Don't Miss!
- Finance
Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ
- Technology
ಜಿಯೋ ಟ್ರೂ 5G ಸೇವೆ ಈಗ ಚಿತ್ರದುರ್ಗದಲ್ಲಿಯೂ ಲಭ್ಯ!..5G ರೀಚಾರ್ಜ್ ಬೆಲೆ ಎಷ್ಟು?
- Sports
WIPL 2023: ಮಹಿಳಾ ಐಪಿಎಲ್ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಮೆಂಟರ್ ಆಗಿ ಮಿಥಾಲಿ ರಾಜ್ ನೇಮಕ
- Lifestyle
ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ
- News
Occupancy Certificate Fraud: ಆಂತರಿಕ ತನಿಖೆ ನಡೆಸಲು ಬಿಬಿಎಂಪಿ ಕಟ್ಟುನಿಟ್ಟಿನ ನಿರ್ದೇಶನ
- Automobiles
ಜನಪ್ರಿಯ ನಟನ ಮನೆಗೆ ಕಥೆ ಹೇಳಲು ಹೋಗಿ ಆತನ ದುಬಾರಿ ಕಾರ್ ಓಡಿಸಿಬಂದ ನಿರ್ದೇಶಕ...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಿರ್ದೇಶಕ ಸಂತೋಷ್ ಆನಂದ್‌ರಾಮ್ ಮುಂದೆ ಅಪ್ಪು ಅಭಿಮಾನಿಗಳು ಇಟ್ಟ ಬೇಡಿಕೆ ಏನು?
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ 8 ದಿನಗಳು(ಅಕ್ಟೋಬರ್ 29) ಕಳೆದಿವೆ. ಅವರ ಕುಟುಂಬ ಹಾಗೂ ಅಭಿಮಾನಿಗಳು ಇನ್ನೂ ಅಪ್ಪು ಅಗಲಿಕೆಯ ನೋವಿನಿಂದ ಹೊರಬಂದಿಲ್ಲ. ಪುನೀತ್ ಅಭಿಮಾನಿಗಳಂತೂ ಒಂದಲ್ಲಾ ಒಂದು ರೀತಿ ತಮ್ಮ ನೆಚ್ಚಿನ ನಟನಿಗೆ ಗೌರವ ಸೂಚಿಸಲು ಮುಂದಾಗಿದ್ದಾರೆ.
ಕೆಲವೆಡೆ ಅಪ್ಪು ಗುಡಿ ಕಟ್ಟಿ ಪೂಜೆ ಸಲ್ಲಿಸುತ್ತಿದ್ದರೆ, ಮತ್ತೆ ಕೆಲವರು ಶಾಶ್ವತವಾಗಿ ಅಪ್ಪು ನೆನಪು ಉಳಿಯುವಂತೆ ಕೈ ಮೇಲೆ ಹಚ್ಚೆ ಹಾಕಿಸಿಕೊಳ್ತಿದ್ದಾರೆ. ಅದೇ ಮತ್ತೊಂದೆಡೆ, ಅಪ್ಪು ಸಿನಿಮಾ ನಿರ್ದೇಶಿಸಬೇಕಿದ್ದ ನಿರ್ದೇಶಕರ ಮುಂದೆ ಅಭಿಮಾನಿಗಳು ವಿಶಿಷ್ಟ ಬೇಡಿಕೆ ಇಡುತ್ತಿದ್ದಾರೆ.
ಸ್ಯಾಂಡಲ್‌ವುಡ್ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮುಂದೆ ಪುನೀತ್ ಫ್ಯಾನ್ಸ್ ಹೊಸ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಅಪ್ಪು ಮರಣದ ಶಾಕ್‌ನಲ್ಲಿರುವ ಅಭಿಮಾನಿಗಳ ಬೇಡಿಕೆಗೆ ಸಂತೋಷ್ ಆನಂದ್ ರಾಮ್ ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಅಷ್ಟಕ್ಕೂ ಪುನೀತ್ ಫ್ಯಾನ್ಸ್ ಸಂತೋಷ್ ಆನಂದ್‌ರಾಮ್ ಮುಂದಿಟ್ಟಿರೋ ಆ ಬೇಡಿಕೆ ಏನು? ಮುಂದೆ ಓದಿ...

ಪುನೀತ್‌ಗಾಗೇ ಮತ್ತೊಂದು ಸಿನಿಮಾ ನಿರ್ದೇಶಿಸಬೇಕಿತ್ತು
ಯುವರತ್ನ ಸಿನಿಮಾದ ಬಳಿಕ ಸಂತೋಷ್ ಆನಂದ್‌ರಾಮ್ ಪುನೀತ್‌ಗಾಗೇ ಮತ್ತೊಂದು ಸಿನಿಮಾ ನಿರ್ದೇಶಿಸಬೇಕಿತ್ತು. ಯುವರತ್ನ ಬಳಿಕ ಪುನೀತ್ ರಾಜ್‌ಕುಮಾರ್ ಕೂಡ ಸಂತೋಷ್ ಜೊತೆ ಮತ್ತೊಂದು ಸಿನಿಮಾ ಮಾಡುವುದಾಗಿ ಹೇಳಿದ್ದರು. ಈ ಬೆನ್ನಲ್ಲೇ ಸಂತೋಷ್ ಆನಂದ್‌ರಾಮ್ ಅಪ್ಪುಗಾಗಿ ಹೊಸ ಕಥೆಯೊಂದನ್ನು ಸಿದ್ಧಪಡಿಸುತ್ತಿದ್ದರು. ಜೇಮ್ಸ್ ಬಳಿಕ ಪುನೀತ್ ಒಪ್ಪಿಕೊಂಡಿದ್ದ ಸಿನಿಮಾ ಮುಗಿಯುತ್ತಿದ್ದಂತೆ ಸಂತೋಷ್ ಆನಂದ್‌ರಾಮ್ ಸಿನಿಮಾ ಸೆಟ್ಟೇರಬೇಕಿತ್ತು. ಆದರೆ, ಪುನೀತ್ ದಿಢೀರ್ ನಿಧನದಿಂದ ನಿರ್ದೇಶಕರೆಲ್ಲಾ ಕಂಗಾಲಾಗಿ ಹೋಗಿದ್ದಾರೆ. ಸಂತೋಷ್ ಆನಂದ್ ಕೂಡ ಈ ನೋವಿನಿಂದ ಹೊರಬಂದಿಲ್ಲ. ಅಪ್ಪು ಜೊತೆ ಎರಡು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದ ನಿರ್ದೇಶಕ ಮತ್ತೊಂದು ಮೆಗಾ ಸಿನಿಮಾ ನೀಡಲು ಕಾತುರರಾಗಿದ್ದರು. ಆದ್ರೀಗ ಪುನೀತ್ ಅಭಿಮಾನಿಗಳು ಸಂತೋಷ್ ಆನಂದ್‌ರಾಮ್ ಮುಂದೆ ಹೊಸ ಬೇಡಿಕೆಯೊಂದನ್ನು ಇಟ್ಟಿದ್ದಾರೆ.

'ವಿನಯ್ ಇಲ್ಲವೇ ಯುವರಾಜ್‌ಕುಮಾರ್‌ಗೆ ಸಿನಿಮಾ ಮಾಡಿ'
ಪುನೀತ್‌ರಾಜ್‌ಕುಮಾರ್ ಜೊತೆ ಮಾಡಬೇಕಿದ್ದ ಸಿನಿಮಾವನ್ನು ರಾಜ್ ಕುಟುಂಬದ ಕುಡಿಗಳಿಗಾಗೇ ಮಾಡಿ. ನೀವು ಅಪ್ಪುಗೆ ನಿರ್ದೇಶಿಸಬೇಕೆಂದಿದ್ದ ಸಿನಿಮಾವನ್ನು ವಿನಯ್ ರಾಜ್‌ಕುಮಾರ್ ಇಲ್ಲವೇ ಯುವರಾಜ್‌ಕುಮಾರ್ ಮಾಡಿ ಅನ್ನುವ ಬೇಡಿಕೆ ಹೆಚ್ಚಾಗಿದೆ. ವಿಜಯ್ ರಾಜ್‌ಕುಮಾರ್ ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಯುವರಾಜ್ ಕುಮಾರ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಹೀಗಾಗಿ ಪುನೀತ್‌ಗಾಗಿ ಬರೆದ ಕಥೆಯನ್ನು ರಾಘವೇಂದ್ರ ರಾಜ್‌ಕುಮಾರ್ ಪುತ್ರರಲ್ಲಿ ಯಾರಾದರು ಒಬ್ಬರನ್ನು ಇಟ್ಟುಕೊಂಡು ಸಿನಿಮಾ ಮಾಡಿ ಅಂತ ಸೋಶಿಯಲ್ ಮೀಡಿಯಾದಲ್ಲಿ ಬೇಡಿಕೆ ಇಟ್ಟಿದ್ದಾರೆ.

ಯುವರತ್ನ ಡಿಲಿಟೆಡ್ ಸೀನ್‌ಗಳನ್ನುರಿಲೀಸ್ ಮಾಡಲು ಬೇಡಿಕೆ
ಸಂತೋಷ್ ಆನಂದ್‌ರಾಮ್ ಮುಂದೆ ಪುನೀತ್ ಅಭಿಮಾನಿಗಳು ಮತ್ತೊಂದು ಬೇಡಿಕೆ ಇಟ್ಟಿದ್ದಾರೆ. ತೆರೆಕಂಡ ಕೊನೆಯ ಸಿನಿಮಾ ಯುವರತ್ನ ಸಿನಿಮಾದಲ್ಲಿ ಡಿಲೀಟ್ ಆದ ದೃಶ್ಯಗಳನ್ನು ಬಿಡುಗಡೆ ಮಾಡುವಂತೆ ಒತ್ತಡ ಹಾಕಿದ್ದಾರೆ. ಪುನೀತ್ ಯುವರತ್ನ ಕೊರೊನಾ ಆತಂಕದ ನಡುವೆಯೂ ತೆರೆಕಂಡಿತ್ತು. ಆದರೆ ಒಂದೇ ವಾರದಲ್ಲಿ ಲಾಕ್‌ಡೌನ್ ಆಗಿದ್ದರಿಂದ ಮತ್ತೆ ಚಿತ್ರಮಂದಿರಗಳನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಹೀಗಾಗಿ ಅನಿವಾರ್ಯವಾಗಿ ಓಟಿಟಿಯಲ್ಲಿ ಸಿನಿಮಾ ತೆರೆಕಂಡಿತ್ತು.

ಯುವರತ್ನ ಡಿಲಿಟೆಡ್ ಸೀನ್ ಬಗ್ಗೆ ಸಂತೋಷ್ ಆನಂದ್‌ರಾಮ್ ಪ್ರತಿಕ್ರಿಯೆ
ಪುನೀತ್ ಅಭಿಮಾನಿಗಳ ಒತ್ತಾಯಕ್ಕೆ ಸಂತೋಷ್ ಆನಂದ್‌ರಾಮ್ ಸ್ಪಂದಿಸಿದ್ದಾರೆ. ಯುವರತ್ನ ಚಿತ್ರದ ಡಿಲಿಟೆಡ್ ಸೀನ್‌ಗಳನ್ನು ಬಿಡುಗಡೆ ಮಾಡುವ ಬಗ್ಗೆ ಶೀಘ್ರವೇ ಮಾಹಿತಿ ನೀಡಲಾಗುತ್ತದೆ ಎಂದು ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಅಪ್ಪುಗೆ ನಿರ್ದೇಶಿಸಬೇಕಿದ್ದ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ. ಸದ್ಯ ಸಂತೋಷ್ ಆನಂದ್‌ರಾಮ್ ನವರಸ ನಾಯಕ ಜಗ್ಗೇಶ್‌ಗಾಗಿ ನಿರ್ಮಿಸುತ್ತಿರುವ 'ರಾಘವೇಂದ್ರ ಸ್ಟೋರ್ಸ್' ಎಂಬ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.