಿಸಿದ್ದರು. ಈ ಚಿತ್ರ 2006ರಲ್ಲಿ ಬಿಡುಗಡೆಯಾಗಿತ್ತು.

ಅಂಬಾರಿ

ಲೂಸ್ ಮಾದ ಯಾನೆ ಯೋಗೀಶ್ ಅಭಿನಯದ ಈ ಚಿತ್ರವನ್ನು ಎ ಪಿ ಅರ್ಜುನ್ ನಿರ್ದೇಶಿಸಿದ್ದರು. ಸುಪ್ರೀತಾ, ರಂಗಾಯಣ ರಘು, ಸಂಗೀತಾ, ಕಿಶೋರಿ ಬಲ್ಲಾಳ್ ಚಿತ್ರದ ಇತರ ತಾರಾಗಣದಲ್ಲಿದ್ದರು. ಈ ಚಿತ್ರ 2009ರಲ್ಲಿ ಬಿಡುಗಡೆಯಾಗಿತ್ತು.

ಕೃಷ್ಣನ್ ಲವ್ ಸ್ಟೋರಿ

ಅಜಯ್ ರಾವ್, ರಾಧಿಕಾ ಪಂಡಿತ್, ಉಮಾಶ್ರೀ, ಅಚ್ಯುತ್ ಕುಮಾರ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರವನ್ನು ಶಶಾಂಕ್ ನಿರ್ದೇಶಿದ್ದರು. ಈ ಚಿತ್ರ 2010ರಲ್ಲಿ ಬಿಡುಗಡೆಯಾಗಿತ್ತು.

ಜೊತೆ ಜೊತೆಯಲಿ

ಲವ್ಲಿ ಸ್ಟಾರ್ ಪ್ರೇಮ್, ರಮ್ಯಾ ಅಭಿನಯದ ಈ ಚಿತ್ರವನ್ನು ದಿನಕರ್ ತೂಗುದೀಪ್ ನಿರ್ದೇಶಿಸಿದ್ದರು. ಈ ಚಿತ್ರ 2006ರಲ್ಲಿ ಬಿಡುಗಡೆಯಾಗಿತ್ತು.

ಲಕ್ಕಿ

ಡಾ. ಸೂರಿ ನಿರ್ದೇಶನದ ಈ ಚಿತ್ರ 2012ರಲ್ಲಿ ಬಿಡುಗಡೆಯಾಗಿತ್ತು. ಚಿತ್ರದ ಪ್ರಮುಖ ತಾರಾಗಣದಲ್ಲಿ ಯಶ್, ರಮ್ಯಾ, ಸಾಧು ಕೋಕಿಲಾ ಮುಂತಾದವರಿದ್ದರು.

ಸಂಜು ವೆಡ್ಸ್ ಗೀತಾ

ಶ್ರೀನಗರ ಕಿಟ್ಟಿ, ರಮ್ಯಾ, ಸುಹಾಸಿನಿ, ಅವಿನಾಶ್ ಅಭಿನಯದ ಈ ಚಿತ್ರವನ್ನು ನಾಗಶೇಖರ್ ನಿರ್ದೇಶಿದ್ದರು. ಈ ಚಿತ್ರ 2011ರಲ್ಲಿ ಬಿಡುಗಡೆಯಾಗಿತ್ತು.

ಪಾರಿಜಾತ

ದಿಗಂತ್, ಐಂದ್ರಿತಾ ರೇ, ಮುಖ್ಯಮಂತ್ರಿ ಚಂದ್ರು, ಶರಣ್, ಪದ್ಮಾಜಾ ರಾವ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರವನ್ನು ಪ್ರಭು ಶ್ರೀನಿವಾಸ್ ನಿರ್ದೇಶಿಸಿದ್ದರು. ಈ ಚಿತ್ರ 2012ರಲ್ಲಿ ಬಿಡುಗಡೆಯಾಗಿತ್ತು.

ಸಿಂಪಲ್ಲಾಗೊಂದು ಲವ್ ಸ್ಟೋರಿ

ರಕ್ಷಿತ್ ಶೆಟ್ಟಿ, ಶ್ವೇತಾ ಶ್ರೀವಾಸ್ತವ್, ಶ್ರೀನಗರ ಕಿಟ್ಟಿ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರವನ್ನು ಸುನಿ ನಿರ್ದೇಶಿಸಿದ್ದರು. ಈ ಚಿತ್ರ 2013ರಲ್ಲಿ ಬಿಡುಗಡೆಯಾಗಿತ್ತು.

English summary
Love oriented movies released in Kannada Film Industry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada