For Quick Alerts
  ALLOW NOTIFICATIONS  
  For Daily Alerts

  ಮಣ್ಣಲ್ಲಿ ಮಣ್ಣಾದ 'ಮಾಸ್ತಿ ಗುಡಿ' ನಟ ರಾಘವ ಉದಯ್

  By Harshitha
  |

  ನವೆಂಬರ್ 7 ರಂದು (ಸೋಮವಾರ) 'ಮಾಸ್ತಿ ಗುಡಿ' ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಪಾಲ್ಗೊಂಡು, ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮುಳುಗಿ, ದುರಂತ ಸಾವಿಗೀಡಾದ ಪ್ರತಿಭಾವಂತ ಕಲಾವಿದ ರಾಘವ ಉದಯ್ ರವರ ಅಂತ್ಯ ಸಂಸ್ಕಾರ ಇಂದು ಬೆಳಗ್ಗೆ 11.45 ರ ಸುಮಾರಿಗೆ ಬೆಂಗಳೂರಿನ ಬನಶಂಕರಿ ರುದ್ರಭೂಮಿಯಲ್ಲಿ ನೆರವೇರಿತು.

  ಕುಟುಂಬಸ್ಥರ ರೋಧನ, ಶೋಕತಪ್ತ ಜನಸ್ತೋಮದ ಮಧ್ಯೆ ಹಿಂದು ಸಂಪ್ರದಾಯದಂತೆ ನಟ ರಾಘವ ಉದಯ್ ಅಂತ್ಯಕ್ರಿಯೆ ನಡೆಯಿತು. [ನಿನ್ನೆ ಉದಯ್ ಶವ, ಇಂದು ಅನಿಲ್ ಶವ ಪತ್ತೆ]

  ನೆಚ್ಚಿನ ಅಜ್ಜನ ಸಮಾಧಿಯಲ್ಲೇ ರಾಘವ ಉದಯ್ ಮಣ್ಣಲ್ಲಿ ಮಣ್ಣಾದರು. [ನಿಮಗೆಲ್ಲಾ ಗೊತ್ತಿಲ್ಲದ 'ಮಾಸ್ತಿ ಗುಡಿ' ವಿಲನ್ ಉದಯ್ ಅಸಲಿ ಕಹಾನಿ]

  'Maasti Gudi' Tragedy: Actor Uday cremation

  ನೀರುಪಾಲಾಗಿದ್ದ ನಟ ರಾಘವ ಉದಯ್ ರವರ ಮೃತದೇಹ ನಿನ್ನೆ (ಬುಧವಾರ) ಮಧ್ಯಾಹ್ನ ಪತ್ತೆ ಆಗಿತ್ತು. ತಿಪ್ಪಗೊಂಡನಹಳ್ಳಿ ಕೆರೆ ದಡದಲ್ಲಿ ಶವ ಪರೀಕ್ಷೆ ನಡೆಸಿದ ಬಳಿಕ, ನಿವಾಸಕ್ಕೆ ಉದಯ್ ರವರ ಮೃತದೇಹ ರವಾನೆ ಆಯ್ತು. ['ಮಾಸ್ತಿ ಗುಡಿ' ದುರಂತ ಸಂಭವಿಸಲು ಪ್ರಮುಖ ಕಾರಣ ಇದೇ.!]

  ಉದಯ್ ರವರ ಅಂತಿಮ ದರ್ಶನ ಪಡೆಯಲು ಜನಸಾಗರವೇ ಹರಿದುಬಂದಿತ್ತು. ನಟ ಶಿವರಾಜ್ ಕುಮಾರ್, ನಟ ಪುನೀತ್ ರಾಜ್ ಕುಮಾರ್, ದರ್ಶನ್, ರವಿಶಂಕರ್ ಸೇರಿದಂತೆ ಚಿತ್ರರಂಗದ ಅನೇಕರು, ರಾಜಕಾರಣಿಗಳು ರಾಘವ ಉದಯ್ ರವರಿಗೆ ಅಂತಿಮ ನಮನ ಸಲ್ಲಿಸಿದರು. ['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]

  ಮೆರವಣಿಗೆ ಮೂಲಕ ರಾಘವ ಉದಯ್ ರವರ ಪಾರ್ಥೀವ ಶರೀರ ಬನಶಂಕರಿಯ ನಿವಾಸದಿಂದ ರುದ್ರಭೂಮಿ ತಲುಪಿತು. ಹಿಂದು ಸಂಪ್ರದಾಯದಂತೆ ಪಾರ್ಥೀವ ಶರೀರಕ್ಕೆ ಪೂಜೆ ಪುನಸ್ಕಾರ ನೆರವೇರಿಸಿದ ಬಳಿಕ ಅಂತ್ಯ ಕ್ರಿಯೆ ನಡೆಯಿತು. [ಅನಿಲ್, ಉದಯ್ ಕೊನೆಯ ಮಾತಲ್ಲಿ ಸಾವಿನ ಮುನ್ಸೂಚನೆಯ ಸುಳಿವು.!]

  English summary
  The last rites of Kannada Actor Uday carried according to Hindu Tradition at Banashankari Crematorium, Bengaluru Today (Nov 10th). Uday had drowned during a 'Maasti Gudi' film climax shoot at TG Halli reservoir

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X