For Quick Alerts
  ALLOW NOTIFICATIONS  
  For Daily Alerts

  ಬುಲೆಟ್ ಏರಿ 30 ಜಿಲ್ಲೆ ಸುತ್ತಿದ ದರ್ಶನ್ ಫ್ಯಾನ್:ಉಪ್ಪಿ,ಶರಣ್,ಸೃಜನ್,ಅಭಿ ಮನೆಯಲ್ಲಿ'ಕ್ರಾಂತಿ'

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕ್ರಾಂತಿ' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಅಭಿಮಾನಿಗಳು ಬರದಿಂದ ಸಿನಿಮಾ ಪ್ರಚಾರ ಮಾಡುತ್ತಿದ್ದು, ತಮಗೆ ತೋಚಿದ ರೀತಿಯಲ್ಲಿ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ.

  ಕಳೆದ ಕೆಲವು ದಿನಗಳಿಂದ ದರ್ಶನ್ ಹಾರ್ಡ್‌ ಕೋರ್ ಅಭಿಮಾನಿ ಅವಿನಾಶ್ ನಾಗರಾಜ್ ವಿಭಿನ್ನ ರೀತಿಯಲ್ಲಿ ಕ್ರಾಂತಿ ಸಿನಿಮಾದ ಪ್ರಚಾರದಲ್ಲಿ ತೊಡಗಿದ್ದರು. ಸೆಲೆಬ್ರೆಟಿಗಳ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ.

  "ನನ್ನಷ್ಟು ಬ್ಲ್ಯಾಕ್ ಮಾರ್ಕ್ ಇರೋನು ಯಾರೂ ಇಲ್ಲ..ನನ್ನ ಬ್ಯಾಡ್ ಲಕ್ಕೋ ಏನೋ" ದರ್ಶನ್!

  'ಕ್ರಾಂತಿ' 2023ರ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ಅಲ್ಲದೆ ಈ ವರ್ಷ ರಿಲೀಸ್ ಆಗುತ್ತಿರುವ ಮೊದಲ ಸೂಪರ್‌ಸ್ಟಾರ್ ಸಿನಿಮಾ ಕೂಡ ಹೌದು. ಇನ್ನು ಹಲವು ಕಾರಣಗಳಿಗಾಗಿ ಈ ಸಿನಿಮಾ ಯಶಸ್ಸಿನ ಮೇಲೆ ಇಡೀ ಚಿತ್ರರಂಗದ ಕುತೂಹಲದಿಂದ ನೋಡುತ್ತಿದೆ. ಇದೇ ಕಾರಣಕ್ಕೆ ದರ್ಶನ್ ಅಭಿಮಾನಿ ಅವಿನಾಶ್ ನಾಗರಾಜ್ ಬುಲೆಟ್ ಮೂಲಕ ಪ್ರಚಾರ ಮಾಡುತ್ತಿದ್ದಾರೆ.

  ಬುಲೆಟ್‌ನಲ್ಲಿ 'ಕ್ರಾಂತಿ' ಪೋಸ್ಟರ್

  ಬುಲೆಟ್‌ನಲ್ಲಿ 'ಕ್ರಾಂತಿ' ಪೋಸ್ಟರ್

  'ಕ್ರಾಂತಿ' ಸಿನಿಮಾ ರಿಲೀಸ್‌ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ ಅನ್ನುವಾಗಲೇ ದರ್ಶನ್ ಅಭಿಮಾನಿಗಳು ಆಕ್ಟಿವ್ ಆಗಿದ್ದರು. ಅವರೇ ಸ್ವತ: ಖರ್ಚಿನಲ್ಲಿ ಸ್ವಯಂ ಇಚ್ಛೆಯಿಂದ ಪ್ರಚಾರ ಮಾಡುತ್ತಿದ್ದರು. ಇಂತಹವ್ರಲ್ಲಿ ಒಬ್ಬರು ಅವಿನಾಶ್ ನಾಗರಾಜ್ ಕೂಡ ಇಬ್ಬರು. ಇವರು ತಮ್ಮ ಬುಲೆಟ್ ತುಂಬೆಲ್ಲಾ 'ಕ್ರಾಂತಿ' ಪೋಸ್ಟರ್ ಅನ್ನು ಅಂಟಿಸಿಕೊಂಡು ಅದರಲ್ಲೇ ಪ್ರಚಾರವನ್ನು ಮಾಡುತ್ತಿದ್ದಾರೆ. ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳ ಮನೆ ಮನೆಗೆ ತೆರಳಿ 'ಕ್ರಾಂತಿ' ಪ್ರಚಾರ ಮಾಡುತ್ತಿದ್ದಾರೆ.

  ಸೆಲೆಬ್ರೆಟಿಗಳ ಮನೆಗೆ ತೆರಳಿ ಪ್ರಚಾರ

  ಸೆಲೆಬ್ರೆಟಿಗಳ ಮನೆಗೆ ತೆರಳಿ ಪ್ರಚಾರ

  ಅವಿನಾಶ್ ನಾಗರಾಜ್ ಹಲವು ದಿನಗಳಿಂದ ಬುಲೆಟ್‌ನಲ್ಲಿಯೇ 'ಕ್ರಾಂತಿ' ಮಾಡುತ್ತಿದ್ದಾರೆ. ಸ್ಯಾಂಡಲ್‌ವುಡ್ ತಾರೆಯರ ಮನೆಗಳಿಗೆ ತೆರಳಿ 'ಕ್ರಾಂತಿ'ಗೆ ಬೆಂಬಲ ಕೋರುತ್ತಿದ್ದಾರೆ. ಸದ್ಯ ರಿಯಲ್ ಸ್ಟಾರ್ ಉಪೇಂದ್ರ, ಸ್ಯಾಂಡಲ್‌ವುಡ್ ಅಧ್ಯಕ್ಷ ಶರಣ್, ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್, ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರ ಮನೆಗೆ ತೆರಳಿ 'ಕ್ರಾಂತಿ'ಗೆ ಬೆಂಬಲ ಕೋರಿದ್ದಾರೆ. ಅಭಿಷೇಕ್ ಅಂಬರೀಶ್ ಇದೇ ಕ್ರಾಂತಿ ಬುಲೆಟ್‌ನಲ್ಲಿ ಒಂದು ಸುತ್ತು ಹಾಕಿ ಬಂದಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು.

  30 ಜಿಲ್ಲೆಗಳಿಗೆ ತೆರಳಿ 'ಕ್ರಾಂತಿ'

  30 ಜಿಲ್ಲೆಗಳಿಗೆ ತೆರಳಿ 'ಕ್ರಾಂತಿ'

  'ಕ್ರಾಂತಿ' ಸಿನಿಮಾಗೆ ಬೆಂಬಲ ನೀಡುವಂತೆ ಸ್ಯಾಂಡಲ್‌ವುಡ್ ತಾರೆಯರನ್ನು ಭೇಟಿ ಮಾಡುತ್ತಿದ್ದಾರೆ.ವಿನೋದ್ ಪ್ರಭಾಕರ್, ವಸಿಷ್ಠ ಸಿಂಹ ಸೇರಿದಂತೆ ಹಲವು ಸ್ಟಾರ್ ನಟರನ್ನು ಭೇಟಿ ಮಾಡಿ 'ಕ್ರಾಂತಿ'ಗೆ ಬೆಂಬಲ ಕೋರುತ್ತಿದ್ದಾರೆ. ಇಷ್ಟೇ ಅಲ್ಲದೆ, ಮೂವತ್ತು ಜಿಲ್ಲೆಗಳಿಗೂ ತೆರಳಿ ದರ್ಶನ್ 'ಕ್ರಾಂತಿ' ಸಿನಿಮಾವನ್ನು ಸ್ವಯಂ ಪ್ರೇರಿತರಾಗಿ ಪ್ರಚಾರ ಮಾಡುತ್ತಿದ್ದಾರೆ. 'ಕ್ರಾಂತಿ' ಸಿನಿಮಾವನ್ನು ವಿಭಿನ್ನವಾಗಿ ಪ್ರಚಾರ ಮಾಡುತ್ತಿರುವ ವಿಡಿಯೋ ಹಾಗೂ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  'ಕ್ರಾಂತಿ' ಮಾಡುತ್ತಾ ದರ್ಶನ್ ಸಿನಿಮಾ?

  'ಕ್ರಾಂತಿ' ಮಾಡುತ್ತಾ ದರ್ಶನ್ ಸಿನಿಮಾ?

  ದರ್ಶನ್ 'ಕ್ರಾಂತಿ' ಸಿನಿಮಾ ಹಲವು ಕಾರಣಗಳಿಗೆ ಕುತೂಹಲವನ್ನು ಕೆರಳಿಸಿದೆ. ಅಭಿಮಾನಿಗಳು ಡಿಜಿಟಲ್ ಮೀಡಿಯಾದ ಮೂಲಕ ಪ್ರಚಾರಕ್ಕೆ ಇಳಿದಿರುವ ಸಿನಿಮಾ ಗೆಲ್ಲುತ್ತಾ? ಬಾಕ್ಸಾಫೀಸ್‌ ಕೊಳ್ಳೆ ಹೊಡೆಯುತ್ತಾ? ಅನ್ನೋ ಪ್ರಶ್ನೆ ಎದ್ದಿದೆ. ಅಲ್ಲದೆ ಪ್ಯಾನ್ ಇಂಡಿಯಾ ಸಿನಿಮಾಗಳ ಮುಂದೆ ದರ್ಶನ್ ಸಿನಿಮಾ ಕಲೆಕ್ಷನ್ ಹೇಗಿರುತ್ತೆ? ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಸೆಡ್ಡು ಹೊಡೆಯುತ್ತಾ? ಅನ್ನೋ ಪ್ರಶ್ನೆಗೆ ಇನ್ನೊಂದು ವಾರದಲ್ಲಿ ಉತ್ತರ ಸಿಗಲಿದೆ.

  English summary
  Nagaraj, a Darshan fan, met Kannada celebrities with his Kranti Bullet to promote the film, Know More.
  Friday, January 20, 2023, 18:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X