»   » ಸಂಗೀತ ಕ್ಷೇತ್ರದ ದಿಗ್ಗಜನಿಗೆ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ರಿಂದ ಪಾದಪೂಜೆ

ಸಂಗೀತ ಕ್ಷೇತ್ರದ ದಿಗ್ಗಜನಿಗೆ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ರಿಂದ ಪಾದಪೂಜೆ

Posted By:
Subscribe to Filmibeat Kannada

ಭಾರತದ ಪ್ರಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಚಲನಚಿತ್ರ ಕ್ಷೇತ್ರದಲ್ಲಿ ತಾವು 50 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಸಂಗೀತ ಕ್ಷೇತ್ರದ ಮತ್ತೊಬ್ಬ ದಿಗ್ಗಜರಾದ ಕೆ.ಜೆ.ಯೇಸುದಾಸ್ ರವರ ಪಾದಪೂಜೆ ಮಾಡಿ ಗೌರವ ಅರ್ಪಿಸಿದ್ದಾರೆ.[ಎಂಜಿನಿಯರ್ ಆಗ್ಬೇಕಿದ್ದ ಎಸ್.ಪಿ.ಬಿಗೆ ಅದೃಷ್ಟ ಖುಲಾಯಿಸಿದ ಸತ್ಯಕಥೆ]

ಎಸ್‌ಪಿಬಿ ತಾವು ಗುರುದಕ್ಷಿಣೆ ಸಲ್ಲಿಸಿ ಯೇಸುದಾಸ್ ರವರಿಗೆ ಪಾದಪೂಜೆ ಮಾಡಬೇಕು ಎಂದು ತುಂಬಾ ದಿನಗಳಿಂದ ಆಸೆ ಇಟ್ಟುಕೊಂಡಿದ್ದರಂತೆ. ಪಾದಪೂಜೆ ಮಾಡಿದ ನಂತರ ಎಸ್‌ಪಿಬಿ ಭಾವುಕರಾಗಿಯೇ ಮಾತನಾಡಿ "ಯೇಸುದಾಸ್ ನನ್ನ ಗುರು, ಸಹೋದರ, ನನಗೆ ಯಾವಾಗಲು ಸ್ಪೂರ್ತಿಯಾಗಿ ನಿಂತವರು. ಅವರಿಗೆ ಪಾದಪೂಜೆ ಮಾಡುವ ಆಸೆ ಈಗ ಈಡೇರಿದೆ. ಅವರು ನೂರು ಕಾಲ ಬಾಳಬೇಕು. ಎಂದಿಗೂ ಹಾಡುತ್ತಲೇ ಇರಬೇಕು. ಯೇಸುದಾಸ್ ತಮ್ಮ ಗಾಂಧರ್ವ ಧ್ವನಿಯಿಂದ ಪ್ರಪಂಚಕ್ಕೆ ಇನ್ನೂ ಆನಂದ ನೀಡಬೇಕು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದರು.

 Multilingual Singer SP Balasubrahmanyam honours Legend Singer KJ Yesudas

ಎಸ್‌ಪಿಬಿ ರವರು ಮಾತನಾಡಿದ ನಂತರ ಯೇಸುದಾಸ್. 'ಬಾಲು ಮತ್ತು ನಾನು ಬೇರೆಯಲ್ಲ. ನಾವಿಬ್ಬರು ಒಂದೇ. ಇಬ್ಬರು ಸಂಗೀತದಿಂದಲೇ ಗುರುತಿಸಿಕೊಂಡವರು. ಸರಸ್ವತಿ ನಮ್ಮ ತಾಯಿ. ಅಷ್ಟೊಂದು ಸಂಗೀತ ಗೊತ್ತಿಲ್ಲ ಎಂದು ಬಾಲು ಹೇಳುತ್ತಿದ್ದಾರೆ. ಅವರು ಹಾಗೆ ಹೇಳಬಾರದು. ಎಸ್‌ಪಿಬಿ ಶ್ರೇಷ್ಠ ಗಾಯಕ ಎಂಬುದು ನನಗೆ ಮಾತ್ರವಲ್ಲ ಇಡೀ ಪ್ರಪಂಚಕ್ಕೆ ಗೊತ್ತು. ಆ ಸಂಗೀತ ದೇವತೆ ಅವರನ್ನು ಬಹಳಷ್ಟು ಹರಸಲಿ' ಎಂದು ಹೇಳಿದರು. ಬಾಲುಗೆ ನನ್ನ ಬಗ್ಗೆ ಯಾವಾಗಲು ಕಾಳಜಿ ಜಾಸ್ತಿ ಎಂದು ತಾವು ಪ್ಯಾರಿಸ್ ನಲ್ಲಿ ಒಟ್ಟಿಗೆ ಇದ್ದ ಸಂದರ್ಭವನ್ನು ನೆನಪಿಸಿಕೊಂಡರು.[ಎಸ್.ಪಿ.ಬಿ ಮಾಡಿರುವ ದಾಖಲೆಗಳು ಅಬ್ಬಬ್ಬಾ.! ಒಂದಾ..ಎರಡಾ.!!?]

English summary
Multilingual Singer S.P.Balasubrahmanyam has recieved many awards and has done multiple records in his 50 years long Carrer. Now Greatest singer SPB honours Legend Singer KJ Yesudas.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada