Don't Miss!
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- News
Assembly election 2023: ಇನ್ನೊಂದು ವಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ: ಎಚ್.ಡಿ.ಕೆ
- Automobiles
ಹೋಂಡಾ ಆಕ್ಟೀವಾ 6Gಗೆ ಸೆಡ್ಡು ಹೊಡೆಯಲು ಮಾರುಕಟ್ಟೆಗಿಳಿದ ಹೀರೋ Xoom... ಏನಿದರ ವಿಶೇಷತೆ!
- Finance
Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ
- Sports
WIPL 2023: ಮಹಿಳಾ ಐಪಿಎಲ್ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಮೆಂಟರ್ ಆಗಿ ಮಿಥಾಲಿ ರಾಜ್ ನೇಮಕ
- Lifestyle
ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಕಾಲಾಯ ನಮಃ' ಅಂತಿರೋ ಕೋಮಲ್‌ಗೆ ಎದುರು ನಿಂತ ಬಹುಭಾಷಾ ನಟ ಪ್ರಕಾಶ್ ರೈ!
ಜನರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿದ್ದ ಹಾಸ್ಯ ನಟ ಕೋಮಲ್ ಕುಮಾರ್. ಕಾಮಿಡಿ ರೋಲ್‌ಗಳಲ್ಲಿ ಸಿನಿಪ್ರಿಯರನ್ನು ನಗೆಗಡಲಲ್ಲಿ ತೇಲಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ನಾಯಕರಾದ್ಮೇಲೆ ಹಾಸ್ಯದ ಜೊತೆ ಜೊತೆಗೆ ವಿಭಿನ್ನ ರೋಲ್‌ಗಳಲ್ಲಿ ಕಾಣಿಸಿಕೊಂಡಿದ್ದರು.
ಹಲವು ಸಿನಿಮಾಗಳಲ್ಲಿ ನಾಯಕ ನಟರಾಗಿ ನಟಿಸಿದ ಬಳಿಕ ಕೆಲವು ದಿನಗಳ ಕಾಲ ಬ್ರೇಕ್ ಕೊಟ್ಟಿದ್ದರು. ಒಂದೊಳ್ಳೆ ಸಿನಿಮಾ ಕೊಡುವುದಕ್ಕೆ ಕಾತುರಾಗಿದ್ದ ಕೋಮಲ್ 'ಕಾಲಾಯಾ ನಮಃ' ಸಿನಿಮಾದ ಮೂಲಕ ಮತ್ತೆ ಸ್ಯಾಂಡಲ್‌ವುಡ್‌ಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.
ದರ್ಶನ್ಗೆ
'ಚಾಲೆಂಜಿಂಗ್
ಸ್ಟಾರ್',
'ಡಿಬಾಸ್'
ಅನ್ನೋ
ಟೈಟಲ್
ಬಂದಿದ್ದು
ಯಾವಾಗ?
ಮೂರ್ನಾಲ್ಕು ವರ್ಷಗಳ ಬಳಿಕ ಕೋಮಲ್ ಕುಮಾರ್ ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರೋದು ಅವರ ಅಭಿಮಾನಿಗಳಿಗೆ ಖುಷಿಕೊಟ್ಟಿದೆ. ಕೋಮಲ್ ಲುಕ್ ನೋಡಿ ಯಾವ ಜಾನರ್ ಅಂತ ಕನ್ಫ್ಯೂಸ್ ಆಗಿರೋದಂತೂ ನಿಜ. ಅದಕ್ಕೆ ಕಾರಣ ಬಹುಭಾಷಾ ನಟ ಪ್ರಕಾಶ್ ರಾಜ್.

'ಕಾಲಾಯಾ ನಮಃ' ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಈ ತಂಡಕ್ಕೆ ಬಹುಭಾಷಾ ನಟ ಪ್ರಕಾಶ್ ರಾಜ್ ಎಂಟ್ರಿ ಕೊಟ್ಟಿದ್ದಾರೆ. ಪ್ರಕಾಶ್ ರಾಜ್ ಇದ್ದಾರೆ ಅಂದ್ಮೇಲೆ ಅದು ಯಾವ ತರಹದ ಸಿನಿಮಾ ಬೇಕಿದ್ದರೂ, ಆಗಿರಬಹುದು. ಎಲ್ಲಾ ಪಾತ್ರಕ್ಕೂ ಒಗ್ಗಿಕೊಳ್ಳುವ ನಟ ಈ ಸಿನಿಮಾ ಮೇಕಿಂಗ್ ದೃಶ್ಯಗಳಲ್ಲಿ ಕೊಂಚ ಗಂಭೀರವಾಗಿ ಕಾಣಿಸಿಕೊಳ್ಳುತ್ತಾರೆ. ಈ ಕಾರಣಕ್ಕೆ ಈ ಸಿನಿಮಾದ ಕಥೆ ಗಂಭೀರವಾಗಿರುತ್ತೋ ಅಥವಾ ಹಾಸ್ಯಮಯವಾಗಿರುತ್ತೋ ಅನ್ನೋದನ್ನು ಸಿನಿಮಾ ಕಂಪ್ಲೀಟ್ ಆದ್ಮೇಲೆ ರಿವೀಲ್ ಆಗುತ್ತೆ.
24
ಗಂಟೆಯಲ್ಲಿ
ಹೆಚ್ಚು
ವೀಕ್ಷಣೆ
ಪಡೆದ
ಟ್ರೈಲರ್
ದಾಖಲೆ:
ಗಂಧದಗುಡಿಗೆ
3ನೇ
ಸ್ಥಾನ,
ಕ್ರಾಂತಿಗೆ
ಎಷ್ಟು?
ಸದ್ಯಕ್ಕೆ ಈ ಸಿನಿಮಾ ಮೈಸೂರಿನಲ್ಲಿ ಶೂಟಿಂಗ್ ನಡೆಯುತ್ತಿದೆ. ಅನುಸೂಯ ಕೋಮಲ್ ಕುಮಾರ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮತಿವಣನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಎಮಿಲ್ ಸಂಗೀತ ನಿರ್ದೇಶನ ಹಾಗೂ ರಾಕೇಶ್ ಸಿ ತಿಲಕ್ ಕ್ಯಾಮರಾಮ್ಯಾನ್.
ಕೋಮಲ್ ಕುಮಾರ್ ಜೊತೆಗೆ ಆಸಿಯಾ ಫಿರ್ದೋಸ್, ಪ್ರಕಾಶ್ ರೈ, ಸುಚೀಂದ್ರ ಪ್ರಸಾದ್, ತಿಲಕ್, ಶೈನ್ ಶೆಟ್ಟಿ , ಯತಿರಾಜ್ ಜಗ್ಗೇಶ್ ಸೇರಿದಂತೆ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರು ನಟಿಸುತ್ತಿದ್ದಾರೆ.