»   » 'ಮಾಸ್ತಿ ಗುಡಿ' ದುರಂತ: ಆರು ಮಂದಿ ವಿರುದ್ಧ ಚಾರ್ಜ್ ಶೀಟ್

'ಮಾಸ್ತಿ ಗುಡಿ' ದುರಂತ: ಆರು ಮಂದಿ ವಿರುದ್ಧ ಚಾರ್ಜ್ ಶೀಟ್

Posted By:
Subscribe to Filmibeat Kannada

ನಟ ದುನಿಯಾ ವಿಜಯ್ ಅಭಿನಯದ 'ಮಾಸ್ತಿ ಗುಡಿ' ಚಿತ್ರೀಕರಣ ಸಂದರ್ಭದಲ್ಲಿ ಸಾವಿಗೀಡಾದ ಉದಯ್ ಮತ್ತು ಅನಿಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಸುಂದರ್ ಪಿ ಗೌಡ ಅವರಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಜೊತೆಗೆ ಚಿತ್ರದ ಮೇಲೆ ಹೇರಿದ್ದ ನಿರ್ಬಂಧವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಿಂಪಡೆದಿತ್ತು. ಆದರೆ ಈಗ ಈ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ.['ಅನಿಲ್-ಉದಯ್' ಕುಟುಂಬಕ್ಕೆ ನೆರವಾದ 'ಯಶೋಮಾರ್ಗ']

ತಾವರೆಕೆರೆ ಪೊಲೀಸರು ಈ ಹಿಂದೆಯೇ ಚಿತ್ರತಂಡದ ವಿರುದ್ಧ ಪ್ರಕರಣ ದಾಖಲಿಸಿ ಎಫ್ ಐಆರ್ ಹಾಕಿದ್ದರು. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಗಡಿಯ ಜೆಎಂಎಫ್ ಸಿ ಕೋರ್ಟಿನಲ್ಲಿ ಆರು ಮಂದಿ ಆರೋಪಿಗಳ ಮೇಲೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಮುಂದೆ ಓದಿರಿ..

ಆರು ಮಂದಿ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

'ಮಾಸ್ತಿ ಗುಡಿ' ಚಿತ್ರಕ್ಕೆ ನವೆಂಬರ್ 7, 2016 ರಂದು ಸಾಹಸ ದೃಶ್ಯ ಚಿತ್ರೀಕರಿಸುವ ವೇಳೆ ಸಾವಿಗೀಡಾದ ಅನಿಲ್ ಮತ್ತು ಉದಯ್ ಎಂಬ ಉದಯೋನ್ಮುಖ ಖಳನಟರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರತಂಡದ ಆರು ಮಂದಿ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಐಪಿಸಿ ಸೆಕ್ಷನ್ 304(ಎ) ಹಾಗೂ 308 ಅನ್ವಯ ಕೇಸು ದಾಖಲಾಗಿದೆ.

450 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

ಮಾಗಡಿಯ ಜೆಎಂಎಫ್ ಸಿ ಕೋರ್ಟ್ ನಲ್ಲಿ 'ಮಾಸ್ತಿ ಗುಡಿ' ಚಿತ್ರದ ನಿರ್ಮಾಪಕ ಸುಂದರ್ ಪಿ ಗೌಡ, ನಿರ್ದೇಶಕ ನಾಗಶೇಖರ್, ಸಾಹಸ ನಿರ್ದೇಶಕ ರವಿವರ್ಮ, ಪೈಲಟ್ ಸೇರಿದಂತೆ ಒಟ್ಟು ಆರು ಜನರ ವಿರುದ್ಧ ಐಪಿಸಿ ಸೆಕ್ಷನ್ 304(ಅಜಾಕರೂಕತೆಯಿಂದ ಉಂಟಾದ ಸಾವು)ರ ಅಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

ಸುಂದರ್ ಪಿ ಗೌಡ ಎ1 ಆರೋಪಿ

ಮಾಗಡಿಯ ಜೆಎಂಎಫ್ ಸಿ ಕೋರ್ಟ್ ನಲ್ಲಿ ಈಗ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ನಿರ್ಮಾಪಕ ಸುಂದರ್ ಪಿ ಗೌಡ ಎ-1 ಆರೋಪಿಯಾಗಿದ್ದಾರೆ. ಜೊತೆಗೆ ನಿರ್ದೇಶಕ ನಾಗಶೇಖರ್ ಎ-2 ಆರೋಪಿ, ಸಹ ನಿರ್ದೇಶಕ ಎ-3 ಆರೋಪಿ, ಸಾಹಸ ನಿರ್ದೇಶಕ ರವಿವರ್ಮ ಎ-4 ಆರೋಪಿ ಎಂದು ಪ್ರಕರಣದಲ್ಲಿ ದಾಖಲಿಸಲಾಗಿದೆ. ಸಾಹಸ ಸಹ ನಿರ್ದೇಶಕ ಎ-5 ಆರೋಪಿಯಾಗಿದ್ದಾರೆ.['ಮಾಸ್ತಿಗುಡಿ' ದುರಂತ: ನಿರ್ಮಾಪಕ ಸುಂದರ್ ಪಿ ಗೌಡಗೆ ಹೈಕೋರ್ಟ್ ಜಾಮೀನು]

ದುನಿಯಾ ವಿಜಯ್ ಬಚಾವ್

ಆದರೆ 'ಮಾಸ್ತಿಗುಡಿ' ಚಿತ್ರದ ನಾಯಕ ನಟ ದುನಿಯಾ ವಿಜಯ್ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲದೇ, ಬಚಾವ್ ಆಗಿದ್ದಾರೆ.

'ಮಾಸ್ತಿ ಗುಡಿ' ಚಿತ್ರ ಬಿಡುಗಡೆಗೆ ಸಮಸ್ಯೆ ಇದ್ಯಾ?

ಖಂಡಿತ ಇಲ್ಲ. ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಇಬ್ಬರು ಸಹ ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಪಡೆದಿರುವುದರಿಂದ ಚಿತ್ರ ಬಿಡುಗಡೆಗೆ ಯಾವುದೇ ಸಮಸ್ಯೆಯಿಲ್ಲ.['ಮಾಸ್ತಿ ಗುಡಿ' ತಂಡದ ಮೇಲೆ ಹೇರಿದ್ದ ನಿರ್ಬಂಧ ವಾಪಸ್ ಪಡೆದ ಕೆ.ಎಫ್.ಸಿ.ಸಿ]

English summary
Ramanagara police on Thurdsday filed a chargesheet against crew members of 'Masti Gudi' movie after 2 of its actors lost their lives attempting an action sequence. The FIR filed after T G Halli reservoir dam's director filed a formal complaint with the local police.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada