»   » ಪವರ್ : ಮೊದಲ ದಿನ 16 ಕೋಟಿ ಗಳಿಕೆ ಹೇಗೆ ಸಾಧ್ಯ?

ಪವರ್ : ಮೊದಲ ದಿನ 16 ಕೋಟಿ ಗಳಿಕೆ ಹೇಗೆ ಸಾಧ್ಯ?

Posted By:
Subscribe to Filmibeat Kannada

ಪುನೀತ್ ರಾಜಕುಮಾರ್ ಅಭಿನಯದ 'ಪವರ್ ***' ಚಿತ್ರದ ಗೆಲುವಿನ ಅಭಿಯಾನ ಎರಡನೇ ದಿನವೂ ನಿರಾಂತಕವಾಗಿ ಸಾಗಿದೆ. ಗಣೇಶ ಹಬ್ಬದ ಸಾಲು ಸಾಲು ರಜೆಯ ಲಾಭವನ್ನು ಚಿತ್ರತಂಡ ಭರಪೂರವಾಗಿ ಪಡೆದುಕೊಳ್ಳುತ್ತಿದೆ.

ಚಿತ್ರಕ್ಕೆ ಎಲ್ಲಡೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದ್ದು, ರಾಜ್ಯಾದ್ಯಂತ ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರ ತುಂಬಿದ ಪ್ರದರ್ಶನ ಕಾಣುತ್ತಿದೆ. ಬಳ್ಳಾರಿ, ಹೊಸಪೇಟೆಯಲ್ಲಿ ಬಿಡುಗಡೆಯಾದ ದಿನ ಮೊದಲ ಶೋ ರಾತ್ರಿ ಎರಡುವರೆಗೆ ಆರಂಭವಾಗಿದ್ದರೆ, ದಾವಣಗೆರೆಯಲ್ಲಿ ಮೊದಲ ಪ್ರದರ್ಶನ ಮುಂಜಾನೆ ಐದು ಗಂಟೆಗೆ ಆರಂಭವಾಗಿತ್ತು.

ಸುಮಾರು 275ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಪವರ್ ಸ್ಟಾರ್ ಚಿತ್ರದ ವಿತರಣೆಯ ರೈಟ್ಸನ್ನು ಪ್ರಸಾದ್ ಮಾಲೀಕತ್ವದ ಸಮರ್ಥ್ ವೆಂಚರ್ಸ್ ಪಡೆದಿದ್ದು, ಅಚ್ಚುಕಟ್ಟಾಗಿ ಚಿತ್ರಮಂದಿರ ಮತ್ತು ಪ್ರದರ್ಶನವನ್ನು ಆಯೋಜಿಸಿದೆ.

ಕನ್ನಡ ಚಿತ್ರರಂಗದ ಇದುವರೆಗಿನ ಇತಿಹಾಸದಲ್ಲಿ ಮೊದಲ ಬಾರಿಗೆ 'ಪವರ್' ಚಿತ್ರ ಮೊದಲ ದಿನ 1200ಕ್ಕೂ ಶೋ ಪ್ರದರ್ಶನ ಕಂಡಿದ್ದು ವಿಶೇಷ. ಹಾಗೆಯೇ, ಮೊದಲ ದಿನ ಚಿತ್ರ ಹದಿನಾರು ಕೋಟಿ ಕಲೆಕ್ಶನ್ ಮಾಡಿದೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ.

ಅಷ್ಟು ಕೋಟಿ ಗಳಿಕೆ ಕಾಣಲು ಸಾಧ್ಯವೇ, ಒಂದು ಲೆಕ್ಕಾಚಾರ ಸ್ಲೈಡಿನಲ್ಲಿ.

ಅಷ್ಟೊಂದು ಗಳಿಕೆ ಸಾಧ್ಯವಿಲ್ಲ

ಪವರ್ ಸ್ಟಾರ್ ಪುನೀತ್ ರಾಜಕುಮಾರ್, ತ್ರಿಷಾ ಕೃಷ್ಣನ್ ಅಭಿನಯದ 'ಪವರ್' ಬಿಡುಗಡೆಯಾದ ಒಟ್ಟು ಚಿತ್ರಮಂದಿರ ಮತ್ತು ಪ್ರದರ್ಶನದ ಲೆಕ್ಕಾಚಾರದ ಮೇಲೆ ಚಿತ್ರ ಅಷ್ಟೊಂದು ಗಳಿಕೆ ಕಾಣಲು ಸಾಧ್ಯವೇ ಇಲ್ಲ.

ಒಟ್ಟು 1200 ಶೋ

ಅಂದಾಜು ಸುಮಾರು 275 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ಪ್ರತೀ ಚಿತ್ರಮಂದಿರದಲ್ಲಿ ಸರಾಸರಿ ನಾಲ್ಕು ಶೋವಿನ ಲೆಕ್ಕಾಚಾರದಲ್ಲಿ ಮೊದಲ ದಿನ 1200 ಶೋ ಪ್ರದರ್ಶನ ಚಿತ್ರ ಪ್ರದರ್ಶನ ಕಂಡಿದೆ.

ಚಿತ್ರ ವೀಕ್ಷಿಸಿದವರ ಸಂಖ್ಯೆ ಐದು ಲಕ್ಷ

ಪ್ರತೀ ಚಿತ್ರಮಂದಿರದಲ್ಲಿ ಸರಾಸರಿ 400 ಸೀಟು ಎಂದು ಲೆಕ್ಕಹಾಕಿಕೊಂಡರೆ ಒಟ್ಟು 1200 ಶೋನಲ್ಲಿ ಚಿತ್ರ ವೀಕ್ಷಿಸಿದವರ ಸಂಖ್ಯೆ ಸುಮಾರು ಐದು ಲಕ್ಷ. ಟಿಕೆಟ್ ಒಂದಕ್ಕೆ ಸರಾಸರಿ ನೂರು ರೂಪಾಯಿ ಇಟ್ಟುಕೊಂಡರೂ ಚಿತ್ರದ ಮೊದಲ ದಿನದ ಗಳಿಗೆ ಐದರಿಂದ ಆರು ಕೋಟಿ ದಾಟುವುದಿಲ್ಲ.

ಜಗ್ಗೇಶ್ ಅಭಿನಂದನೆ ಮತ್ತು ಟ್ವೀಟ್

ಚಿತ್ರ ಮೊದಲ ದಿನ ಹದಿನಾರು ಕೋಟಿ ರೂಪಾಯಿ ಗಳಿಕೆ ಕಂಡಿದೆ. ಅಚ್ಚುಕಟ್ಟಾಗಿ ಚಿತ್ರಮಂದಿರ ಮತ್ತು ಪ್ರದರ್ಶನ ಆಯೋಜಿಸಿದ್ದ ಪ್ರಸಾದ್ ಅವರಿಗೆ, ಪುನೀತ್ ಮತ್ತು ಕನ್ನಡಿಗರಿಗೆ ಅಭಿನಂದನೆಗಳು ಎಂದು ನವರಸನಾಯಕ ಜಗ್ಗೇಶ್ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದರು.

ಚಿತ್ರ ವೀಕ್ಷಿಸಲು ಬಂದವರಿಗೆ ಸಿಡಿ ಫ್ರೀ

ಚಿತ್ರದ ಆಡಿಯೋ ಕೂಡಾ ಭರ್ಜರಿಯಾಗಿ ಬಿಕರಿಯಾಗಿತ್ತು. ಇದಲ್ಲದೇ ಚಿತ್ರ ವೀಕ್ಷಿಸಲು ಬಂದವರಿಗೆ ಲಹರಿ ಸಂಸ್ಥೆಯಿಂದ ಉಚಿತ ಸಿಡಿ ಕೂಡಾ ನೀಡಲಾಗಿತ್ತು. ಇದು ರಾಜ್ಯದ ಆಯ್ದ ಚಿತ್ರಮಂದಿರಗಳಲ್ಲಿ ಮಾತ್ರ.

English summary
Power Star Puneeth Rajkumar, Trisha Krishnan Power movie first day collection.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada