»   » ಮೂಗುತಿ ಸುಂದರಿಯರ ಸಾಲಿಗೆ ಸೇರಿದ ರಶ್ಮಿಕಾ ಮಂದಣ್ಣ

ಮೂಗುತಿ ಸುಂದರಿಯರ ಸಾಲಿಗೆ ಸೇರಿದ ರಶ್ಮಿಕಾ ಮಂದಣ್ಣ

Posted By:
Subscribe to Filmibeat Kannada

'ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ ಹುಡುಗರ ನಿದ್ದೆ ಕದ್ದ ಚಂದ್ರ ಚಕೋರಿ, ಕೊಡಗಿನ ಬೆಡಗಿ ಸಾನ್ವಿ ಅಲಿಯಾಸ್ ರಶ್ಮಿಕಾ ಮಂದಣ್ಣ. ಈಕೆಯ ಸೌಂದರ್ಯಕ್ಕೆ ಫಿದಾ ಆದ ಮಂದಿ ಮತ್ತೆ ಈಗ ರಶ್ಮಿಕಾ ಮೋಡಿಗೆ ಮರುಳಾಗಿದ್ದಾರೆ. ಯಾಕಂದ್ರೆ, ರಶ್ಮಿಕಾ ಮಂದಣ್ಣ ಈಗ ಮೂಗುತಿ ಸುಂದರಿಯಾಗಿದ್ದಾರೆ.

ನಟಿಮಣಿಯರಿಗೆ ಈಗ ಮೂಗುತಿ ಮೇಲೆ ಸಿಕ್ಕಾಪಟ್ಟೆ ಲವ್ ಆಗಿದೆ. ಸಾಕಷ್ಟು ನಟಿಯರು ತಮಗೆ ಇಷ್ಟ ಆಗಿರುವ ತರಹೇವಾರಿ ಮೂಗುತಿಗಳಲ್ಲಿ ಮಿಂಚುತ್ತಿದ್ದಾರೆ. ಈ ಚೆಲುವೆಯರ ಸಾಲಿಗೆ ಈಗ ಲೇಟೆಸ್ಟ್ ಆಗಿ ಕಿರಿಕ್ ಹುಡುಗಿ ರಶ್ಮಿಕಾ ಎಂಟ್ರಿ ಕೊಟ್ಟಿದ್ದಾರೆ.['ಕಿರಿಕ್ ಜೋಡಿ' ರಕ್ಷಿತ್ ಶೆಟ್ಟಿ-ರಶ್ಮಿಕಾ ಮದುವೆ ಅಂತೆ!]

ಚಿತ್ರರಂಗದ ಮೂಗುತಿ ಸುಂದರಿಯರ ಹೊಸ ಹೊಸ ಲುಕ್ ನೋಡುವ ಕುತೂಹಲ ಇದ್ದರೆ ಹಾಗೆ ಮುಂದೆ ಓದಿ....

ರಶ್ಮಿಕಾ ಹೊಸ ಲುಕ್

ರಶ್ಮಿಕಾ ಮಂದಣ್ಣ ಈಗ ತಮ್ಮ ಸುಂದರ ಮೂಗಿಗೆ ಪುಟ್ಟ ಮೂಗುತಿ ಇಟ್ಟುಕೊಂಡಿದ್ದಾರೆ. ಮೂಗುತಿ ಧರಿಸಿದ ಫೋಟೋವನ್ನು ರಶ್ಮಿಕಾ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಹಾಕಿದ್ಮೇಲೆ, ಅದನ್ನ ಕಂಡು ಸಾವಿರಾರು ಹುಡುಗರು ಕ್ಲೀನ್ ಬೌಲ್ಡ್ ಆಗಿದ್ದಾರೆ.[ಪ್ರಭಾಸ್ ಚಿತ್ರವನ್ನ 'ಕಿರಿಕ್' ಸಾನ್ವಿ ರಿಜೆಕ್ಟ್ ಮಾಡಿದ್ಯಾಕೆ?]

ಮೂಗುತಿ ಸುಂದರಿ ಶ್ರದ್ಧಾ

'ಯೂ ಟರ್ನ್' ಬೆಡಗಿ ಶ್ರದ್ಧಾ ಶ್ರೀನಾಥ್ ಸ್ಯಾಂಡಲ್ ವುಡ್ ಎಂಟ್ರಿ ಕೊಟ್ಟಿದ್ದೇ ಮೂಗುತಿ ಸುಂದರಿಯಾಗಿ. ಮೊದಲ ಸಿನಿಮಾದಲ್ಲೇ ಚಂದದ ಮೂಗುತಿ ತೊಟ್ಟು ಎಲ್ಲರ ಗಮನ ಸೆಳೆದಿದ್ದರು ಶ್ರದ್ಧಾ.[ಕಣ್ಣು ಕುಕ್ಕುತ್ತಿದೆ 'ಚಮಕ್' ಜೋಡಿಯ ಸ್ಟೈಲಿಶ್ ಲುಕ್]

'ಲೂಸಿಯಾ' ಬೆಡಗಿ

ಶೃತಿ ಹರಿಹರನ್ ಸಹ ಆಗಾಗ ಡಿಫರೆಂಟ್ ಆದ ಮೂಗುತಿಯೊಂದಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಶೃತಿಗೂ ಸಹ ಮೂಗುತಿ ಸಖತ್ ಆಗಿ ಸೂಟ್ ಆಗುತ್ತದೆ.[ಬುಲೆಟ್ ಏರಿ ಬಂದ ಮೂಗುತಿ ಸುಂದರಿ ಶ್ರುತಿ ಹರಿಹರನ್]

'ಉರ್ವಿ' ಹುಡುಗಿ

ನಟಿ ಶ್ವೇತ ಪಂಡಿತ್ ಸಹ 'ಉರ್ವಿ' ಸಿನಿಮಾದಲ್ಲಿ ಮೂಗುತಿ ಹಾಕಿಕೊಂಡು ಸಖತ್ತಾಗಿ ಮಿಂಚಿದ್ದರು.

ಕಿರುತೆರೆಯಲ್ಲಿಯೂ ಕ್ರೇಜ್

ಮೂಗುತಿ ಸುಂದರಿಯರು ಬರಿ ಬಿಗ್ ಸ್ಕ್ರೀನ್ ಗೆ ಮಾತ್ರ ಸೀಮಿತವಾಗಿಲ್ಲ. 'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಖ್ಯಾತಿಯ ನಟಿ ಕವಿತಾ ಕಿರುತೆರೆಯ ಮೂಗುತಿ ಸುಂದರಿಯಾಗಿದ್ದಾರೆ.

ದೇವಸೇನಾ ಮೂಗುತಿ

ರಾಣಿ ದೇವಸೇನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅನುಷ್ಕಾ ಶೆಟ್ಟಿ ಮೂಗುತಿ ನೋಡಿ ಅದೆಷ್ಟೋ ಹುಡುಗಿರು ಇಷ್ಟ ಪಟ್ಟಿದ್ದಾರೆ.

'ಚಾರ್ಲಿ' ಚೆಲುವೆ

ಮಲೆಯಾಳಂ ನಲ್ಲಿ ಬಂದ 'ಚಾರ್ಲಿ' ಸಿನಿಮಾದಲ್ಲಿ ಪಾರ್ವತಿ ಮೆನನ್ ಮೂಗುತಿ ಹಾಕಿ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು.

ಬಾಲಿವುಡ್ ಬೆಡಗಿಯರು

ಬಾಲಿವುಡ್ ನಟಿಯರು ಸಹ ಮೂಗುತಿಗೆ ಮಾರು ಹೋಗಿದ್ದಾರೆ.

English summary
Check out the new look of Kannada Actress Rashmika Mandanna with nose ring.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada