twitter
    For Quick Alerts
    ALLOW NOTIFICATIONS  
    For Daily Alerts

    'ವಿಶ್ವರೂಪಂ' ಚಿತ್ರಮಂದಿರಗಳ ಮೇಲೆ ಬಾಂಬ್ ದಾಳಿ

    By Rajendra
    |

    ಕಮಲ್ ಹಾಸನ್ ಅಭಿನಯದ 'ವಿಶ್ವರೂಪಂ' ಚಿತ್ರ ಪ್ರದರ್ಶನ ಕಾಣಬೇಕಿದ್ದ ಎರಡು ಚಿತ್ರಮಂದಿರಗಳ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಘಟನೆ ತಮಿಳುನಾಡಿನಲ್ಲಿ ರಾಮನಾಥಪುರಂ ಜಿಲ್ಲೆಯಲ್ಲಿ ಬುಧವಾರ (ಜ.30) ನಡೆದಿದೆ.

    ತಮಿಳುನಾಡಿನಲ್ಲಿ 'ವಿಶ್ವರೂಪಂ' ಚಿತ್ರ ಬಿಡುಗಡೆ ಬಗ್ಗೆ ಮದ್ರಾಸ್ ಹೈಕೋರ್ಟ್ ಇನ್ನೂ ಅಂತಿಮ ತೀರ್ಪು ನೀಡಿಲ್ಲ. ಈ ತೀರ್ಪಿನ ನಿರೀಕ್ಷೆಯಲ್ಲಿದ್ದ ಕಮಲ್ ಹಾಸನ್ ಹಾಗೂ ಅವರ ಅಭಿಮಾನಿಗಳಿಗೆ ಬಾಂಬ್ ದಾಳಿ ಶಾಕ್ ನೀಡಿದೆ.

    ಈ ಮೂಲಕ 'ವಿಶ್ವರೂಪಂ' ಚಿತ್ರಕ್ಕೆ ಮತ್ತೊಂದು ದೊಡ್ಡ ಗಂಡಾಂತರ ಎದುರಾದಂತಾಗಿದೆ. ತಮಿಳುನಾಡಿನಲ್ಲಿ 'ವಿಶ್ವರೂಪಂ' ಚಿತ್ರ ಬಿಡುಗಡೆ ಮತ್ತಷ್ಟು ಕಗ್ಗಂಟಾಗಿ ಪರಿಣಮಿಸುವ ಸಾಧ್ಯತೆಗಳಿವೆ. ಪೆಟ್ರೋಲ್ ಬಾಂಬ್ ಎಸೆದ ಪರಿಣಾಮ ಯಾವುದೇ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

    ಇದೀಗ ತಾನೆ ಬಂದ ಸುದ್ದಿ...ವಿಶ್ವರೂಪಂ ಚಿತ್ರದ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು ಫೆಬ್ರವರಿ 6ಕ್ಕೆ ತೀರ್ಪನ್ನು ಮುಂದೂಡಿದೆ. ಕಮಲ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ. ಏತನ್ಮಧ್ಯೆ ಕರ್ನಾಟಕ ಹಾಗೂ ಉಳಿದ ಕಡೆಗಳಲ್ಲಿ ವಿಶ್ವರೂಪಂ ಚಿತ್ರ ನಿರಾತಂಕವಾಗಿ ಪ್ರದರ್ಶನ ಕಾಣುತ್ತಿದೆ.

    ಇನ್ನೊಂದು ಪ್ರಮುಖ ಘಟನೆಯಲ್ಲಿ ಕೆಲವು ಮುಸ್ಲಿಂ ಸಂಘಟನೆಗಳು ಕಮಲ್ ಹಾಸನ್ ಅವರನ್ನು ಭೇಟಿ ಮಾಡಿ ಚಿತ್ರದಲ್ಲಿನ ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಮನವಿ ಮಾಡಿದರು. ಪರಿಶೀಲಿಸುವುದಾಗಿ ಕಮಲ್ ಭರವಸೆ ನೀಡಿದ್ದಾರೆ. ಶಾಂತಿ ಕಾಪಾಡುವಂತೆ ಅಭಿಮಾನಿಗಳಲ್ಲಿ ಕಮಲ್ ಮನವಿ ಮಾಡಿಕೊಂಡಿದ್ದಾರೆ. ಒನ್ಇಂಡಿಯಾ ಕನ್ನಡ)

    English summary
    In a dramatic turn of events, as Kamal Haasan waits for the Madras High Court to declare its final verdict on his film ‘Vishwaroopam’, petrol bombs were hurled at two theaters in Ramanathapuram district, Tamil Nadu, that were scheduled to screen the film.
    Wednesday, January 30, 2013, 19:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X