For Quick Alerts
  ALLOW NOTIFICATIONS  
  For Daily Alerts

  ತಾತನಿಗೆ ಜನ್ಮದಿನದ ಶುಭ ಹಾರೈಸಿದ ನಿಖಿಲ್ ಕುಮಾರ್

  |

  ದೇಶದ ಪ್ರಧಾನ ಮಂತ್ರಿ ಸ್ಥಾನವನ್ನು ಅಲಂಕರಿಸಿದ ಏಕೈಕ ಕನ್ನಡಿಗ ಎಚ್ ಡಿ ದೇವೇಗೌಡ ಅವರ ಜನ್ಮದಿನ ಇಂದು (ಮೇ 18). ಅವರ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

  Ramesh Aravind ಕೊರೊನಾಗೆ ಹೊಂದಿಕೊಳ್ಳಲೇ ಬೇಕು ಎಂದು ಅದ್ಬುತವಾಗಿ ವಿವರಿಸಿದರು | Get Adjusted with Corona

  ನಟ, ರಾಜಕಾರಣಿ ನಿಖಿಲ್ ಕುಮಾರ್ ಕೂಡ ತಮ್ಮ ತಾತನ ಜನ್ಮದಿನಕ್ಕೆ ಶುಭಾಶಯ ಕೋರಿದ್ದಾರೆ. ಕನ್ನಡ ನಾಡಿನ ಅಗ್ರಮಾನ್ಯ ನೇತಾರ ಎಂದು ದೇವೇಗೌಡರನ್ನು ಹೊಗಳಿರುವ ನಿಖಿಲ್, ಅವರಿಗೆ ದೀರ್ಘಾಯುಷ್ಯವನ್ನು ದೇವರು ದಯಪಾಲಿಸಲಿ ಎಂದಿದ್ದಾರೆ.

  ಜನರ ಸಹಾಯಕ್ಕೆ ಧಾವಿಸಿದ ನಿಖಿಲ್-ರೇವತಿ ದಂಪತಿ: ಬಡವರಿಗೆ ಆಹಾರದ ಕಿಟ್ ವಿತರಣೆಜನರ ಸಹಾಯಕ್ಕೆ ಧಾವಿಸಿದ ನಿಖಿಲ್-ರೇವತಿ ದಂಪತಿ: ಬಡವರಿಗೆ ಆಹಾರದ ಕಿಟ್ ವಿತರಣೆ

  ದೇವೇಗೌಡ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಶುಭ ಹಾರೈಸಿದ್ದಾರೆ. ದೇಶದ ಅತ್ಯುನ್ನತ, ಅಸಾಮಾನ್ಯ ಹುದ್ದೆಯನ್ನು ಸಾಮಾನ್ಯನೂ ಅಲಂಕರಿಸಬಹುದು ಎಂಬುದು ಭಾರತದ ಪ್ರಜಾಪ್ರಭುತ್ವದ ಸೌಂದರ್ಯ. ಈ ಮಾತನ್ನು ಹಳ್ಳಿಯ ಮಣ್ಣಿಂದ ಬಂದು ರಾಷ್ಟ್ರೀಯ ಪಕ್ಷದ ಇಲ್ಲದೇ ಸಾಧಿಸಿ ತೋರಿಸಿದವರು ದೇವೇಗೌಡರು ಎಂದು ಎಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು. ಮುಂದೆ ಓದಿ...

  ಅಪ್ರತಿಮ ಜನನಾಯಕ

  ಅಪ್ರತಿಮ ಜನನಾಯಕ

  ಈ ದೇಶ ಕಂಡ ಅಪರೂಪದ ಜನನಾಯಕ, ರೈತನಾಯಕ, ಕನ್ನಡ ನಾಡಿನ ಅಗ್ರಮಾನ್ಯ ನೇತಾರ, ಹಿರಿಯ ಮುತ್ಸದ್ಧಿ, ನೀರಾವರಿ ಹರಿಕಾರ ಅಪ್ರತಿಮ ಜನನಾಯಕ, ಮಾಜಿ ಪ್ರಧಾನಮಂತ್ರಿಗಳು, ನನ್ನ ಆದರ್ಶ ಮತ್ತು ನನ್ನ ಪ್ರೀತಿಯ ತಾತ, ಸನ್ಮಾನ್ಯ ಶ್ರೀ ದೇವೇಗೌಡರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಎಂದು ನಿಖಿಲ್ ಹಾರೈಸಿದ್ದಾರೆ.

  ದೀರ್ಘಾಯುಷ್ಯ ದಯಪಾಲಿಸಲಿ

  ದೀರ್ಘಾಯುಷ್ಯ ದಯಪಾಲಿಸಲಿ

  ದೇವೇಗೌಡ ಅವರಿಗೆ ಭಗವಂತ ಉತ್ತಮ ಆರೋಗ್ಯವನ್ನು, ದೀರ್ಘಾಯುಷ್ಯವನ್ನು, ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂಬುದಾಗಿ ನಿಖಿಲ್ ತಾತನ ಹುಟ್ಟುಹಬ್ಬದ ಸಂದರ್ಭದಲ್ಲಿ ಬರೆದಿದ್ದಾರೆ. ತಮ್ಮ ಹಾಗೂ ರೇವತಿ ಮದುವೆ ಸಂದರ್ಭದಲ್ಲಿ ದೇವೇಗೌಡ-ಚನ್ನಪ್ಪ ದಂಪತಿ ಜತೆ ತೆಗೆಸಿಕೊಂಡ ಫೋಟೊವನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

  ನಿಖಿಲ್ ಕುಮಾರ್ ಮದುವೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮುಗಿದಿಲ್ಲ ಚರ್ಚೆ!ನಿಖಿಲ್ ಕುಮಾರ್ ಮದುವೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮುಗಿದಿಲ್ಲ ಚರ್ಚೆ!

  ಆಡಂಬರದ ಅಬ್ಬರವಾಗಬಾರದು

  ಆಡಂಬರದ ಅಬ್ಬರವಾಗಬಾರದು

  ಮಂಡ್ಯದ ರೈತರ ಆಶೋತ್ತರಗಳಿಗೆ ಸ್ಪಂದಿಸಲಿ ಎಂದು ಆಶಿಸುತ್ತೇನೆ. ಮಂಡ್ಯದ ಅಭಿವೃದ್ಧಿ ಎಂಬುದು ನಾಲಿಗೆ ತುದಿಯ ಆಡಂಬರ ಅಬ್ಬರವಾಗದೇ ಹೃದಯಾಂತರಾಳದಿಂದ ಚಿಮ್ಮವ ಜನಕ್ರಿಯೆಯಾಗಲಿ ಎಂದು ಸರ್ಕಾರಕ್ಕೆ ಹೇಳಿದ್ದರು.

  ನಿಖಿಲ್-ರೇವತಿ ಮದುವೆ ಬಗ್ಗೆ ಟೀಕಿಸಿದವರಿಗೆ ಕುಮಾರಸ್ವಾಮಿ ಉತ್ತರನಿಖಿಲ್-ರೇವತಿ ಮದುವೆ ಬಗ್ಗೆ ಟೀಕಿಸಿದವರಿಗೆ ಕುಮಾರಸ್ವಾಮಿ ಉತ್ತರ

  English summary
  Actor, politician Nikhil Kumar wished his grandfather, former PM HD Deve Gowda on his 88th birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X