twitter
    For Quick Alerts
    ALLOW NOTIFICATIONS  
    For Daily Alerts

    ದಿನನಿತ್ಯ 250 ದಿನಗೂಲಿ ಕಾರ್ಮಿಕರಿಗೆ ಊಟ ಹಾಕುತ್ತಿದ್ದಾರೆ ಪ್ರಕಾಶ್ ರೈ

    |

    ಲಾಕ್‌ಡೌನ್‌ನಿಂದ ದಿನನಿತ್ಯದ ಊಟಕ್ಕೂ ಪರದಾಡುವ ಸ್ಥಿತಿಗೆ ತಲುಪಿರುವ ಜನರಿಗೆ ನೆರವಾಗಲು ಸೆಲೆಬ್ರಿಟಿಗಳು ಮತ್ತು ಅವರ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಸಹಾಯ ಹಸ್ತ ಚಾಚುತ್ತಿದ್ದಾರೆ. ನಟ ಪ್ರಕಾಶ್ ರೈ ತಮ್ಮ 'ಪ್ರಕಾಶ್ ರೈ ಫೌಂಡೇಷನ್' ಮೂಲಕ ಹದಿದವರಿಗೆ ಊಟ ಹಾಕುವ ಕಾರ್ಯ ಮಾಡುತ್ತಿದ್ದಾರೆ.

    ನಟ ಪುನೀತ್ ರಾಜ್‌ಕುಮಾರ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂ ನೀಡಿದ್ದಾರೆ. ಸುದೀಪ್, ದರ್ಶನ್ ಅಭಿಮಾನಿಗಳು ಹಸಿದ ಜನರಿಗೆ ಊಟ ಹಾಕುವ ಕಾರ್ಯ ಮಾಡುತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ ಸುಮಾರು 3,000 ಸಿನಿಮಾ ಕಾರ್ಮಿಕರಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಜಗ್ಗೇಶ್, ಶಿವರಾಜ್‌ಕುಮಾರ್, ಯಶ್ ಮುಂತಾದ ಕಲಾವಿದರು ಕೂಡ ಜನರಿಗೆ ನೆರವಾಗುತ್ತಿದ್ದಾರೆ. ಅತ್ತ ಕೋವಲಂನಲ್ಲಿ ತಮ್ಮ ಫಾರ್ಮ್ ಹೌಸ್‌ನಲ್ಲಿರುವ ಪ್ರಕಾಶ್ ರೈ, ಸಂಕಷ್ಟದಲ್ಲಿರುವ ದಿನಗೂಲಿ ಕಾರ್ಮಿಕರಿಗೆ ಆಹಾರ ನೀಡುತ್ತಿದ್ದಾರೆ.

    ಕೊರೊನಾ: ಸಂಕಷ್ಟದ ವೇಳೆ ಜನಮೆಚ್ಚುವ ಕೆಲಸ ಮಾಡಿದ ನಟ ಪ್ರಕಾಶ್ ರೈ ಕೊರೊನಾ: ಸಂಕಷ್ಟದ ವೇಳೆ ಜನಮೆಚ್ಚುವ ಕೆಲಸ ಮಾಡಿದ ನಟ ಪ್ರಕಾಶ್ ರೈ

    ದಿನಗೂಲಿ ಕಾರ್ಮಿಕರಿಗೆ ನಿತ್ಯ ಊಟ

    ದಿನಗೂಲಿ ಕಾರ್ಮಿಕರಿಗೆ ನಿತ್ಯ ಊಟ

    'ಏನಾದರೂ ಮಾಡೋಣ. ಕೋವಲಂನಲ್ಲಿರುವ 250 ಮಂದಿ ನಿರಾಶ್ರಿತ, ದಿನಗೂಲಿ ಕಾರ್ಮಿಕರಿಗೆ ಪ್ರತಿ ದಿನವೂ ಆಹಾರ ನೀಡುತ್ತಿದ್ದೇನೆ' ಎಂದು ನಟ ಪ್ರಕಾಶ್ ರೈ ತಮ್ಮ ಫಾರ್ಮ್ ಹೌಸ್‌ನಲ್ಲಿ ಸಂಗ್ರಹಿಸಿರುವ ಅಕ್ಕಿ ಮತ್ತು ಧಾನ್ಯದ ಮೂಟೆಗಳ ಚಿತ್ರವನ್ನು ಹಂಚಿಕೊಂಡಿದ್ದಾರೆ.

    ಇದು ನಮ್ಮ ಜವಾಬ್ದಾರಿ ಕೂಡ

    'ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಅದು ನಮ್ಮ ಹೊಣೆಗಾರಿಕೆ ಕೂಡ. ಮಾನವೀಯತೆಯನ್ನು ಎಲ್ಲರೂ ಸೆಲೆಬ್ರೇಟ್ ಮಾಡೋಣ. ದಯವಿಟ್ಟು ನಿಮ್ಮ ಸುತ್ತಲಿನ ಒಂದು ಕುಟುಂಬಕ್ಕೆ ಸಹಾಯ ಮಾಡಿ' ಎಂದು ಪ್ರಕಾಶ್ ರೈ ಮನವಿ ಮಾಡಿದ್ದಾರೆ.

    ಒಗ್ಗಟ್ಟಿನ ಹೋರಾಟ ಮಾಡೋಣ

    ತಮ್ಮ ಮನೆಯಲ್ಲಿ ಆಹಾರ ತಯಾರಿಸಿ ಪ್ಯಾಕ್ ಮಾಡಿ ನಿರಾಶ್ರಿತರಿಗೆ ಹಂಚುವ ಫೋಟೊಗಳನ್ನು ಕೂಡ ಹಂಚಿಕೊಂಡಿದ್ದಾರೆ. ನಾವು ಬದುಕಿಗೆ ವಾಪಸ್ ಕೊಡೋಣ. ಈ ಹೋರಾಟ ಒಗ್ಗಟ್ಟಿನಿಂದ ಇರಲಿ ಎಂದು ಅವರು ತಿಳಿಸಿದ್ದಾರೆ.

    ಮುಂಗಡವಾಗಿ ವೇತನ

    ಇದಕ್ಕೂ ಮುನ್ನ ಪ್ರಕಾಶ್ ರೈ ತಮ್ಮ ಫಾರ್ಮ್, ಮನೆ, ಫಿಲಂ ಪ್ರೊಡಕ್ಷನ್, ಫೌಂಡೇಷನ್ ಮತ್ತು ಖಾಸಗಿ ಸಿಬ್ಬಂದಿಗೆ ಮೇ ತಿಂಗಳವರೆಗಿನ ಸಂಬಳವನ್ನು ಮುಂಗಡವಾಗಿಯೇ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನನ್ನಿಂದ ಏನು ಸಾಧ್ಯವೋ ಅದನ್ನು ಮಾಡುತ್ತೇನೆ. ನಾವು ಇನ್ನೊಬ್ಬರಿಗಾಗಿ ನಿಲ್ಲುವ ಸಮಯವಿದು ಎಂದು ಹೇಳಿದ್ದರು.

    English summary
    Actor Prakash Raj has providing food for 250 homless daily wage workers at Kovalam daily.
    Wednesday, April 1, 2020, 15:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X