For Quick Alerts
  ALLOW NOTIFICATIONS  
  For Daily Alerts

  ಚಿತ್ರೀಕರಣ ವೇಳೆ ಪ್ರಕಾಶ್ ರಾಜ್‌ಗೆ ಪೆಟ್ಟು: ಹೈದರಾಬಾದ್‌ನಲ್ಲಿ ಶಸ್ತ್ರ ಚಿಕಿತ್ಸೆ

  |

  ಚಿತ್ರೀಕರಣ ವೇಳೆ ಬಹುಭಾಷೆ ನಟ ಪ್ರಕಾಶ್ ರಾಜ್‌ ಗಾಯಗೊಂಡಿದ್ದಾರೆ ಎಂಬ ಸುದ್ದಿ ವರದಿಯಾಗಿದೆ. ಚೆನ್ನೈನಲ್ಲಿ ಸಿನಿಮಾವೊಂದರ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದ ಪ್ರಕಾಶ್‌ ರಾಜ್‌ ಕೆಳಗೆ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ನಂತರ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಲಾಗಿದೆ.

  ಪ್ರಕಾಶ್‌ ರಾಜ್‌ಗೆ ಗಾಯ ಹೇಗಾಯಿತು ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನಟನ ಆಪ್ತರು ಮತ್ತು ಅಭಿಮಾನಿಗಳು ಆತಂಕಕ್ಕೆ ಒಳಗಾದರು. ನಂತರ ಟ್ವಿಟ್ಟರ್ ಮೂಲಕ ಸ್ಪಷ್ಟನೆ ಕೊಟ್ಟಿರುವ ಪ್ರಕಾಶ್ ರಾಜ್, ''ಆತಂಕ ಪಡುವ ಅಗತ್ಯವಿಲ್ಲ, ಸಣ್ಣ ಮುರಿತ. ನನ್ನ ಸ್ನೇಹಿತ ಡಾ ಗುರುವರೆಡ್ಡಿ ಜೊತೆ ಹೈದರಾಬಾದ್‌ಗೆ ತೆರಳುತ್ತಿದ್ದೇನೆ. ಅಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತೇನೆ. ನಾನು ಉತ್ತಮವಾಗಿದ್ದೇನೆ'' ಎಂದು ಪೋಸ್ಟ್ ಹಾಕಿದ್ದಾರೆ.

  'ನಮ್ಮವರಲ್ಲ' ಎಂದ ಟಾಲಿವುಡ್ ಮಂದಿಗೆ ಪ್ರಕಾಶ್ ರಾಜ್ ತಿರುಗೇಟು'ನಮ್ಮವರಲ್ಲ' ಎಂದ ಟಾಲಿವುಡ್ ಮಂದಿಗೆ ಪ್ರಕಾಶ್ ರಾಜ್ ತಿರುಗೇಟು

  ತೆಲುಗು ಫಿಲ್ಮಿಬೀಟ್ ವರದಿ ಮಾಡಿರುವಂತೆ ತಮಿಳು ನಟ ಧನುಶ್ ನಾಯಕನಾಗಿ ನಟಿಸುತ್ತಿರುವ 44ನೇ ಚಿತ್ರದ ಶೂಟಿಂಗ್ ವೇಳೆ ಕಾಲು ಜಾರಿ ಕೆಳಗೆ ಬಿದ್ದ ಪರಿಣಾಮ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ. ಪ್ರಸ್ತುತ ಪ್ರಕಾಶ್ ರಾಜ್, ಹೈದರಾಬಾದ್‌ಗೆ ಪ್ರಯಾಣ ಮಾಡಿದ್ದಾರೆ ಎಂದು ಖುದ್ದು ಅವರೇ ಮಾಹಿತಿ ನೀಡಿದ್ದಾರೆ.

  ಇತ್ತೀಚಿಗಷ್ಟೆ (ಆಗಸ್ಟ್ 5) ಧನುಶ್ ಅವರ ಹೊಸ ಸಿನಿಮಾ ಸೆಟ್ಟೇರಿತ್ತು. ಈ ವೇಳೆ ಧನುಶ್, ನಟಿ ನಿತ್ಯಾ ಮೆನನ್, ಪ್ರಕಾಶ್ ರಾಜ್, ಭಾರತಿರಾಜ ಭಾಗವಹಿಸಿದ್ದರು. ಮಿಥುನ್ ಆರ್ ಜವಾಹರ್ ಈ ಚಿತ್ರ ನಿರ್ದೇಶಿಸುತ್ತಿದ್ದು, ಔಟ್ ಅಂಡ್ ಔಟ್ ಆಕ್ಷನ್ ಸಿನಿಮಾ ಎಂದು ಹೇಳಲಾಗಿದೆ. ಪ್ರಕಾಶ್ ರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿತ್ಯಾ ಮೆನನ್, ರಾಶಿ ಖನ್ನಾ, ಪ್ರಿಯಾ ಭವಾನಿ ಶಂಕರ್ ಸಹ ಈ ಚಿತ್ರದಲ್ಲಿ ನಟಿಸಲಿದ್ದಾರೆ. ಸನ್ ಪಿಕ್ಚರ್ಸ್ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದೆ.

  'ಮಾ' ಚುನಾವಣೆಗೆ ಟ್ವಿಸ್ಟ್: ಈ ಸುದ್ದಿ ಪಕ್ಕಾ ಆದ್ರೆ ಸ್ಪರ್ಧೆ ಮತ್ತಷ್ಟು ಕಠಿಣ 'ಮಾ' ಚುನಾವಣೆಗೆ ಟ್ವಿಸ್ಟ್: ಈ ಸುದ್ದಿ ಪಕ್ಕಾ ಆದ್ರೆ ಸ್ಪರ್ಧೆ ಮತ್ತಷ್ಟು ಕಠಿಣ

  ಪ್ರಕಾಶ್‌ ರಾಜ್‌ಗೆ ಪೆಟ್ಟು ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ನಿರ್ಮಾಪಕ-ನಟ ಭಂಡ್ಲಾ ಗಣೇಶ್, ನಿರ್ದೇಶಕ ನವೀನ್, ನಟ ನಿತಿನ್ ಸತ್ಯ ಸೇರಿದಂತೆ ಹಲವರು ಬೇಗ ಗುಣಮುಖರಾಗಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಕೋರಿದರು.

  Prakash Raj met with an accident at Dhanushs Thiruchitrambalam shoot

  'ಮಾ' ಚುನಾವಣೆಯಲ್ಲಿ ಸ್ಪರ್ಧೆ

  ತೆಲುಗು ಸಿನಿಮಾ ಕಲಾವಿದರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ ರಾಜ್ ಸ್ಪರ್ಧೆ ಮಾಡಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಎಲೆಕ್ಷನ್ ನಡೆಯಲಿದೆ. ಚುನಾವಣೆಗೆ ಸಂಬಂಧಿಸಿದಂತೆ ಪ್ರಕಾಶ್ ರಾಜ್ ಮತ್ತು ತಂಡ ತಯಾರಿ ನಡೆಸಿದ್ದು, ಸುದ್ದಿಗೋಷ್ಠಿ ಮಾಡಿ ಮಾಹಿತಿ ಹಂಚಿಕೊಂಡಿದ್ದರು. ರಾಜ್ ಎದುರು ಮಂಚು ವಿಷ್ಣು, ಜೀವಿತಾ ರಾಜಶೇಖರ್ ಹಾಗೂ ಹೇಮಾ ಅಧ್ಯಕ್ಷ ಸ್ಥಾನಕ್ಕೆ ಪ್ರತಿಸ್ಪರ್ಧಿಗಳಾಗಿದ್ದಾರೆ.

  ಮಣಿರತ್ನಂ ನಿರ್ಮಾಣದಲ್ಲಿ ಮೂಡಿಬಂದಿದ್ದ ನವರಸ ಸಿನಿಮಾದಲ್ಲಿ ಪ್ರಕಾಶ್ ರಾಜ್ ನಟಿಸಿದ್ದರು. ಒಂಬತ್ತು ಕಥೆಗಳನ್ನು ಒಳಗೊಂಡಿದ್ದ ಚಿತ್ರದಲ್ಲಿ ಬಿಜೋಯ್ ನಂಬಿಯಾರ್ ನಿರ್ದೇಶಿಸಿದ್ದ 'ಎಧಿರಿ' ಕಥೆಯಲ್ಲಿ ರಾಜ್ ಅಭಿನಯಿಸಿದ್ದರು. ಈ ಚಿತ್ರ ನೆಟ್‌ಪ್ಲಿಕ್ಸ್‌ನಲ್ಲಿ ತೆರೆಕಂಡಿತ್ತು. ಮಹೇಶ್ ಬಾಬು ನಿರ್ಮಾಣದ 'ಮೇಜರ್', ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2, ಅಲ್ಲು ಅರ್ಜುನ್ ನಟನೆಯ 'ಪುಷ್ಪ', ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಅಣ್ಣಾತ್ತೆ', ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ', ಮಣಿರತ್ನಂ ನಿರ್ದೇಶನದ 'ಪೊನ್ನಿಯನ್ ಸೆಲ್ವನ್' ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ನಟಿಸಿದ್ದಾರೆ.

  ಕನ್ನಡದಲ್ಲಿ ಕೊನೆಯದಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ 'ಯುವರತ್ನ' ಸಿನಿಮಾದಲ್ಲಿ ನಟಿಸಿದ್ದರು. ಕಾಲೇಜು ಪ್ರಾಂಶುಪಾಲ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರೈ ಅಭಿನಯ ವಿಶೇಷವಾದ ಮೆಚ್ಚುಗೆ ಪಡೆದುಕೊಂಡಿತ್ತು.

  English summary
  Indian famous actor Prakash Raj met with an accident at Dhanush's Thiruchitrambalam shoot.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X