For Quick Alerts
  ALLOW NOTIFICATIONS  
  For Daily Alerts

  'ಮಾಸ್ತಿಗುಡಿ' ಶೂಟಿಂಗ್ ಮುಂಚೆ 'ಅಬ್ಬರಿಸಿ ಬೊಬ್ಬಿರಿದಿದ್ದ' ರವಿವರ್ಮ

  By Bharath Kumar
  |

  'ಮಾಸ್ತಿ ಗುಡಿ' ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೂ ಮುಂಚೆ ಎಲ್ಲರಲ್ಲೂ ಒಂದೇ ಭರವಸೆ. 'ನಾವು ಈ ದೃಶ್ಯದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಇತಿಹಾಸವನ್ನ ಸೃಷ್ಠಿಸುತ್ತೇವೆ' ಅಂತ.

  'ಬಾಹುಬಲಿ', 'ಮಗಧೀರ' ಚಿತ್ರಗಳಂತೆ ನಾವು ಮಾಡಲ್ಲ, ಜನರನ್ನ ಥ್ರಿಲ್ ಆಗಿಸುವಂತಹ ಕ್ಲೈಮ್ಯಾಕ್ಸ್ ಮಾಡುತ್ತೇವೆ' ಅಂತ ಶೂಟಿಂಗ್ ಗೂ ಮುನ್ನ ನಿರ್ದೇಶಕ ನಾಗಶೇಖರ್ ಉದುರಿಸಿದ್ದ ನುಡಿಮುತ್ತುಗಳನ್ನ ಈಗಾಗಲೇ ನೋಡಿದ್ದೀರಾ. [ಏನೋ ಮಾಡಲು ಹೋಗಿ ಏನೋ ಮಾಡಿದ 'ಮಾಸ್ತಿಗುಡಿ' ನಾಗಶೇಖರ್ ]

  ಸೇಮ್ ಟು ಸೇಮ್ ನಾಗಶೇಖರ್ ರವರ ಸ್ಟೈಲ್ ನಲ್ಲೇ, ಅದೇ ಬಿಲ್ಡಪ್ ನೊಂದಿಗೆ 'ಮಾಸ್ತಿಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಭಾರತ ಚಿತ್ರರಂಗದ ನಂಬರ್.1 ಸ್ಟಂಟ್ ಮಾಸ್ಟರ್ ಅಂತ ಬೀಗುವ ರವಿವರ್ಮ ಮಾಧ್ಯಮಗಳ ಮುಂದೆ ಅಬ್ಬರಿಸಿ ಬೊಬ್ಬರಿದಿದ್ದರು. ಮುಂದೆ ಓದಿ....

  'ಹೆಲಿಕಾಫ್ಟರ್ ಜಂಪ್' ಫಸ್ಟ್ ಟೈಮ್

  'ಹೆಲಿಕಾಫ್ಟರ್ ಜಂಪ್' ಫಸ್ಟ್ ಟೈಮ್

  ''ನಾನು ಅಸಿಸ್ಟೆಂಟ್ ಆಗಿದ್ದಾಗ ಇಂತಹ ದೃಶ್ಯಗಳನ್ನ ಮಾಡಿದ್ದೀವಿ. ಎಕೆ-47 ಚಿತ್ರದಲ್ಲಿ ಆಶಿಶ್ ವಿದ್ಯಾರ್ಥಿ ಅವರ ಸೀನ್ ನಲ್ಲಿ ಮಾಡಿದ್ವಿ. ನಾನು ಸ್ವತಂತ್ರ ಸಾಹಸ ನಿರ್ದೇಶಕನಾದ ಮೇಲೆ ಚಾಪರ್ ಬಳಿಸಿದ್ದೀವಿ, ಚಾಪರ್ ನಲ್ಲಿ ಕ್ಯಾಮೆರಾ ಇಟ್ಟಿದ್ದೀವಿ, ಆದ್ರೆ, ಚಾಪರ್ ನಿಂದ ಜಂಪ್ ಮಾಡ್ತಿರೋದು ನನ್ನ ಕೆರಿಯರ್ ನಲ್ಲಿ ಇದೇ ಫಸ್ಟ್ ಟೈಮ್'' - ರವಿವರ್ಮ, ಸಾಹಸ ನಿರ್ದೇಶಕ [ಸ್ಟಂಟ್ ಮಾಸ್ಟರ್ ರವಿವರ್ಮನ ಇನ್ನೊಂದು ಸ್ಟಂಟ್ ಬಹಿರಂಗ.!]

  ನನ್ನ ವೃತ್ತಿಯಲ್ಲಿ ಎರಡನೇ ದೊಡ್ಡ ರಿಸ್ಕ್

  ನನ್ನ ವೃತ್ತಿಯಲ್ಲಿ ಎರಡನೇ ದೊಡ್ಡ ರಿಸ್ಕ್

  ''ನನ್ನ ಲೈಫ್ ಕೆರಿಯರ್ ನಲ್ಲಿ ಎರಡನೇ ಬಾರಿ ಇಂತಹ ರಿಸ್ಕ್ ಮಾಡ್ತಿರೋದು. ಮೊದಲನೆಯದು 'ಸಂಗೊಳ್ಳಿ ರಾಯಣ್ಣ'. ನನ್ನ ಲೈಫ್ ನಲ್ಲಿ ದೊಡ್ಡ ಸ್ಕೇಲ್ ಪಿಕ್ಚರ್ ಅದು. ಅದಾದ ಮೇಲೆ ಈ ಸಿನಿಮಾ. ಈ ಸಿನಿಮಾದಲ್ಲಿ ಏನಂದ್ರೆ, ಚಾಪರ್ ನಿಂದ ಇಬ್ಬರು ವಿಲನ್ಸ್ ಜೊತೆ ಹೀರೋ ಕೆಳಗೆ ಜಂಪ್ ಮಾಡಬೇಕು. ಸೀನ್ ಏನಪ್ಪಾ ಅಂದ್ರೆ, ಸ್ವಾಭಾವಿಕವಾದ ಅರಣ್ಯವನ್ನ ಹಾಳು ಮಾಡಿ, ಇಬ್ಬರು ಎಸ್ಕೇಪ್ ಆಗುತ್ತಿರುತ್ತಾರೆ. ಆಗ ಹೀರೋ ಓಡಿ ಹೋಗಿ ಹಿಡಿದುಕೊಳ್ಳುತ್ತಾರೆ. ಅಲ್ಲಿಂದ ವಾಟರ್ ಗೆ ಏಕೆ ಜಂಪ್ ಆಗ್ತಾರೆ ಎನ್ನುವುದು ಒಂದು ಕಥೆಯ ಲೀಡ್'' -ರವಿವರ್ಮ, ಸಾಹಸ ನಿರ್ದೇಶಕ ['ಮಾಸ್ತಿ ಗುಡಿ' ಸಿನಿಮಾ ತಂಡಕ್ಕೆ 'ಕೇಳಬಾರದ' 20 ಪ್ರಶ್ನೆಗಳು.!]

  ಲೈವ್ ಜಂಪ್ ಗೆ ಐಡಿಯಾ ಕೊಟ್ಟಿದ್ದು ದುನಿಯಾ ವಿಜಯ್

  ಲೈವ್ ಜಂಪ್ ಗೆ ಐಡಿಯಾ ಕೊಟ್ಟಿದ್ದು ದುನಿಯಾ ವಿಜಯ್

  ''ಜಂಪ್ ಅಂದ್ರೆ, ನೆಲದ ಮೇಲೆ ಜಂಪ್ ಆಗಬಹುದಿತ್ತು. ಆದ್ರೆ, ವಾಟರ್ ನಲ್ಲೇ ಯಾಕೆ ಜಂಪ್ ಆಗ್ಬೇಕು ಎನ್ನುವುದಕ್ಕೆ ಒಂದು ಕಥೆಯಿದೆ. ಅದಕ್ಕೆ ಅಂಡರ್ ವಾಟರ್ ನಲ್ಲಿ ಸ್ವಲ್ಪ ಶಾಟ್ಸ್ ಹೋಗುತ್ತೆ. ಆದರಿಂದ ಅದನ್ನೆಲ್ಲ ಪ್ಲಾನ್ ಮಾಡಿಕೊಂಡಾಗ, ದುನಿಯಾ ವಿಜಯ್ ಅವರು, 'ಇಲ್ಲ ಮಾಸ್ಟರ್ ನೀವು ಗ್ಯಾರೆಂಟಿ ಕೊಟ್ರೆ, ಲೈವ್ ಆಗಿಯೇ ಜಂಪ್ ಮಾಡೋಣ' ಅಂತ ಫಸ್ಟ್ ಸ್ಟಾರ್ಟ್ ಹೇಳಿದ್ರು'' - ರವಿವರ್ಮ, ಸಾಹಸ ನಿರ್ದೇಶಕ [ದುನಿಯಾ ವಿಜಯ್, ನಾಗಶೇಖರ್, ರವಿವರ್ಮಗೆ ತಾತ್ಕಾಲಿಕ ನಿಷೇಧ]

  ಫಸ್ಟ್ ಗ್ರಾಫಿಕ್ಸ್ ಮಾಡುವ ಯೋಚನೆಯಿತ್ತು

  ಫಸ್ಟ್ ಗ್ರಾಫಿಕ್ಸ್ ಮಾಡುವ ಯೋಚನೆಯಿತ್ತು

  ''ಈ ಸೀನ್ ಗಳನ್ನ ಸಿ.ಜಿ, ಗ್ರಾಫಿಕ್ಸ್ ಬಳಿಸಿ, ಬ್ಲೂ ಮ್ಯಾಟ್ ಇಟ್ಕೊಂಡು ನಾರ್ಮಲ್ ಆಗಿ ಮಾಡೋಣ ಅಂತ ಫಸ್ಟ್ ನಾವೆಲ್ಲಾ ಅಂದುಕೊಂಡಿದ್ವಿ. ಅದಕ್ಕೆ ವಿಜಿ ಅವರು, ಇಲ್ಲ ಲೈವ್ ಜಂಪ್ ಮಾಡೋಣ, ನೀವು ಗ್ಯಾರೆಂಟಿ ಕೊಟ್ರೆ ಅಂದ್ರು. ನಂದೇನು ಇಲ್ಲ, ನಾವು ರೆಡಿ, ಸೇಫ್ ಮಾಡೋದು ನಾನು ಎಲ್ಲಾ ಮಾಡೇ ಮಾಡ್ತೀನಿ. ಕೆಳಗಡೆ ಪ್ರಿಕಾಶನ್ಸ್ ಏನು ಬೇಕೋ ಅದೆಲ್ಲ ತಗೊಂಡು ನಾನು ಮಾಡ್ತೀನಿ ಅಂತ ಅವರಿಬ್ಬರನ್ನ (ಉದಯ್, ಅನಿಲ್) ಕೇಳಿದಾಗ ಎಲ್ಲ ಓಕೆ ಆಯ್ತು'' -ರವಿವರ್ಮ, ಸಾಹಸ ನಿರ್ದೇಶಕ ['ರವಿ ವರ್ಮ ಈಡಿಯೆಟ್, ಕಪಾಳಕ್ಕೆ ಹೊಡೆಯಬೇಕು.!']

  ಪ್ಲಾನ್ ಸ್ವಲ್ಪ ಲೇಟ್ ಆಯ್ತು

  ಪ್ಲಾನ್ ಸ್ವಲ್ಪ ಲೇಟ್ ಆಯ್ತು

  ''ನಿರ್ಮಾಪಕರನ್ನ ಏನೇ ಕೇಳಿದ್ರು ಇಲ್ಲ ಅಂತ ಹೇಳದೆ, ಎಲ್ಲ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಇನ್ನೂ ಈ ಧೈರ್ಯಕ್ಕೆ ಕೈ ಹಾಕೋದ್ರಲ್ಲಿ ನಾಗಶೇಖರ್ ಅವರು ಇದ್ದಾರೆ. ಎಲ್ಲವನ್ನೂ ಕೂತ್ಕೊಂಡು ಪ್ಲಾನ್ ಮಾಡಬೇಕಾದ್ರೆ, ಚಾಪರ್ ಪರ್ಮಿಷನ್ ಬೇಕು ಅಂದಾಗ, ನೀವು ನಿಜವಾಗಲೂ ನಂಬಲ್ಲ 12 ದಿನದಿಂದ ಓಡಾಡ್ತಾ ಇದ್ದೀವಿ. ಇಲ್ಲ ಅಂದಿದ್ರೆ, ಕಳೆದ ತಿಂಗಳ 20 ರಂದೇ ಈ ಕ್ಲೈಮ್ಯಾಕ್ಸ್ ಕಂಪ್ಲೀಟ್ ಆಗಬೇಕಿತ್ತು'' - ರವಿವರ್ಮ, ಸಾಹಸ ನಿರ್ದೇಶಕ

  'ಭಗವಂತ' ಇದ್ದಾನೆ

  'ಭಗವಂತ' ಇದ್ದಾನೆ

  ''ಚಾಪರ್ ಪರ್ಮಿಷನ್ ಗೆ ತಿರುಗಾಡುವಾಗ, ಆಫೀಸರ್ ಇಲ್ಲ, ದೀಪಾವಳಿ ಹಬ್ಬ ಅಂತ ಅವರು ಹೊರಟು ಹೋಗಿದ್ದರು. ಅವರನ್ನ ಹುಡುಕಿಕೊಂಡು ಬಂದ್ಮೇಲೆ ನಾನು ಇರಲಿಲ್ಲ. 'ಹೆಬ್ಬುಲಿ' ಶೂಟಿಂಗ್ ಗೆ ಹೋಗ್ಬಿಟ್ಟಿದೆ. ಮತ್ತೆ ನನ್ನ ಡೇಟ್ ಹಿಡ್ಕೊಂಡು, ಆ ಮೂರು ನಟರದ್ದು ಕನ್ಟಿನ್ಯುಟಿ ಮೇನ್ಟೇನ್ ಮಾಡ್ಕೊಂಡು, ಟೋಟಲಿ ಎಂಟೈರ್ ಟೀಮ್ ಹಿಸ್ಟರಿ ತರಹ ಬರೆಯೋಕೆ ಒಂದು ಪ್ಲಾನ್ ಮಾಡ್ತಿದ್ದೀವಿ. ನಿಜವಾಗಲೂ ಎಲ್ಲ ಕನ್ನಡ ಜನತೆಯ ಆರ್ಶೀವಾದ, ಎಲ್ಲ ತಂದೆ-ತಾಯಿಯ ಆರ್ಶೀವಾದ ಜೊತೆಗೆ 'ಭಗವಂತ' ಅಷ್ಟೇ, ಇನ್ನೇನೂ ಇಲ್ಲ'' - ರವಿವರ್ಮ, ಸಾಹಸ ನಿರ್ದೇಶಕ ['ಮಾಸ್ತಿ ಗುಡಿ' ದುಸ್ಸಾಹಸದ ಸೃಷ್ಟಿಕರ್ತ ರವಿವರ್ಮ ನಾಪತ್ತೆ.!]

  English summary
  Tragedy Strikes Kannada Movie 'Maasti Gudi'. 2 Actors Drown in Tippagondanahalli Lake while shooting Climax scene. Here is the Maasti Gudi Movie Stunt Director Ravi varma Speech Before the Climax Shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X