»   » ಎರಿಕಾ ಜೊತೆ ನ್ಯೂಯಾರ್ಕ್ ಗೆ ಪುನೀತ್ ಜೂಟ್

ಎರಿಕಾ ಜೊತೆ ನ್ಯೂಯಾರ್ಕ್ ಗೆ ಪುನೀತ್ ಜೂಟ್

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಭಿನಯಿಸುತ್ತಿರುವ 'ನಿನ್ನಿಂದಲೇ' ಚಿತ್ರ ಜಗತ್ತಿನ ಅತ್ಯಂತ ಶ್ರೀಮಂತ ನಗರಗಳಲ್ಲಿ ಒಂದಾದ ಅಮೆರಿಕಾದ ನ್ಯೂಯಾರ್ಕ್ ಸಿಟಿಗೆ ಪಯಣ ಆರಂಭಿಸಲಿದೆ. ಒಟ್ಟು ನಲವತ್ತು ದಿನಗಳ ಕಾಲ ಅಲ್ಲಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.

ಸೆಪ್ಟೆಂಬರ್ 24ರಂದು ಪುನೀತ್ ಜೊತೆ ಚಿತ್ರತಂಡದ 32 ಮಂದಿ ಸದಸ್ಯರು ನ್ಯೂಯಾರ್ಕ್ ಹೊರಡಲಿದ್ದಾರೆ. ಪುನೀತ್ ರಾಜ್ ಕುಮಾರ್, ಎರಿಕಾ ಫರ್ನಾಂಡಿಸ್, ನಿರ್ದೇಶಕ ಜಯಂತ್ ಪರಂಜಿ, ವಿನಾಯಕ ಜೋಶಿ, ಆಲೋಕ್ ಬಾಬು, ಸಾನಿಯಾ ದೀಪ್ತಿ, ಸಾಧು ಕೋಕಿಲ, ರಂಗಾಯಣ ರಘು, ಜುಗಾರಿ ಅವಿನಾಷ್, ಛಾಯಾಗ್ರಹಕ ಪಿ ಜಿ ವಿಂಧ ಹಾಗೂ ಇನ್ನಿತರರು ಇದ್ದಾರೆ.


ನ್ಯೂಯಾರ್ಕ್ ನಲ್ಲಿ 'ಫಿಯರ್ ಫ್ಯಾಕ್ಟರ್' ಗೆ ಸಂಬಂಧಪಟ್ಟ ಆಕ್ರಮಣಕಾರಿ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಇದು ಇದೇ ಮೊದಲು ಎನ್ನುತ್ತಾರೆ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರ್. ಹೊಂಬಾಳೆ ಫಿಲ್ಮ್ಸ್ ಅವರ ಮೊದಲ ಕಾಣಿಕೆ ಇದು. [ಎರಿಕಾ ಫರ್ನಾಂಡೀಸ್ ಯಾರು?]

ಮೂರು ಬಹು ಮುಖ್ಯ ದೃಶ್ಯಗಳ ಚಿತ್ರೀಕರಣಕ್ಕೆ ಅಪಾರ ವೆಚ್ಚವೂ ಆಗಲಿದೆ. ಇದು 'ನಿನ್ನಿಂದಲೇ' ಚಿತ್ರದ ಮುಖ್ಯ ಆಕರ್ಷಣೆಗಳಲ್ಲಿ ಒಂದು. ಮಾತಿನ ಭಾಗದ ಚಿತ್ರೀಕರಣ ಹಾಗೂ ಮೂರು ಹಾಡುಗಳನ್ನು ಸಹ ನಿರ್ದೇಶಕ ಜಯಂತ್ ಪರಂಜಿ ಅವರು ಕ್ಯಾಮಾರದಲ್ಲಿ ತುಂಬಿಕೊಳ್ಳಲ್ಲಿದ್ದಾರೆ.

ದಕ್ಷಿಣ ಭಾರತದಲ್ಲಿ ಅತ್ಯಂತ ಯಶಸ್ವಿ ಚಿತ್ರ ನಿರ್ದೇಶಕರಲ್ಲಿ ಒಬ್ಬರಾದ ಜಯಂತ್ ಪರಂಜಿ ಅವರು ತೆಲುಗಿನಲ್ಲಿ ಸತತ ಹಿಟ್ ಚಿತ್ರಗಳನ್ನು ಕೊಟ್ಟವರು. 'ಪ್ರೇಮಿಂಚುಕುಂದಾಮ್ ರಾ, ಭಾವಗಾರು ಬಾಗುನ್ನಾರಾ, ಪ್ರೇಮಾಂಟೆ ಇದೇರಾ, ಟಕ್ಕರಿ ದೊಂಗ, ಈಶ್ವರ್, ಲಕ್ಷ್ಮಿ ನರಸಿಂಹ, ಶಂಕರ್ ದಾದಾ ಎಂಬಿಬಿಎಸ್, ಸಖಿಯಾ, ಅಲ್ಲರಿ ಪಿಡುಗು, ತೀನ್ ಮಾರ್ ಅಂತಹ ದೊಡ್ಡ ಬಜೆಟ್ಟಿನ ಹಾಗೂ ದೊಡ್ಡ ನಟರುಗಳ ಚಿತ್ರಗಳ ನಿರ್ದೇಶನ ಮಾಡಿದವರು.

ನ್ಯೂ ಯಾರ್ಕ್ ನಿಂದ ಬಂದ ನಂತರ ಬ್ಯಾಂಕಾಕ್ ನಲ್ಲಿ ಕೆಲವು ಸಾಹಸ ಸನ್ನಿವೇಶಗಳನ್ನು ಪೂರ್ತಿಗೊಳಿಸಿ ಆನಂತರ ಕೆಲವು ದಿವಸಗಳ ಪ್ಯಾಚ್ ವರ್ಕ್ ಬಾಕಿ ಇರುವುದು. ಡಿಸೆಂಬರ್ ತಿಂಗಳ ಕ್ರಿಸ್ಮಸ್ ಹಬ್ಬಕ್ಕೆ 'ನಿನ್ನಿಂದಲೇ' ಚಿತ್ರವು ಪ್ರೇಕ್ಷಕರ ಮುಂದೆ ಬರುವ ಯೋಚನೆಯಲ್ಲಿ ನಿರ್ಮಾಪಕ ವಿಜಯ್ ಅವರು ಇದ್ದಾರೆ.

ಅಂದಹಾಗೆ 'ನಿನ್ನಿಂದಲೇ' ಚಿತ್ರವು 20 ದಿವಸಗಳ ಚಿತ್ರೀಕರಣವನ್ನು ಕಂಠೀರವ ಸ್ಟುಡಿಯೋ, ಎಫ್ ಬಾರ್, ಓರಿಯನ್ ಮಾಲ್ ಕಾಫಿ ಶಾಪ್ ಹಾಗೂ ಮೂರು ದಿವಸಗಳ ಹೈದರಾಬಾದ್ ಸ್ಥಳದಲ್ಲಿ ಮುಗಿಸಿಕೊಂಡಿದೆ. ಚಿನ್ನಿ ಪ್ರಾಕಾಶ್, ಕಲ್ಯಾಣ್ ಮಾಸ್ಟರ್ ಹಾಗೂ ರಾಜು ಸುಂದರಂ ಈ ಚಿತ್ರದ ನೃತ್ಯ ನಿರ್ದೇಶಕರು.

'ನಿನ್ನಿಂದಲೇ' ನ್ಯೂ ಯಾರ್ಕ್ ಅಲ್ಲಿ ಚಿತ್ರೀಕರಣಕ್ಕಾಗಿ ಸ್ವದೇಶದ ಮೂರು ಹಾಗೂ ವಿದೇಶದ ಕೆಲವು ಕ್ಯಾಮರಗಳನ್ನು ಬಳಸಲಾಗುತ್ತಿದೆ. ಮಣಿ ಶರ್ಮ ಅವರ ಸಂಗೀತ ಇರುವ ಈ ಚಿತ್ರದ ಸಂಕಲನಕಾರ ಮಾರ್ತಾಂಡ್ ಕೆ ಪ್ರಕಾಶ್, ನಿರ್ದೇಶಕ ಜಯಂತ್ ಸಿ ಪರಂಜಿ ಅವರ ಜೊತೆ ಶಂಕರ್ ಅವರು ಚಿತ್ರಕಥೆ ನೆರವು ನೀಡಿದ್ದಾರೆ.

ಪೋಷಕ ಪಾತ್ರಗಳಲ್ಲಿ ಅವಿನಾಷ್ ಶೃಂಗೇರಿ (ಜುಗಾರಿ) ವಿನಾಯಕ್ ಜೋಷಿ, ಸೋನಿಯ ದೀಪ್ತಿ, ಆಲೋಕ್ ಬಾಬು, ಅವಿನಾಷ್, ಅಚ್ಯುತ್ ಕುಮಾರ್, ಸಾಧು ಕೋಕಿಲ, ರಂಗಾಯಣ ರಘು, ಕುರಿ ಪ್ರತಾಪ್, ಶ್ರೀನಿವಾಸ್ ಪ್ರಭು, ಸಿಹಿಕಹಿ ಚಂದ್ರು, ರೋಹಿಣಿ ರಘುವರನ್ ಹಾಗೂ ಇತರರು ಇದ್ದಾರೆ. (ಒನ್ಇಂಡಿಯಾ ಕನ್ನಡ)

English summary
Power Star Puneeth Rajkumar's Ninnindale is going on at a rapid pace. The team will fly to New York for a lengthy 40 days schedule. Vijayakumar Kalagandur is producer of this film, directed by Jayanth Paranji.
Please Wait while comments are loading...