For Quick Alerts
  ALLOW NOTIFICATIONS  
  For Daily Alerts

  ಅವರಲ್ಲಿ... ಇವರಿಲ್ಲಿ... ವಿರಹ ವೇದನೆಯಲ್ಲಿ ಆದಿ ಮತ್ತು ನಿಧಿಮಾ!

  |

  ಕ್ವಾರೆಂಟೀನ್ ಅನಿವಾರ್ಯತೆಯಲ್ಲಿ ಎಷ್ಟೋ ಮಂದಿ ತಮ್ಮ ಕುಟುಂಬಗಳಿಂದ ದೂರವಾಗಿದ್ದಾರೆ. ದೂರದ ಊರುಗಳಿಗೆ ಹೋಗಿದ್ದವರು ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಕೆಲಸದ ಮೇಲೆ ಹೊರ ಹೋಗಬೇಕಾದ ಪೊಲೀಸರು, ವೈದ್ಯರು, ದಾದಿಯರು ಮುಂತಾದವರ ಕುಟುಂಬದವರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಇನ್ನು ದಿನವೂ ಭೇಟಿಯಾಗುತ್ತಿದ್ದ ಸ್ನೇಹಿತರು, ಪ್ರೇಮಿಗಳ ಪರದಾಟವನ್ನೂ ಹೇಳತೀರದು.

  Love Mocktail behind the scenes also has tears | Darling krishna | Milana Nagraj

  ಹೊರಗೆ ಕದ್ದು ಮುಚ್ಚಿ ಸೇರುತ್ತಿದ್ದ ಪ್ರೇಮಿಗಳು ಈಗ ಒಬ್ಬರನ್ನೊಬ್ಬರು ಮುಖ ನೋಡಲು ಸಾಧ್ಯವಾಗುತ್ತಿಲ್ಲ. ಅವರ ಸಂಪರ್ಕಕ್ಕೆ ಮೊಬೈಲ್ ಫೋನ್ ಎಂಬ ಸಾಧನವಿದ್ದರೂ ಮನೆಯಲ್ಲಿಯೇ ಎಲ್ಲರೂ ಇರುವುದರಿಂದ ಅವರೊಂದಿಗೆ ಹರಟಲು, ಸಂದೇಶ ವಿನಿಮಯ ಮಾಡಿಕೊಳ್ಳುವುದು ಸುಲಭವಿಲ್ಲ. ಲಾಕ್‌ಡೌನ್‌ನಿಂದ ಹೀಗೆ ಸಂಕಟ ಅನುಭವಿಸುತ್ತಿರುವವರಲ್ಲಿ ಸೆಲೆಬ್ರಿಟಿಗಳೂ ಇದ್ದಾರೆ. ಅಲ್ಲಿನ ಪ್ರೇಮಿಗಳ ಪಡಿಪಾಟಲು ಕೂಡ ಭಿನ್ನವಲ್ಲ. ಇವರಲ್ಲಿ 'ಲವ್ ಮಾಕ್‌ಟೇಲ್'ನ ಮುದ್ದಾದ ಜೋಡಿ ಆದಿ ಮತ್ತು ನಿಧಿಮಾ ಕೂಡ ಸೇರಿದ್ದಾರೆ. ಮುಂದೆ ಓದಿ...

  ಜನ ಮೆಚ್ಚಿದ್ದ ಆದಿ-ನಿಧಿಮಾ

  ಜನ ಮೆಚ್ಚಿದ್ದ ಆದಿ-ನಿಧಿಮಾ

  'ಲವ್ ಮಾಕ್‌ಟೇಲ್' ಚಿತ್ರದ ಮೂಲಕ ಜನಮೆಚ್ಚುಗೆ ಪಡೆದ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್. ಈ ಚಿತ್ರದ ನಾಯಕ-ನಾಯಕಿಯ ಪಾತ್ರಗಳೆರಡೂ ಜನರ ಮನಸ್ಸನ್ನು ತಟ್ಟಿತ್ತು. ಇಬ್ಬರೂ ಈ ಸಿನಿಮಾದ ಕಥೆ ಹೊಸೆದು, ಸಂಭಾಷಣೆ ಬರೆದು, ನಿರ್ಮಾಣ ಮತ್ತು ನಿರ್ದೇಶನ ಹೀಗೆ ಎಲ್ಲ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದರು.

  ನಿಜ ಜೀವನದ ಪ್ರೇಮಿಗಳು

  ನಿಜ ಜೀವನದ ಪ್ರೇಮಿಗಳು

  ಆದಿ ಮತ್ತು ನಿಧಿ ಪಾತ್ರದಿಂದ ಕೃಷ್ಣ ಮತ್ತು ಮಿಲನಾ ನಾಗರಾಜ್ ಮನೆಮಾತಾಗಿದ್ದಾರೆ. ಆದರೆ ನಿಜ ಜೀವನದಲ್ಲಿಯೂ ಇಬ್ಬರೂ ಪ್ರೇಮಿಗಳೆಂಬ ಸಂಗತಿ ಅನೇಕರಿಗೆ ತಿಳಿದಿರಲಿಲ್ಲ. ಈ ಸಿನಿಮಾದ ಸಂದರ್ಭದಿಂದ ಇಬ್ಬರೂ ಯಾವುದೇ ಮುಚ್ಚುಮರೆಯಿಲ್ಲದೆ ಅದನ್ನು ಹೇಳಿಕೊಳ್ಳುತ್ತಿದ್ದಾರೆ.

  ಮಿಸ್ಸಿಂಗ್ ಮೈ ಲವ್ ಎಂದ ಮಿಲನಾ

  ಮಿಸ್ಸಿಂಗ್ ಮೈ ಲವ್ ಎಂದ ಮಿಲನಾ

  ಲಾಕ್‌ಡೌನ್ ಕಾರಣದಿಂದ ಇಬ್ಬರೂ ಅನೇಕ ದಿನಗಳಿಂದ ಭೇಟಿ ಮಾಡಲು ಸಾಧ್ಯವಾಗಿಲ್ಲ. ಇದರಿಂದ ನಿಧಿಮಾ (ಮಿಲನಾ ನಾಗರಾಜ್) ವಿರಹ ವೇದನೆ ಅನುಭವಿಸುತ್ತಿದ್ದಾರೆ. 'ಮಿಸ್ಸಿಂಗ್ ಮೈ ಲವ್' ಎಂದು ಡಾರ್ಲಿಂಗ್ ಕೃಷ್ಣ ಜತೆಗಿನ ಫೋಟೊ ಹಾಕಿಕೊಂಡು ತಮ್ಮ ಬೇಸರವನ್ನು ಅವರು ವ್ಯಕ್ತಪಡಿಸಿದ್ದಾರೆ.

  ಮೂರು ಸಿನಿಮಾಗಳಲ್ಲಿ ಒಟ್ಟಿಗೆ ನಟನೆ

  ಮೂರು ಸಿನಿಮಾಗಳಲ್ಲಿ ಒಟ್ಟಿಗೆ ನಟನೆ

  ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಮೊದಲು ಒಟ್ಟಿಗೆ ನಟಿಸಿದ ಸಿನಿಮಾ ಪ್ರೀತಂ ಗುಬ್ಬಿ ನಿರ್ದೇಶನದ 'ನಮ್ ದುನಿಯಾ ನಮ್ ಸ್ಟೈಲ್'. ಬಹುತಾರಾಗಣದ ಸಿನಿಮಾ, ಈ ಜೋಡಿಗಳನ್ನು ಪ್ರಣಯ ಪಕ್ಷಿಗಳನ್ನಾಗಿಸಿತ್ತು. 'ಜಾಕಿ', 'ಹುಡುಗರು' ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದ ಕೃಷ್ಣ, 'ಮದರಂಗಿ' ಮೂಲಕ ಆಗಲೇ ನಾಯಕನಟರಾಗಿ ಗುರುತಿಸಿಕೊಂಡಿದ್ದರು. ಮಿಲನಾ ಅವರಿಗೆ ಇದು ಮೊದಲ ಸಿನಿಮಾವಾಗಿತ್ತು. ಇದರ ನಂತರ ಇಬ್ಬರೂ 'ಚಾರ್ಲಿ' ಚಿತ್ರದಲ್ಲಿ ಜತೆಯಾಗಿ ನಟಿಸಿದ್ದರು.

  ಟರ್ನಿಂಗ್ ಪಾಯಿಂಗ್ ಕ್ಷಣ

  ಟರ್ನಿಂಗ್ ಪಾಯಿಂಗ್ ಕ್ಷಣ

  ತಾವು ಮತ್ತು ಮಿಲನಾ ಮೊದಲ ಬಾರಿಗೆ ಭೇಟಿಯಾದ ಸಂದರ್ಭದ ಒಂದು ಚಿತ್ರವನ್ನು ಕೃಷ್ಣ ಇತ್ತೀಚೆಗೆ ಹಂಚಿಕೊಂಡಿದ್ದಾರೆ. 2014ರ ಫೋಟೊವೊಂದು ಅವರಿಗೆ ಹಳೆಯ ನೆನಪುಗಳನ್ನು ಮರಳಿ ತಂದಿದೆ. ಈ ಏಂಜೆಲ್‌ಅನ್ನು ಭೇಟಿ ಮಾಡಿದಾಗ ನನ್ನ ಬದುಕು ಯೂಟರ್ನ್ ತೆಗೆದುಕೊಂಡ ಸಂದರ್ಭ ಎಂದು ಕೃಷ್ಣ ಮಧುರ ಕ್ಷಣವನ್ನು ಸ್ಮರಿಸಿಕೊಂಡಿದ್ದಾರೆ.

  ಎರಡನೆಯ ಭಾಗಕ್ಕೆ ತಯಾರಿ

  ಎರಡನೆಯ ಭಾಗಕ್ಕೆ ತಯಾರಿ

  ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ 'ಲವ್ ಮಾಕ್‌ಟೇಲ್ 2' ಚಿತ್ರದ ಕಥೆ ಬರೆಯುವ ಕಾರ್ಯ ಆರಂಭಿಸಿದ್ದರು. ಆದರೆ ಈಗ ಲಾಕ್‌ಡೌನ್ ಕಾರಣದಿಂದ ಅವರ ಪ್ರಯತ್ನಕ್ಕೆ ಸದ್ಯಕ್ಕೆ ಅಡ್ಡಿಯಾಗಿದೆ. ಮೊದಲ ಸಿನಿಮಾ ಯಶಸ್ವಿಯಾಗಿರುವುದರಿಂದ ಪ್ರೇಕ್ಷಕರ ನಿರೀಕ್ಷೆಗಳು ಹೆಚ್ಚಾಗಿರುತ್ತದೆ. ಹೀಗಾಗಿ ಗುಣಮಟ್ಟದ ಸ್ಕ್ರಿಪ್ಟ್ ನೀಡುವ ಜವಾಬ್ದಾರಿ ಅವರ ಮೇಲಿದೆ.

  English summary
  Actress Milana Nagaraj has shared a photo with Darling Krishna and said missing his love during quarantine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X