»   »  ಪ್ರಿನ್ಸ್ ಮಹೇಶ್ ಬಾಬು 'ಸ್ಪೈಡರ್'ಗೆ ಟಿಟೌನ್ ರಾಣಿಯರು ಕ್ಲೀನ್ ಬೌಲ್ಡ್!

ಪ್ರಿನ್ಸ್ ಮಹೇಶ್ ಬಾಬು 'ಸ್ಪೈಡರ್'ಗೆ ಟಿಟೌನ್ ರಾಣಿಯರು ಕ್ಲೀನ್ ಬೌಲ್ಡ್!

Posted By:
Subscribe to Filmibeat Kannada

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಈಗ 'ಸ್ಪೈಡರ್' ಆಗಿದ್ದಾರೆ. 'ಸ್ಪೈಡರ್' ಅವತಾರ ಎತ್ತಿರುವ ಮಹೇಶ್ ಬಾಬು ನೋಡಿ ಈಗ ತೆಲುಗು ಚಿತ್ರರಂಗದ ನಟಿಮಣಿಯರು ಫುಲ್ ಫಿದಾ ಆಗಿದ್ದಾರೆ.

'ಸ್ಪೈಡರ್' ಮಹೇಶ್ ಬಾಬು ನಟನೆಯ ಹೊಸ ಸಿನಿಮಾ. ಈ ಸಿನಿಮಾದ ಒಂದು ಟೀಸರ್ ಇಂದು (1 ಜೂನ್) ರಿಲೀಸ್ ಆಗಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ 'ಸ್ಪೈಡರ್' ಸಖತ್ ಹವಾ ಸೃಷ್ಟಿ ಮಾಡಿದೆ. ಟೀಸರ್ ನೋಡಿ ಮಹೇಶ್ ಬಾಬು ಫ್ಯಾನ್ಸ್ ತುಂಬ ಇಷ್ಟ ಪಟ್ಟಿದ್ದಾರೆ.[ರಾಜಮೌಳಿ ನಿರ್ದೇಶನದಲ್ಲಿ ಮಹೇಶ್ ಬಾಬು!]

Mahesh Babu starrer 'Spyder' teaser is out.

ಬರಿ ಫ್ಯಾನ್ಸ್ ಗೆ ಮಾತ್ರವಲ್ಲ 'ಸ್ಪೈಡರ್' ಟೀಸರ್ ಟಾಲಿವುಡ್ ನಟಿಯರಿಗೂ ಮೋಡಿ ಮಾಡಿದೆ. ನಟಿ ಲಕ್ಷ್ಮಿ ರೈ, ನಿಕಿಶಾ ಪಟೇಲ್ ಸೇರಿದಂತೆ ಸಾಕಷ್ಟು ನಟಿಯರು 'ಸ್ಪೈಡರ್' ಟೀಸರ್ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಮಹೇಶ್ ಬಾಬು ಹೊಸ ಲುಕ್ ನೋಡಿ ಹಾಡು ಹೊಗಳಿದ್ದಾರೆ.[ಪ್ರಿನ್ಸ್ ಮಹೇಶ್ ಜೊತೆ ಕಾಜಲ್, ಸಮಂತಾ ಡ್ಯುಯೆಟ್]

Mahesh Babu starrer 'Spyder' teaser is out.

ಅಂದಹಾಗೆ, 'ಸ್ಪೈಡರ್' ಸಿನಿಮಾವನ್ನು ಸೌತ್ ಸಿನಿರಂಗದ ದೊಡ್ಡ ನಿರ್ದೇಶಕರಲ್ಲಿ ಒಬ್ಬರಾದ ಮುರುಗದಾಸ್ ನಿರ್ದೇಶನ ಮಾಡಿದ್ದಾರೆ. ಮುರುಗದಾಸ್ ಅವರ ಸಿನಿಮಾ ಅಂದರೆ ಅಲ್ಲಿ ವಿಶೇಷತೆ ಇರಲೇ ಬೇಕು. ಈ ಸಿನಿಮಾದಲ್ಲಿ ಕೂಡ ಆ ರೀತಿಯ ಅಂಶಗಳಿದ್ದು, ಅದು ಟೀಸರ್ ನಲ್ಲಿ ಸಾಬೀತಾಗಿದೆ. 'ಸ್ಪೈಡರ್' ಸಿನಿಮಾದ ಟೀಸರ್ ನೋಡಲು ಈ ಲಿಂಕ್ ಕ್ಲಿಕ್ಕಿಸಿ.

English summary
Mahesh Babu starrer 'Spyder' teaser is out. The movie is directed by A.R.Murugadoss. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada