twitter
    For Quick Alerts
    ALLOW NOTIFICATIONS  
    For Daily Alerts

    'ಮಾಸ್ತಿ ಗುಡಿ' ದುಸ್ಸಾಹಸದ ಸೃಷ್ಟಿಕರ್ತ ರವಿವರ್ಮ ನಾಪತ್ತೆ.!

    ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಹೆಲಿಕಾಫ್ಟರ್ ನಿಂದ ಜಿಗಿದು ಇಬ್ಬರು ಖಳನಟರು ನೀರುಪಾಲದ ಬಳಿಕ, ಸ್ಪಾಟ್ ನಿಂದ 'ಸ್ಟಂಟ್ ಮಾಸ್ಟರ್' ರವಿವರ್ಮ ಎಸ್ಕೇಪ್ ಆಗಿದ್ದಾರೆ.

    By Harshitha
    |

    'ಮಾಸ್ತಿ ಗುಡಿ' ಚಿತ್ರದ ಹೆಲಿಕಾಫ್ಟರ್ ಸ್ಟಂಟ್ ಅಪ್ಪಿ-ತಪ್ಪಿ ಕ್ಲಿಕ್ ಆಗ್ಬಿಟ್ಟಿದ್ರೆ, ಇಷ್ಟೊತ್ತಿಗೆ 'ಸ್ಟಂಟ್ ಮಾಸ್ಟರ್' ರವಿವರ್ಮ ರವರನ್ನ ಹಿಡಿಯೋಕೆ ಆಗ್ತಿರ್ಲಿಲ್ಲ. ನೆಲದ ಮೇಲೆ ಅವರು ನಿಲ್ತಿರ್ಲಿಲ್ಲ. ಆಕಾಶದಲ್ಲೇ ಹಾರಾಡ್ತಿರೋರು. ಆದ್ರೆ, ಅಂದುಕೊಂಡ ಹಾಗೆ ಎಲ್ಲವೂ ನಡೆಯಬೇಕಲ್ಲ ಸಾರ್.!

    ಜಂಭದಿಂದ ಓಡಾಡಬೇಕಿದ್ದ ಸಾಹಸ ನಿರ್ದೇಶಕ ರವಿವರ್ಮ ಹಾಗೂ 'ಮಾಸ್ತಿ ಗುಡಿ' ಚಿತ್ರದ ನಿರ್ದೇಶಕ ನಾಗಶೇಖರ್ ಇಂದು ಎಲ್ಲರ ಕಣ್ತಪ್ಪಿಸಿಕೊಂಡು ಓಡಾಡುವಂತಾಗಿದೆ. [ಅನಿಲ್, ಉದಯ್ ಕೊನೆಯ ಮಾತಲ್ಲಿ ಸಾವಿನ ಮುನ್ಸೂಚನೆಯ ಸುಳಿವು.!]

    ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಹೆಲಿಕಾಫ್ಟರ್ ನಿಂದ ಜಿಗಿದು ಇಬ್ಬರು ಖಳನಟರು ನೀರುಪಾಲದ ಬಳಿಕ, ಸ್ಪಾಟ್ ನಿಂದ 'ಸ್ಟಂಟ್ ಮಾಸ್ಟರ್' ರವಿವರ್ಮ ಎಸ್ಕೇಪ್ ಆಗಿದ್ದಾರೆ ಅಂದ್ರೆ ನೀವು ನಂಬಲೇಬೇಕು ಸ್ವಾಮಿ.!

    ರವಿವರ್ಮ ಎಸ್ಕೇಪ್.!

    ರವಿವರ್ಮ ಎಸ್ಕೇಪ್.!

    ಅನಿಲ್ ಮತ್ತು ಉದಯ್ ದುರಂತ ಸಾವಿಗೀಡಾದ ಬಳಿಕ ತಿಪ್ಪಗೊಂಡನಹಳ್ಳಿ ಕೆರೆಯ ಆಸುಪಾಸಿನಲ್ಲಿ ರವಿವರ್ಮ ಕಾಣಿಸಿಕೊಳ್ಳಲ್ಲೇ ಇಲ್ಲ. ['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]

    ಶೋಧಕಾರ್ಯದಲ್ಲಿ ಪಾಲ್ಗೊಳ್ಳಲಿಲ್ಲ.!

    ಶೋಧಕಾರ್ಯದಲ್ಲಿ ಪಾಲ್ಗೊಳ್ಳಲಿಲ್ಲ.!

    ದುನಿಯಾ ವಿಜಯ್ ಸೇರಿದಂತೆ 'ಮಾಸ್ತಿ ಗುಡಿ' ಚಿತ್ರತಂಡದವರು ಅನಿಲ್ ಮತ್ತು ಉದಯ್ ಮೃತದೇಹಕ್ಕಾಗಿ ಶೋಧ ನಡೆಸಲು ಆರಂಭಿಸಿದರೂ, ಆ ಕಾರ್ಯಕ್ಕೆ ರವಿವರ್ಮ ಕೈ ಜೋಡಿಸಲಿಲ್ಲ. Infact, ಅದ್ಯಾವಾಗ ರವಿವರ್ಮ ಎಸ್ಕೇಪ್ ಆದರೋ, ಅಲ್ಲಿರುವವರಿಗೆ ಗೊತ್ತೇ ಆಗಲಿಲ್ಲ. ['ಮಾಸ್ತಿಗುಡಿ' ಸಾಹಸ ನಿರ್ದೇಶಕ ರವಿವರ್ಮಗೆ ಜಗ್ಗೇಶ್ ಛೀಮಾರಿ]

    ಫೋನ್ ಸ್ವಿಚ್ ಆಫ್.!

    ಫೋನ್ ಸ್ವಿಚ್ ಆಫ್.!

    ರವಿವರ್ಮ ಎಲ್ಲಿದ್ದಾರೆ ತಿಳಿದುಕೊಳ್ಳೋಣ ಅಂತ ಫೋನ್ ಮಾಡಿದರೆ, ''ನೀವು ಕರೆ ಮಾಡಿದ ಚಂದಾದಾದರು ಸ್ವಿಚ್ ಆಫ್ ಮಾಡಿದ್ದಾರೆ'' ಎಂಬ ಧ್ವನಿ ಮಾತ್ರ ಕೇಳಿಬರುತ್ತಿದೆ. [ದುರಂತ ಸಾವಿಗೀಡಾದ ಅನಿಲ್ ಯಾರು.? ನಿಜ ಬದುಕಿನ ಕಥೆ ಇಲ್ಲಿದೆ...]

    ನಾಗಶೇಖರ್ ಕೂಡ ನಾಪತ್ತೆ

    ನಾಗಶೇಖರ್ ಕೂಡ ನಾಪತ್ತೆ

    ಇಂದು ಮಧ್ಯಾಹ್ನದವರೆಗೂ ತಿಪ್ಪಗೊಂಡನಹಳ್ಳಿ ಕೆರೆ ಬಳಿ ನಾಗಶೇಖರ್ ಇದ್ದರು. ಆದ್ರೆ, ಮಧ್ಯಾಹ್ನದ ಬಳಿಕ ನಿರ್ದೇಶಕ ನಾಗಶೇಖರ್ ಕೂಡ ನಾಪತ್ತೆ ಆಗಿದ್ದಾರೆ. ['ಮಾಸ್ತಿ ಗುಡಿ' ದುರಂತ ಸಂಭವಿಸಲು ಪ್ರಮುಖ ಕಾರಣ ಇದೇ.!]

    ಎಲ್ಲರೂ ಎಲ್ಲಿದ್ದಾರೆ?

    ಎಲ್ಲರೂ ಎಲ್ಲಿದ್ದಾರೆ?

    ನಿರ್ದೇಶಕ ನಾಗಶೇಖರ್ ಎಲ್ಲಿಗೆ ತೆರಳಿದ್ದಾರೆ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಅವರ ಫೋನ್ ಕೂಡ ಸ್ವಿಚ್ ಆಫ್ ಆಗಿದೆ.

    ನಿರ್ಮಾಪಕರದ್ದೂ ಇದೇ ಕಥೆ

    ನಿರ್ಮಾಪಕರದ್ದೂ ಇದೇ ಕಥೆ

    'ಮಾಸ್ತಿ ಗುಡಿ' ನಿರ್ಮಾಪಕರಾಗಿರುವ ಸುಂದರ್ ಗೌಡ ಕೂಡ ಮಿಸ್ಸಿಂಗ್.

    ಎಲ್ಲರ ಮೇಲೂ ಕೇಸ್ ದಾಖಲಾಗಿದೆ.!

    ಎಲ್ಲರ ಮೇಲೂ ಕೇಸ್ ದಾಖಲಾಗಿದೆ.!

    ಅನಿಲ್ ಮತ್ತು ರಾಘವ ಉದಯ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ 'ಮಾಸ್ತಿಗುಡಿ' ಚಿತ್ರ ತಂಡದ ಐವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಿರ್ಮಾಪಕ ಸುಂದರ್ ಗೌಡ ಅವರನ್ನು ಎ-1 ಆರೋಪಿಯಾಗಿ, ನಿರ್ದೇಶಕ ನಾಗಶೇಖರ್ ಅವರು ಎ-2 ಆರೋಪಿ, ಸಹ ನಿರ್ದೇಶಕ ಎ-3 ಆರೋಪಿ, ಸಾಹಸ ನಿರ್ದೇಶಕ ರವಿವರ್ಮ ಅವರನ್ನು ಎ-4 ಆರೋಪಿ, ಸಾಹಸ ಸಹ ನಿರ್ದೇಶಕ ಎ-5 ಆರೋಪಿಯನ್ನಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಐಪಿಸಿ ಸೆಕ್ಷನ್ 304(A) ಹಾಗೂ 308 ಅನ್ವಯ ಕೇಸು ದಾಖಲಾಗಿದೆ. ಸದ್ಯದಲ್ಲೇ ಐವರನ್ನು ಬಂಧಿಸಿ ತನಿಖೆ ನಡೆಸುವ ಸಾಧ್ಯತೆ ಇದೆ. ['ಮಾಸ್ತಿ ಗುಡಿ' ದುರಂತ: ನಿರ್ಮಾಪಕ ಸುಂದರ್ ಗೌಡ ಎ-1 ಆರೋಪಿ.!]

    ದುನಿಯಾ ವಿಜಯ್ ಮಾತ್ರ ಇದ್ದಾರೆ.!

    ದುನಿಯಾ ವಿಜಯ್ ಮಾತ್ರ ಇದ್ದಾರೆ.!

    ಸದ್ಯ ಲೈಫ್ ಜಾಕೆಟ್ ತೊಟ್ಟು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್.ಡಿ.ಆರ್.ಎಫ್) ಹಾಗೂ ಸ್ಥಳೀಯ ನುರಿತ ಈಜುಪಟುಗಳ ಜೊತೆ ಅನಿಲ್ ಹಾಗೂ ಉದಯ್ ರವರ ಮೃತದೇಹಗಳ ಶೋಧಕಾರ್ಯದಲ್ಲಿ ದುನಿಯಾ ವಿಜಯ್ ನಿರತರಾಗಿದ್ದಾರೆ.

    ಇನ್ನೂ ಪತ್ತೆ ಆಗಿಲ್ಲ

    ಇನ್ನೂ ಪತ್ತೆ ಆಗಿಲ್ಲ

    ದುರ್ಘಟನೆ ನಡೆದು 27 ಗಂಟೆ ಕಳೆದರೂ ಇನ್ನೂ ಅನಿಲ್ ಹಾಗೂ ಉದಯ್ ರವರ ಮೃತದೇಹ ಪತ್ತೆ ಆಗಿಲ್ಲ.

    English summary
    After the death of 2 Actors (Anil and Uday) on the sets of 'Maasti Gudi', Stunt Director Ravi Varma goes missing.
    Tuesday, November 8, 2016, 18:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X