»   » 'ಠಾಕ್ರೆ'ಯ ಖಡಕ್‌ ಪಾತ್ರಕ್ಕೆ ಪ್ರಜ್ವಲ್‌ ವರ್ಕ್‌ ಔಟ್ ಜೋರು..

'ಠಾಕ್ರೆ'ಯ ಖಡಕ್‌ ಪಾತ್ರಕ್ಕೆ ಪ್ರಜ್ವಲ್‌ ವರ್ಕ್‌ ಔಟ್ ಜೋರು..

Posted By:
Subscribe to Filmibeat Kannada

ಇಂಗ್ಲೀಷ್ ದುರಂತ ನಾಟಕಗಳನ್ನು ಕನ್ನಡದಲ್ಲಿ ಸಿನಿಮಾ ಗಳಾಗಿ ಮಾಡೋದು ತುಂಬಾನೆ ವಿರಳ. ಈಗ ಇಂತಹ ಸಾಹಸಕ್ಕೆ 'ರಾಜಾಹುಲಿ', 'ಜಾನ್‌ ಜಾನಿ ಜನಾರ್ದನ್' ಚಿತ್ರದ ನಿರ್ದೇಶಕ ಗುರು ದೇಶಪಾಂಡೆ ಕೈಹಾಕಿದ್ದಾರೆ.[ಮಾಫಿಯಾ ಲೋಕದಲ್ಲಿ ಪತ್ತೆಯಾದ ಪ್ರಜ್ವಲ್ ದೇವರಾಜ್.!]

ಗುರು ದೇಶಪಾಂಡೆ ರವರು ವಿಲಿಯಂ ಷೇಕ್ಸ್ ಪಿಯರ್ ನ ಪ್ರಖ್ಯಾತ ದುರಂತ ನಾಟಕ 'ಮ್ಯಾಕ್‌ಬೆತ್' ಆಧರಿತವಾದ ಚಿತ್ರವೊಂದಕ್ಕೆ ಈಗ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಚಿತ್ರದಲ್ಲಿ ಖಡಕ್‌ ಲುಕ್‌ ನಲ್ಲಿ ನಾಯಕ ನಟನಾಗಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್‌ ಅಭಿನಯಿಸುತ್ತಿದ್ದು, ಚಿತ್ರದ ಮೋಶನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ.

ಠಾಕ್ರೆ ಪಾತ್ರಕ್ಕೆ ಪ್ರಜ್ವಲ್ ಭರ್ಜರಿ ವರ್ಕ್ ಔಟ್

ಅಂದಹಾಗೆ ಇನ್ನು ಬಿಡುಗಡೆ ಆಗದ 'ಚೌಕಾ' ಚಿತ್ರದಲ್ಲಿ ಮೊಹಮ್ಮದ್ ಅನ್ವರ್ ಆಗಿ ದೀಪಾ ಸನ್ನಿದಿ ಜೊತೆ ಡ್ಯುಯೆಟ್ ಆಡಿದ್ದಾರೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್‌ ದೇವರಾಜ್. ಇದರ ಬೆನ್ನಲ್ಲೇ 'ಠಾಕ್ರೆ' ಚಿತ್ರದ 'ಮ್ಯಾಕ್‌ಬೆತ್ ಪಾತ್ರಕ್ಕೆ ಭರ್ಜರಿ ವರ್ಕ್‌ ಔಟ್ ಮಾಡಿ ಬೆವರು ಇಳಿಸುತ್ತಿದ್ದಾರೆ.['ಚೌಕ'ದ ಮೊಹಮ್ಮದ್ ಅನ್ವರ್ ಗೆ 'ಬೇಗಂ' ಆಗ್ತಾರಾ ದೀಪಾ ಸನ್ನಿಧಿ?]

ಪ್ರಜ್ವಲ್‌ ಬದುಕಿನ ದೊಡ್ಡ ಸಿನಿಮಾ 'ಠಾಕ್ರೆ'

ಅಂದಹಾಗೆ ಈವರೆಗೆ ಯಾವುದೇ ಸಿನಿಮಾಗಳಿಗೂ ತೀರ ವರ್ಕ್ ಔಟ್ ಮಾಡಿ ಖಡಕ್‌, ಖದರ್ ಆಗಿ ಕಾಣಿಸಿಕೊಳ್ಳದ ಪ್ರಜ್ವಲ್, ಇದೀಗ 'ಠಾಕ್ರೆ' ಚಿತ್ರಕ್ಕಾಗಿ ಸಖತ್ತಾಗಿ ದೇಹವನ್ನು ದಂಡಿಸುತ್ತಿದ್ದಾರೆ. ಅಲ್ಲದೇ ಇದು ಪ್ರಜ್ವಲ್‌ ಸಿನಿ ಪಯಣದ ಬಹುದೊಡ್ಡ ಸಿನಿಮಾ ಎಂದು ಸ್ವತಃ ನಿರ್ದೇಶಕ ಗುರು ದೇಶಪಾಂಡೆ ಹೇಳಿದ್ದಾರೆ.

ಮಾಫಿಯ ಸಬ್ಜೆಕ್ಟ್ ಹೊಂದಿದೆ 'ಠಾಕ್ರೆ'

ಪ್ರಾರಂಭದಲ್ಲಿ ಭೂಗತ ಲೋಕದ ಬಗೆಗಿನ 'ಗೆಳೆಯ' ಮತ್ತು 'ಜೀವ' ಚಿತ್ರಗಳಿಂದ ಪ್ರಜ್ವಲ್‌ ಹೆಸರು ಗಳಿಸಿದ್ದರು. ಈಗ ಅವರು ನಟಿಸುತ್ತಿರುವ 'ಠಾಕ್ರೆ' ಚಿತ್ರವು ಸಹ ಮಾಫಿಯ ವಿಷಯ ಬಗ್ಗೆಯೇ ಕಥೆ ಹೊಂದಿದೆ ಎಂದಿದ್ದಾರೆ. ಆದರೆ ಬಿಡುಗಡೆ ಆಗಿರುವ 'ಠಾಕ್ರೆ' ಫಸ್ಟ್‌ ಲುಕ್ ವಿಡಿಯೋದಲ್ಲಿ ಮ್ಯಾಕ್‌ಬೆತ್ ಅಳವಡಿಕೆ ಎಂದು ತೋರಿಸಿರುವುದು ಮತ್ತು ಮಾಫಿಯ ಕುರಿತ ಕಥೆ ಹೊಂದಿದೆ ಎಂದಿರುವುದು ಗೊಂದಲ ಸೃಷ್ಟಿಸಿದೆ.

ಬಾಲಿವುಡ್ 'ಸರ್ಕಾರ್' ಚಿತ್ರಕ್ಕೆ ಹತ್ತಿರ

'ಠಾಕ್ರೆ' ಚಿತ್ರ ಬಾಲಿವುಡ್ ನ 'ಸರ್ಕಾರ್' ಚಿತ್ರಕ್ಕೆ ಹೋಲುತ್ತದೆ ಎಂದು ಹೇಳಲಾಗುತ್ತಿದೆ. 'ಠಾಕ್ರೆ' ಸಿನಿಮಾಗೆ ಗುರು ದೇಶಪಾಂಡೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಎಂ ಎನ್‌ ಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಶ್ರೀಧರ್ ಸಂಬ್ರಂ ಸಂಗೀತ ನಿರ್ದೇಶನ ಇದೆ.

ವಿಶೇಷ ಪಾತ್ರದಲ್ಲಿ ವಿ. ರವಿಚಂದ್ರನ್‌

'ಠಾಕ್ರೆ' ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ವಿ.ರವಿಚಂದ್ರನ್‌ ಸಹ ಕಾಣಿಸಿಕೊಳ್ಳುತ್ತಾರಂತೆ. ಇದೇ ಮೊದಲ ಬಾರಿಗೆ 'ಠಾಕ್ರೆ' ಸಿನಿಮಾದ ಮೂಲಕ ಪ್ರಜ್ವಲ್ ದೇವರಾಜ್‌ ಮತ್ತು ವಿ.ರವಿಚಂದ್ರನ್‌ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ವಿಡಿಯೋ ನೋಡಿ

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್‌ 'ಠಾಕ್ರೆ' ಚಿತ್ರಕ್ಕಾಗಿ ಸಜ್ಜಾಗುತ್ತಿರುವ ಕರ್ಟನ್ ರೈಸರ್ ವಿಡಿಯೋ ನೋಡಿ.

English summary
Prajwal Devraj Staring 'Thackeray' Kannada Movie First Look Released.Crazy Star V Ravichandran and Dynamic Prince Prajwal Devaraj will be playing the lead roles in this film, that is to be directed by Guru Deshpande of Raja Huli fame. This is the first time, the two stars are coming together.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada