For Quick Alerts
  ALLOW NOTIFICATIONS  
  For Daily Alerts

  'ಚಂದನ್ ಶೆಟ್ಟಿ- ನಿವೇದಿತಾರನ್ನು ಕೊರೊನಾ ವೈರಸ್ ಟೆಸ್ಟ್ ಮಾಡಿಸಿ ಒಳಗೆ ಬಿಡಿ'

  |

  ಇತ್ತೀಚೆಗಷ್ಟೇ ಮದುವೆಯಾಗಿ ವಿದೇಶದಲ್ಲಿ ಹನಿಮೂನ್‌ನ ಜಾಲಿ ಮೂಡ್‌ನಲ್ಲಿರುವ ಗಾಯಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರಿಗೆ ಕೊರೊನಾ ವೈರಸ್ ಬಿಸಿ ತಟ್ಟುವ ಸಾಧ್ಯತೆ ಇದೆ. ಫೆ. 26ರಂದು ಮದುವೆಯಾಗಿದ್ದ 'ಬಿಗ್ ಬಾಸ್' ಖ್ಯಾತಿಯ ಈ ಜೋಡಿ, ಮಧುಚಂದ್ರಕ್ಕೆಂದು ಅಮ್‌ಸ್ಟರ್‌ಡಮ್‌ಗೆ ತೆರಳಿದ್ದರು. ಅಲ್ಲಿಂದ ಇಟಲಿ ಪ್ರವಾಸ ಕೈಗೊಂಡಿದ್ದಾರೆ ಎನ್ನಲಾಗಿದೆ.

  NSUI Mysuru President Rafiq has requested DC to do medical test on Chandan & Niveditha

  ಮಧುಚಂದ್ರ ಮುಗಿಸಿ ತವರಿಗೆ ವಾಪಸಾಗಲಿರುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರನ್ನು ಕಡ್ಡಾಯವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಬಳಿಕವಷ್ಟೇ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಲು ಅವಕಾಶ ನೀಡಬೇಕು ಎಂಬ ಆಗ್ರಹ ಕೇಳಿಬಂದಿದೆ.

  ಚಂದನ್-ನಿವೇದಿತಾ ಹನಿಮೂನ್: ಕೊರೊನಾ ಇದೆ ಹುಷಾರು ಎಂದ ನೆಟ್ಟಿಗರು

  ವಿದೇಶದಿಂದ ತಮ್ಮ ಮಧುಚಂದ್ರದ ಫೋಟೊಗಳನ್ನು ಈ ನವದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಅದಕ್ಕೆ ಅನೇಕರು ಕೊರೊನಾ ಇದೆ ಹುಷಾರು ಎಂದು ಎಚ್ಚರಿಕೆಯ ಕಾಮೆಂಟ್ ಹಾಕಿದ್ದರು.

  ವಿಶೇಷ ವಿನಾಯಿತಿ ಕೊಡಬೇಡಿ

  ವಿಶೇಷ ವಿನಾಯಿತಿ ಕೊಡಬೇಡಿ

  ಬಿಗ್ ಬಾಸ್ ರಿಯಾಲಿಟಿ ಷೋದಲ್ಲಿ ಭಾಗವಹಿಸಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಈಗ ಸೆಲೆಬ್ರಿಟಿಗಳಾಗಿದ್ದಾರೆ. ಹಾಗೆಂದು ಅವರಿಗೆ ವಿಶೇಷ ಪ್ರಾತಿನಿಧ್ಯ ಅಥವಾ ವಿನಾಯಿತಿಗಳನ್ನು ಕೊಡಬಾರದು. ಅವರನ್ನು ತೀವ್ರವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಲಾಗಿದೆ.

  ಕಡ್ಡಾಯವಾಗಿ ತಪಾಸಣೆ ಮಾಡಿ

  ಕಡ್ಡಾಯವಾಗಿ ತಪಾಸಣೆ ಮಾಡಿ

  ಮೈಸೂರಿನಲ್ಲಿ ಈವರೆಗೂ ಯಾವುದೇ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ಆದರೆ ಹನಿಮೂನ್ ಮುಗಿಸಿ ಮೈಸೂರಿಗೆ ಮರಳುವ ಈ ದಂಪತಿಗೆ ಕಡ್ಡಾಯವಾಗಿ ತಪಾಸಣೆ ನಡೆಸಬೇಕು. ಅವರು ಸೆಲೆಬ್ರಿಟಿಗಳು ಎಂಬ ಕಾರಣಕ್ಕೆ ತಪಾಸಣೆ ಮಾಡದೆ ನಿರ್ಲಕ್ಷಿಸಬಾರದು ಎಂದು ಆಗ್ರಹಿಸಲಾಗಿದೆ.

  ಹನಿಮೂನ್‌ ಮೂಡ್‌ನಲ್ಲಿ ಚಂದನ್ ಶೆಟ್ಟಿ-ನಿವೇದಿತ: ಯಾವ ದೇಶಕ್ಕೆ ಪಯಣ?

  ಜನಸಾಮಾನ್ಯರಿಗೆ ಅನುಕೂಲವಾಗಲಿ

  ಜನಸಾಮಾನ್ಯರಿಗೆ ಅನುಕೂಲವಾಗಲಿ

  ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು ಎಂದು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ ಅಧ್ಯಕ್ಷ ರಫೀಕ್ ಅಲಿ ಮೈಸೂರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

  ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಿ

  ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಿ

  ಮದುವೆ ನಂತರ ಮಧುಚಂದ್ರಕ್ಕಾಗಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ದಂಪತಿ ಯುರೋಪ್‌ಗೆ ತೆರಳಿದ್ದಾರೆ. ಯುರೋಪ್‌ನ ಅನೇಕ ದೇಶಗಳಲ್ಲಿ ಈಗಾಗಲೇ ಕೊರೊನಾ ವೈರಸ್ ಪ್ರಕರಣಗಳು ಕಂಡುಬಂದಿವೆ. ಇಟಲಿಯಲ್ಲಿ ಶೇ 75ರಷ್ಟು ಭಾಗ ಕೊರೊನಾ ಆವರಿಸಿದೆ. ಹೀಗಾಗಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.

  ಇಟಲಿಯಲ್ಲಿ ಕೊರೊನಾ ವ್ಯಾಪಕ

  ಇಟಲಿಯಲ್ಲಿ ಕೊರೊನಾ ವ್ಯಾಪಕ

  ಇಟಲಿಯಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಭಾರಿ ಆತಂಕ ಸೃಷ್ಟಿಸಿದೆ. ಒಂದೇ ದಿನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಶೇ 21.7ರಷ್ಟು ಹೆಚ್ಚಾಗಿದ್ದು, 1,016 ಮಂದಿ ಮೃತಪಟ್ಟಿದ್ದಾರೆ. ಶುಕ್ರವಾರದ ವೇಳೆಗೆ 15,113 ಪ್ರಕರಣಗಳು ವರದಿಯಾಗಿವೆ.

  ಕೊರೊನಾ ಇದೆ, ವಾಪಸ್ ಬನ್ನಿ

  ಕೊರೊನಾ ಇದೆ, ವಾಪಸ್ ಬನ್ನಿ

  ಮೋಜಿನ ನಗರಿ ಎಂದೇ ಖ್ಯಾತಿ ಪಡೆದಿರುವ ಆಮ್‌ಸ್ಟರ್‌ಡಮ್‌ನಲ್ಲಿ ಚಂದನ್ ಹಾಗೂ ನಿವೇದಿತಾ ಅಡ್ಡಾಡುತ್ತಾ ಚೆಂದನೆಯ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಅದಕ್ಕೆ ಅನೇಕರು ವಿದೇಶದಲ್ಲಿ ಕೊರೊನಾ ಇದೆ ಹುಷಾರು. ಭಾರತದಲ್ಲಿಯೇ ಹನಿಮೂನ್ ಮಾಡಿಕೊಳ್ಳಿ ಎಂದು ತಮಾಷೆ ಮಾಡಿದ್ದರು. ಜನರ ಟ್ರೋಲ್ ಹೆಚ್ಚಾಗುತ್ತಿದ್ದಂತೆಯೇ ಈ ಜೋಡಿ ತಮ್ಮ ಹನಿಮೂನ್ ಚಿತ್ರಗಳನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಿದ್ದಾರೆ.

  English summary
  NSUI Mysuru President Rafiq has requested DC to do medical test on Chandan Shetty and Niveditha Gowda when they back from honeymoon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X