For Quick Alerts
  ALLOW NOTIFICATIONS  
  For Daily Alerts

  ಮೇಘನಾ ರಾಜ್ ಅಭಿನಯದ 2 ಚಿತ್ರಗಳು ಒಂದೇ ದಿನ ರಿಲೀಸ್.!

  By Bharath Kumar
  |

  ನಟಿ ಮೇಘನಾ ರಾಜ್ ಅಭಿನಯದ ಎರಡು ಚಿತ್ರಗಳು ಒಂದೇ ದಿನ ತೆರೆ ಕಾಣಲು ಸಜ್ಜಾಗಿದೆ. ಈ ಮೂಲಕ ಮುಂದಿನ ವಾರ ಸ್ಯಾಂಡಲ್ ವುಡ್ ನಲ್ಲಿ ಒಂದೇ ನಾಯಕಿಯ ಎರಡು ಚಿತ್ರಗಳು ಕಾದಾಡಲಿವೆ.

  ಹೌದು, ಮೇಘನಾ ರಾಜ್ ಅಭಿನಯದ 'ನೂರೊಂದು ನೆನಪು' ಮತ್ತು 'ಜಿಂದಾ' ಚಿತ್ರಗಳು ಮುಂದಿನ ವಾರ ಅಂದ್ರೆ ಜೂನ್ 9ಕ್ಕೆ ಬಿಡುಗಡೆಯಾಗಲು ಸಿದ್ದವಾಗಿದ್ದು, ಎರಡು ಚಿತ್ರತಂಡಗಳು ಬಿಡುಗಡೆ ದಿನಾಂಕವನ್ನ ಘೋಷಣೆ ಮಾಡಿಕೊಂಡಿದೆ.

  ಅಂದ್ಹಾಗೆ, 'ನೂರೊಂದು ನೆನಪು' ಚಿತ್ರದಲ್ಲಿ ಆ ದಿನಗಳು' ಖ್ಯಾತಿಯ ಚೇತನ್ ಹಾಗೂ ನಟಿ ಮೇಘನಾ ರಾಜ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಇವರ ಜೊತೆಯಲ್ಲಿ ಡಿಂಗ್ರಿ ನಾಗರಾಜ್ ಅವರ ಮಗ ರಾಜ್ ವರ್ಧನ್, ಸುಶ್ಮಿತಾ ಜೋಶಿ, ಅರ್ಚನಾ ಕೂಡ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಕುಮಾರೇಶ್ ಎಂಬುವರು ಆಕ್ಟನ್ ಕಟ್ ಹೇಳಿದ್ದು, ಇದು ಇವರಿಗೆ ಚೊಚ್ಚಲ ಚಿತ್ರ. ಬೆಳಗಾವಿ ಮೂಲದ ಸೂರಜ್ ದೇಸಾಯಿ, ಮನೀಶ್ ದೇಸಾಯಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಗಗನ್ ಬದೇರಿಯಾ ಸಂಗೀತ ಸಂಯೋಜನೆ ಮಾಡಿದ್ದಾರೆ.[ಟ್ರೈಲರ್: ನೆನಪುಗಳನ್ನ ಹೊತ್ತು ಬರುತ್ತಿದೆ 'ನೂರೊಂದು ನೆನಪು']

  ಇನ್ನು ಮತ್ತೊಂದೆಡೆ 'ಜಿಂದಾ' ಚಿತ್ರದಲ್ಲೂ ಮೇಘನಾ ರಾಜ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮೇಘನಾ ಜೊತೆಯಲ್ಲಿ ಅರುಣ್, ಲೋಕಿ, ಕೃಷ್ಣಚಂದ್ರ ಯುವರಾಜ, ದೇವ್ ತಾಳಿಕೋಟೆ, ಅನಿರುದ್ಧ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನೂ ಪೊಲೀಸ್ ಗೆಟಪ್ ನಲ್ಲಿ ಡೈನಾಮಿಕ್ ಹೀರೋ ದೇವರಾಜ್ ನಟಿಸಿದ್ದು, ಕೆಲವು ಹಿರಿಯ ಕಲಾವಿದರು ತೆರೆಹಂಚಿಕೊಂಡಿದ್ದಾರೆ. ಮುಸ್ಸಂಜೆ ಮಹೇಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ದತ್ತಾತ್ತೇಯ ಬಚ್ಚೇಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಶ್ರೀಧರ್ ವಿ.ಸಂಭ್ರಮ ಸಂಗೀತ ಸಂಯೋಜನೆ ನೀಡಿದ್ದಾರೆ.[ರಿಯಲ್ ಗ್ಯಾಂಗ್ ಸತ್ಯ ಕಥೆಯ 'ಜಿಂದಾ' ಟ್ರೈಲರ್ ಹೇಗಿದೆ ನೋಡಿ..]

  English summary
  Meghana Raj's two films are all set to be released on the same day. Meghana Raj starrer 'Noorondu Nenapu' and 'Jinda' are all set to be release on the 09th of this month.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X