For Quick Alerts
  ALLOW NOTIFICATIONS  
  For Daily Alerts

  ಸಿಕ್ಸ್ ಪ್ಯಾಕ್ ಅಲ್ಲ, ಫ್ಯಾಮಿಲಿ ಪ್ಯಾಕ್ ಮಾಡುತ್ತಿದ್ದಾರೆ ಪವರ್ ಸ್ಟಾರ್ ಪುನೀತ್

  |

  ಅಭಿಮಾನಿಗಳಿಗಾಗಿ ಅವರು ಇಷ್ಟಪಡುವಂತಹ ಸಿನಿಮಾಗಳಲ್ಲಿ ನಟಿಸುವ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ತಮ್ಮ ಖುಷಿಗಾಗಿ ಹಾಗೂ ತಾವು ಇಷ್ಟಪಡುವಂತಹ ವಿಭಿನ್ನ ಸಿನಿಮಾಗಳು ಬರಬೇಕು ಎಂಬ ಕಾರಣಕ್ಕೆ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. ಹೊಸಬರ ಹಾಗೂ ಪ್ರಯೋಗಾತ್ಮಕ ಕಥಾಹಂದರವುಳ್ಳ ಸಿನಿಮಾಗಳನ್ನು ನಿರ್ಮಿಸುವ ಮೂಲಕ ಪುನೀತ್ ಚಿತ್ರರಂಗದ ಬೆಳವಣಿಗೆಗೆ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ.

  'ಕವಲುದಾರಿ' ಮತ್ತು 'ಮಾಯಾಬಜಾರ್'ನಂತಹ ವಿಭಿನ್ನ ಸಿನಿಮಾಗಳನ್ನು ನೀಡಿರುವ ಪುನೀತ್, ನಿರ್ಮಾಣದಲ್ಲಿ ಇನ್ನು ಎರಡು ಸಿನಿಮಾಗಳು ಸಿದ್ಧವಾಗಿವೆ. ಈ ನಡುವೆ ಅವರು ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.

  ಫ್ಯಾಮಿಲಿ ಪ್ಯಾಕ್ ಸಿನಿಮಾ

  ಫ್ಯಾಮಿಲಿ ಪ್ಯಾಕ್ ಸಿನಿಮಾ

  ರಘು ಸಮರ್ಥ್ ನಿರ್ದೇಶನದ 'ಲಾ' ಮತ್ತು ಪನ್ನಗಾಭರಣ ನಿರ್ದೇಶನದ ಸಿನಿಮಾಗಳು ಈಗಾಗಲೇ ಪಿಆರ್‌ಕೆ ಪ್ರೊಡಕ್ಷನ್ಸ್‌ನಿಂದ ರೆಡಿ ಆಗಿವೆ. ಈಗ ಪುನೀತ್ ಅವರ ನಿರ್ಮಾಣದಲ್ಲಿ ಐದನೇ ಸಿನಿಮಾಕ್ಕೆ ತಯಾರಿ ನಡೆದಿದೆ. ಸಿನಿಮಾ ಹೆಸರು 'ಫ್ಯಾಮಿಲಿ ಪ್ಯಾಕ್'.

  ಸಿನಿಮಾ ಕಟೌಟ್ ಕಲಾವಿದರ ಮುರಿದ ಬದುಕಿಗೆ ಹೆಗಲು ನೀಡಿದ ಪವರ್ ಸ್ಟಾರ್ಸಿನಿಮಾ ಕಟೌಟ್ ಕಲಾವಿದರ ಮುರಿದ ಬದುಕಿಗೆ ಹೆಗಲು ನೀಡಿದ ಪವರ್ ಸ್ಟಾರ್

  ಲಿಖಿತ್ ಶೆಟ್ಟಿ ನಾಯಕ

  ಲಿಖಿತ್ ಶೆಟ್ಟಿ ನಾಯಕ

  ಎಸ್. ಅರ್ಜುನ್ 'ಫ್ಯಾಮಿಲಿ ಪ್ಯಾಕ್' ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಅವರು 'ಸಂಕಷ್ಟಕರ ಗಣಪತಿ' ಎಂಬ ಕಾಮಿಡಿ ಕಥಾಹಂದರದ ಸಿನಿಮಾ ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ನಾಯಕರಾಗಿದ್ದ ಲಿಖಿತ್ ಶೆಟ್ಟಿ ಅವರೇ 'ಫ್ಯಾಮಿಲಿ ಪ್ಯಾಕ್'ನಲ್ಲಿಯೂ ನಾಯಕ.

  ಅಮೃತಾ ಅಯ್ಯಂಗಾರ್ ನಾಯಕಿ

  ಅಮೃತಾ ಅಯ್ಯಂಗಾರ್ ನಾಯಕಿ

  'ಲವ್ ಮಾಕ್‌ಟೇಲ್', 'ಪಾಪ್ ಕಾರ್ನ್ ಮಂಕಿ ಟೈಗರ್','ಶಿವಾರ್ಜುನ' ಸಿನಿಮಾಗಳಲ್ಲಿ ನಟಿಸಿದ್ದ ಅಮೃತಾ ಅಯ್ಯಂಗಾರ್ ಈ ಸಿನಿಮಾದ ನಾಯಕಿ. ರಂಗಾಯಣ ರಘು, ಅಚ್ಯುತ್ ಕುಮಾರ್, ತಿಲಕ್, ಅಶ್ವಿನಿ ಗೌಡ ಮುಂತಾದವರು ಈ ಚಿತ್ರದಲ್ಲಿದ್ದಾರೆ.

  ಕೊರೊನಾ ವೈರಸ್ ಸಂಕಷ್ಟ: 50 ಲಕ್ಷ ರೂ ದೇಣಿಗೆ ನೀಡಿ ಔದಾರ್ಯ ಮೆರೆದ ಪುನೀತ್ ರಾಜ್‌ಕುಮಾರ್ಕೊರೊನಾ ವೈರಸ್ ಸಂಕಷ್ಟ: 50 ಲಕ್ಷ ರೂ ದೇಣಿಗೆ ನೀಡಿ ಔದಾರ್ಯ ಮೆರೆದ ಪುನೀತ್ ರಾಜ್‌ಕುಮಾರ್

  ಮುಂಚೆಯೇ ಫೋಟೊಶೂಟ್

  ಮುಂಚೆಯೇ ಫೋಟೊಶೂಟ್

  ಗುರುಕಿರಣ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಮಾಸ್ತಿ ಮಂಜು ಸಂಭಾಷಣೆ ಬರೆಯುತ್ತಿದ್ದಾರೆ. ಲಾಕ್‌ಡೌನ್ ಮುಗಿದ ಬಳಿಕ ಬೆಂಗಳೂರಿನಲ್ಲಿಯೇ ಸಂಪೂರ್ಣ ಚಿತ್ರೀಕರಣ ನಡೆಯಲಿದೆ. ಈ ಮುಂಚೆಯೇ ಚಿತ್ರದ ಫೋಟೊ ಶೂಟ್ ನಡೆಸಲಾಗಿತ್ತು. ಸಂಕಷ್ಟಕರ ಚಿತ್ರದ ಆಡಿಯೋ ಪಿಆರ್‌ಕೆ ಬ್ಯಾನರ್‌ನಲ್ಲಿಯೇ ಬಿಡುಗಡೆಯಾಗಿತ್ತು.

  ಕೊರೊನಾ ತಡೆಗಟ್ಟಲು ಕಷ್ಟ ಪಡುತ್ತಿರುವ ವೈದ್ಯರಿಗೆ ಪುನೀತ್ ಸೆಲ್ಯೂಟ್ಕೊರೊನಾ ತಡೆಗಟ್ಟಲು ಕಷ್ಟ ಪಡುತ್ತಿರುವ ವೈದ್ಯರಿಗೆ ಪುನೀತ್ ಸೆಲ್ಯೂಟ್

  English summary
  Power Star Puneeth Rajkumar's PRK Productions fifth movie Family Pack to be directed by S Arjun.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X