For Quick Alerts
  ALLOW NOTIFICATIONS  
  For Daily Alerts

  'wolf'ಅವತಾರವೆತ್ತಿರೋ ಪ್ರಭುದೇವ: 65 ದಿನ ಭರ್ಜರಿ ಶೂಟಿಂಗ್!

  |

  ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಕನ್ನಡ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದ ಎರಡು ನಿರ್ಮಾಣ ಸಂಸ್ಥೆಗಳ ಸಿನಿಮಾದಲ್ಲಿ ಪ್ರಭುದೇವ ಕಾಣಿಸಿಕೊಳ್ಳುತ್ತಿದ್ದಾರೆ.

  ಸ್ಯಾಂಡಲ್‌ವುಡ್‌ಗೆ ಅದ್ಧೂರಿ ಸಿನಿಮಾಗಳನ್ನು ನೀಡಿರುವ ಸಂದೇಶ್ ಪ್ರೊಡಕ್ಷನ್ಸ್ 'wolf'ಅನ್ನೋ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಕೆಲವು ದಿನಗಳಿಂದ ಈ ಸಿನಿಮಾ ಚಿತ್ರೀ‍ಕರಣದ ಹಂತದಲ್ಲಿ ಇತ್ತು. ಇದೇ ಸಿನಿಮಾದಲ್ಲಿ ಪ್ರಭುದೇವ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  ರಾಷ್ಟ್ರಪ್ರಶಸ್ತಿ ವಿಜೇತ ನಿರ್ಮಾಪಕ ಸಂದೇಶ್ ನಾಗರಾಜ್(ಎಂ.ಎಲ್.ಸಿ) ನಿರ್ಮಿಸಿರುವ ಈ ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ನಡೆದಿದೆ. ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ಅದ್ದೂರಿಯಾಗಿ ನಿರ್ಮಾಣವಾಗಿದೆ. ಪಾಂಡಿಚೇರಿ, ಚೆನೈ, ಬೆಂಗಳೂರು, ಅಂಡಮಾನ್, ನಿಕೋಬಾರ್ ಹಲವು ಕಡೆಗಳಲ್ಲಿ ಈ ಸಿನಿಮಾ ಸುಮಾರು 65 ದಿನಗಳ ಕಾಲ ಶೂಟಿಂಗ್ ಮಾಡಿದ್ದಾರೆ.

  'wolf' ಸಿನಿಮಾ ವಿಭಿನ್ನ ಕಥೆಯನ್ನು ಹೊಂದಿರುವ ಸಿನಿಮಾ. ವಿನು ವೆಂಕಟೇಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರೋ ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ.

  Prabhudeva Starrer Sandesh Productions Wolf Movie Shooting Completed

  ಅಂದ್ಹಾಗೆ 'wolf' ಸಿನಿಮಾದಲ್ಲಿ ಪ್ರಭುದೇವ, ಅಂಜು ಕುರಿಯನ್, ಲಕ್ಷ್ಮೀ ರೈ, ಅನಸೂಯ ಮುಂತಾದವರು ದೊಡ್ಡ ದೊಡ್ಡ ತಾರಾಬಳಗವೇ ಸೇರಿಕೊಂಡಿದೆ. ಅಂಬರೀಶ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಈ ಚಿತ್ರಕ್ಕೆ ಅರುಳ್ ವಿನ್ಸೆಂಟ್ ಕ್ಯಾಮರಾವಿದೆ.

  ಲಾರೆನ್ಸ್ ಕಿಶೋರ್ ಸಂಕಲನ, ಪ್ರದೀಪ್ ದಿನೇಶ್ ಸಾಹಸ ನಿರ್ದೇಶನ, ಮಣಿ ಮೌಳಿ ಕಲಾ ನಿರ್ದೇಶನ ಹಾಗೂ ಗಣೇಶ್, ಶ್ರೀಧರ್, ಭೂಪತಿ ರಾಜ ಕೊರಿಯೋಗ್ರಫಿ ಮಾಡಿದ್ದಾರೆ. ಪ್ರಸಾದ್ ನಿರ್ಮಾಣ ಮೇಲ್ವಿಚಾರಣೆ ಹಾಗೂ ಶಂಕರ್ ಲಿಂಗಂ, ಮೈಸೂರು ಸುರೇಶ್ ನಿರ್ಮಾಣ ನಿರ್ವಹಣೆ 'wolf' ನಿರ್ಮಾಣ ನಿರ್ವಾಹಕರಾಗಿದ್ದಾರೆ.

  English summary
  Prabhudeva Starrer Sandesh Productions Wolf Movie Shooting Completed
  Sunday, December 25, 2022, 23:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X