»   » 'ನಾಯಗನ್' ಕಮಲ್ ಜೊತೆ ಮಣಿರತ್ನಂ ಹೊಸ ಚಿತ್ರ!

'ನಾಯಗನ್' ಕಮಲ್ ಜೊತೆ ಮಣಿರತ್ನಂ ಹೊಸ ಚಿತ್ರ!

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಸಿನಿರಸಿಕರ ಹುಬ್ಬೇರುವಂಥ ಸಮಾಚಾರ ಬಂದಿದೆ. ಖ್ಯಾತ ನಿರ್ದೇಶಕ ಮಣಿರತ್ನಂ ಹಾಗೂ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಅವರು ಮತ್ತೊಮ್ಮೆ ಒಂದಾಗಿದ್ದಾರೆ. ಸುಮಾರು 28 ವರ್ಷಗಳ ಹಿಂದೆ ಭೂಗತ ಜಗತ್ತಿನ ಕಥಾನಕವನ್ನು 'ನಾಯಗನ್' ಚಿತ್ರದ ಮೂಲಕ ಪರಿಚಯಿಸಿದ್ದ ಮಣಿ ಹಾಗೂ ಕಮಲ್ ಜೋಡಿ ಈಗ ಮತ್ತೊಮ್ಮೆ ಒಟ್ಟಿಗೆ ಕಾರ್ಯ ನಿರ್ವಹಿಸುವ ಸಂತಸದ ಸುದ್ದಿ ಬಂದಿದೆ.

  ಸರಿ ಸುಮಾರು 28ವರ್ಷಗಳ ಹಿಂದೆ ನಾಯಗನ್ ಚಿತ್ರ ನೀಡಿದ ಈ ಜೋಡಿಯನ್ನು ಇಡೀ ವಿಶ್ವವೇ ತಿರುಗಿ ನೋಡಿತ್ತು. ವಿಶ್ವದ ಟಾಪ್ ಚಿತ್ರಗಳ ಸಾಲಿಗೆ 'ನಾಯಗನ್' ಸೇರಿಕೊಂಡಿತ್ತು. ಆದರೆ, ಮತ್ತೆ ಈ ಜೋಡಿ ಯಾಕೋ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ. ಅದರೆ, ಈಗ ಇಬ್ಬರು ಹೊಸ ಚಿತ್ರದ ಬಗ್ಗೆ ಮಾತುಕತೆ ನಡೆಸಿರುವ ಸುದ್ದಿ ಬಂದಿದೆ.

  CONFIRMED: Mani Ratnam To Direct Kamal Haasan After 28 Years!

  ಇತ್ತೀಚೆಗೆ ದೈನಿಕವೊಂದಕ್ಕೆ ಸಂದರ್ಶನ ನೀಡಿದ್ದ ಕಮಲ್ ಹಾಸನ್ ಅವರು 28 ವರ್ಷಗಳ ನಂತರ ಮಣಿರತ್ನಂ ಜೊತೆ ಕಾರ್ಯ ನಿರ್ವಹಿಸುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದರು. ಉತ್ತಮ ವಿಲನ್ ಚಿತ್ರಕ್ಕೆ ವಿಮರ್ಶಕರ ಮೆಚ್ಚುಗೆ ಸಿಕ್ಕರೂ ಪ್ರೇಕ್ಷಕ ಎಲ್ಲೆಡೆ ಕೈ ಹಿಡಿದು ನಡೆಸಲಿಲ್ಲ. ಮಣಿರತ್ನಂ ಅವರು ಓಕೆ ಕಾದಲ್ ಕಣ್ಮಣಿ ಮೂಲಕ ಮತ್ತೊಮ್ಮೆ ರೋಮ್ಯಾಂಟಿಕ್ ಟ್ರ್ಯಾಕ್ ಗೆ ಮರಳಿದ್ದಾರೆ.

  ಕಮಲ್ ಅವರು ದೃಶ್ಯಂ ರಿಮೇಕ್ ಚಿತ್ರ ಪಾಪನಾಶನಂ ಜುಲೈ 17ಕ್ಕೆ ತೆರೆಗೆ ಬರಲಿದೆ ಹಾಗೂ ತೂಂಗ ವನಂ ಚಿತ್ರವಲ್ಲದೆ, ವಿಶ್ವರೂಪಂ2 ಚಿತ್ರದ ಆರ್ಥಿಕ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಈ ನಡುವೆ ಮಣಿಗೆ ಯಾವಾಗ ಕಾಲ್ ಶೀಟ್ ನೀಡುತ್ತಾರೋ ಗೊತ್ತಿಲ್ಲ. ನಾಯಗನ್ ಚಿತ್ರದಂತೆ ಈ ಹೊಸ ಚಿತ್ರಕ್ಕೂ ಇಳಯರಾಜ ಅವರೇ ಸಂಗೀತ ನೀಡಿದರೆ ಚಿತ್ರ ಇನ್ನಷ್ಟು ಕಲೆ ಕಟ್ಟಲಿದೆ ಎಂದು ಅಭಿಮಾನಿಗಳು ಶುಭ ಹಾರೈಸಿದ್ದಾರೆ.

  English summary
  Have you ever wondered why Kamal Haasan and Mani Ratnam have not worked together ever since, after producing a gem of a movie like Nayagan?Kamal, in his latest interview to a leading daily, has opened up about the possibilities of him joining the ace director to dish out yet another film after almost 28 years.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more