For Quick Alerts
  ALLOW NOTIFICATIONS  
  For Daily Alerts

  ಮತ್ತೆ ಈ ತಪ್ಪನ್ನು ಮಾಡೋದಿಲ್ವಂತೆ ಪ್ರಭಾಸ್: ಎಚ್ಚೆತ್ತುಕೊಂಡ ಡಾರ್ಲಿಂಗ್!

  |

  ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಒಂದರ ಹಿಂದೊಂದು ಫ್ಲಾಪ್ ಸಿನಿಮಾಗಳನ್ನು ನೀಡುತ್ತಲೇ ಇದ್ದಾರೆ. ಈ ಸೋಲು ಪ್ರಭಾಸ್‌ರನ್ನು ಕಂಗೆಡಿಸಿದೆ. 'ಬಾಹುಬಲಿ' ಬಳಿಕ ಗಳಿಸಿದ ಜನಪ್ರಿಯತೆಯನ್ನು ಪ್ರಭಾಸ್ ಸರಿಯಾಗಿ ಬಳಸಿಕೊಂಡಿಲ್ಲ. ಹೀಗಾಗಿ ಸೋಲಿನ ರುಚಿಯನ್ನು ಸಹಿಯಲೇ ಬೇಕಿದೆ.

  ಪ್ರಭಾಸ್ ಈ ಹಿಂದೆ ಮಾಡಿದ ತಪ್ಪನ್ನು ಮತ್ತೆ ಮಾಡದೆ ಇರಲು ನಿರ್ಧಾರಿಸಿದ್ದಾರಂತೆ. ಇಂತಹದ್ದೊಂದು ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. 'ಸಾಹೋ' ಹಾಗೂ 'ರಾಧೆ ಶ್ಯಾಮ್' ಎರಡೂ ಸೂಪರ್ ಫ್ಲಾಪ್‌ಗಳನ್ನು ನೀಡಿದ ಬಳಿಕ ಈ ನಿರ್ಧಾರಕ್ಕೆ ಬಂದಿದ್ದಾರಂತೆ.

  ಪ್ರಭಾಸ್ ಸಿನಿಮಾಗಳು ಒಂದರ ಹಿಂದೊಂದರಂತೆ ಸೋಲುತ್ತಿದ್ದಂತೆ ಡಾರ್ಲಿಂಗ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಪ್ರಭಾಸ್ ಸ್ಕ್ರಿಪ್ಟ್ ಆಯ್ಕೆ ಮಾಡಿಕೊಳ್ಳುವ ಬಗ್ಗೆ ಆಕ್ರೋಶ ಹೊರಹಾಕಿದ್ದರು. ಅಲ್ಲದೆ ಪ್ರಭಾಸ್ ಡಬ್ಬಿಂಗ್ ಮಾಡುವುದರ ಬಗ್ಗೆ ಅಸಮಧಾನ ಹೊರಹಾಕಿದ್ದರು. ಅಷ್ಟಕ್ಕೂ 'ಆದಿಪುರುಷ್' ಸಿನಿಮಾಗಾಗಿ ಪ್ರಭಾಸ್ ತೆಗೆದುಕೊಂಡ ನಿರ್ಧಾರವೇನು?

  ಪ್ರಭಾಸ್ ಡಬ್ಬಿಂಗ್ ಮಾಡಲ್ಲ

  ಪ್ರಭಾಸ್ ಡಬ್ಬಿಂಗ್ ಮಾಡಲ್ಲ

  ಪ್ರಭಾಸ್ ಎರಡು ಸಿನಿಮಾಗಳು ಸೋಲುತ್ತಿದ್ದಂತೆ ಅವರ ಅಭಿಮಾನಿಗಳೇ ಬೇಸರ ವ್ಯಕ್ತಪಡಿಸಿದ್ದರು. ಅತ್ತ ಉತ್ತರ ಭಾರತದಲ್ಲೂ ಪ್ರಭಾಸ್‌ಗೆ ಫ್ಯಾನ್ ಫಾಲೋವಿಂಗ್ ಹೆಚ್ಚಾಗಿದ್ದರು. ಹೀಗಾಗಿ 'ಸಾಹೋ' ಹಾಗೂ 'ರಾಧೆ ಶ್ಯಾಮ್' ಎರಡೂ ಸಿನಿಮಾಗಳಿಗೆ ಸ್ವತ: ಪ್ರಭಾಸ್ ಹಿಂದಿಯಲ್ಲಿ ಡಬ್ ಮಾಡಿದ್ದರು. ಆದರೆ, ಪ್ರಭಾಸ್ ಹಿಂದಿ ಉಚ್ಚಾರಣೆ ಉತ್ತರ ಭಾರತದ ಮಂದಿಗೆ ಹಿಡಿಸಿಲ್ಲ. ಈ ಕಾರಣಕ್ಕೆ ಟೀಕೆಗಳು ವ್ಯಕ್ತವಾಗಿದ್ದವು. ಆದ್ದರಿಂದ 'ಆದಿಪುರುಷ್' ಸಿನಿಮಾಗೆ ಡಾರ್ಲಿಂಗ್ ಡಬ್ಬಿಂಗ್ ಮಾಡೋದಿಲ್ವಂತೆ.

  ಪ್ರಭಾಸ್‌ಗೆ ಡಬ್ ಮಾಡೋದ್ಯಾರು?

  ಪ್ರಭಾಸ್‌ಗೆ ಡಬ್ ಮಾಡೋದ್ಯಾರು?

  ಪ್ರಭಾಸ್ ಸದ್ಯ ಮತ್ತೊಂದು ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದುವೇ 'ಆದಿಪುರುಷ್'. ಪೌರಾಣಿಕ ಸಿನಿಮಾದಲ್ಲಿ ರಾಮನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಟಿ-ಸೀರಿಸ್ ಮತ್ತು ರೆಟ್ರೋಫಿಲಿಸ್ ಪ್ರೈ. ಲಿಮಿಟೆಡ್ ಸೇರಿ ನಿರ್ಮಾಣ ಮಾಡುತ್ತಿದೆ. ಈ ಬಾರಿ ಪ್ರಭಾಸ್ ಹಿಂದಿಯಲ್ಲಿ ಡಬ್ ಮಾಡೋದಿಲ್ಲ ಅಂತ ನಿರ್ಧರಿಸಿರೋದ್ರಿಂದ ಶರದ್ ಕೆಲ್ಕರ್ ಧ್ವನಿ ನೀಡುತ್ತಾರೆ ಅಂತ ಟಾಲಿವುಡ್‌ ಮಾಧ್ಯಮಗಳು ವರದಿ ಮಾಡಿವೆ. ಇದೇ ಶರದ್ ಕೆಲ್ಕರ್ ಬಾಹುಬಲಿಯ ಎರಡೂ ವರ್ಷನ್‌ಗೂ ಧ್ವನಿ ನೀಡಿದ್ದರು. ಅದು ಪ್ರೇಕ್ಷಕರಿಗೂ ಇಷ್ಟ ಆಗಿತ್ತು. ಆದರೆ, ಪ್ರಭಾಸ್ ಡಬ್ ಮಾಡೋದಿಲ್ಲ ಅನ್ನೋದನ್ನು ಇನ್ನೂ ಅಧಿಕೃತವಾಗಿ ಹೇಳಿಲ್ಲ.

  ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ

  ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ

  'ಆದಿಪುರುಷ್' ಭಾರತದ ಚಿತ್ರರಂಗ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ಹೈ ಬಜೆಟ್‌ನಲ್ಲಿ ನಿರ್ಮಾಣಗೊಂಡಿರೋ ಈ ಸಿನಿಮಾ ಮೇಲೆ ನಿರೀಕ್ಷೆ ದೊಡ್ಡದಿದೆ. ಅಲ್ಲದೆ ಈ ಸಿನಿಮಾದಲ್ಲಿ ಕೃತಿ ಸನನ್ ಸೀತೆಯಾಗಿ, ಲಂಕೇಶ್ ಅವತಾರದಲ್ಲಿ ಸೈಫ್ ಅಲಿಖಾನ್ ಕಾಣಿಸಿಕೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ 'ತಾನ್ಹಾಜಿ' ಅಂತಹ ಮೆಗಾ ಹಿಟ್ ಕೊಟ್ಟ ಓಂ ರಾವತ್ ನಿರ್ದೇಶನ ಮಾಡಿದ್ದಾರೆ. ಹೀಗಾಗಿ 'ಆದಿಪುರುಷ್' ಬಗ್ಗೆ ನಿರೀಕ್ಷೆ ದೊಡ್ಡದಿದೆ.

  Recommended Video

  BIGGBOSSOTT | Kiran Yogeshwar | ಸೋನು ಬಗ್ಗೆ ಓಪನ್ ಆಗಿ ಹೇಳ್ತಿನಿ | Oneindia Kannada
  ಕೈ ತುಂಬಾ ದೊಡ್ಡ ಸಿನಿಮಾಗಳಿವೆ

  ಕೈ ತುಂಬಾ ದೊಡ್ಡ ಸಿನಿಮಾಗಳಿವೆ

  ಪ್ರಭಾಸ್ ಕೈಯಲ್ಲಿ 'ಸಲಾರ್' ಸಿನಿಮಾವಿದೆ. ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಲೂಟಿ ಮಾಡುತ್ತೆ ಅನ್ನೋ ನಿರೀಕ್ಷೆಯಿದೆ. ಇನ್ನೊಂದು ಕಡೆ ನಾಗ ಅಶ್ವಿನ್ ನಿರ್ದೇಶನದ 'ಪ್ರಾಜೆಕ್ಟ್ ಕೆ' ಇದೆ. ಇದರಲ್ಲಿ ದೀಪಿಕಾ ಪಡುಕೋಣೆ ಹಾಗೂ ಅಮಿತಾಬ್ ಬಚ್ಚನ್ ನಡಿಸುತ್ತಿದ್ದಾರೆ. ಹಾಗೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಸ್ಪಿರಿಟ್' ಸಿನಿಮಾ, ನಿರ್ದೇಶಕ ಮಾರುತಿ ಜೊತೆನೂ ಸಿನಿಮಾ ಮಾಡುತ್ತಿದ್ದಾರೆ. ಈ ಎಲ್ಲಾ ಸಿನಿಮಾಗಳಿಗೂ ಪ್ರಭಾಸ್ ಹಿಂದಿಯಲ್ಲಿ ಡಬ್ ಮಾಡೋದಿಲ್ವಾ? ಅಥವಾ 'ಆದಿಪುರುಷ್‌'ಗೆ ಮಾತ್ರನಾ? ಅನ್ನೋದು ಕೆಲವು ದಿನಗಳಲ್ಲಿ ಗೊತ್ತಾಗಲಿದೆ.

  English summary
  Pan Indian Super Star Prabhas Will Not Be Dubbing For Adhipurush, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X