»   » ಸುನಾಮಿಯಲ್ಲಿ ಮೀನು ಹಿಡಿದ 'ಅಣ್ಣಾಬಾಂಡ್' ಫಿಫ್ಟಿ ನಾಟೌಟ್

ಸುನಾಮಿಯಲ್ಲಿ ಮೀನು ಹಿಡಿದ 'ಅಣ್ಣಾಬಾಂಡ್' ಫಿಫ್ಟಿ ನಾಟೌಟ್

Posted By:
Subscribe to Filmibeat Kannada
Anna Bond completes 50 days
ಚಿತ್ರ ಸಾಧಾರಣ, ಸೂರಿ ಖಾಲಿಯಾಗಿದ್ದಾರೆ ಎಂದು ಒಂದಷ್ಟು ಮಾತುಗಳು ಕೇಳಿ ಬಂದಿದ್ದವು. ಆಗ ತಾನೇ ಸಿನಿಮಾ ಬಿಡುಗಡೆ ಮಾಡಿ ಕಾತುರದಿಂದ ಪ್ರತಿಕ್ರಿಯೆಗಳನ್ನು ಕಾಯುತ್ತಾ ಕುಳಿತಿದ್ದ ಸೂರಿಗೆ ಇಂಥ ಮಾತುಗಳು ನಿರಾಶೆ ಮೂಡಿಸಿತ್ತು. ಹಾಡು ಚೆನ್ನಾಗಿದೆ ಅಂತ ಬರೀತೀರಿ, ಫೈಟ್ ಚೆನ್ನಾಗಿದೆ ಅಂತಲೂ ಹೇಳುತ್ತೀರಿ. ನಟನಟಿಯರ ಅಭಿನಯವೂ ಸೊಗಸಾಗಿದೆ ಅಂತೂ ಹೇಳ್ತೀರಿ. ಹಾಗಿದ್ದೂ ನಿರ್ದೇಶಕನಾಗಿ ಸೂರಿ ಸೋತಿದ್ದಾರೆ ಅಂತ ಬಣ್ಣಿಸೋದು ಎಷ್ಟು ಸರಿ ಎಂದು ಸೂರಿ ಬೇಸರ ವ್ಯಕ್ತ ಪಡಿಸುತ್ತಾರೆ.

ಸಿನಿಮಾದಲ್ಲಿ ಕಾಣಸಿಕ್ಕುವ ಹಾಡು, ಫೈಟ್ಸ್ ಗಳಲ್ಲಿ ನಿರ್ದೇಶಕನ ಪಾತ್ರ ಸೊನ್ನೆಯೇ? ಅಣ್ಣಾಬಾಂಡ್ ಅದ್ಭುತ ಸಿನಿಮಾ ಅಲ್ಲದಿರಬಹುದು. ಆದರೆ ಪುನೀತ್ ಅಭಿಮಾನಿಗಳಿಗೆ ಮತ್ತು ಮಾಸ್ ಪ್ರೇಕ್ಷಕರಿಗೆ ಏನು ಬೇಕೋ ಅದನ್ನು ಅಣ್ಣಾ ಬಾಂಡ್ ನಲ್ಲಿ ಚಾಚೂತಪ್ಪದೆ ಕೊಟ್ಟಿದ್ದೀನಿ ಅನ್ನೋದು ಸೂರಿ ನಂಬಿಕೆ. ಈಗದು ಒಂದು ಹಂತಕ್ಕೆ ಸಾಬೀತಾಗಿದೆ ಕೂಡಾ.

ಯಾಕೆಂದರೆ ಪುನೀತ್ ಅಭಿನಯದ ಅಣ್ಣಾ ಬಾಂಡ್ ಬಗ್ಗೆ ವಿಮರ್ಶಕರು ಏನೇ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದ್ದರೂ ಪ್ರೇಕ್ಷಕ ಮಾತ್ರ ಚಿತ್ರವನ್ನು ಸಾರಾಸಗಟವಾಗಿ ತಿರಸ್ಕರಿಸಲಿಲ್ಲ ಅನ್ನೋದಕ್ಕೆ ಚಿತ್ರ ಐವತ್ತು ದಿನಗಳನ್ನು ಪೂರೈಸಿರುವುದೇ ಸಾಕ್ಷಿ. ರಾಜ್ಯಾದ್ಯಂತ ಮೂವತ್ತು ಥಿಯೇಟರ್ ಗಳಲ್ಲಿ ಅಣ್ಣಾಬಾಂಡ್ ಚಿತ್ರ ಐವತ್ತು ದಿನಗಳ ಪ್ರದರ್ಶನ ದಾಖಲಿಸಿದೆ.

ಈಗಲೂ ಚಿತ್ರ ನಲವತ್ತೈದು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವುದು ಅದರ ಹೆಚ್ಚುಗಾರಿಕೆ. ಎಂಥದ್ದೇ ಜನಮನ್ನಣೆ ಗಳಿಸಿದ ಚಿತ್ರವಾದರೂ ಈಗ ಐವತ್ತು ಮತ್ತು ನೂರುದಿನಗಳ ಪ್ರದರ್ಶನ ಕಾಣುವುದು ಕೊಂಚ ಅಸಂಭವಾದ ಸಂಗತಿಯೇ. ಯಾಕೆಂದರೆ ಮೊದಲಿನಂತೆ ಈಗ ಐವತ್ತೋ ಎಪ್ಪತ್ತೋ ಚಿತ್ರಮಂದಿರಗಳಲ್ಲಷ್ಟೇ ಸಿನಿಮಾ ಬಿಡುಗಡೆ ಮಾಡುವುದಿಲ್ಲ.

ಸಾರಾಸಗಟು ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವುದರಿಂದ ಆರಂಭದ ವಾರಗಳಲ್ಲೇ ಬಹುತೇಕ ವೀಕ್ಷಕರು ಸಿನಿಮಾವನ್ನ ನೋಡಿ ಮುಗಿಸಿರುತ್ತಾರೆ. ಹಾಗಾಗಿ ನೂರು ದಿನಗಳ ತನಕವೂ ಹರಿದು ಬರುತ್ತಲೇ ಇರುವ ಪ್ರೇಕ್ಷಕ ಕಡಿಮೆಯಾಗಿದ್ದಾನೆ. ಆ ನಿಟ್ಟಿನಲ್ಲಿ ನೋಡಿದರೆ ಪುನೀತ್ ಅಭಿನಯದ ಅಣ್ಣಾ ಬಾಂಡ್ ಕೂಡಾ ನೂರ ಐವತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಚಿತ್ರ.

ಹಾಗಿದ್ದೂ ಚಿತ್ರ ಐವತ್ತು ದಿನಗಳ ಪ್ರದರ್ಶನ ದಾಖಲಿಸಿರುವುದು ಅದರಲ್ಲೂ ಮೂವತ್ತೈದು ಥೇಟರ್ ಗಳಲ್ಲಿ ಈ ಕೀರ್ತಿಗೆ ಭಾಜನವಾಗಿರುವುದು. ಹಾಗಾಗಿ ಅಣ್ಣಾ ಬಾಂಡ್ ಚಿತ್ರ ಫ್ಲಾಪ್ ಕೆಟಗರಿಗೆ ಸೇರಿದ ಚಿತ್ರವಲ್ಲ. ಅದು ಯಶಸ್ವಿ ಅನ್ನೋದಕ್ಕೆ ಸಾಕ್ಷ್ಯ ಸಮೇತ ದಾಖಲೆ ಒದಗಿಸಿದೆ. ಸೂರಿ ಈಗ ಬೇಸರ ಮಾಡುವುದನ್ನು ನಿಲ್ಲಿಸಬಹುದು.

English summary
Puneeth Rajkumar, Priyamani, Nidhi Subbaiah starrer movie Anna Bond completes 50 days. In 35 theaters across Karnataka film completes 50 days. Duniya Soori has directed this movie.
Please Wait while comments are loading...