»   » ಪುನೀತ್ 'ಯಾರೇ ಕೂಗಾಡಲಿ' ಅರ್ಧ ಸೆಂಚುರಿ

ಪುನೀತ್ 'ಯಾರೇ ಕೂಗಾಡಲಿ' ಅರ್ಧ ಸೆಂಚುರಿ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಲೂಸ್ ಮಾದ ಯೋಗೇಶ್ ಅಭಿನಯದ ಯಾರೇ ಕೂಗಾಡಲಿ ಚಿತ್ರ ಯಶಸ್ವಿಯಾಗಿ 50ನೇ ದಿನದತ್ತ ಮುನ್ನುಗ್ಗಿದೆ. ಈ ಚಿತ್ರ ಇದೇ ಫೆ.8ಕ್ಕೆ ಐವತ್ತು ದಿನಗಳನ್ನು ಪೂರೈಸುತ್ತಿದೆ.

ರಾಜ್ಯದಾದ್ಯಂತ 90ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಯಾರೇ ಕೂಗಾಡಲಿ ಅರ್ಧ ಶತಕ ಬಾರಿಸುತ್ತಿರುವುದು ವಿಶೇಷ. ಸಾಮಾನ್ಯವಾಗಿ ಎರಡು, ಮೂರು ವಾರಕ್ಕೆ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಿಂದ ಎತ್ತಂಗಡಿಯಾಗುವ ಕನ್ನಡ ಚಿತ್ರಗಳಿಗೆ ಹೋಲಿಸಿದೆ ಈ ಚಿತ್ರ ಇನ್ನೂ ಪ್ರದರ್ಶನ ಕಾಣುತ್ತಿದೆ.


ಈ ಮೂಲಕ ಪುನೀತ್ ಮತ್ತೊಮ್ಮೆ ತಾವು ಬಾಕ್ಸ್ ಆಫೀಸ್ ಕಿಂಗ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ತಮಿಳಿನ ಯಶಸ್ವಿ ಚಿತ್ರ ಪೊರಾಲಿ ರೀಮೇಕ್ ಆದರೂ ಅಪ್ಪು ಅಭಿಮಾನಿಗಳನ್ನು ಈ ಚಿತ್ರ ನಿರಾಸೆಗೊಳಿಸಿಲ್ಲ ಎಂಬುದಕ್ಕೆ 50 ದಿನಗಳ ಪ್ರದರ್ಶನ ಇನ್ನೊಂದು ನಿದರ್ಶನ.

ಸರಿಸುಮಾರು ರು.9.8 ಕೋಟಿ ಬಜೆಟ್ ನಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿರುವ ಈ ಚಿತ್ರ ಈಗಾಗಲೆ ಅದರ ದುಪ್ಪಟ್ಟು ಹಣವನ್ನು ಗಳಿಸಿದೆ ಎನ್ನುತ್ತವೆ ಮೂಲಗಳು. ಪುನೀತ್ ರಾಜ್ ಕುಮಾರ್, ಭಾವನಾ, ಯೋಗೀಶ್, ಸಿಂಧು ಲೋಕನಾಥ್, ನಿವೇದಿತಾ, ರವಿಶಂಕರ್, ಮಾಳವಿಕಾ, ಗಿರೀಶ್ ಕಾರ್ನಾಡ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ತಾಂತ್ರಿಕವಾಗಿ ಪ್ರೌಢವಾಗಿರುವ ಈ ಚಿತ್ರಕ್ಕೆ ಪಿ.ಸಮುದ್ರಖಣಿ ಆಕ್ಷನ್ ಕಟ್ ಹೇಳಿದ್ದಾರೆ. ಸುಕುಮಾರ್ ಅವರ ಸುಂದರ ಛಾಯಾಗ್ರಹಣ, ವಿ ಹರಿಕೃಷ್ಣ ಅವರ ಅಬ್ಬರವಿಲ್ಲದ ಇಂಪಾದ ಸಂಗೀತ, ಮೈನವಿರೇಳಿಸುವ ರವಿವರ್ಮ ಅವರ ಸಾಹಸ ಸಂಯೋಜನೆ ಚಿತ್ರದ ಇನ್ನೊಂದು ಆಕರ್ಷಣೆಯಾಗಿ ನಿಲ್ಲುತ್ತದೆ. ಚಿತ್ರ ವಿಮರ್ಶೆ ಓದಿ. (ಒನ್ಇಂಡಿಯಾ ಕನ್ನಡ)

English summary
Power Star Puneet Rajkumar and Loose Mada Yogesh starrer message-oriented film 
 Yaare Koogadali film completes 50 days. It is a remake of Samuthirakani's Tamil film, Poraali (2011) starring M. Sasikumar which saw a commercial success.
Please Wait while comments are loading...