»   » ಡಬ್ಬಿಂಗ್ ಮಂಡಳಿ ಅಧ್ಯಕ್ಷರಿಗೆ ಜೀವ ಬೆದರಿಕೆ ಹಾಕಿದವರಾರು?

ಡಬ್ಬಿಂಗ್ ಮಂಡಳಿ ಅಧ್ಯಕ್ಷರಿಗೆ ಜೀವ ಬೆದರಿಕೆ ಹಾಕಿದವರಾರು?

Posted By:
Subscribe to Filmibeat Kannada

ರಾಜ್ಯದಲ್ಲಿ ಡಬ್ಬಿಂಗ್ ಬೇಕೋ, ಬೇಡವೋ ಎನ್ನುವ ವಿವಾದಕ್ಕೆ ಸದ್ಯಕ್ಕೆ ಯಾವುದೇ ಫುಲ್ ಸ್ಟಾಪ್ ಬೀಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಬದಲಿಗೆ ದಿನಕ್ಕೊಂದು ವಿದ್ಯಮಾನಗಳ ಮೂಲಕ ಹೊಸ ತಿರುವು ಪಡೆಯುತ್ತಿದೆ.

ತನ್ನನ್ನು ಭೇಟಿ ಮಾಡಲು ಬಂದ ನೂತನವಾಗಿ ಅಸ್ತಿತ್ವಕ್ಕೆ ಬಂದ ಡಬ್ಬಿಂಗ್ ಮಂಡಳಿ ಅಧ್ಯಕ್ಷರನ್ನು ನಿರ್ಮಾಪಕ ಸಂಘದ ಅಧ್ಯಕ್ಷರು ಬೈದು ಕಳುಹಿಸಿದ ಘಟನೆ ಭಾನುವಾರ (ಜು26) ನಡೆದಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಎರಡು ದಿನಗಳ ಹಿಂದೆ ವಾಟಾಳ್ ನಾಗರಾಜ್, ಸಾ.ರಾ. ಗೋವಿಂದು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಡಬ್ಬಿಂಗ್ ಮಂಡಳಿ ವಿರುದ್ದ ಭಾರೀ ಪ್ರತಿಭಟನೆ ನಡೆದು ಹೋಗಿದೆ.

ಡಬ್ಬಿಂಗ್ ಮಂಡಳಿ ವಿರುದ್ದ ಕಿಡಿಕಾರಿರುವ ಹೋರಾಟಗಾರರು ಅದು ಹೇಗೆ ಡಬ್ಬಿಂಗ್ ಸಿನಿಮಾವನ್ನು ಕನ್ನಡ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತೀರೋ ನೋಡೇ ಬಿಡುತ್ತೇವೆಂದು ವಾಟಾಳ್ ಮತ್ತು ಗೋವಿಂದು ತೊಡೆತಟ್ಟಿದ್ದಾರೆ.

ನೂತನ ಮಂಡಳಿ ಸ್ಥಾಪನೆಯ ಬಗ್ಗೆ ಕಿಡಿಕಾರಿರುವ ಮುನಿರತ್ನಂ ನಾಯ್ಡು ನಿಮ್ಮ ಮಂಡಳಿಗೆ ನಮ್ಮ ಬೆಂಬಲವಿಲ್ಲ ಖಡಕ್ಕಾಗಿ ಎಚ್ಚರಿಸಿದ್ದಾರೆ.

ಇದರ ನಡುವೆ ಡಬ್ಬಿಂಗ್ ಮಂಡಳಿ ಅಧ್ಯಕ್ಷರಿಗೆ ಪ್ರಾಣ ಬೆದರಿಕೆ ಕರೆ ಬಂದಿದೆ. ಮುಂದೆ ಓದಿ..

ಇವರಲ್ಲಿ ಉತ್ತರವಿಲ್ಲ

ಡಬ್ಬಿಂಗ್ ಬಂದರೆ ಕನ್ನಡದ ಕಲಾವಿದರಿಗೆ ಮತ್ತು ಇತರರಿಗೆ ತೊಂದರೆಯಾಗುತ್ತೆ ಎನ್ನುವ ಕನ್ನಡದ ಮೊದಲ ಸಾಲಿನಲ್ಲಿ ನಿಲ್ಲುವ ನಿರ್ಮಾಪಕರೇ ಪರಭಾಷಾ ಚಿತ್ರದ ವಿತರಣೆ ಹಕ್ಕನ್ನು ಪಡೆಯುತ್ತಾರೆ. ಬಾಹುಬಲಿ ಸಿನಿಮಾದಿಂದ ಕನ್ನಡ ಸಿನಿಮಾದ ಕಲೆಕ್ಷನ್ ಬಿದ್ದು ಹೋಯಿತು ಎನ್ನುವುದು ನಮ್ಮ ಮುಂದಿರುವ ಸತ್ಯ. ಇದು ಯಾವ ಸೀಮೆಯ ನಿಮ್ಮ ಕನ್ನಡ ಪ್ರೀತಿ ಸ್ವಾಮಿ ಎಂದರೆ ಮಂಡಳಿಯ ಸದಸ್ಯರಿಗಾಗಲಿ ಅಥವಾ ನಿರ್ಮಾಪಕರಲ್ಲಿ ಇದಕ್ಕೆ ಸೂಕ್ತ ಉತ್ತರವಿಲ್ಲ.

ಡಬ್ಬಿಂಗ್ ಮಂಡಳಿಗೆ ಅವಕಾಶವಿಲ್ಲ

ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಡಬ್ಬಿಂಗ್ ಮಂಡಳಿಗೆ ಅವಕಾಶ ನೀಡುವುದಿಲ್ಲ ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಹೇಳಿದ್ದಾರೆ. ನಿಮ್ಮ ಹೋರಾಟಕ್ಕೆ ಮತ್ತು ನಿಮ್ಮ ಮಂಡಳಿಗೆ ನಮ್ಮ ಬೆಂಬಲವಿಲ್ಲ ಎಂದು ಮುನಿರತ್ನ ನೂತನವಾಗಿ ಅಸ್ತಿತ್ವಕ್ಕೆ ಬಂದ ಡಬ್ಬಿಂಗ್ ಮಂಡಳಿ ಅಧ್ಯಕ್ಷರಿಗೆ ವಾರ್ನಿಂಗ್ ಕೊಟ್ಟು ಕಳುಹಿಸಿದ್ದಾರೆ.

ಕಂಪ್ಲೇಂಟ್ ಕೊಡಲು ಬಂದಿದ್ರು

ಡಬ್ಬಿಂಗ್ ವಿರೋಧಿ ಹೋರಾಟಗಾರರಿಂದ ನಮಗೆ ಜೀವ ಬೆದರಿಕೆ ಇದೆ ಎಂದು ಡಬ್ಬಿಂಗ್ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ಚಲನಚಿತ್ರ ಮಂಡಳಿಗೆ ದೂರು ನೀಡಲು ಬಂದಿದ್ದರು.

ಮುನಿರತ್ನ ಹೇಳಿಕೆ

ಕೃಷ್ಣೇಗೌಡ ಅವರನ್ನು ತರಾಟೆಗೆ ತೆಗೆದುಕೊಂಡ ಮುನಿರತ್ನ ಈ ಕೂಡಲೇ ಮಂಡಳಿ ಸ್ಥಾಪನೆಯನ್ನು ಕೈಬಿಡಬೇಕು. ಪರ್ಯಾಯ ಮಂಡಳಿ ಸ್ಥಾಪನೆ ತಡೆಗಟ್ಟಲು ಇನ್ನೆರಡು ದಿನಗಳಲ್ಲಿ ನಿರ್ಮಾಪಕರ ಸಂಘದ ಕಾರ್ಯಕಾರಿಣಿ ಸಭೆ ಕರೆಯುತ್ತೇನೆಂದು ಮುನಿರತ್ನ ಹೇಳಿದ್ದಾರೆ.

ಡಬ್ಬಿಂಗ್ ಮಂಡಳಿ ಅಧ್ಯಕ್ಷರಿಗೆ ಪ್ರಾಣ ಬೆದರಿಕೆ?

ಪ್ರಾಣಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ ಡಬ್ಬಿಂಗ್ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ಅವರು ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಅವರಿಗೆ ಲಿಖಿತ ರೂಪದಲ್ಲಿ ದೂರು ಸಲ್ಲಿಸಿದ್ದಾರೆ.

ಕನ್ನಡ ಪರ ಸಂಘಟನೆಗಳು ಹಾಗೂ ನಿರ್ಮಾಪಕರು

ಕೆಲವು ತಿಂಗಳ ಹಿಂದೆ ಡಬ್ಬಿಂಗ್ ವಾಣಿಜ್ಯ ಮಂಡಳಿಯ ಸ್ಥಾಪನೆಯ ಬಗ್ಗೆ ರೂಪುರೇಷೆ ಸಿದ್ದಪಡಿಸಿ ಕೊಳ್ಳುತ್ತಿದ್ದೆವು. ಇದನ್ನರಿತ ಕೆಲ ಕನ್ನಡ ಪರ ಸಂಘಟನೆಗಳು ಹಾಗೂ ನಿರ್ಮಾಪಕರು ಇದನ್ನು ತೀವ್ರವಾಗಿ ವಿರೋಧಿಸಿದ್ದರು ಎಂದು ಕೃಷ್ಣೇಗೌಡ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಮುನಿರತ್ನ ಭರವಸೆ

ನಿಮ್ಮ ಮಂಡಳಿಗೆ ನಮ್ಮ ಸಪೋರ್ಟ್ ಇಲ್ಲ ಎಂದು ಖಡಕ್ಕಾಗಿ ಹೇಳಿದ ಮುನಿರತ್ನ, ಜೀವ ಬೆದರಿಕೆ ದೂರಿನ ಬಗ್ಗೆ ಜುಲೈ 29ರೊಳಗೆ ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರೊಂದಿಗೆ ಸಭೆ ನಡೆಸಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.

    English summary
    Kannada Producers association not supporting newly established Dubbing Chamber of Commerce, Producers Union President Muniratna.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada