»   » ರಾಕಿಂಗ್ ಸ್ಟಾರ್ ಯಶ್ 'ಕೆಜಿಎಫ್' ಚಿತ್ರಕ್ಕೆ ನಾಯಕ ನಟಿ ಇವರೇ...

ರಾಕಿಂಗ್ ಸ್ಟಾರ್ ಯಶ್ 'ಕೆಜಿಎಫ್' ಚಿತ್ರಕ್ಕೆ ನಾಯಕ ನಟಿ ಇವರೇ...

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಮದುವೆ ಆದ ಮೇಲೆ ಎಲ್ಲಿ ಹೋಗ್ ಬಿಟ್ರು, ಎಲ್ಲೂ ಕಾಣುತ್ತಲೇ ಇಲ್ಲವಲ್ಲಾ? ಅವರ ಮುಂದಿನ ಸಿನಿಮಾ ಯಾವುದು, ಸಿನಿಮಾಗೆ ಹಿರೋಯಿನ್ ಯಾರು ಅಂತ ಯಶ್ ಅಭಿಮಾನಿಗಳು ಸ್ವಲ್ಪ ಮಟ್ಟಿಗೆ ತಲೆ ಕೆಡಿಸಿ ಕೊಡಂತಿದೆ.[ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ 'ಕೆಜಿಎಫ್']

ಅಂದಹಾಗೆ ಯಶ್ ಸದ್ಯಕ್ಕೆ ಐರ್ ಲ್ಯಾಂಡ್ ಪ್ರವಾಸದಲ್ಲಿದ್ದಾರೆ. ಅವರ ಮುಂದಿನ ಸಿನಿಮಾ ಈಗಾಗಲೇ ಕೆಲವರಿಗೆ ತಿಳಿದಂತೆ 'ಕೆಜಿಎಫ್‌'. ಈ ಹಿಂದೆ ಯಶ್‌ ರವರ ಮುಂದಿನ ಸಿನಿಮಾ 'ಕೆಜಿಎಫ್' ಗೂ ರಾಧಿಕಾ ಪಂಡಿತ್‌ ರವರೇ ನಾಯಕ ನಟಿ ಎಂದು ಹೇಳಲಾಗಿತ್ತು. ಆದ್ರೆ ಕೆಜಿಎಫ್‌ ಸಿನಿಮಾಗೆ ಬೇರೆಯೇ ನಾಯಕ ನಟಿಯನ್ನು ಚಿತ್ರ ತಂಡ ಫಿಕ್ಸ್ ಮಾಡಿದೆ. ಅವರು ಯಾರು ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

ಕೆಜಿಎಫ್ ಸಿನಿಮಾ ನಾಯಕಿ ಇವರೇ ನೋಡಿ

ರಾಕಿಂಗ್ ಸ್ಟಾರ್ ಯಶ್ ಬಹುನಿರೀಕ್ಷಿತ 'ಕೆಜಿಎಫ್' ಚಿತ್ರಕ್ಕೆ ನಾಯಕಿಯಾಗಿ 'ಶ್ರೀನಿಧಿ ಶೆಟ್ಟಿ' ಅವರನ್ನು ಆಯ್ಕೆ ಮಾಡಲಾಗಿದೆ.[ಯಶ್ ಬಹುಕೋಟಿ ವೆಚ್ಚದ 'ಕೆಜಿಎಫ್' ಶೂಟಿಂಗ್ ಗೆ ಮುಹೂರ್ತ ಫಿಕ್ಸ್!]

ಈ 'ಶ್ರೀನಿಧಿ ಶೆಟ್ಟಿ' ಯಾರು?

24 ವರ್ಷದ ಬ್ಯೂಟಿ ಕ್ವೀನ್ ಶ್ರೀನಿಧಿ ಶೆಟ್ಟಿ ಭಾರತದ ಮಾಡೆಲ್‌ ಆಗಿದ್ದು, ಮಿಸ್‌ಸುಪ್ರನ್ಯಾಷನಲ್ 2016 ಮತ್ತು ಮಿಸ್ ದಿವಾ 2016 ಸೌಂದರ್ಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇವರು ಮೂಲತಃ ಎಲ್ಲಿಯವರು ಗೊತ್ತೇ? ಮುಂದೆ ಓದಿ..

ಮೂಲತಃ ಮಂಗಳೂರಿನವರು

ಹೌದು, ಭಾರತದ ಮಾಡೆಲ್ ಮಿಸ್ ದಿವಾ 2016 ಶ್ರೀನಿಧಿ ಶೆಟ್ಟಿ ಮೂಲತಃ ಕರ್ನಾಟಕದ ಮಂಗಳೂರಿನವರು.

ಮಿಸ್ ಕರ್ನಾಟಕ ಮತ್ತು ಮಿಸ್ ಬ್ಯೂಟಿಫೂಲ್‌ ಸ್ಮೈಲ್

ಶ್ರೀನಿಧಿ ಶೆಟ್ಟಿ 2015 ರಲ್ಲಿ ಮಣಪ್ಪುರಂ ಮಿಸ್ ಸೌತ್ ಇಂಡಿಯಾ ಬ್ಯೂಟಿ ಕಾಂಟೆಸ್ಟ್‌ ಆಗಿ ಭಾಗವಹಿಸಿ ಮಿಸ್ ಕರ್ನಾಟಕ ಮತ್ತು ಮಿಸ್ ಬ್ಯೂಟಿಫುಲ್ ಸ್ಮೈಲ್ ಪ್ರಶಸ್ತಿ ಗೆದ್ದಿದ್ದರು.

ಶ್ರೀನಿಧಿ ಶೆಟ್ಟಿ ಶಿಕ್ಷಣ

ಶ್ರೀನಿಧಿ ಶೆಟ್ಟಿ ತಮ್ಮ ಶಾಲೆ, ಕಾಲೇಜು ಶಿಕ್ಷಣವನ್ನು ಮಂಗಳೂರಿನ ಮುಲ್ಕಿ ಅಲ್ಲಿ ಮುಗಿಸಿದರು. ನಂತರ ತಮ್ಮ ಇಂಜಿನಿಯರಿಂಗ್ ಪದವಿಯನ್ನು ಬೆಂಗಳೂರಿನ ಜೈನ್‌ ವಿಶ್ವವಿದ್ಯಾಲಯದಲ್ಲಿ ಮುಗಿಸಿದರು. ಶ್ರೀನಿಧಿ ಶೆಟ್ಟಿ ಬೆಂಗಳೂರಿನ ಅಸೆಂಚರ್ ಐಟಿ ಕಂಪನಿಯಲ್ಲಿ 2 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ಶ್ರೀನಿಧಿ ಶೆಟ್ಟಿ

ಮಿಸ್ ಸುಪ್ರನ್ಯಾಷನಲ್ 2016 ಸೌಂದರ್ಯ ಪ್ರಶಸ್ತಿ ಗೆದ್ದ ಸಂತೋಷವನ್ನು ಹಂಚಿಕೊಳ್ಳಲು ಶ್ರೀನಿಧಿ ಶೆಟ್ಟಿ ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ರವರನ್ನು ಭೇಟಿ ಆಗಿದ್ದರು.

ಶ್ರೀನಿಧಿ

"ನಾನು ಯಶ್‌ ರವರ ಅಭಿಮಾನಿ. ಯಶ್ ರವರ 'ಡ್ರಾಮಾ' ಮತ್ತು 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾಗಳು ನನಗೆ ತುಂಬಾ ಇಷ್ಟ. ಇವರ ಈ ಸಿನಿಮಾಗಳನ್ನು ಕಾಲೇಜ್ ಡೇ ಗಳಲ್ಲಿ ನೋಡಿದ್ದೆ. ನಾನು ಯಾವಾಗಲು ನೋಡಲು ಬಯಸುವ ಸಿನಿಮಾಗಳ ಪೈಕಿ ಯಶ್‌ ಸಿನಿಮಾಗಳು ತುಂಬಾ ಇಷ್ಟ. ಆದ್ರೆ ಇವಾಗ ಅವರಿಗೆ ನಾಯಕ ನಟಿಯಾಗಿ ಅಭಿನಯಿಸುತ್ತಿದ್ದೇನೆ. ಇದನ್ನು ನಂಬಲೇ ಆಗುತ್ತಿಲ್ಲಾ" ಎಂಬ ಸಂತೋಷವನ್ನು ಕೆಜಿಎಫ್ ಸಿನಿಮಾದಲ್ಲಿ ಆಕ್ಟ್ ಮಾಡುವ ಕುರಿತು ಹೇಳಿದ್ದಾರೆ.

ಶ್ರೀನಿಧಿ ಶೆಟ್ಟಿ ಗೆದ್ದ ಸೌಂದರ್ಯ ಪ್ರಶಸ್ತಿಗಳೆಷ್ಟು?

* ಬೆಸ್ಟ್ ಟ್ಯಾಲೆಂಟ್

* ಮಿಸ್ ಸುಪ್ರನ್ಯಾಷನಲ್ ಏಷಿಯಾ ಮತ್ತು ಓಷಿಯಾನಿಯಾ 2016

* ಮಿಸ್ ದಿವಾ 2016

* ಮಿಸ್ ಇಂಡಿಯಾ ಸುಪ್ರನ್ಯಾಷನಲ್

* ಮಿಸ್ ಫೋಟೋಜೆನಿಕ್

* ಮಿಸ್ ಬ್ಯೂಟಿಫುಲ್ ಸ್ಮೈಲ್

* ಮಿಸ್ ಬಾಡಿ ಬ್ಯೂಟಿಫುಲ್

ಕೆಜಿಎಎಫ್ ಸಿನಿಮಾದಲ್ಲಿ ಯಶ್ ಮತ್ತು ಶ್ರೀನಿಧಿ ಶೆಟ್ಟಿ

ಯಶ್ ಮತ್ತು ಶ್ರೀನಿಧಿ ಶೆಟ್ಟಿ ಕಾಂಬಿನೇಷನ್‌ ನಲ್ಲಿ ಮೂಡಿ ಬರಲಿರುವ 'ಕೆಜಿಎಫ್' ಸಿನಿಮಾಗೆ 'ಉಗ್ರಂ' ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಆಕ್ಷನ್‌ ಕಟ್ ಹೇಳುತ್ತಿದ್ದು, ವಿಜಯಕುಮಾರ್ ಕಿರಗಂದುರ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಚಿತ್ರ ತಂಡ ಜನವರಿಯಲ್ಲಿ ಶೂಟಿಂಗ್ ಆರಂಭಿಸುತ್ತಿದೆ.

English summary
Srinidhi Ramesh Shetty is an Indian model and beauty pageant titleholder who won Miss Diva–Miss Supranational India in the Miss Diva - 2016 and also Miss Supranational 2016. Srinidhi Shetty debut opposite Rocking Star Yash in one of the biggest projects yet of Neel's #KGF

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada