»   » ಪುನೀತ್ ಮುಂದಿನ ಚಿತ್ರದ ಐಟಂ ಸಾಂಗಿನಲ್ಲಿ ಖ್ಯಾತ ನಟಿ

ಪುನೀತ್ ಮುಂದಿನ ಚಿತ್ರದ ಐಟಂ ಸಾಂಗಿನಲ್ಲಿ ಖ್ಯಾತ ನಟಿ

Posted By:
Subscribe to Filmibeat Kannada

ಪುನೀತ್ ರಾಜಕುಮಾರ್, ಎರಿಕಾ ಫೆರ್ನಾಂಡಿಸ್ ಅಭಿನಯದ 'ನಿನ್ನಿಂದಲೇ' ಚಿತ್ರ ಇದೇ ಗುರುವಾರ (ಜ 16) ತೆರೆಗೆ ಬರಲು ಸಿದ್ದವಾಗಿದೆ. ಈ ಚಿತ್ರದ ಶೂಟಿಂಗ್ ಮುಗಿದ ಕೂಡಲೇ ಪುನೀತ್ ತೆಲುಗು ಈಗ ದೂಕುಡು ಕನ್ನಡ ರಿಮೇಕ್ ಚಿತ್ರದ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದಾರೆ.

ಇನ್ನೂ ಹೆಸರಿಡದ ಈ ಚಿತ್ರದ ಬಗ್ಗೆ ಸುದ್ದಿಯೊಂದು ಹೊರಬಿದ್ದಿದೆ. ತಮಿಳು, ತೆಲುಗಿನಲ್ಲಿ ತನ್ನ ಮಾದಕ ಮೈಮಾಟದಿಂದ ಹೆಸರುವಾಸಿಯಾಗಿರುವ ನೀತು ಚಂದ್ರ ಬೆಂಗಳೂರಿಗೆ ಬಂದು ಕುಣಿದು ಹೋಗಿರುವುದು.

ಕೆ ಮಾದೇಶ್ ನಿರ್ದೇಶಿಸುತ್ತಿರುವ ಈ ಚಿತ್ರದ ಐಟಂ ಸಾಂಗ್ ವೊಂದರಲ್ಲಿ ನೀತು ಚಂದ್ರ ಕಾಣಿಸಿ ಕೊಳ್ಳಲಿದ್ದಾರೆ. ಅದಕ್ಕಾಗಿ ಐದು ದಿನ ಕಂಠೀರವ ಸ್ಟುಡಿಯೋದಲ್ಲಿ ನೀತು ಚಂದ್ರ ಕುಣಿದು ಮತ್ತೆ ಮುಂಬೈಗೆ ವಾಪಸ್ ಆಗಿದ್ದಾರೆ.

ತೆಲುಗಿನ ಮೆಗಾಹಿಟ್ ದೂಕುಡು ಚಿತ್ರವನ್ನು ರಿಮೇಕ್ ತಜ್ಞ ಕೆ ಮಾದೇಶ್ ಕನ್ನಡದಲ್ಲಿ ನಿರ್ದೇಶಿಸುತ್ತಿದ್ದಾರೆ. ಮಹೇಶ್ ಬಾಬು ನಾಯಕನಾಗಿ ನಟಿಸಿದ್ದ ಮೂಲ ಚಿತ್ರದಲ್ಲೂ ಐಟಂ ಸಾಂಗು ಇದೆ.

ಅಲ್ಲಿ ಪಾರ್ವತಿ ಮೆಲ್ಟನ್ ಕುಣಿದಿದ್ದ ಐಟಂ ಹಾಡಿಗೆ ಕನ್ನಡದಲ್ಲೀಗ ನೀತು ಚಂದ್ರ ಸೊಂಟ ಬಳುಕಿಸಿ ಹೋಗಿದ್ದಾರೆ.

ಶೀರ್ಷಿಕೆ ಇನ್ನೂ ಫೈನಲ್ ಆಗಿಲ್ಲ

ತ್ರಿಷಾ ನಾಯಕಿಯಾಗಿ ಈ ಚಿತ್ರಕ್ಕೆ ಶೀರ್ಷಿಕೆ ಇನ್ನೂ ಫೈನಲ್ ಆಗಿಲ್ಲ. ರಾಜಕುಮಾರ್ ಎಂದು ಹೆಸರಿಡುವ ಸಾಧ್ಯತೆಯಿದೆ ಎನ್ನುವುದು ಗಾಂಧಿನಗರದ ಸುದ್ದಿ. ಆದರೆ ನಿರ್ದೇಶಕರು ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ಚಿತ್ರದ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದಾರೆ.

ಭೋಜಪುರಿ ಮೂಲದ ನೀತು

ಭೋಜಪುರಿ ಮೂಲದ ನೀತು ಚಂದ್ರ ತೆಲುಗು ಮತ್ತು ತಮಿಳಿನ ಹಲವು ಚಿತ್ರಗಳಲ್ಲಿ ಗ್ಲಾಮರ್ ಪಾತ್ರದಲ್ಲಿ ನಟಿಸಿ ಜನಪ್ರಿಯರಾಗಿದ್ದರು.

ತೆಲುಗಿನ ಡ್ಯಾನ್ಸ್ ಮಾಸ್ಟರ್

ಕಂಠೀರವ ಸ್ಟುಡಿಯೋದಲ್ಲಿ ಹಾಕಲಾಗಿದ್ದ ಬಾರ್ ಬ್ಯಾಕ್ ಗ್ರೌಂಡ್ ಸೆಟ್ಟಿನಲ್ಲಿ, ನಾಗೇಂದ್ರ ಪ್ರಸಾದ್ ಸಾಹಿತ್ಯವಿರುವ ಹಾಡಿಗೆ ನೀತು ಚಂದ್ರ ಡ್ಯಾನ್ಸ್ ಮಾಡಿದ್ದಾರೆ. ತೆಲುಗಿನ ಖ್ಯಾತ ಡ್ಯಾನ್ಸ್ ಮಾಸ್ಟರ್ ಗಣೇಶನ್ ಈ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ.

ತ್ರಿಷಾ ಸ್ಯಾಂಡಲ್ ವುಡ್ಡಿಗೆ ಎಂಟ್ರಿ

ಈ ಚಿತ್ರದ ಶೂಟಿಂಗ್ ಸಂಡೂರು ಭಾಗದಲ್ಲಿ ಇತ್ತೀಚೆಗೆ ನಡೆದಿತ್ತು. ತ್ರಿಷಾ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ದಿಗೆ ಎಂಟ್ರಿಯಾಗಲಿದ್ದಾರೆ. ಈ ಹಿಂದೆ ಕನ್ನಡದ ಹಲವು ನಿರ್ಮಾಪಕರು ತಮ್ಮ ಚಿತ್ರಗಳಿಗೆ ತ್ರಿಷಾ ನಾಯಕಿಯನ್ನಾಗಿ ಆಯ್ಕೆ ಮಾಡಲು ವಿಫಲ ಪ್ರಯತ್ನ ಮಾಡಿದ್ದರು.

ಇದಾದ ನಂತರ ಇನ್ನೆರಡು ಚಿತ್ರಗಳು

ದೂಕುಡು ಕನ್ನಡ ರಿಮೇಕ್ ಚಿತ್ರದ ನಂತರ ಪುನೀತ್, ಮೋಹನ್ ಲಾಲ್ ಅಭಿನಯದ ಮೈತ್ರಿ ಚಿತ್ರ ಶೂಟಿಂಗ್ ಹಂತದಲ್ಲಿದೆ. ಈ ಚಿತ್ರಕ್ಕೆ ಗಿರಿರಾಜ್ ನಿರ್ದೇಶಕರು. ಇದಾದ ನಂತರ ಪವನ್ ಒಡೆಯರ್ ನಿರ್ದೇಶನದ ರಣವಿಕ್ರಮ ಶೂಟಿಂಗ್ ಆರಂಭವಾಗಲಿದೆ.

English summary
Famous Telugu and Tamil actress Neetu Chandra performed item song in Puneeth's next untitled flick. This movie is a remake of Telugu blockbuster Dookudu. 
Please Wait while comments are loading...