»   » ಮಿತ್ರನ 'ರಾಗ' ಬಿಡುಗಡೆಗೆ ರೆಡಿ: ತೆರೆಗೆ ಯಾವಾಗ?

ಮಿತ್ರನ 'ರಾಗ' ಬಿಡುಗಡೆಗೆ ರೆಡಿ: ತೆರೆಗೆ ಯಾವಾಗ?

Posted By:
Subscribe to Filmibeat Kannada

ಹಾಸ್ಯ ನಟ ಮಿತ್ರ ನಟಿಸಿ ನಿರ್ಮಿಸಿರುವ ಅಂಧರ ಕುರಿತ 'ರಾಗ' ಚಿತ್ರ ಟ್ರೈಲರ್ ನಿಂದಲೇ ಸ್ಯಾಂಡಲ್ ವುಡ್ ಸಿನಿ ಪ್ರಿಯರಲ್ಲಿ ಹೊಸ ಭರವಸೆ ಹುಟ್ಟುಹಾಕಿತ್ತು. ಫೆಬ್ರವರಿ ತಿಂಗಳಲ್ಲಿ ಆಡಿಯೋ ರಿಲೀಸ್ ಮಾಡಿದ್ದ ಚಿತ್ರತಂಡ ಚಿತ್ರದ ಬಗ್ಗೆ ಇದ್ದ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿತ್ತು. ಈಗ ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ.[ಮಿತ್ರನ 'ರಾಗ'ಕ್ಕೆ 'ಚಕ್ರವರ್ತಿ' ಅತಿಥಿ]

ಪಿ.ಸಿ.ಶೇಖರ್ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿರುವ, ಹಾಸ್ಯ ನಟ ಮಿತ್ರ ಮತ್ತು ನಟಿ ಭಾಮಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ 'ರಾಗ' ಚಿತ್ರ ಇದೇ ತಿಂಗಳ(ಏಪ್ರಿಲ್) 21 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಅಂಧರು ತಮ್ಮದೇ ಆದ ಲೋಕದಲ್ಲಿ ಕಟ್ಟಿಕೊಳ್ಳುವ ಕನಸಿನ ಜೀವನವನ್ನು 'ರಾಗ' ಚಿತ್ರದಲ್ಲಿ ಪಿ.ಸಿ.ಶೇಖರ್ ಬಿಂಬಿಸಿದ್ದಾರೆ.

Mithra starrer 'Raaga' Kannada Movie Releasing on april 21st.

ಚಿತ್ರದಲ್ಲಿ ಮಿತ್ರ ಮತ್ತು ಭಾಮಾ ಅಂಧರಾಗಿ ಕಾಣಿಸಿಕೊಂಡಿದ್ದು, ಉಳಿದಂತೆ ಅವಿನಾಶ್, ಜೈಜಗದೀಶ್, ರಮೇಶ್ ಭಟ್, ಸಿಹಿ ಕಹಿ ಚಂದ್ರು ರಂತಹ ಬಹುದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.[ಕನ್ನಡ ಚಿತ್ರರಂಗದ ಮತ್ತೊಂದು 'ಅದ್ಭುತ' ಮಿತ್ರನ 'ರಾಗ'!]

Mithra starrer 'Raaga' Kannada Movie Releasing on april 21st.

ಮಿತ್ರ ಎಂಟರ್ ಟೈನರ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ, ವೈದಿ ಎಸ್ ಛಾಯಾಗ್ರಹಣ ಇದೆ.

English summary
Comedy Actor Mithra starrer 'Raaga' Kannada Movie Releasing on april 21st.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada