For Quick Alerts
  ALLOW NOTIFICATIONS  
  For Daily Alerts

  ಬಾಲ್ಯದಿಂದ ಇಲ್ಲಿಯವರೆಗೆ ಪುನೀತ್ ಸಿನಿಮಾ ಪಯಣ ಹೇಗಿತ್ತು?: ಒಂದು 'ಪವರ್' ರೌಂಡ್

  |

  ಕ್ಯಾಮೆರಾ ಮುಂದೆ ಲೀಲಾಜಾಲವಾಗಿ ಅಭಿನಯಿಸುತ್ತಿದ್ದ 'ಮಾಸ್ಟರ್ ಲೋಹಿತ್' ಮುಂದೊಂದು ದಿನ 'ಪವರ್ ಸ್ಟಾರ್' ಆಗುತ್ತಾರೆ ಎಂದು ಬಹುಶಃ ಡಾ. ರಾಜ್‌ಕುಮಾರ್ ಕೂಡ ಊಹಿಸಿರಲಿಕ್ಕಿಲ್ಲ. ಆದರೆ ಬಾಲ್ಯದಲ್ಲಿಯೇ ತಮ್ಮ ಅಭಿನಯದ ಛಾಪು ಪ್ರದರ್ಶಿಸಿದ್ದ ಪುನೀತ್ ರಾಜ್‌ಕುಮಾರ್, 'ಅಪ್ಪು' ಆಗಿ ಕನ್ನಡ ಸಿನಿಮಾ ಅಭಿಮಾನಿಗಳಿಗೆ ಅಚ್ಚುಮೆಚ್ಚಿನ ನಟರಾದರು. ಹೆಸರಿನ ಮುಂದೆ 'ರಾಜಕುಮಾರ' ಎಂಬ ಕಿರೀಟವಿದ್ದರೂ ಅಣ್ಣಾವ್ರಂತೆಯೇ ಸರಳತೆಯನ್ನು ಮೈಗೂಡಿಸಿಕೊಂಡರು. ಅವರ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಸಿನಿ ಪಯಣದ ಕಡೆಗೆ ಕಣ್ಣು ಹಾಯಿಸಿದಾಗ ಅಚ್ಚರಿ ಮತ್ತು ಖುಷಿ ಎರಡೂ ಆಗುತ್ತದೆ.

  ಪುನೀತ್ ಹುಟ್ಟುಹಬ್ಬಕ್ಕೆ ಶುಭಕೋರಿದ ಸ್ಟಾರ್ಸ್: ಯಾರ್ಯಾರ ವಿಶ್ ಹೇಗಿದೆ?ಪುನೀತ್ ಹುಟ್ಟುಹಬ್ಬಕ್ಕೆ ಶುಭಕೋರಿದ ಸ್ಟಾರ್ಸ್: ಯಾರ್ಯಾರ ವಿಶ್ ಹೇಗಿದೆ?

  Tejaswi Surya and Vinay Guruji wish to power star | Puneeth Rajkumar | Birthday Wishes

  ಬಾಲನಟನಾಗಿದ್ದರಿಂದ ನಾಯಕನಟನಾಗಿ ಇದುವರೆಗೂ ಪುನೀತ್ ನಟಿಸಿರುವ ಸಿನಿಮಾಗಳ ಸಂಖ್ಯೆ ಸುಮಾರು 44. ಕೆಲವು ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಎರಡು ಸಿನಿಮಾಗಳನ್ನು ಪಿಆರ್‌ಕೆ ಪ್ರೊಡಕ್ಷನ್ಸ್ ಮೂಲಕ ನಿರ್ಮಿಸಿದ್ದಾರೆ. ಇನ್ನು ಎರಡು ಸಿನಿಮಾಗಳು ನಿರ್ಮಾಣವಾಗಲಿವೆ. 90ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಆಕ್ಷನ್, ಮೆಲೋಡ್ರಾಮಾ, ಸಸ್ಪೆನ್ಸ್ ಹೀಗೆ ವಿಭಿನ್ನ ಬಗೆಯ ಸಿನಿಮಾ ಜಾನರ್‌ಗಳಲ್ಲಿ ನಟಿಸಿರುವ ಕೆಲವೇ ಸಮಕಾಲೀನ ನಟರಲ್ಲಿ ಪುನೀತ್ ಒಬ್ಬರು. ಮುಂದೆ ಓದಿ...

  ಬಾಲನಟನಾಗಿ ಪಯಣ

  ಬಾಲನಟನಾಗಿ ಪಯಣ

  ಆರು ತಿಂಗಳ ಮಗುವಾಗಿರುವಾಗಲೇ 1976ರಲ್ಲಿ 'ಪ್ರೇಮದ ಕಾಣಿಕೆ' ಚಿತ್ರದ ಮೂಲಕ ಮೊದಲ ಬಾರಿಗೆ ಸಿನಿಮಾ ಪರದೆ ಮೇಲೆ ಕಾಣಿಸಿಕೊಂಡವರು ಪುನೀತ್. 1977ರಲ್ಲಿ ಸನಾದಿ ಅಪ್ಪಣ್ಣ ಚಿತ್ರದಲ್ಲಿ ಕ್ಯಾಮೆರಾ ಮುಂದೆ ಕಾಣಿಸಿಕೊಂಡಾಗ ಅವರಿಗೆ ಒಂದು ವರ್ಷ. 1978ರಲ್ಲಿ 'ತಾಯಿಗೆ ತಕ್ಕ ಮಗ', 1980ರಲ್ಲಿ ವಸಂತಗೀತ, 1981ರಲ್ಲಿ ಭೂಮಿಗೆ ಬಂದ ಭಗವಂತ ಮತ್ತು ಭಾಗ್ಯವಂತ, 1982ರಲ್ಲಿ ಹೊಸಬೆಳಕು ಮತ್ತು ಚಲಿಸುವ ಮೋಡಗಳು ಚಿತ್ರಗಳಲ್ಲಿ ಪುನೀತ್ ಅಭಿನಯಿಸಿದರು. ಚಲಿಸುವ ಮೋಡಗಳು ಚಿತ್ರಕ್ಕೆ 'ಅತ್ಯುತ್ತಮ ಬಾಲನಟ' ರಾಜ್ಯ ಪ್ರಶಸ್ತಿ ಬಂದಿತ್ತು.

  ಬಾಲನಟ ಪ್ರಶಸ್ತಿಗಳು

  ಬಾಲನಟ ಪ್ರಶಸ್ತಿಗಳು

  1983ರಲ್ಲಿ ಭಕ್ತ ಪ್ತಹ್ಲಾದ ಮತ್ತು ಎರಡು ನಕ್ಷತ್ರಗಳು (ಅತ್ಯುತ್ತಮ ಬಾಲನಟ- ರಾಜ್ಯಪ್ರಶಸ್ತಿ) ಸಿನಿಮಾಗಳಲ್ಲಿ ಮಾಸ್ಟರ್ ಲೋಹಿತ್ ಮಿಂಚಿದರು. 1984ರಲ್ಲಿ 'ಯಾರಿವನು' ಚಿತ್ರದಲ್ಲಿ ನಟಿಸಿದರು. 1985ರಲ್ಲಿ ತೆರೆಕಂಡ 'ಬೆಟ್ಟದ ಹೂವು' ಪುನೀತ್ ಸಿನಿಮಾ ಜರ್ನಿಯಲ್ಲಿ ಮರೆಯಲಾಗದ ಸಿನಿಮಾ ಎನ್ನಬಹುದು. ಅದುವರೆಗಿನ ಸಿನಿಮಾಗಳಲ್ಲಿ ಪುನೀತ್ ರಾಜ್‌ಕುಮಾರ್ ಅವರ ಜತೆಗೇ ಅಭಿನಯಿಸಿದ್ದರು. ಇದು ರಾಜ್‌ಕುಮಾರ್ ನಟಿಸದೆ ಇದ್ದ ಸಿನಿಮಾ. ಈ ಚಿತ್ರಕ್ಕಾಗಿ ಪುನೀತ್ ರಾಷ್ಟ್ರ ಪ್ರಶಸ್ತಿ ಪಡೆದರು. ಅದುವರೆಗೂ 'ಮಾಸ್ಟರ್ ಲೋಹಿತ್' ಆಗಿದ್ದ ಅವರು ಈ ಸಿನಿಮಾದಿಂದ 'ಮಾಸ್ಟರ್ ಪುನೀತ್' ಆದರು.

  ಸಿನಿಮಾದಿಂದ ಮಾಯವಾದ ಪುನೀತ್

  ಸಿನಿಮಾದಿಂದ ಮಾಯವಾದ ಪುನೀತ್

  1988ರಲ್ಲಿ ಅವರು ಶಿವರಾಜ್‌ಕುಮಾರ್ ಜತೆ ಮೊದಲ ಬಾರಿ 'ಶಿವ ಮೆಚ್ಚಿದ ಕಣ್ಣಪ್ಪ'ದಲ್ಲಿ ನಟಿಸಿದರು. ರಾಜ್‌ಕುಮಾರ್ ಅವರೊಂದಿಗೆ ಪುನೀತ್ ನಟಿಸಿದ ಕೊನೆಯ ಸಿನಿಮಾ 1989ರಲ್ಲಿ ತೆರೆ ಕಂಡ 'ಪರಶುರಾಮ್'. ಪುನೀತ್ ಬಾಲನಟರಾಗಿ ನಟಿಸಿದ ಕೊನೆಯ ಸಿನಿಮಾ ಕೂಡ ಇದು. ಇದರ ನಂತರ ಪುನೀತ್ ರಾಜ್‌ಕುಮಾರ್ ಅವರ ಸಿನಿಮಾ ಬದುಕು ಇದ್ದಕ್ಕಿದ್ದಂತೆ ಸ್ಥಗಿತಗೊಂಡಿತು. ಅಲ್ಲಿಂದ ಸುಮಾರು 13 ವರ್ಷ ಪುನೀತ್ ಮತ್ತು ಸಿನಿಮಾ ನಡುವೆ ಸುದೀರ್ಘ ಅಂತರ ಉಂಟಾಯಿತು.

  ಭರ್ಜರಿ ಎಂಟ್ರಿ ಕೊಟ್ಟ 'ಅಪ್ಪು'

  ಭರ್ಜರಿ ಎಂಟ್ರಿ ಕೊಟ್ಟ 'ಅಪ್ಪು'

  2002ರ ಏಪ್ರಿಲ್‌ನಲ್ಲಿ ಪುರಿ ಜಗನ್ನಾಥ್ ನಿರ್ದೇಶನದ 'ಅಪ್ಪು' ಚಿತ್ರದ ಮೂಲಕ ಪುನೀತ್ ಸಿನಿಮಾ ರಂಗಕ್ಕೆ ರೀ ಎಂಟ್ರಿ ನೀಡಿದರು. ಈ ಬಾರಿ ಅವರು ನಾಯಕನಟನಾಗಿ ಕಾಲಿಟ್ಟರು. ಚಿತ್ರರಂಗಕ್ಕೆ ಹೊಸ 'ಪವರ್' ಬಂದಿದ್ದು ಆಗಲೇ. ಅಲ್ಲಿಂದ ಮುಂದೆ ಪುನೀತ್ ಮತ್ತೆ ಹಿಂದಿರುಗಿ ನೋಡುವ ಪ್ರಮೇಯವೇ ಬಂದಿಲ್ಲ. ಸೋಲು ಗೆಲುವುಗಳ ಏರಿಳಿತವಿದ್ದರೂ, ಪುನೀತ್ ಸಿನಿಮಾಗಳಿಗೆ ಜನರ ಮನಸಿನಲ್ಲಿ ವಿಶೇಷ ಸ್ಥಾನವಿದೆ. ಏಕೆಂದರೆ ಅವರ ಚಿತ್ರಗಳು ಕುಟುಂಬ ಸಮೇತ ಕುಳಿತು ನೋಡುವಂತಹವು. ಉತ್ತಮ ಸಾಮಾಜಿಕ ಮೌಲ್ಯ ಹಾಗೂ ಅಂಶಗಳು ಇರುತ್ತವೆ ಎನ್ನುವುದು ಜನರ ಅಭಿಪ್ರಾಯ.

  ಪೃಥ್ವಿ, ಜಾಕಿಯ ಭಿನ್ನ ಹಾದಿ

  ಪೃಥ್ವಿ, ಜಾಕಿಯ ಭಿನ್ನ ಹಾದಿ

  ಗ್ರ್ಯಾಂಡ್ ರೀ ಎಂಟ್ರಿ ನೀಡಿದರೂ ಪುನೀತ್ ವರ್ಷಕ್ಕೆ ಒಂದೇ ಸಿನಿಮಾದಂತೆ ಎಚ್ಚರಿಕೆಯಿಂದ ಆಯ್ಕೆ ಮಾಡಿ ಸಿನಿಮಾಗಳಲ್ಲಿ ನಟಿಸುತ್ತಿದ್ದರು. 'ಅಭಿ', 'ವೀರ ಕನ್ನಡಿಗ', 'ಮೌರ್ಯ', 'ಆಕಾಶ್', 'ನಮ್ಮ ಬಸವ', 'ಅಜಯ್', 'ಅರಸು', 'ಮಿಲನ' ಹೀಗೆ ಸಾಲು ಸಾಲು ಹಿಟ್‌ಗಳು ಸಿಕ್ಕವು. 'ಬಿಂದಾಸ್', 'ವಂಶಿ', 'ರಾಜ್ ದಿ ಶೋ ಮ್ಯಾನ್', 'ರಾಮ್' ಸಿನಿಮಾಗಳದ್ದು ಒಂದು ತೂಕವಾದರೆ, ಪುನೀತ್ ಇಮೇಜ್‌ಅನ್ನು ಬದಲಿಸಿದ್ದು, 2010ರಲ್ಲಿ ತೆರೆ ಕಂಡ ದುನಿಯಾ ಸೂರಿ ನಿರ್ದೇಶನದ 'ಜಾಕಿ' ಚಿತ್ರ. ಅದೇ ಸಮಯದಲ್ಲಿ ಅವರ ವಿಭಿನ್ನ ಇಮೇಜ್‌ನ 'ಪೃಥ್ವಿ' ಕೂಡ ಜನಮನ್ನಣೆ ಗಳಿಸಿತು.

  ಇಮೇಜ್‌ಗಳಿಗಿಂತ ವಿಭಿನ್ನ ಸಿನಿಮಾ

  ಇಮೇಜ್‌ಗಳಿಗಿಂತ ವಿಭಿನ್ನ ಸಿನಿಮಾ

  'ಹುಡುಗರು' ಚಿತ್ರದಲ್ಲಿ ಬಹುತಾರಾಗಣದಲ್ಲಿಯೂ ನಟಿಸಿದರು. 'ಪರಮಾತ್ಮ'ದಂತಹ ವಿಭಿನ್ನ ಪಾತ್ರದಲ್ಲಿ ಸೈ ಎನಿಸಿಕೊಂಡರು. 'ಅಣ್ಣಾ ಬಾಂಡ್', 'ಯಾರೇ ಕೂಗಾಡಲಿ' ಚಿತ್ರಗಳು ಆಕ್ಷನ್ ಮತ್ತು ಸಾಮಾಜಿಕ ಮೌಲ್ಯದ ಎರಡು ಅಂಶಗಳನ್ನು ಬಿಂಬಿಸಿದವು. 'ನಿನ್ನಿಂದಲೇ' ಪುನೀತ್ ಅಭಿಮಾನಿಗಳಿಗೆ ಬೇಸರ ಮೂಡಿಸಿದರೆ, 'ಪವರ್' ಮತ್ತೆ ಹುರುಪು ತಂದುಕೊಟ್ಟಿತು. 'ಮೈತ್ರಿ'ಯಲ್ಲಿ ಮೋಹನ್ ಲಾಲ್ ಜತೆ ನಟಿಸಿದ ಪುನೀತ್, ತಮ್ಮ ಹಳೆಯ ಇಮೇಜ್‌ಗಳನ್ನು ಕಳಚಲು ಸಿದ್ಧವಾಗಿದ್ದನ್ನು ತಿಳಿಸಿದರು.

  ಎರಡು ಸಿನಿಮಾಗಳು ಸಿದ್ಧ

  ಎರಡು ಸಿನಿಮಾಗಳು ಸಿದ್ಧ

  'ರಣವಿಕ್ರಮ', 'ಚಕ್ರವ್ಯೂಹ', 'ದೊಡ್ಮನೆ ಹುಡುಗ', 'ರಾಜಕುಮಾರ', 'ಅಂಜನಿಪುತ್ರ', 'ನಟಸಾರ್ವಭೌಮ' ಸಿನಿಮಾಗಳು ಅವರ ಅಭಿಮಾನಿಗಳನ್ನು ರಂಜಿಸಿದವು. ಇನ್ನು 'ಯುವರತ್ನ' ಮತ್ತು 'ಜೇಮ್ಸ್' ಚಿತ್ರಗಳು ಬಿಡುಗಡೆಗೆ ಸಿದ್ಧವಾಗುತ್ತಿವೆ.

  ಕಿರುತೆರೆ, ಗಾಯನ...

  ಕಿರುತೆರೆ, ಗಾಯನ...

  ಪುನೀತ್ ಸಿನಿಮಾಗಳನ್ನು ನೋಡಿದಾಗ ಅವರು ಹಳೆಯ ಹಾಗೂ ಹೊಸ ನಿರ್ದೇಶಕರೆಲ್ಲರಿಗೂ ಪ್ರಾಮುಖ್ಯ ನೀಡಿರುವುದು ಕಾಣುತ್ತದೆ. ಹಾಗೆಯೇ ರೀಮೇಕ್‌ಗಳಲ್ಲಿಯೂ ನಟಿಸಲು ಹಿಂಜರಿದಿಲ್ಲ. ಆದರೆ ಅವರಿಗೆ ಹೆಚ್ಚು ಗೆಲುವು ನೀಡಿರುವುದು ಸ್ವಮೇಕ್ ಚಿತ್ರಗಳು. ಸಿನಿಮಾಗಳ ಜತೆಗೆ ಕಿರುತೆರೆ ಶೋಗಳಲ್ಲಿಯೂ ಪುನೀತ್ ಜನರಿಗೆ ಹತ್ತಿರವಾಗಿದ್ದಾರೆ. ತಮ್ಮ ಸಿನಿಮಾಗಳಲ್ಲದೆ ಬೇರೆ ನಾಯಕರ ಸಿನಿಮಾಗಳಲ್ಲಿಯೂ ಹಾಡಿದ್ದಾರೆ. ಅವರು ಬಾಲನಟನಾಗಿ ಹಾಡಿದ್ದ 'ಬಾನದಾರಿಯಲ್ಲಿ ಸೂರ್ಯ', 'ಕಾಣದಂತೆ ಮಾಯವಾದನು', 'ಕಣ್ಣಿಗೆ ಕಾಣುವ ದೇವರು' ಎಂದಿಗೂ ಎವರ್‌ಗ್ರೀನ್ ಹಾಡುಗಳೆನಿಸಿವೆ.

  ನಿರ್ಮಾಪಕರಾಗಿ ಹೊಸ ಯೋಜನೆ

  ನಿರ್ಮಾಪಕರಾಗಿ ಹೊಸ ಯೋಜನೆ

  ನಿರ್ಮಾಪಕರಾಗಿ ಇತ್ತೀಚೆಗೆ ಪುನೀತ್ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ತಮ್ಮ ಕುಟುಂಬದ್ದೇ ನಿರ್ಮಾಣ ಸಂಸ್ಥೆ ಇದ್ದರೂ, ಪ್ರಯೋಗಾತ್ಮಕ ಹಾಗೂ ಕಂಟೆಂಟ್ ಆಧಾರಿತ ಸಿನಿಮಾಗಳಿಂದ ಗುರುತಿಸಿಕೊಳ್ಳಲೆಂದೇ 'ಪಿಆರ್‌ಕೆ ಪ್ರೊಡಕ್ಷನ್ಸ್' ಆರಂಭಿಸಿದ್ದಾರೆ. ಈ ಮೂಲಕ ವಿಭಿನ್ನ ಸಿನಿಮಾಗಳನ್ನು ಮಾಡುವ ತಮ್ಮ ಬಹುಕಾಲದ ಕನಸನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಇದರ ಮೊದಲ ಪ್ರಯತ್ನ 'ಕವಲುದಾರಿ' ಅಪಾರ ಮನ್ನಣೆ ಗಳಿಸಿತ್ತು. 'ಮಾಯಾಬಜಾರ್ 2016' ಸಿನಿಮಾ ಕೂಡ ಮೆಚ್ಚುಗೆಗೆ ಪಾತ್ರವಾಗಿದೆ. 'ಲಾ' ಹಾಗೂ ಹೆಸರಿಡದ ಮತ್ತೊಂದು ಚಿತ್ರ ನಿರ್ಮಾಣವಾಗುತ್ತಿದೆ.

  English summary
  On the occasion Puneeth Rajkumar's birthday, here is a look at his cinema journey from childhood days to his own production house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X