twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಚಿತ್ರರಂಗ ಕಂಡ ಅಪರೂಪದ ಜೋಡಿಗಳು

    |

    ಚಿತ್ರೀಕರಣ ಆರಂಭದಿಂದ ಕುಂಬಳಕಾಯಿ ಒಡೆಯುವ ತನಕ ಚಿತ್ರ ನಿರ್ಮಾಣಕ್ಕೆ ಎಲ್ಲರ ಕೊಡುಗೆಯೂ ಇದ್ದೇ ಇರುತ್ತದೆ. ಅದು ಚಿತ್ರದ ತಾರಾಗಣದವರಾಗಲಿ, ತಂತ್ರಜ್ಞರಾಗಿರಲಿ ಅಥವಾ ಇತರರಾಗಿರಲಿ.

    ನಾವು ಕಂಡ ಕೆಲವೊಂದು ಅಪರೂಪದ ಜೋಡಿಗಳು ಕನ್ನಡ ಚಿತ್ರೋದ್ಯಮದಲ್ಲಿ ಭಾರೀ ಸದ್ದನ್ನು ಮಾಡಿದ ಉದಾಹರಣೆಗಳಿವೆ.

    ಡಾ. ರಾಜಕುಮಾರ್ ಕಾಲದಿಂದ ಹಿಡಿದು ಈಗಿಲ ಕಾಲದವರೆಗೆ ಕನ್ನಡ ಚಿತ್ರರಂಗ ಕಂಡ ಕೆಲವೊಂದು ಯಶಸ್ವೀ ಜೋಡಿಗಳನ್ನು ಸ್ಲೈಡಿನಲ್ಲಿ ನೀಡಲಾಗಿದೆ. (ರಾಜ್ ಅಪರೂಪದ ಸಂಗತಿಗಳು)

    ಡಾ. ರಾಜಕುಮಾರ್ ಮತ್ತು ಚಿ. ಉದಯಶಂಕರ್

    ಡಾ. ರಾಜಕುಮಾರ್ ಮತ್ತು ಚಿ. ಉದಯಶಂಕರ್

    ಅಪರೂದ ಜೋಡಿಗಳಲ್ಲಿ ಮಂಚೂಣಿಯಲ್ಲಿ ಬರುವ ಹೆಸರು ವರನಟ ರಾಜ್ ಮತ್ತು ಚಿ.ಉದಯಶಂಕರ್ ಅವರದ್ದು. ರಾಜ್ ಚಿತ್ರಗಳ ಹಾಡಿಗೆ ಉದಯಶಂಕರ್ ಅವರ ಸಾಹಿತ್ಯ ಇದ್ದೇ ಇರುತ್ತಿತ್ತು. ಭಾಗ್ಯವಂತ, ಹೊಸಬೆಳಕು, ಹಾಲುಜೇನು ಮುಂತಾದ ಸೂಪರ್ ಹಿಟ್ ಚಿತ್ರಗಳು ಇವರಿಬ್ಬರ ಯಶಸ್ವೀ ಜೋಡಿಗೆ ಕೊಡಬಹುದಾದ ಉದಾಹರಣೆಗಳು.

    ವಿಷ್ಣುವರ್ಧನ್ ಮತ್ತು ದ್ವಾರಕೀಶ್

    ವಿಷ್ಣುವರ್ಧನ್ ಮತ್ತು ದ್ವಾರಕೀಶ್

    ಕನ್ನಡ ಚಿತ್ರರಂಗದ ಕಳ್ಳ ಮತ್ತು ಕುಳ್ಳ ಜೋಡಿಯೆಂದೇ ಹೆಸರಾಗಿರುವ ವಿಷ್ಣು ಮತ್ತು ದ್ವಾರಕೀಶ್. ಹಲವು ಹಿಟ್ ಚಿತ್ರಗಳನ್ನು ಈ ಜೋಡಿ ನೀಡಿದೆ, ಅದರಲ್ಲಿ ಪ್ರಮುಖವಾದುದು ಸಿಂಗಾಪುರದಲ್ಲಿ ರಾಜಾಕುಳ್ಳ, ಕಳ್ಳಕುಳ್ಳ, ರಾಯರು ಬಂದರು ಮಾವನ ಮನೆಗೆ, ಆಪ್ತಮಿತ್ರ ಮುಂತಾದವು.

    ವಿಷ್ಣುವರ್ಧನ್ ಮತ್ತು ಎಸ್ ನಾರಾಯಣ್

    ವಿಷ್ಣುವರ್ಧನ್ ಮತ್ತು ಎಸ್ ನಾರಾಯಣ್

    ಇವರಿಬ್ಬರ ಜೋಡಿಯಲ್ಲೂ ಹಲವು ಸೂಪರ್ ಹಿಟ್ ಚಿತ್ರಗಳು ಬಂದಿವೆ. ವಿಷ್ಣು ನಾಯಕನಟನಾಗಿ ನಟಿಸಿದ ವೀರಪ್ಪ ನಾಯ್ಕ, ಸೂರ್ಯವಂಶ, ಜಮೀನ್ದಾರ್ರು, ಸಿರಿವಂತ ಮುಂತಾದ ಚಿತ್ರಗಳನ್ನು ಎಸ್ ನಾರಾಯಣ್ ನಿರ್ದೇಶಿಸಿದ್ದರು.

    ರವಿಚಂದ್ರನ್ ಮತ್ತು ಹಂಸಲೇಖಾ

    ರವಿಚಂದ್ರನ್ ಮತ್ತು ಹಂಸಲೇಖಾ

    ಕನ್ನಡ ಚಿತ್ರರಂಗ ಕಂಡ ಮತ್ತೊಂದು ಯಶಸ್ವೀ ಜೋಡಿಗಳು. ಭಾರೀ ಯಶಸ್ಸು ಪಡೆಯುತ್ತಿದ್ದ ರವಿಚಂದ್ರನ್ ಚಿತ್ರಗಳಿಗೆ ಹಂಸಲೇಖಾ ಅವರ ಸಾಹಿತ್ಯ ಮತ್ತು ಸಂಗೀತವೂ ಕಾರಣವಾಗಿತ್ತು.

    ಶಿವಣ್ಣ ಮತ್ತು ಪ್ರೇಮ್

    ಶಿವಣ್ಣ ಮತ್ತು ಪ್ರೇಮ್

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ಪ್ರೇಮ್ ಅವರದ್ದು ಮತ್ತೊಂದು ಅಪರೂಪದ ಜೋಡಿ. ಪ್ರೇಮ್ ಮತ್ತು ಶಿವಣ್ಣ ಕಾಂಬಿನೇಶನಿನಲ್ಲಿ ಎರಡು ಚಿತ್ರಗಳು ಮಾತ್ರ (ಜೋಗಿ, ಜೋಗಯ್ಯ) ಬಂದಿದ್ದರೂ ಇಬ್ಬರಿಬ್ಬರದ್ದೂ ಯಶಸ್ವಿ ಜೋಡಿ ಎನ್ನುವ ಹೆಸರಿದೆ.

    ಉಪೇಂದ್ರ ಮತ್ತು ಗುರುಕಿರಣ್

    ಉಪೇಂದ್ರ ಮತ್ತು ಗುರುಕಿರಣ್

    ಕರಾವಳಿ ಮೂಲದವರಾದ ಉಪೇಂದ್ರ ಮತ್ತು ಗುರುಕಿರಣ್ ಅವರದ್ದೂ ಯಶಸ್ವೀ ಜೋಡಿ. ಉಪೇಂದ್ರ ನಾಯಕನಾಗಿ ನಟಿಸುವ ಹೆಚ್ಚಿನ ಚಿತ್ರಗಳಿಗೆ ಗುರುಕಿರಣ್ ಅವರ ಸಂಗೀತವಿರುತ್ತದೆ. ಉಪೇಂದ್ರ, ಹಾಲಿವುಡ್, ಗೋಕರ್ಣ ಮುಂತಾದ ಚಿತ್ರಗಳಿಗೆ ಗುರುಕಿರಣ್ ಸಂಗೀತ ನೀಡಿದ್ದಾರೆ.

    ಜಗ್ಗೇಶ್ ಮತ್ತು ಗುರುಪ್ರಸಾದ್

    ಜಗ್ಗೇಶ್ ಮತ್ತು ಗುರುಪ್ರಸಾದ್

    ಮಠ ಚಿತ್ರದ ಮೂಲಕ ಇವರಿಬ್ಬರದ್ದೂ ಯಶಸ್ವೀ ಜೋಡಿ. ಇದಾದ ನಂತರ ಇಬರಿಬ್ಬರ ಕಾಂಬಿನೇಶನಲ್ಲಿ ಬಂದ ಎದ್ದೇಳು ಮಂಜುನಾಥ ಚಿತ್ರ ಕೂಡಾ ಜನಪ್ರಿಯತೆ ಪಡೆದಿತ್ತು.

    ಪುನೀತ್ ಮತ್ತು ಸೂರಿ

    ಪುನೀತ್ ಮತ್ತು ಸೂರಿ

    ಪುನೀತ್ ರಾಜಕುಮಾರ್ ಮತ್ತು ನಿರ್ದೇಶಕ ಸೂರಿ ಅವರದ್ದು ಯಶಸ್ವೀ ಜೋಡಿ. ಜಾಕಿ, ಅಣ್ಣಾಬಾಂಡ್ ಚಿತ್ರದ ನಂತರ ಇವರಿಬ್ಬರ ದೊಡ್ಮನೆ ಹುಡುಗ ಸಿನಿಮಾ ಚಿತ್ರೀಕರಣದ ಹಂತದಲ್ಲಿದೆ.

    ದುನಿಯಾ ವಿಜಯ್ ಮತ್ತು ಸೂರಿ

    ದುನಿಯಾ ವಿಜಯ್ ಮತ್ತು ಸೂರಿ

    ಇವರಿಬ್ಬರ ದುನಿಯಾ ಚಿತ್ರ ಇಬ್ಬರಿಗೂ ದುನಿಯಾ ವಿಜಯ್, ದುನಿಯಾ ಸೂರಿ ಎನ್ನುವ ಹೆಸರು ತಂದುಕೊಟ್ಟಿತ್ತು. ಇದಾದ ನಂತರ ಇವರಿಬ್ಬರ ಕಾಂಬಿನೇಶನಲ್ಲಿ ಬಂದ ಜಂಗ್ಲೀ ಚಿತ್ರ ಇಬ್ಬರಿಗೂ ಒಳ್ಳೆ ಹೆಸರು ತಂದುಕೊಟ್ಟಿತ್ತು.

    ದರ್ಶನ್ ಮತ್ತು ಓಂ ಪ್ರಕಾಶ್ ರಾವ್

    ದರ್ಶನ್ ಮತ್ತು ಓಂ ಪ್ರಕಾಶ್ ರಾವ್

    ಸ್ಯಾಂಡಲ್ ವುಡ್ ನಲ್ಲಿ ಇವರಿಬ್ಬರದ್ದೂ ಯಶಸ್ವೀ ಜೋಡಿ. ಕಲಾಸಿಪಾಳ್ಯ, ಅಯ್ಯ, ಯೋಧ ಮುಂತಾದ ಸೂಪರ್ ಹಿಟ್ ಚಿತ್ರಗಳು ಇವರಿಬ್ಬರ ಜೋಡಿಯಲ್ಲಿ ಬಂದದ್ದು.

    ಯಶ್ ಮತ್ತು ಜಯಣ್ಣ

    ಯಶ್ ಮತ್ತು ಜಯಣ್ಣ

    ರಾಕಿಂಗ್ ಸ್ಟಾರ್ ಯಶ್ ಮತ್ತು ಜಯಣ್ಣ ಅವರದ್ದೂ ಯಶಸ್ವೀ ಜೋಡಿ. ಚಿತ್ರ ಹಂಚಿಕೆದಾರರಾಗಿರುವ ಜಯಣ್ಣ, ಯಶ್ ಅಭಿನಯದ ಡ್ರಾಮಾ ಮತ್ತು ಗಜಕೇಸರಿ ಚಿತ್ರದ ಹಂಚಿಕೆದಾರರಾಗಿದ್ದರು.

    ಗಣೇಶ್ ಮತ್ತು ಯೋಗರಾಜ್ ಭಟ್

    ಗಣೇಶ್ ಮತ್ತು ಯೋಗರಾಜ್ ಭಟ್

    ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್ ಭಟ್ ಕಾಂಬಿನೇಶನಿನಲ್ಲಿ ಚಿತ್ರ ಬರುತ್ತಿದೆಯೆಂದರೆ ಪ್ರೇಕ್ಷಕರಿಗೆ ಕುತೂಹಲ ಜಾಸ್ತಿ. ಮುಂಗಾರುಮಳೆ ಮತ್ತು ಗಾಳಿಪಟ ಚಿತ್ರಗಳು ಇದಕ್ಕೆ ಸಾಕ್ಷಿ.

    ಯೋಗರಾಜ್ ಭಟ್ ಮತ್ತು ಹರಿಕೃಷ್ಣ

    ಯೋಗರಾಜ್ ಭಟ್ ಮತ್ತು ಹರಿಕೃಷ್ಣ

    ಯೋಗರಾಜ್ ಭಟ್ ಮತ್ತು ಸೂರಿ ಚಿತ್ರಗಳಿಗೆ ಹರಿಕೃಷ್ಣ ಅವರ ಸಂಗೀತವೇ ಹೆಚ್ಚಾಗಿ ಇರುತ್ತದೆ. ಈ ಹಿಂದೆ ರವಿಚಂದ್ರನ್ ಚಿತ್ರಕ್ಕೆ ಹಂಸಲೇಖಾ ಅವರ ಸಂಗೀತವಿದ್ದಂತೇ, ಭಟ್ರು ಮತ್ತು ಸೂರಿ ಚಿತ್ರಗಳಿಗೆ ಹರಿಕೃಷ್ಣ ಅವರ ಸಂಗೀತ ಖಾಯಂ.

    English summary
    Most successful combinations of Kannada Film Industry.
    Tuesday, June 3, 2014, 12:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X