twitter
    For Quick Alerts
    ALLOW NOTIFICATIONS  
    For Daily Alerts

    ಅಪ್ಪು ಹುಟ್ಟುಹಬ್ಬದಂದು 'ಜೇಮ್ಸ್' ಜಾತ್ರೆಗೆ ಸಜ್ಜಾದ ಮಂಡ್ಯ ಅಭಿಮಾನಿಗಳು

    |

    ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಈ ಬಾರಿಯ ಅಪ್ಪು ಹುಟ್ಟುಹಬ್ಬ ವಿಶೇಷವಾಗಿರುತ್ತೆ. ಪುನೀತ್ ಹುಟ್ಟುಹಬ್ಬದಂದೇ ಪುನೀತ್ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಬಿಡುಗಡೆಯಾಗುತ್ತಿದೆ. ಹುಟ್ಟುಹಬ್ಬ ಹಾಗೂ ಕೊನೆಯ ಸಿನಿಮಾ ರಿಲೀಸ್ ಎರಡನ್ನೂ ಇಟ್ಟುಕೊಂಡು ಕರ್ನಾಟಕದಾದ್ಯಂತ ಜಾತ್ರೆ ಮಾಡಲು ಸಜ್ಜಾಗುತ್ತಿದ್ದಾರೆ. ಮಂಡ್ಯದಲ್ಲೂ ಅಭಿಮಾನಿಗಳು ಮಾರ್ಚ್ 17ರಂದು ಅಭಿಮಾನಿಗಳು ಏನೆಲ್ಲಾ ಮಾಡುತ್ತಾರೆ ಅನ್ನುವ ದೊಡ್ಡ ಪಟ್ಟಿಯನ್ನೇ ಬಿಡುಗಡೆ ಮಾಡಿದ್ದಾರೆ.

    ಪುನೀತ್ ಹುಟ್ಟುಹಬ್ಬ ಹಾಗೂ ಜೇಮ್ಸ್ ಜಾತ್ರೆ ಆಚರಣೆ ಮಾಡಲು ಇಡೀ ಕರ್ನಾಟಕವೇ ಸಜ್ಜಾಗುತ್ತಿದೆ. ಈಗಾಗಲೇ 'ಜೇಮ್ಸ್' ಚಿತ್ರ ಹಾಡು, ಟೀಸರ್ ರಿಲೀಸ್ ಆಗಿದ್ದು ಅಪ್ಪು ಅಭಿಮಾನಿಗಳ ಕಾತುರವನ್ನು ದುಪ್ಪಟ್ಟು ಮಾಡಿದೆ.

    'ಜೇಮ್ಸ್' ಬಿಡುಗಡೆ ಹಿನ್ನಲೆ ಮಾರ್ಚ್ 17 ರಿಂದ 23ರವರೆಗೆ ಪರಭಾಷೆ ಸಿನಿಮಾ ಬಂದ್: ಕರೆ ನೀಡಿದ್ದು ಯಾರು?'ಜೇಮ್ಸ್' ಬಿಡುಗಡೆ ಹಿನ್ನಲೆ ಮಾರ್ಚ್ 17 ರಿಂದ 23ರವರೆಗೆ ಪರಭಾಷೆ ಸಿನಿಮಾ ಬಂದ್: ಕರೆ ನೀಡಿದ್ದು ಯಾರು?

    ಅಪ್ಪು ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಆಗಿರುವುದರಿಂದ ಫ್ಯಾನ್ಸ್ ಇಡೀ ದೇಶವೇ ತಿರುಗಿ ನೋಡುವ ಹಾಗೆ ಸೆಲೆಬ್ರೆಟ್ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಮಂಡ್ಯದ ಡಾ. ರಾಜ್‌ಕುಮಾರ್ ಹಾಗೂ ಅಪ್ಪು ಅಭಿಮಾನಿಗಳು ಕೂಡ ಮಾರ್ಚ್ 17ರ ಸೆಲೆಬ್ರೆಷನ್ ಹೇಗಿರುತ್ತೆ ಎನ್ನುವ ದೊಡ್ಡ ಪಟ್ಟಿಯನ್ನೇ ಬಿಡುಗಡೆ ಮಾಡಿದ್ದಾರೆ.

    ಬೆಳ್ಳಿರಥದಲ್ಲಿ ಅಪ್ಪು ಭಾವಚಿತ್ರ

    ಬೆಳ್ಳಿರಥದಲ್ಲಿ ಅಪ್ಪು ಭಾವಚಿತ್ರ

    ಮಂಡ್ಯದಲ್ಲಿ ಅಪ್ಪು ಅಭಿಮಾನಿಗಳ ಸಂಭ್ರಮ ಮಧ್ಯರಾತ್ರಿಯಿಂದಲೇ ಆರಂಭಗೊಂಡರೂ, ಬೆಳಗ್ಗೆ 7 ಗಂಟೆಗೆ ಬೆಳ್ಳಿರಥದಲ್ಲಿ ಜೇಮ್ಸ್ ಮೆರವಣಿಗೆ ಆರಂಭಿಸಲಿದ್ದಾರೆ. ಮಂಡ್ಯದ ಕಾಳಮ್ಮ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ, ಪುನೀತ್ ರಾಜ್‌ಕುಮಾರ್ ಭಾವ ಚಿತ್ರ ಹಿಡಿದು ಚಿತ್ರಮಂದಿರಗಳಿಗೆ ಮೆರವಣಿಗೆ ಹೊರಡಲಿದ್ದಾರೆ. ಅಪ್ಪು ಕಟೌಟ್‌ಗೆ ಲೈಟಿಂಗ್ ವ್ಯವಸ್ಥೆಯನ್ನು ಮಾಡಲಿದ್ದಾರೆ. ಈ ಮೆರವಣಿಗೆಯಲ್ಲಿ ಡೊಳ್ಳುಕುಣಿತ, ತಮಟೆ, ಪೂಜಾ ಕುಣಿತ ಕೂಡ ಇರಲಿದೆ ಎಂದು ಅಭಿಮಾನಿಗಳು ಹೇಳಿದ್ದಾರೆ.

    ಪ್ರತಿ ಪ್ರದರ್ಶನಕ್ಕೂ ಸಿಡಿಮದ್ದು

    ಪ್ರತಿ ಪ್ರದರ್ಶನಕ್ಕೂ ಸಿಡಿಮದ್ದು

    ಸೂಪರ್‌ಸ್ಟಾರ್ ಸಿನಿಮಾ ಬಿಡುಗಡೆಯಾದಾಗ ಅವರ ಅಭಿಮಾನಿಗಳು ಸಹಜವಾಗಿಯೇ ಥಿಯೇಟರ್ ಮುಂದೆ ಸಂಭ್ರಮಿಸುತ್ತಾರೆ. ಫಸ್ಟ್ ಶೋ ಮುಗಿದ ಕೂಡಲೇ ಫ್ಯಾನ್ಸ್ ಚಿತ್ರಮಂದಿರದ ಮುಂದೆ ಪಟಾಕಿ ಸಿಡಿಸುತ್ತಾರೆ. ಒಂದು ಶೋಗೆ ಹೀಗೆ ಪಟಾಕಿ ಸಿಡಿಸುವುದು ಸಹಜ. ಆದರೆ, ಮಂಡ್ಯದ ಅಭಿಮಾನಿಗಳು 'ಜೇಮ್ಸ್' ಸಿನಿಮಾ ರಿಲೀಸ್ ಆದ ದಿನ ಪ್ರತಿ ಶೋಗೂ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಲಿದ್ದಾರೆ. ಪುನೀತ್ ಕಟೌಟ್‌ಗೆ ಹಾಲಿನ ಅಭಿಷೇಕ, ಪುಷ್ಪಾರ್ಚನೆ ಕೂಡ ನಡೆಯಲಿದೆ.

    ಅಪ್ಪು ಜೇಮ್ಸ್ ಸಿನಿಮಾ ಸೆಟ್ಟಿಗೆ ಶಿವಣ್ಣ, ರಾಘಣ್ಣ ಎಂಟ್ರಿ: ಇಂದಿನಿಂದ ಶೂಟಿಂಗ್ ಶುರು
    ಮಧ್ಯಾಹ್ನ ಬಿರಿಯಾನಿ, ಸಂಜೆ ಡಿಜೆ

    ಮಧ್ಯಾಹ್ನ ಬಿರಿಯಾನಿ, ಸಂಜೆ ಡಿಜೆ

    ಪ್ರಮುಖ ಚಿತ್ರಮಂದಿರದ ಮುಂದೆ ಅನ್ನದಾಸೋಹ ಕಾರ್ಯಕ್ರಮವನ್ನು ಮಂಡ್ಯದ ಅಪ್ಪು ಅಡ್ಡ ತಂಡ ಹಮ್ಮಿಕೊಂಡಿದೆ. ಇದೇ ವೇಳೆ ಆಟೋ ರಿಕ್ಷಾ ಮೆರವಣೆಗೆ ಕೂಡ ನಡೆಯಲಿದೆ. ಸ್ಕ್ರೀನ್ ಮುಂದೆನೇ ಅಭಿಮಾನಿಗಳಿಂದ ಸೆಲೆಬ್ರೆಷನ್ ನಡೆಯಲಿದೆ. ಮಾರನೇ ದಿನ ಅಂದರೆ, ಮಾರ್ಚ್ 18 ರಂದು ಡಾ. ರಾಜ್ ಅಭಿಮಾನಿ ಬಳಗದಿಂದ ಮಧ್ಯಾಹ್ನ 1 ಗಂಟೆಗೆ ಚಿಕನ್ ಬಿರಿಯಾನಿ ವಿತರಣೆ ಮಾಡಲಿದ್ದಾರೆ. ಸಂಜೆ 4 ಗಂಟೆಗೆ ಇದೇ ತಂಡ ಡಿ ಜೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

    'ಜೇಮ್ಸ್' ತಂಡದಿಂದ ಹಿಂದೆಂದೂ ನೋಡಿರದ ಅಪ್ಪು ಲುಕ್ ರಿವೀಲ್: ಅಭಿಮಾನಿಗಳಿಂದಲೇ ಬಿಡುಗಡೆ'ಜೇಮ್ಸ್' ತಂಡದಿಂದ ಹಿಂದೆಂದೂ ನೋಡಿರದ ಅಪ್ಪು ಲುಕ್ ರಿವೀಲ್: ಅಭಿಮಾನಿಗಳಿಂದಲೇ ಬಿಡುಗಡೆ

    5 ಭಾಷೆಯಲ್ಲಿ ಜೇಮ್ಸ್ ರಿಲೀಸ್

    5 ಭಾಷೆಯಲ್ಲಿ ಜೇಮ್ಸ್ ರಿಲೀಸ್

    ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' 5 ಭಾಷೆಗಳಲ್ಲಿ ಅದ್ಧೂರಿಯಾಗಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಅಪ್ಪು ಸಿನಿಮಾ ರಿಲೀಸ್ ಆಗುತ್ತಿದೆ. ಬೇರೆ ಭಾಷೆಗಳಲ್ಲಿ ಈ ಸಿನಿಮಾವನ್ನು ಹೇಗೆ ರಿಲೀಸ್ ಮಾಡುತ್ತಾರೆ? 'ಜೇಮ್ಸ್' ತಂಡದ ಪ್ಲ್ಯಾನ್ ಏನು? ಅನ್ನುವುದು ಇನ್ನೂ ರಿವೀಲ್ ಆಗಿಲ್ಲ. ಆದರೆ, ದಕ್ಷಿಣ ಭಾರತದಲ್ಲಿ 'ಜೇಮ್ಸ್' ಅದ್ದೂರಿಯಾಗಿ ಬಿಡುಗಡೆಯಾಗುವುದಂತೂ ಗ್ಯಾರಂಟಿ. ಕೆಲ ಮೂಲಗಳ ಪ್ರಕಾರ 'ಜೇಮ್ಸ್' ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

    ಮಾರ್ಚ್ 18 ಅಲ್ಲ.. ಏಪ್ರಿಲ್ 28 ಅಲ್ಲ.. RRR ಹೊಸ ರಿಲೀಸ್ ಡೇಟ್: 'ಜೇಮ್ಸ್' ದಾರಿ ಸುಗಮ

    English summary
    Puneeth fans from Mandya Celebrating James on March 17th. The procession will be held at 7am from Kalamma temple to theater through silver chariot.
    Wednesday, March 2, 2022, 9:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X