»   » 'ಬಿಗ್ ಬಾಸ್' ಸಂಜನಾ ಬಗ್ಗೆ ಸತ್ಯ ಬಾಯ್ಬಿಟ್ಟ 'ಒಳ್ಳೆ ಹುಡುಗ' ಪ್ರಥಮ್.!

'ಬಿಗ್ ಬಾಸ್' ಸಂಜನಾ ಬಗ್ಗೆ ಸತ್ಯ ಬಾಯ್ಬಿಟ್ಟ 'ಒಳ್ಳೆ ಹುಡುಗ' ಪ್ರಥಮ್.!

Posted By:
Subscribe to Filmibeat Kannada

'ಐ ಲವ್ ಯು... ಯು ಮಸ್ಟ್ ಲವ್ ಮಿ' ಎಂದು 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಸಂಜನಾ ಹಿಂದೆ ಬಿದ್ದಿದ್ದವರು 'ಒಳ್ಳೆ ಹುಡುಗ' ಪ್ರಥಮ್. ಅಲ್ಲಿಯವರೆಗೂ 'ಖಂಡಿಸ್ತೀನಿ' ಎಂದುಕೊಂಡಿದ್ದ ಪ್ರಥಮ್, ಸಂಜನಾ ಹಿಂದೆ ಬಿದ್ದು 'ಲವ್ ಟ್ರ್ಯಾಕ್' ಓಪನ್ ಮಾಡಿದ್ಮೇಲೆ 'ಬಿಗ್ ಬಾಸ್' ಮನೆಯಲ್ಲಿ ಅಲ್ಲೋಲ ಕಲ್ಲೋಲ ಸಂಭವಿಸಿತು.

'ಬಿಗ್ ಬಾಸ್' ಮನೆಯಿಂದ ಆಚೆ ಬಂದ್ಮೇಲೂ ಸಂಜನಾ-ಪ್ರಥಮ್ ಬಗ್ಗೆ ಗುಸು ಗುಸು ಕೇಳಿಬಂದಿದ್ದವು. ಗಾಸಿಪ್ ಗಳನ್ನು ಕೇಳಿ ಸಂಜನಾ ಫುಲ್ ಗರಂ ಆಗಿದ್ದರು. ಇದೀಗ ಅದೆಲ್ಲವೂ 'ಸುಳ್ಳು' ಎನ್ನುವ ಮೂಲಕ ಒಂದು ದೊಡ್ಡ 'ಸತ್ಯ' ಬಾಯ್ಬಿಟ್ಟಿದ್ದಾರೆ ಪ್ರಥಮ್.

ಸತ್ಯ ಬಾಯ್ಬಿಟ್ಟ ಪ್ರಥಮ್

''ನನ್ನ ಹಾಗೂ ಸಂಜನಾ ಬಗ್ಗೆ ದೊಡ್ಡ ಗಾಸಿಪ್ ಹರಿದಾಡಿತು. ಆದ್ರೆ ಯಾರಿಗೂ ವಿಷಯ ಗೊತ್ತಿಲ್ಲ. ಒಂದು ಸತ್ಯ ಹೇಳ್ತೀನಿ ಕೇಳಿ'' ಎಂದು ಮಾಧ್ಯಮಗಳ ಮುಂದೆ ಪ್ರಥಮ್ ಒಂದು ಸತ್ಯ ಹೇಳಿದರು. ಅದೇನು ಅಂದ್ರೆ...

ನಮ್ಮಿಬ್ಬರ ನಡುವೆ ಮಾತುಕತೆ ಇಲ್ಲ

''ಈಗಲೂ ನಾನು ಮತ್ತು ಸಂಜನಾ ಮಾತನಾಡುವುದಿಲ್ಲ. 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ್ಮೇಲೆ, ನಮ್ಮಿಬ್ಬರ ನಡುವೆ ಯಾವುದೇ ಮಾತುಕತೆ ಇಲ್ಲ'' ಎನ್ನುತ್ತಾರೆ ಪ್ರಥಮ್.

['ಭುವನ್-ಸಂಜನಾ ಮದುವೆ' ಖಂಡಿಸಿದ ಲವ್ವರ್ ಬಾಯ್ ಪ್ರಥಮ್.!]

'ಸಂಜು ಮತ್ತು ನಾನು'ಗೆ ಒಪ್ಪಿರಲಿಲ್ಲ

''ನಾನು, ಸಂಜನಾ ಮತ್ತು ಭುವನ್ ಒಂದು ಶೋ ಮಾಡಬೇಕು ಎಂದಾಗ, ನಾನು ಒಪ್ಪಲಿಲ್ಲ. ಕೊನೆಗೆ ಪರಮೇಶ್ವರ್ ಗುಂಡ್ಕಲ್ ಹೇಳಿದ್ಮೇಲೆ ಒಪ್ಪಿಕೊಂಡೆ'' ಅಂತಾರೆ ಪ್ರಥಮ್.

[ಪ್ರಥಮ್-ಸಂಜನಾ-ಭುವನ್ ತ್ರಿಕೋನ ಪ್ರೇಮಕಥೆಗೆ ಕ್ಲೈಮ್ಯಾಕ್ಸ್ ಕೊಡದ ಕಿಚ್ಚ!]

ಚಿತ್ರೀಕರಣದ ವೇಳೆಯಲ್ಲೂ ಮಾತನಾಡುವುದಿಲ್ಲ

''ಸಂಜು ಮತ್ತು ನಾನು' ಶೂಟಿಂಗ್ ವೇಳೆ ಜೊತೆಗೆ ಕೂತರೂ ಮಾತನಾಡಿಸುವುದಿಲ್ಲ. ಕ್ಯಾಮರಾ ಮುಂದೆ ಮಾತ್ರ ನಟಿಸುತ್ತೇವೆ'' ಎಂತಷ್ಟೇ ಸಂಜನಾ ಬಗ್ಗೆ ಮಾತನಾಡುತ್ತಾರೆ ಪ್ರಥಮ್.

[ಒಳ್ಳೆ ಹುಡುಗನ ಆರೋಗ್ಯ ವಿಚಾರಿಸಲು ಆಸ್ಪತ್ರೆ ತನಕ ಬಂದ ಸಂಜನಾ.!]

English summary
'Bigg Boss Kannnada 4' Winner Pratham has revealed that he doesn't speak to Sanjana.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada