For Quick Alerts
  ALLOW NOTIFICATIONS  
  For Daily Alerts

  'ದಿ ವಿಲನ್' ಅಡ್ಡಾದಲ್ಲಿ ಪ್ರತ್ಯಕ್ಷವಾದ ಬಾಲಿವುಡ್ ನಟ

  By Bharath Kumar
  |

  ಪ್ರೇಮ್ ನಿರ್ದೇಶನ ಮಾಡುತ್ತಿರುವ 'ದಿ ವಿಲನ್' ಪ್ರತಿ ಹಂತದಲ್ಲೂ ಕುತೂಹಲ ಹುಟ್ಟುಹಾಕುತ್ತಾ ಸಾಗುತ್ತಿದೆ. ಫಸ್ಟ್ ಲುಕ್ ನಿಂದ ಹಿಡಿದು ಶೂಟಿಂಗ್ ಹಂತದಲ್ಲೂ ದಿನೇ ದಿನೇ ಒಂದಲ್ಲ ಒಂದು ಸರ್ಪ್ರೈಸ್ ನೀಡುತ್ತಿದೆ.

  'ದಿ ವಿಲನ್' ಚಿತ್ರದಲ್ಲಿ ಬಾಲಿವುಡ್ ದಿಗ್ಗಜ ನಟ ಮಿಥುನ್ ಚಕ್ರವರ್ತಿ ವಿಶೇಷ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗಿತ್ತು. ಈಗ ಹೇಳಿದಂತೆ ಮಿಥುನ್ ಚಕ್ರವರ್ತಿ ವಿಲನ್ ತಂಡವನ್ನ ಸೇರಿಕೊಂಡಿದ್ದಾರೆ.

  ['ವಿಲನ್'ಗಾಗಿ ಕನ್ನಡಕ್ಕೆ ಬಂದ ಬಾಲಿವುಡ್ ದಿಗ್ಗಜ ನಟ]

  ಮತ್ತೊಂದೆಡೆ ಚಿತ್ರದ ನಾಯಕಿ ಕೂಡ ಅಂತಿಮವಾಗಿದ್ದು, ಲಂಡನ್ ರಾಣಿ ವಿಲನ್ ಗೆ ಜೋಡಿಯಾಗುವುದು ಬಹುತೇಕ ಖಚಿತವಂತೆ. ಹಾಗಾದ್ರೆ, ಮಿಥುನ್ ಚಕ್ರವರ್ತಿಯ ಮೊದಲ ದಿನ ಶೂಟಿಂಗ್ ಹೇಗಿತ್ತು ಅಂತ ಮುಂದೆ ನೋಡಿ.....

  ವಿಲನ್ ಅಡ್ಡಾಗೆ ಬಂದ ಬಾಲಿವುಡ್ ನಟ

  ವಿಲನ್ ಅಡ್ಡಾಗೆ ಬಂದ ಬಾಲಿವುಡ್ ನಟ

  ಸುದೀಪ್ ಮತ್ತು ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ 'ದಿ ವಿಲನ್' ಚಿತ್ರದಲ್ಲಿ ಅಭಿನಯಿಸಲು ಮಿಥುನ್ ಚಕ್ರವರ್ತಿ ಸ್ಯಾಂಡಲ್ ವುಡ್ ಗೆ ಬಂದಿದ್ದು, ಈಗಾಗಲೇ ಚಿತ್ರತಂಡವನ್ನ ಸೇರಿಕೊಂಡಿದ್ದಾರೆ. ಆದ್ರೆ, ಅವರ ಪಾತ್ರವೇನು ಎಂಬುದು ಇನ್ನು ಗೌಪ್ಯವಾಗಿಯೇ ಇಡಲಾಗಿದೆ.

  ಬಿಜಾಪುರದಲ್ಲಿ ಶೂಟಿಂಗ್

  ಬಿಜಾಪುರದಲ್ಲಿ ಶೂಟಿಂಗ್

  'ಮಿಥುನ್ ಚಕ್ರವರ್ತಿ' ಕಾಣಿಸಿಕೊಳ್ಳಲಿರುವ ದೃಶ್ಯಗಳನ್ನ ಬಿಜಾಪುರದಲ್ಲಿ ಚಿತ್ರೀಕರಿಸಲಾಗುತ್ತಿದೆ. ಮಹಾರಾಷ್ಟ್ರದ ಬಾರ್ಡರ್ ನಲ್ಲಿ ಸದ್ಯ, ವಿಲನ್ ಟೀಮ್ ಶೂಟಿಂಗ್ ಮಾಡುತ್ತಿದ್ದು, ಬೆಳಗಾವಿಯ ಅಥಣಿ ಸುತ್ತಮುತ್ತಾ ಕೂಡ ಚಿತ್ರೀಕರಣ ಮಾಡಲಿದೆ.

  ಕನ್ನಡದಲ್ಲಿ ಚೊಚ್ಚಲ ಚಿತ್ರ

  ಕನ್ನಡದಲ್ಲಿ ಚೊಚ್ಚಲ ಚಿತ್ರ

  ಅಂದ್ಹಾಗೆ, ಮಿಥುನ್ ಚಕ್ರವರ್ತಿ ಅವರಿಗೆ ಇದು ಮೊದಲ ಕನ್ನಡ ಚಿತ್ರ. ಹಿಂದಿ, ಬೆಂಗಾಳಿ, ಬೋಜ ಪುರಿ ಸೇರಿದಂತೆ ಸುಮಾರು 350 ಚಿತ್ರಗಳಲ್ಲಿ ನಟಿಸಿರುವ ಮಿಥುನ್ ಚಕ್ರವರ್ತಿ ಹಿಂದಿ ಚಿತ್ರರಂಗದ ಬಹುದೊಡ್ಡ ಕಲಾವಿದ. 2015 ರಲ್ಲಿ ತೆಲುಗಿನ 'ಗೋಪಾಲ ಗೋಪಾಲ' ಚಿತ್ರದಲ್ಲು ನಟಿಸಿದ್ದರು.

  ಆಮಿ ಜಾಕ್ಸನ್ ನಾಯಕಿ

  ಆಮಿ ಜಾಕ್ಸನ್ ನಾಯಕಿ

  ಇನ್ನು ಮತ್ತೊಂದೆಡೆ ಚಿತ್ರದ ನಾಯಕಿ ಕೂಡ ಅಂತಿಮವಾಗಿದ್ದು, ಆಮಿ ಜಾಕ್ಸನ್ ನಟಿಸುವುದು ಬಹುತೇಕ ಖಚಿತವಾಗಿದೆ ಎನ್ನಲಾಗುತ್ತಿದೆ. ನಟಿ ಆಮಿ ಜಾಕ್ಸನ್ ಮೇ ಅಂತ್ಯದೊಳಗೆ 'ದಿ ವಿಲನ್' ಚಿತ್ರತಂಡವನ್ನ ಸೇರಿಕೊಳ್ಳಲಿದ್ದಾರಂತೆ.['ದಿ ವಿಲನ್' ಹೀರೋಯಿನ್ ಬಗ್ಗೆ ಬ್ರೇಕ್ ಆಗಿರುವ ಬ್ಲಾಸ್ಟಿಂಗ್ ನ್ಯೂಸ್ ಇದು.!]

  ಲಂಡನ್ ನಲ್ಲಿ ಶೂಟಿಂಗ್

  ಲಂಡನ್ ನಲ್ಲಿ ಶೂಟಿಂಗ್

  ಬೆಂಗಳೂರು, ಶಿವಮೊಗ್ಗ ಹಾಗೂ ಬಿಜಾಪುರ, ಬೆಳಗಾವಿ ಸುತ್ತಾ ಚಿತ್ರೀಕರಣ ಮಾಡುತ್ತಿರುವ 'ವಿಲನ್' ಚಿತ್ರತಂಡ, ಆದಷ್ಟೂ ಬೇಗ ಲಂಡನ್ ಗೆ ಹಾರಲಿದೆ. ಲಂಡನ್ ನಲ್ಲಿ ಸುದೀಪ್, ಶಿವರಾಜ್ ಕುಮಾರ್ ಅವರ ದೃಶ್ಯಗಳನ್ನ ಚಿತ್ರೀಕರಿಸಲಿದ್ದು, ಆಮಿ ಜಾಕ್ಸನ್ ಕೂಡ ಅಲ್ಲಿಯೇ ಎಂಟ್ರಿ ಕೊಡಲಿದ್ದಾರೆ.['ದಿ ವಿಲನ್' ಚಿತ್ರೀಕರಣಕ್ಕಾಗಿ ಲಂಡನ್ ಗೆ ಹಾರಲಿದೆ ಪ್ರೇಮ್ ಅಂಡ್ ಟೀಂ.!]

  English summary
  Bollywood Star Mithun Chakraborty Joins The Villain Team For Shooting. Mithun Chakraborty Playing Prominent role in The Villain. The Movie Directed By Prem.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X