Don't Miss!
- Automobiles
ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ
- News
Budget 2023; ಮೋದಿ ಸರ್ಕಾರದಿಂದ ಸಾವಯವ ಕೃಷಿಗೆ ಒತ್ತು: ಸಂಸದ ಈರಣ್ಣ ಕಡಾಡಿ
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಮೇಡ್ ಇನ್ ಬೆಂಗಳೂರು' ಸಿನಿಮಾಗೆ ಸಖತ್ ರೆಸ್ಪಾನ್ಸ್: ರಿಮೇಕ್ ರೈಟ್ಸ್‌ಗೆ ಬೇಡಿಕೆ
ಬೆಂಗಳೂರು ಈ ನಗರವನ್ನು ಇಷ್ಟ ಪಡೋರು ಯಾರಿಲ್ಲ. ಭಾರತದ ಬಹುತೇಕ ಎಲ್ಲಾ ಭಾಷೆಯ ಜನರೂ ಇಲ್ಲಿ ವಾಸವಿದ್ದಾರೆ. ಬೆಂಗಳೂರಿನ ಹವಾಮಾನ ಇಷ್ಟ. ಬೆಂಗಳೂರಿನ ಉದ್ಯಾನವನಗಳು ಇಷ್ಟ. ಒಬ್ಬೊಬ್ಬರಿಗೆ ಒಂದೊಂದು ಇಷ್ಟ.
ಬೆಂಗಳೂರು ಅಂದ್ರೆ ಇಷ್ಟ ಪಡುವವರು ಎಷ್ಟು ಮಂದಿ ಇದ್ದಾರೋ, ಅಷ್ಟೇ ದ್ವೇಷ ಮಾಡುವವರೂ ಇದ್ದಾರೆ. ಬೆಂಗಳೂರಿನ ಟ್ರಾಫಿಕ್ ಇಷ್ಟ ಇಲ್ಲ. ಆದರೂ ಅದೇ ಟ್ರಾಫಿಕ್‌ನಲ್ಲೇ ಓಡಾಡುತ್ತಾರೆ. ಬೆಂಗಳೂರಿನ ರಸ್ತೆಗಳು ಕಷ್ಟ. ಅದರೂ ಅದೇ ರಸ್ತೆಯಲ್ಲಿ ವರ್ಷಗಳಿಂದ ಓಡಾಡುತ್ತಿದ್ದಾರೆ. ಹೀಗಾಗಿ ದ್ವೇಷಿಸುತ್ತಲೇ ಪ್ರೀತಿಸುವ ವರ್ಗವೂ ಇದೆ.
ಯಾರೇ ಪ್ರೀತಿ ಮಾಡಲಿ. ಯಾರೇ ದ್ವೇಷ ಮಾಡಲಿ ಕೋಟ್ಯಾಂತರ ಜನರಿಗಂತೂ ಬೆಂಗಳೂರು ಆಶ್ರಯ ನೀಡುತ್ತಲೇ ಇದೆ. ಇವರೆಲ್ಲರಿಗೂ ಬೆಂಗಳೂರಿನ ಮೇಲೆ ಒಂದು ತರಹದ ಭಾವನಾತ್ಮಕ ಸಂಬಂಧವಿದ್ದೇ ಇದೆ. ಅಂಶಗಳನ್ನೇ ಮುಂದಿಟ್ಟುಕೊಂಡು ನಿರ್ದೇಶಕ ಪ್ರದೀಪ್ ಕೆ ಶಾಸ್ತ್ರಿ 'ಮೇಡ್ ಇನ್ ಬೆಂಗಳೂರು' ಸಿನಿಮಾದಲ್ಲಿ ತೋರಿಸಿದ್ದಾರೆ.
ಬಾಲಕೃಷ್ಣ ಎಂಬುವವರು ನಿರ್ಮಿಸಿರುವ ಈ ಸಿನಿಮಾ 2022, ಡಿಸೆಂಬರ್ 30ರಂದು ರಿಲೀಸ್ ಆಗಿದೆ. ಈ ಸಿನಿಮಾವನ್ನು ಬಹುತೇಕ ಮಂದಿ ಈಗಾಗಲೇ ವೀಕ್ಷಣೆ ಮಾಡಿದ್ದಾರೆ. ಸಾಮಾನ್ಯ ಜನರಿಂದ ಹಿಡಿದು ಗಣ್ಯರೂ ಸೇರಿದಂತೆ ಎಲ್ಲಾ ವರ್ಗದವರಿಗೂ ಈ ಸಿನಿಮಾ ತುಂಬಾನೇ ಇಷ್ಟ ಆಗಿದೆ. ಇನ್ನೂ ಈ ಚಿತ್ರದಲ್ಲಿ ಸ್ಟಾರ್ಟ್ ಅಪ್ ವಿಷಯ ಕೂಡ ಇರೋದ್ರಿಂದ ಇದು ಯುವ ಜನತೆಯನ್ನೂ ಆಕರ್ಷಣೆ ಮಾಡುತ್ತಿದೆ.
ಇತ್ತೀಚೆಗೆ ಸ್ಯಾಂಡಲ್‌ವುಡ್ ಅತ್ಯುತ್ತಮ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. 'ಕೆಜಿಎಫ್ 2', 'ಕಾಂತಾರ', 'ವಿಕ್ರಾಂತ್ ರೋಣ', '777 ಚಾರ್ಲಿ' ಅಂತಹ ಸಿನಿಮಾಗಳನ್ನು ನೀಡಿದೆ. ಇದೇ ವೇಳೆ ಕಂಟೆಂಟ್ ಸಿನಿಮಾಗಳನ್ನು ನೀಡಿದೆ. ಎರಡರಲ್ಲೂ ಯಶಸ್ಸು ಕಂಡಿದ್ದು, 'ಮೇಡ್ ಇನ್ ಬೆಂಗಳೂರು' ಕೂಡ ಕಂಟೆಂಟ್ ಸಿನಿಮಾ ಆಗಿದೆ. ಸದ್ಯ ಪ್ರೇಕ್ಷಕರಿಂದ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆಗೆ ಸಿನಿಮಾತಂಡ ಹರ್ಷ ವ್ಯಕ್ತಪಡಿಸಿದೆ.

'ಮೇಡ್ ಇನ್ ಬೆಂಗಳೂರು' ಬಿಡುಗಡೆಯಾಗುತ್ತಿದ್ದಂತೆ ತೆಲುಗು ಹಾಗೂ ಮಲೆಯಾಳಂನಿಂದ ರಿಮೇಕ್ ರೈಟ್ಸ್‌ಗೆ ಬೇಡಿಕೆ ಸಿಕ್ಕಿದೆ. ಈ ಬಗ್ಗೆ ಚಿತ್ರತಂಡ ಮಾತುಕತೆಯನ್ನೂ ನಡೆಸುತ್ತಿದೆ. ಕುಟುಂಬ ಸಮೇತ ನೋಡಬಹುದಾದ 'ಮೇಡ್ ಇನ್ ಬೆಂಗಳೂರು' ಸಿನಿಮಾ ಸದ್ಯ ಥಿಯೇಟರ್‌ನಲ್ಲಿ ನಿಧಾನವಾಗಿ ಸದ್ದು ಮಾಡುತ್ತಿದೆ.