For Quick Alerts
  ALLOW NOTIFICATIONS  
  For Daily Alerts

  ಕಂಕಣ ಭಾಗ್ಯಕ್ಕಾಗಿ ದೈವ ಕೊರಗಜ್ಜನ ಮೊರೆ ಹೋದ ಪ್ರೇಮಾ: 2ನೇ ಮದುವೆಗೆ ಸಜ್ಜು ?

  |

  ಹಿರಿಯ ನಟಿ ಪ್ರೇಮಾ ಹಲವು ವರ್ಷಗಳಿಂದ ಬಣ್ಣದ ಲೋಕದಿಂದ ದೂರನೇ ಉಳಿದಿದ್ದರು. ವೈಯಕ್ತಿಕ ಕಾರಣಗಳಿಂದ ಪ್ರೇಮಾ ಬಣ್ಣ ಹಚ್ಚಿರಲಿಲ್ಲ. ಕಳೆದ ವರ್ಷವಷ್ಟೇ ಪ್ರೇಮಾ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದರು. ಅಂದು ಸುದ್ದಿಯಾಗಿದ್ದ ನಟಿಯೀಗ ಮತ್ತೆ ಸದ್ದು ಮಾಡುತ್ತಿದ್ದಾರೆ.

  "ವೈವಾಹಿಕ ಜೀವನ ಅಷ್ಟು ಕಂಫರ್ಟ್ ಅನ್ನಿಸಲಿಲ್ಲ. ನಾನು ಒಳ್ಳೆ ನಿರ್ಧಾರ ತೆಗೆದುಕೊಂಡೆ": ಪ್ರೇಮಾ

  ಕಳೆದ ಎರಡು ವರ್ಷಗಳ ಹಿಂದೆನೇ ಪ್ರೇಮಾ ಎರಡನೇ ಮದುವೆ ಬಗ್ಗೆ ಗುಲ್ಲೆದ್ದಿತ್ತು. ಆಗ ಪ್ರೇಮಾ ಈ ವಿಷಯವನ್ನು ನಿರಾಕರಿಸಿದ್ದರು. ಆದ್ರೀಗ ಎರಡನೇ ಮದುವೆಗಾಗಿ ದೈವ ಕೊರಗಜ್ಜನ ಮೊರೆ ಹೋಗಿದ್ದಾರೆ. ಸದ್ಯ ಕೊರಗಜ್ಜನ ಸನ್ನಿಧಾನದಲ್ಲಿ ಎರಡನೇ ಮದುವೆ ಮಾಡಿಸುವಂತೆ ಬೇಡಿಕೆ ಇಟ್ಟಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

  2ನೇ ಮದುವೆಗಾಗಿ ಕೊರಗಜ್ಜನ ಮೊರೆ

  2ನೇ ಮದುವೆಗಾಗಿ ಕೊರಗಜ್ಜನ ಮೊರೆ

  ಕಂಕಣ ಭಾಗ್ಯ ಒದಗಿಸುವಂತೆ ಹಿರಿಯ ನಟಿ ಪ್ರೇಮಾ ಕೊರಗಜ್ಜನ ಮೊರೆ ಹೋಗಿದ್ದಾರೆ‌. ಉಡುಪಿ‌ ಜಿಲ್ಲೆಯ ಕಾಪುವಿನ ಕೊರಗಜ್ಜ ಸನ್ನಿಧಿಯಲ್ಲಿ ಮದುವೆಗಾಗಿ ಪಾರ್ಥಿಸಿದ ನಟಿ ಆದಷ್ಟು ಬೇಗ ಕಂಕಣ ಭಾಗ್ಯ ಅನುಗ್ರಹಿಸುವಂತೆ ದೈವಕ್ಕೆ ಮೊರೆ ಹೋಗಿದ್ದಾರೆ. ಕೊರಗಜ್ಜನ ಸನ್ನಿಧಾನಕ್ಕೆ ಪ್ರೇಮಾ ಭೇಟಿ ನೀಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹೀಗಾಗಿ ಶೀಘ್ರದಲ್ಲಿಯೇ ಪ್ರೇಮಾ ಎರಡನೇ ಬಾರಿ ವೈವಾಹಿಕ ಜೀವನಕ್ಕೆ ಕಾಲಿಡಬಹುದು ಎಂದು ನಿರೀಕ್ಷೆ ಮಾಡಲಾಗುತ್ತಿದೆ.

  ಕೊರಗಜ್ಜನ ಬಳಿಕ ಪ್ರೇಮಾ ಹರಕೆ

  ಕೊರಗಜ್ಜನ ಬಳಿಕ ಪ್ರೇಮಾ ಹರಕೆ

  ಇತ್ತೀಚೆಗೆ ಪ್ರೇಮಾ ಖಾಸಗಿ ಕಾರ್ಯಕ್ರಮ ನಿಮಿತ್ತ ಉಡುಪಿಗೆ ಭೇಟಿ ನೀಡಿದ್ದರು. ಈ ವೇಳೆ ಕಾಪುವಿನ ಕೊರಗಜ್ಜ ಸನ್ನಿಧಿಗೂ ನಟಿ ಪ್ರೇಮಾ ವಿಸಿಟ್ ಹಾಕಿದ್ದಾರೆ. ಈ ವೇಳೆ ಕೊರಗಜ್ಜ ದೇವಸ್ಥಾನದ ಅರ್ಚಕರ ಬಳಿ ಹರಕೆ ಪ್ರೇಮಾ ಹರಕೆ ಮಾಡಿಕೊಂಡಿದ್ದಾರೆ. "ಈಗಾಗಲೇ ವರ ನೋಡಿದ್ದೇನೆ. ಅದೇ ವರನೊಂದಿಗೆ ಮದುವೆ ಮಾಡಿಸುವಂತೆ ಕೊರಗಜ್ಜನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ" ಎಂದು ವರದಿಯಾಗಿದೆ.

  ಅಯ್ಯಪ್ಪ ದೇವಸ್ಥಾನಕ್ಕೂ ಭೇಟಿ

  ಅಯ್ಯಪ್ಪ ದೇವಸ್ಥಾನಕ್ಕೂ ಭೇಟಿ

  ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿದ್ದ ಹಿರಿಯ ನಟಿ ಪ್ರೇಮಾ ಬಳಿಕ ಅಯ್ಯಪ್ಪ ದೇವಸ್ಥಾನಕ್ಕೂ ವಿಸಿಟ್ ಹಾಕಿದ್ದಾರೆ. ಈ ವೇಳೆ ಪ್ರೇಮಾ ಅವರಿಗೆ ಸಹೋದರ ಅಯ್ಯಪ್ಪ ಹಾಗೂ ಅವರ ಪತ್ನಿ ಅನು ಕೂಡ ಜೊತೆಯಾಗಿದ್ದರು. ಸದ್ಯ ಪ್ರೇಮಾ ಅವರ ಎರಡನೇ ಮದುವೆ ಬಗ್ಗೆ ಚರ್ಚೆಯಂತೂ ಆರಂಭ ಆಗಿದೆ. ಆದರೆ, ಈ ಹಿಂದೆ ಇದೇ ವಿಷಯ ಬಂದಾಗ ಪ್ರೇಮಾ ಎರಡನೇ ಮದುವೆಯ ಸುದ್ದಿಯನ್ನು ನಿರಾಕರಣೆ ಮಾಡಿದ್ದಾರೆ.

  2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಪ್ರೇಮಾ

  2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಪ್ರೇಮಾ

  ಪ್ರೇಮಾ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹೊಂದಾಣಿಕೆಯ ಕಾರಣದಿಂದಾಗಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಪಡೆದಿದ್ದರು. ಆ ಬಳಿಕ ಅವರು ರೆಡಿಯೋ ಜಾಕಿ ಯೊಬ್ಬರನ್ನು ಮದುವೆಯಾಗಿದ್ದಾರೆ ಎಂದು ಗಾಸಿಪ್ ಎದ್ದಿತ್ತು. ಅದಕ್ಕೆ ತೆರೆ ಕೂಡ ಎಳೆದಿದ್ದರು. ಇದೀಗ ಪ್ರೇಮಾ ಎರಡನೇ ಮದುವೆಗೆ ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ದೈವದಲ್ಲಿ ಅವರು ಪ್ರಾರ್ಥಿಸಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ.

  English summary
  Prema, A Senior Kannada Actress, Prays In Front Of Koragajja In Udupi For Her Second Marriage, Know More.
  Thursday, January 19, 2023, 18:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X