»   » ಕಮಲ್ ಹಾಸನ್ ಮತ್ತು ಶ್ರೀದೇವಿ 'ಅಣ್ಣ-ತಂಗಿ'.!

ಕಮಲ್ ಹಾಸನ್ ಮತ್ತು ಶ್ರೀದೇವಿ 'ಅಣ್ಣ-ತಂಗಿ'.!

Posted By:
Subscribe to Filmibeat Kannada

ದಕ್ಷಿಣ ಭಾರತದ ಬಹುತೇಕ ಸ್ಟಾರ್ ನಟರ ಜೊತೆ ಅಭಿನಯಿಸಿರುವ ಶ್ರೀದೇವಿ ಕೆಲ ನಟರ ಜೊತೆ ಸೂಪರ್ ಹಿಟ್ ಕಾಂಬಿನೇಷನ್ ಎನಿಸಿಕೊಂಡಿದ್ದರು. ಹಾಗೆ, ಯಶಸ್ಸು ಕಂಡ ಜೋಡಿಗಳಲ್ಲಿ ಕಮಲ್ ಹಾಸನ್ ಮತ್ತು ಶ್ರೀದೇವಿ ಜೋಡಿಯೂ ಒಂದು.

ತೆರೆಮೇಲೆ ಸೂಪರ್ ಜೋಡಿ ಎನಿಸಿಕೊಂಡಿದ್ದ ಶ್ರೀದೇವಿ ಮತ್ತು ಕಮಲ್ ಹಾಸನ್ ಕುರಿತು ತೆರೆಹಿಂದೆ ಬೇರೆಯದ್ದೇ ಮಾತಿತ್ತು. ಇಬ್ಬರು ಪ್ರೀತಿಸುತ್ತಿದ್ದಾರೆ, ಬಹುಶಃ ಮದುವೆ ಆಗಬಹುದು ಎಂಬ ಸುದ್ದಿಗಳು ಕೇಳಿ ಬಂದವು. ಆದ್ರೆ, ಅದು ಅಂದುಕೊಂಡಂತೆ ಆಗಿಲ್ಲ. ಸೌತ್ ನಿಂದ ಬಾಲಿವುಡ್ ಜಿಗಿದ ಶ್ರೀದೇವಿ ಮಿಥುನ್ ಚಕ್ರವರ್ತಿ ಮತ್ತು ಬೋನಿ ಕಪೂರ್ ಅವರ ಜೊತೆ ಸೇರಿಕೊಂಡರು.

ಕಮಲ್ ಹಾಸನ್ ಮತ್ತು ಶ್ರೀದೇವಿಯ ಸಂಬಂಧದ ಬಗ್ಗೆ ಈಗಲೂ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ. ಈ ಬಗ್ಗೆ ಸ್ವತಃ ಕಮಲ್ ಹಾಸನ್ ಪ್ರತಿಕ್ರಿಯಿಸಿದ್ದು, ಮಾಧ್ಯಮಗಳ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ....

ನಾನು ಶ್ರೀದೇವಿ ಅಣ್ಣ-ತಂಗಿ ಇದ್ದಂತೆ

''ಶ್ರೀದೇವಿ ತನಗೆ ಸಹೋದರಿ ಸಮಾನ, ತನ್ನ ತಂಗಿ. ತಾನು ಅವರ ತಾಯಿ ಬಳಿ ಕೈತುತ್ತು ತಿಂದಿದ್ದೇನೆ. ಸುಮ್ಮನೆ ನಮ್ಮ ಬಗ್ಗೆ ಇಲ್ಲ ಸಲ್ಲದ ವಿಷ್ಯಗಳನ್ನ ಹುಟ್ಟುಹಾಕಬೇಡಿ'' ಎಂದು ಕಮಲ್ ಹಾಸನ್ ಬೇಸರ ವ್ಯಕ್ತಪಡಿಸಿದ್ದಾರೆ.

ನಮ್ಮ ಜೋಡಿ ಬಗ್ಗೆ ಮೆಚ್ಚುಗೆ ಇತ್ತು

ತೆರೆಯ ಮೇಲೆ ನಮ್ಮಿಬ್ಬರ ಹಾಡು, ಅಪ್ಪುಗೆ ನೋಡಿ ಅನೇಕರ ಮೆಚ್ಚಿಕೊಂಡಿದ್ದರು. ನಮ್ಮಿಬ್ಬರ ಜೋಡಿ ನೋಡಿ ಅದೇಷ್ಟೋ ದಂಪತಿಗಳು ನಮ್ಮ ಜೋಡಿ ಕಮಲ್ ಹಾಸನ್ ಮತ್ತು ಶ್ರೀದೇವಿ ಜೋಡಿಯಂತಿದೆ ಎನ್ನುತ್ತಿದ್ದರು.

ಶ್ರೀದೇವಿ ಬರ್ತಡೇಗೆ ಕಾದಿತ್ತು ಬಹುದೊಡ್ಡ ಸರ್ಪ್ರೈಸ್: ನೋಡಲು ಆಕೆಯೇ ಇಲ್ಲ.!

ಪದೇ ಪದೇ ನೋಡುವ ಆಸೆ ಇತ್ತು

''ಅಂದಿನ ನಿರ್ದೇಶಕ ಮತ್ತು ನಿರ್ಮಾಪಕರಿಗೆ ತೆರೆಮೇಲೆ ಪದೇ ಪದೇ ನಮ್ಮ ಜೋಡಿಯನ್ನ ನೋಡುವ ಆಸೆ ಇರುತ್ತಿತ್ತು. ಹೀಗಾಗಿ, ಸತತವಾಗಿ ಇಬ್ಬರು ಒಟ್ಟಿಗೆ ಸಿನಿಮಾ ಮಾಡುವ ಪರಿಸ್ಥಿತಿ ಬಂತು. ಶ್ರೀದೇವಿ ಜೊತೆ ನಟಿಸಲು ಎಲ್ಲ ನಟರಿಗು ಆಸೆ ಇತ್ತು. ಪ್ರತಿಯೊಂದು ಚಿತ್ರ ಅಥವಾ ಪಾತ್ರದಲ್ಲಿ ಅಷ್ಟು ನಿಷ್ಠೆ ತೋರುತ್ತಿದ್ದರು'' ಎಂದು ಕಮಲ್ ನೆನಪನ್ನ ಮೆಲುಕು ಹಾಕಿದರು.

ಶ್ರೀದೇವಿ-ಕಮಲ್ ಸಿನಿಮಾಗಳು

'ಪದಿನಾರು ವಯತ್ತಿನಿಲೇ', 'ಗುರು', 'ವರಮಯನ್ ನಿರಂ ಸಿವೆಪ್ಪು', 'ಮೂಂಡ್ರು ಪಿರೈ', 'ವಾಜೀ ಮಾಯಂ' ಸೇರಿದಂತೆ ಇನ್ನು ಹಲವು ಸಿನಿಮಾಗಳಲ್ಲಿ ಕಮಲ್ ಹಾಸನ್ ಮತ್ತು ಶ್ರೀದೇವಿ ಒಟ್ಟಿಗೆ ನಟಿಸಿದ್ದರು.

ಅಂತಿಮ ದರ್ಶನ ಪಡೆದ ಕಮಲ್ ಹಾಸನ್

ಅಗಲಿದ ಸಹನಟಿ ಶ್ರೀದೇವಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಮುಂಬೈಗೆ ಹೋಗಿ ಅಂತಿಮ ನಮನ ಸಲ್ಲಿಸಿದ್ದರು. ಕೇವಲ ಕಮಲ್ ಹಾಸನ್ ಮಾತ್ರವಲ್ಲ, ರಜನಿಕಾಂತ್, ಚಿರಂಜೀವಿ, ವೆಂಕಟೇಶ್ ಸೇರಿದಂತೆ ಹಲವು ದಕ್ಷಿಣ ಭಾರತದ ತಾರೆಯರು ಶ್ರೀದೇವಿಯ ಅಂತಿಮ ದರ್ಶನ ಪಡೆದುಕೊಂಡಿದ್ದರು.

ಶ್ರೀದೇವಿಯ ಅಂತಿಮ ದರ್ಶನದ ವೇಳೆ ಟೀಕೆಗೆ ಗುರಿಯಾದ ನಟಿ ಜಾಕ್ವೆಲಿನ್

ಕಮಲ್ ಹಾಸನ್ ಮೇಲೆ ಗಂಭೀರ ಆರೋಪ ಮಾಡಿದ ನಟಿ ಗೌತಮಿ

English summary
''Me and Sridevi were like brother and sister'' says Kamal Haasan. Expressing sadness over the death of his one-time co-star Sridevi, Kamal Haasan said many senior women actors had called him up and cried following the death of the 54-year-old actor. ತಮಿಳು ನಟ ಕಮಲ್ ಹಾಸನ್ ಮತ್ತು ಶ್ರೀದೇವಿ ಅವರ ಸಂಬಂಧದ ಬಗ್ಗೆ ಮಾಧ್ಯಮಗಳು ಪ್ರಸಾರ ಮಾಡುತ್ತಿರುವ ಸುದ್ದಿಗೆ ಕಮಲ್ ಹಾಸನ್ ಬೇಸರ ವ್ಯಕ್ತಪಡಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada