For Quick Alerts
  ALLOW NOTIFICATIONS  
  For Daily Alerts

  ವಿಡಿಯೋ ನೋಡಿ: ರಜನಿಯನ್ನೇ ಮೀರಿಸುವ ನೈಜೀರಿಯಾದ ಪ್ರತಿಭೆ.!

  By Harshitha
  |

  ದಕ್ಷಿಣ ಭಾರತದ ಸ್ಟಂಟ್ ಗಾಡ್.. ಮ್ಯಾನರಿಸಂಗೆ ಮಾಸ್ಟರ್.. ಸ್ಟೈಲ್ ಗೆ ಕಿಂಗ್.. ಬಾಕ್ಸ್ ಆಫೀಸ್ ಸರ್ವಾಧಿಕಾರಿ.. ಡೈನಾಮಿಕ್ ಡೈಲಾಗುಗಳ ಒಡೆಯ.. ಗ್ರೇಟ್ ಎಂಟರ್ ಟೇನರ್.... ಇದು ರಜನಿಕಾಂತ್ ಕೇರ್ ಆಫ್ ಅಡ್ರೆಸ್.!

  ನಗುವ ದಾಟಿ... ನಡೆಯುವ ರೀತಿ... ತೆರೆಮೇಲೆ ರಜನಿಕಾಂತ್ ಮಾಡುವ ಮೋಡಿಗೆ ಕ್ಲೀನ್ ಬೌಲ್ಡ್ ಆಗದವರು ಯಾರಿದ್ದಾರೆ ಹೇಳಿ.? ರಜನಿಕಾಂತ್ ರವರ ಕನ್ನಡಕ ಧರಿಸುವ ಸ್ಟೈಲ್ ಗೆ ಮಾರು ಹೋದವರು ಲೆಕ್ಕವಿಲ್ಲದಷ್ಟು ಮಂದಿ.

  ಅಷ್ಟಕ್ಕೂ, ಸೂಪರ್ ಸ್ಟಾರ್ ರಜನಿಕಾಂತ್ ಸ್ಟೈಲ್ ಬಗ್ಗೆ ನಾವೀಗ ಇಷ್ಟೆಲ್ಲ ಮಾತನಾಡಲು ಕಾರಣ ಬಾಲಿವುಡ್ ನಟ ವಿವೇಕ್ ಒಬೆರಾಯ್ ಮಾಡಿರುವ ಒಂದು ಟ್ವೀಟ್.

  ಸಾಮಾಜಿಕ ಜಾಲತಾಣಗಳಲ್ಲಿ ರಜನಿಕಾಂತ್ ಹವಾ ಬಲು ಜೋರು

  ನೈಜೀರಿಯಾದ ಬೀದಿ ಬದಿಯಲ್ಲಿ ಕಡಲೆ ಕಾಯಿ ಮಾರುತ್ತಿರುವ ಓರ್ವ ವ್ಯಕ್ತಿಯ ವಿಡಿಯೋವೊಂದನ್ನ ವಿವೇಕ್ ಒಬೆರಾಯ್ ಟ್ವೀಟ್ ಮಾಡಿದ್ದಾರೆ. ಅಷ್ಟಕ್ಕೂ, ಆ ವಿಡಿಯೋದಲ್ಲಿ ಏನಿದೆ ಅಂತ ಒಮ್ಮೆ ನೀವೇ ನೋಡ್ಕೊಂಡ್ ಬನ್ನಿ...

  ನೈಜೀರಿಯಾದ ಈ ವ್ಯಕ್ತಿ ಕಡಲೆಕಾಯಿಯನ್ನ ಸ್ಟೈಲ್ ಆಗಿ ಕೊಡುವ ರೀತಿಗೆ ವಿವೇಕ್ ಒಬೆರಾಯ್ ಫ್ಲ್ಯಾಟ್ ಆಗಿದ್ದಾರೆ. ''ರಜನಿಕಾಂತ್ ಗಿಂತಲೂ ಈ ವ್ಯಕ್ತಿ ತುಂಬಾ ಫಾಸ್ಟ್ ಆಗಿದ್ದಾನೆ'' ಎಂದು ವಿವೇಕ್ ಒಬೆರಾಯ್ ಬರೆದುಕೊಂಡಿದ್ದಾರೆ.

  ಈ ವಿಡಿಯೋ ನೋಡಿ ರಜನಿಕಾಂತ್ ಅಭಿಮಾನಿಗಳು ಕೂಡ ಖುಷಿ ಪಟ್ಟಿದ್ದಾರೆ. ತೆರೆಮೇಲೆ ರಜನಿಕಾಂತ್ 'ಸ್ಟೈಲ್ ಕಿಂಗ್' ಆಗಿದ್ದರೆ, ನಿಜ ಜೀವನದಲ್ಲಿ ಈ ವ್ಯಕ್ತಿ ತನ್ನ ವೃತ್ತಿಯನ್ನೇ ಸ್ಟೈಲ್ ಆಗಿ ನಿರ್ವಹಿಸುತ್ತಿರುವುದಕ್ಕೆ ಟ್ವಿಟ್ಟರ್ ನಲ್ಲಿ ಶಿಳ್ಳೆ-ಚಪ್ಪಾಳೆಗಳ ಸುರಿಮಳೆ ಆಗುತ್ತಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.

  English summary
  Watch Video: Nigeria's channa seller is faster than Rajinikanth tweets Vivek Oberoi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X